• Home
  • »
  • News
  • »
  • entertainment
  • »
  • Ayra Video: ರಾಕಿಂಗ್ ಮಗಳು ಆಯ್ರಾ ಕೊರೋನಾ ವಿರುದ್ಧ ಚಪ್ಪಾಳೆ ತಟ್ಟಿದ ವಿಡಿಯೋ ವೈರಲ್...!

Ayra Video: ರಾಕಿಂಗ್ ಮಗಳು ಆಯ್ರಾ ಕೊರೋನಾ ವಿರುದ್ಧ ಚಪ್ಪಾಳೆ ತಟ್ಟಿದ ವಿಡಿಯೋ ವೈರಲ್...!

ಮಗಳು ಆಯ್ರಾ ಜೊತೆ ರಾಧಿಕಾ ಪಂಡಿತ್

ಮಗಳು ಆಯ್ರಾ ಜೊತೆ ರಾಧಿಕಾ ಪಂಡಿತ್

Ayra Clapping Video: ಕೊರೋನಾ ಹರಡದಂತೆ ಶ್ರಮವಹಿಸಿ ದುಡಿಯುತ್ತಿರುವ ಎಲ್ಲರಿಗೂ ಜನತಾ ಕರ್ಫ್ಯೂ ಮಾಡಿದ ದಿನದಂದು ಸಂಜೆ ಚಪ್ಪಾಳೆ ತಟ್ಟಿ ಶ್ಲಾಘಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಇದಕ್ಕೆ ದೊಡ್ಡ ಮಟ್ಟದಲ್ಲೇ ಪ್ರತಿಕ್ರಿಯೆ ಸಿಕ್ಕಿತ್ತು. ಇದಕ್ಕೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳೂ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದರು.

ಮುಂದೆ ಓದಿ ...
  • Share this:

ಕೊರೋನಾ ಸೋಂಕಿನಿಂದಾಗಿ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸೋಂಕು ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿ ಜನರ ಮೇಲಿದೆ. ಇದೇ ಕಾರಣಕ್ಕೆ ದೇಶದಾದ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.


ಕೊರೋನಾ ಸೋಂಕು ಹರಡದಂತೆ ವಹಿಸಿರುವ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಜನತಾ ಕರ್ಫ್ಯೂ ಸಹ ಒಂದು. ಕಳೆದ ಭಾನುವಾರ ಇಡೀ ದೇಶದಲ್ಲಿ ಜನತಾ ಕರ್ಫ್ಯೂಗೆ ಪ್ರಧಾನಿ ಮೋದಿ ಅವರು ಕರೆ ನೀಡಿದ್ದರು. ಅದು ಬಹುತೇಕ ಯಶಸ್ವಿಯಾಗಿತ್ತು.


ಪ್ರಧಾನಿ ಮೋದಿ


ಕೊರೋನಾ ಹರಡದಂತೆ ಶ್ರಮವಹಿಸಿ ದುಡಿಯುತ್ತಿರುವ ಎಲ್ಲರಿಗೂ ಜನತಾ ಕರ್ಫ್ಯೂ ಮಾಡಿದ ದಿನದಂದು ಸಂಜೆ ಚಪ್ಪಾಳೆ ತಟ್ಟಿ ಶ್ಲಾಘಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಇದಕ್ಕೆ ದೊಡ್ಡ ಮಟ್ಟದಲ್ಲೇ ಪ್ರತಿಕ್ರಿಯೆ ಸಿಕ್ಕಿತ್ತು. ಇದಕ್ಕೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳೂ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದರು.


ಇದನ್ನೂ ಓದಿ: Darshan: ಕೊರೋನಾ ವಿಷಯದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿ ಎಂದ ದರ್ಶನ್​ ..!


ಭಾನುವಾರ ಬೆಂಗಳೂರಿನಲ್ಲಿ ರಾಕಿಂಗ್​ ದಂಪತಿಯ ಮುದ್ದಿನ ಮಗಳು ಆಯ್ರಾ ತನ್ನ ಅಜ್ಜಿ ಜೊತೆ ಚಪ್ಪಾಳೆ ತಟ್ಟುವ ಮೂಲಕ ಕೊರೋನಾ ವಿಷಯವಾಗಿ ಶ್ರಮಿಸುತ್ತಿರುವವರಿಗೆ ಗೌರವ ಸೂಚಿಸಿದ್ದಾರೆ. ಈ ವಿಡಿಯೋ ರಾಧಿಕಾ ಪಂಡಿತ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದು ವೈರಲ್​ ಆಗಿದೆ.  
ಆಯ್ರಾ ತನ್ನ ಅಜ್ಜಿ ಜೊತೆ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುತ್ತಿರುವ ವಿಡಿಯೋ ಈಗ ವೈರಲ್​ ಆಗಿದೆ. ಈ ವಿಡಿಯೋಗೆ 5 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ. ಯಶ್​-ರಾಧಿಕಾರ ಮುದ್ದಿನ ಮಗಳು ಆಯ್ರಾಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ.

Kiara Advani: ಅರೆನಗ್ನರಾಗಿ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದ ಕಿಯಾರಾ ಈಗ ಅಂಗಿಯ ಬಟನ್ ತೆಗೆದು ಸುದ್ದಿಯಲ್ಲಿದ್ದಾರೆ..!


 

Published by:Anitha E
First published: