HOME » NEWS » Entertainment » RADHIKA PANDIT SHARED AN POSITIVE VIDEO OF HER DAUGHTER AYRA AS SHE PROMISED AE

Radhika Pandit: ಹೇಳಿದಂತೆಯೇ ಒಂದು ಪಾಸಿಟಿವ್​ ಪೋಸ್ಟ್​ ಮಾಡಿದ ರಾಧಿಕಾ ಪಂಡಿತ್​: ಇಲ್ಲಿದೆ ಕ್ಯೂಟ್​ ವಿಡಿಯೋ..!

Ayra Yash: ನಟಿ ರಾಧಿಕಾ ಪಂಡಿತ್​ ಈಗ ಮಾತು ಕೊಟ್ಟಂತೆಯೇ ನಡೆದುಕೊಂಡಿದ್ದಾರೆ. ಹೇಳಿದಂತೆಯೇ ಮುಖದ ಮೇಲೆ ನಗು ಮೂಡಿಸುವ ಕ್ಯೂಟ್​ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ ಸಿಂಡ್ರೆಲಾ.

Anitha E | news18-kannada
Updated:June 10, 2021, 11:32 AM IST
Radhika Pandit: ಹೇಳಿದಂತೆಯೇ ಒಂದು ಪಾಸಿಟಿವ್​ ಪೋಸ್ಟ್​ ಮಾಡಿದ ರಾಧಿಕಾ ಪಂಡಿತ್​: ಇಲ್ಲಿದೆ ಕ್ಯೂಟ್​ ವಿಡಿಯೋ..!
ಮಗಳು ಆಯ್ರಾ ಜತೆ ಯಶ್​ ಹಾಗೂ ರಾಧಿಕಾ ಪಂಡಿತ್​
  • Share this:
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸ್ಯಾಂಡಲ್​​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಸಿನಿಮಾ, ವೈಯಕ್ತಿಕ ಜೀವನ ಹಾಗೂ ಮಕ್ಕಳ ಕುರಿತಾದ ಅಪ್ಡೇಟ್​ಗಳನ್ನು ಸಾಮಾಜಿಕ ಜಾಲತಾಣದ ಮೂಲಕವೇ ಕೊಡುತ್ತಿರುತ್ತಾರೆ. ಇನ್ನೂ ಸೋಶಿಯಲ್ ಮೀಡಿಯಾದ ಮೂಲಕವೇ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇಂತಹ ನಟಿ​ ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್​ ಮಾಡಿರಲಿಲ್ಲ. ಸುಮಾರು ಒಂದು ತಿಂಗಳ ನಂತರ ಅದಂರೆ ಜೂನ್​ 6ರಂದು ರಾಧಿಕಾ ಪಂಡಿತ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಮಾಡಿದ್ದರು. ಜೊತೆಗೆ ಅಭಿಮಾನಿಗಳಿಗಾಗಿ ಒಂದು ಸಂದೇಶವನ್ನೂ ನೀಡಿದ್ದರು. 

ಹೌದು, ಸದ್ಯ ಕೊರೋನಾ ಎರಡನೇ ಅಲೆಯಿಂದಾಗಿ ಜನರು ನೊಂದು-ಬೆಂದಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಹಲವಾರು ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದಾರೆ. ಕೆಲವರು ಸಂಕಷ್ಟದಲ್ಲಿರುವವರಿಗೆ ಆಹಾರ ನೀಡಿದರೆ, ಮತ್ತೆ ಕೆಲವರು ದಿನಸಿ ವ್ಯವಸ್ಥೆ ಮಾಡಿಸುತ್ತಿದ್ದಾರೆ. ನಟ ಯಶ್​ ಸಹ ಕಷ್ಟದಲ್ಲಿರುವ ಸಿನಿ ಕಾರ್ಮಿಕರ 3 ಸಾವಿರ ಕುಟುಂಬಗಳಿಗೆ ತಲಾ ಐದು ಸಾವಿರ ನೀಡುವ ಮೂಲಕ ನೆರವಾಗಿದ್ದಾರೆ.
View this post on Instagram


A post shared by Yash (@thenameisyash)


ಯಶ್​ ಕಷ್ಟದಲ್ಲಿರುವ ಸಿನಿ ಕಾರ್ಮಿಕರ ಕುಟುಂಬಗಳಿಗೆ ಧನ ಸಹಾಯ ಮಾಡುವುದಾಗಿ ಪ್ರಕಟಿಸಿದ ಬೆನ್ನಲ್ಲೇ ರಾಧಿಕಾ ಪಂಡಿತ್​ ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದು ಮಾಡಿದ್ದರು. ಇದು ಕಷ್ಟದ ಸಮಯ. ಎಲ್ಲರೂ ನೋವನ್ನು ಅನುಭವಿಸಿದ್ದೇವೆ. ಸಾಕಷ್ಟು ಮಂದಿ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಎಲ್ಲರ ಮನಸ್ಸಿನಲ್ಲೂ ಭಯವಿದೆ. ಮುಂದೇನಾಗುತ್ತದೆ ಅನ್ನೋ ಅನಿಶ್ಚಿತತೆ ಕಾಡುತ್ತಿರುವ ಸಮಯವಿದು. ಏನೇ ಆಗಲಿ, ಎಂಥಾ ಪರಿಸ್ಥಿತಿ ಎದುರಾಗಲಿ... ಎಲ್ಲವನ್ನೂ ಎದುರಿಸುತ್ತೇವೆ ಎಂದು ಪ್ರತಿನಿತ್ಯ ನಿಮಗೆ ನೀವೇ ಹೇಳಿಕೊಳ್ಳಿ ಎಂದು ಧೈರ್ಯ ತುಂಬಿದ್ದರು.
ಜೊತೆಗೆ ಅಭಿಮಾನಿಗಳಿಗೆ ಒಂದು ಸಕಾರಾತ್ಮಕ ಸಂದೇಶವನ್ನೂ ನೀಡಿದ್ದರು. ಅದು ತುಂಬಾ ಸಮಯದಿಂದ ಸಾಮಾಜಿಕ ಜಾಲತಾಣದ ಮೂಲಕ ನಿಮ್ಮ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ಇನ್ನು ಮುಂದೆ ಆದಷ್ಟು ಸಕಾರಾತ್ಮ ಪೋಸ್ಟ್​​ಗಳು ಅಂದರೆ, ಮುಖದ ಮೇಲೆ ನಗು ಮೂಡಿಸುವ ಪೋಸ್ಟ್​ಗಳನ್ನೇ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು.

ಇದನ್ನೂ ಓದಿ: Varun Dhawan: ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮಳೆಯಲ್ಲಿ ಎಂಜಾಯ್ ಮಾಡಿದ ನಟ ವರುಣ್​ ಧವನ್​

ನಟಿ ರಾಧಿಕಾ ಪಂಡಿತ್​ ಈಗ ಮಾತು ಕೊಟ್ಟಂತೆಯೇ ನಡೆದುಕೊಂಡಿದ್ದಾರೆ. ಹೇಳಿದಂತೆಯೇ ಮುಖದ ಮೇಲೆ ನಗು ಮೂಡಿಸುವ ಕ್ಯೂಟ್​ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ ಸಿಂಡ್ರೆಲಾ.
ಆಯ್ರಾಳ ಹಳೇ ವಿಡಿಯೋವನ್ನು ಹಂಚಿಕೊಂಡಿರುವ ರಾಧಿಕಾ, ಮಗಳ ಗೆಳತಿಯ ಬಗ್ಗೆಯೂ ಬರೆದುಕೊಂಡಿದ್ದಾರೆ. ಆಯ್ರಾ ಮೊದಲು ಹೆಜ್ಜೆಗಳನ್ನಿಡುವುದನ್ನು ಕಲಿಯುವಾಗ ಮಾಡಿರುವ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಆಯ್ರಾ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುತ್ತಲೇ ತನ್ನ ನೆರಳನ್ನು ಕಂಡು ಅದರ ಹಿಂದೆ ಹೋಗುತ್ತಾಳೆ. ತನ್ನ ನೆರಳಿನೊಂದಿಗೆ ಮಾತನಾಡಲು ಯತ್ನಿಸುತ್ತಾಳೆ.

ಇದನ್ನೂ ಓದಿ: Mayuri Kyatari: ಮಗನೊಂದಿಗೆ ಫೋಟೋಶೂಟ್​ಗೆ ಪೋಸ್​ ಕೊಟ್ಟ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ

ಆಯ್ರಾಳ ವಿಡಿಯೋ ನೋಡಿದ ನೆಟ್ಟಿಗರು ಫುಲ್​ ಖುಷಿಯಲ್ಲಿದ್ದಾರೆ. ಇನ್ನು ಮಕ್ಕಳ ಮನಸ್ಥಿತಿ ಬಗ್ಗೆಯೂ ರಾಧಿಕಾ ಪಂಡಿತ್​ ಕೆಲ ಸಾಲುಗಳನ್ನು ಬರೆದಿದ್ದಾರೆ. ಮಕ್ಕಳು ಎಲ್ಲದರ ಬಗ್ಗೆಯೂ ಒಂದೇ ರೀತಿಯ ಭಾವನೆ ಹೊಂದಿರುತ್ತಾರೆ. ಆ ಮುಗ್ಧ ಭಾವನೆ ವ್ಯಕ್ತಿ ಅಥವಾ ವಸ್ತುಗಳಿಗೆ ಸಂಬಂಧಿಸಿದಂತೆ ಬದಲಾಗುವುದಿಲ್ಲ. ಕಾರಣ ಅವರು ಯಾರನ್ನೂ ಜಡ್ಜ್​ ಮಾಡುವುದಿಲ್ಲ ಎಂದು ವಿವರಿಸಿದ್ದಾರೆ.

ನಟಿ ರಾಧಿಕಾ ಪಂಡಿತ್ ಸದ್ಯ ಮಕ್ಕಳ ಆರೈಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇನ್ನು ಯಶ್​ ಕೆಜಿಎಫ್​ ಚಾಪ್ಟರ್​2 ಚಿತ್ರದ ರಿಲೀಸ್​ಗಾಗಿ ಕಾಯುತ್ತಿದ್ದಾರೆ. ಕೆಜಿಎಫ್​ ಚಾಪ್ಟರ್​ 2 ಸಿನಿಮಾ ರಿಲೀಸ್​ ದಿನಾಂಕ ಪ್ರಕಟಿಸಿದ್ದರೂ, ಲಾಕ್​ಡೌನ್​ನಿಂದಾಗಿ ಅದು ಮುಂದಕ್ಕೆ ಹೋದರೂ ಯಾವುದೇ ಅನುಮಾನವಿಲ್ಲ.
Published by: Anitha E
First published: June 10, 2021, 11:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories