ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕೂ ಮೊದಲು ಮನೆಯಲ್ಲಿ ಲಾಕ್ಡೌನ್ ವೇಳೆ ತಮ್ಮ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದರು. ಆದರೆ ಈಗ, ಕೆಜಿಎಫ್ ಚಾಪ್ಟರ್ 2 ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು, ಯಶ್ ಅಲ್ಲಿ ವ್ಯಸ್ತವಾಗಿದ್ದಾರೆ. ಇನ್ನು ರಾಧಿಕಾ ಪಂಡಿತ್ ಮನೆಯಲ್ಲಿ ತಮ್ಮ ಇಬ್ಬರು ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ. ಇದರ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿರುತ್ತಾರೆ. ಆಗಾಗ ತಮ್ಮ ಅಭಿಮಾನಿಗಳಿಗೆ ಗಂಡ, ಮಕ್ಕಳು ಹಾಗೂ ತಮ್ಮ ಕುರಿತಾದ ಅಪ್ಡೇಟ್ ಕೊಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಅಪ್ಪ-ಮಗನ ಮುದ್ದಾದ ವಿಡಿಯೋ ಹಂಚಿಕೊಂಡಿದ್ದರು ಸಿಂಡ್ರೆಲಾ. ಅದರಲ್ಲಿ ಯಶ್, ಮಗ ಯಥರ್ವ್ ಜಾನಿ ಜಾನಿ ಎಪ್ ಪಪ್ಪಾ ರೈಮ್ಸ್ ಹೇಳಿಕೊಡುತ್ತಿದ್ದರು. ಮಕ್ಕಳು ಬೆಳೆಯುವ ಹಂತದಲ್ಲಿ ಅಪ್ಪನಾಗಿ ಯಶ್ ಕೊಡಬೇಕಾದ ಸಮಯವನ್ನು ಹೇಗೆಲ್ಲ ಕೊಡುತ್ತಿದ್ದಾರೆ ಅನ್ನೋದನ್ನು ಈ ವಿಡಿಯೋ ಮೂಲಕ ಹೇಲುವ ಪ್ರಯತ್ನ ಮಾಡಿದ್ದರು ರಾಧಿಕಾ. ಈಗ ತಮ್ಮ ಮಗಳು ಆಯ್ರಾಳ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಹೌದು, ಯಶ್-ರಾಧಿಕಾರ ಮೊದಲ ಸಂತಾನ ಆಯ್ರಾ. ಆಗಾಗ ಮಗಳ ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುವ ರಾಧಿಕಾ ಪಂಡಿತ್, ಈಗಲೂ ಸಹ ಆಯ್ರಾ ಹಾಡು ಹೇಳುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ