HOME » NEWS » Entertainment » RADHIKA PANDIT SAYS YATHARV IS A MIXTURE OF YASH AND HER AND SHARED A ADORABLE PHOTO AE

Radhika Pandit: ಯಶ್ ಮಗ ಯಥರ್ವ್​ ಯಾರನ್ನ ಹೋಲುತ್ತಾನೆ? ರಾಧಿಕಾ ಪಂಡಿತ್​ ಕೊಟ್ಟ ಉತ್ತರ ಇಲ್ಲಿದೆ..!

ಯಥರ್ವ್​ ಹಾಗೂ ತಮ್ಮ ಬಾಲ್ಯದ ಫೋಟೋಗಳನ್ನು ಕೊಲಾಜ್​ ಮಾಡಿದ್ದು, ಅದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮಾಷೆಯಾಗಿ ಶೀರ್ಷಿಕೆ ನೀಡಿದ್ದಾರೆ. ಹೌದು, ಇಲ್ಲಿದೆ ನೋಡಿ ರಾಧಿಕಾ ಪಂಡಿತ್​ ಮಾಡಿರುವ ಲೆಟೆಸ್ಟ್​ ಪೋಸ್ಟ್​.

Anitha E | news18-kannada
Updated:November 26, 2020, 12:33 PM IST
Radhika Pandit: ಯಶ್ ಮಗ ಯಥರ್ವ್​ ಯಾರನ್ನ ಹೋಲುತ್ತಾನೆ? ರಾಧಿಕಾ ಪಂಡಿತ್​ ಕೊಟ್ಟ ಉತ್ತರ ಇಲ್ಲಿದೆ..!
ರಾಧಿಕಾ ಪಂಡಿತ್​
  • Share this:
ರಾಧಿಕಾ ಪಂಡಿತ್​ ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಸಕ್ರಿಯವಾಗಿರುವ ಸ್ಯಾಂಡಲ್​ವುಡ್​ ನಟಿ. ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಿರುವ ರಾಧಿಕಾ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಅಭಿಮಾನಿಗಳೊಂದಿಗೆ ಆಗಾಗ ತಮ್ಮ ಜೀವನ ಕುರಿತಾದ  ಹಲವಾರು ವಿಷಯಗಳು ಹಾಗೂ ಘಟನೆಗಳ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆಯೂ ತಮ್ಮ ಮಕ್ಕಳ ಮೊದಲ ಹಬ್ಬದ ಫೋಟೋಗಳು ಹಾಗೂ ಅವರ ನಾಮಕರಣದ ವಿಡಿಯೋ ಹೀಗೆ ಸಾಕಷ್ಟು ವಿಷಯಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ. ಅಲ್ಲದೆ ಯಶ್​ ಹಾಗೂ ಮಕ್ಕಳ ನಡುವಿನ ಪ್ರೀತಿ ತುಂಬಿದ ಕ್ಷಣಗಳ ವಿಡಿಯೋಗಳನ್ನೂ ಅಭಿಮಾನಿಗಳಿಗೆ ತಲುಪವಂತೆ ಮಾಡುತ್ತಿರುತ್ತಾರೆ. ಈಗಲೂ ಸಹ ತಮ್ಮ ಮಗ ಯಥರ್ವ್ ಕುರಿತಾದ  ವಿಷಯವೊಂದನ್ನು ಸ್ಯಾಂಡಲ್​ವುಡ್​ ಸಿಂಡ್ರೆಲಾ ಫ್ಯಾನ್ಸ್​ಗಾಗಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. 

ಯಥರ್ವ್​ ಹಾಗೂ ತಮ್ಮ ಬಾಲ್ಯದ ಫೋಟೋಗಳನ್ನು ಕೊಲಾಜ್​ ಮಾಡಿದ್ದು, ಅದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮಾಷೆಯಾಗಿ ಶೀರ್ಷಿಕೆ ನೀಡಿದ್ದಾರೆ. ಹೌದು, ಇಲ್ಲಿದೆ ನೋಡಿ ರಾಧಿಕಾ ಪಂಡಿತ್​ ಮಾಡಿರುವ ಲೆಟೆಸ್ಟ್​ ಪೋಸ್ಟ್​.

ಯಥರ್ವ್​ ಹಾಗೂ ನನ್ನ ಬಾಲ್ಯದ ಫೋಟೋ ನೋಡಿರುವ ಹಲವರು ನನ್ನ ಮಗ ನನ್ನಂತೆಯೇ ಕಾಣುತ್ತಾನೆ ಎಂದು ಹೇಳುತ್ತಾರೆ. ಆದರೆ, ಯಥರ್ವ್​,  ಯಶ್​ ಹಾಗೂ ನನ್ನ ಕಾಂಬಿನೇಷನ್​ ಅಂತ ಬರೆದಿದ್ದಾರೆ.
ರಾಧಿಕಾ ಪಂಡಿತ್​ ತಮ್ಮ ಅಜ್ಜಿ ಜೊತೆಗಿನ ಬಾಲ್ಯದ ಚಿತ್ರವನ್ನು ಈ ಹಿಂದೆ ಹಂಚಿಕೊಂಡಿದ್ದರು. ಅದನ್ನು ನೋಡಿದ ನೆಟ್ಟಿಗರು ನಿಮ್ಮ ಮಗ ಸಹ ಈಗ ನೀವೂ ಮಗುವಾಗಿದ್ದಾಗ ಇದ್ದಂತೆಯೇ ಇದ್ದಾನೆ ಎಂದು ಕಮೆಂಟ್​ ಮಾಡಿದ್ದಾರೆ. ಇದನ್ನು ನೋಡಿದ ರಾಧಿಕಾ ಈಗ ಇನ್​ಸ್ಟಾಗ್ರಾಂನಲ್ಲಿ ಲೆಟೆಸ್ಟ್ ಆಗಿ ತಮ್ಮಿಬ್ಬರ ಬಾಲ್ಯದ ಫೋಟೋ​ ಪೋಸ್ಟ್​ ಮಾಡಿದ್ದಾರೆ.


ಯಶ್​ ಹಾಗೂ ರಾಧಿಕಾ ಇತ್ತೀಚೆಗಷ್ಟೆ ಸಮುದ್ರದ ನಡುವೆ ಯಾಚ್​ನಲ್ಲಿ ತಮ್ಮ ಮಗನ ಮೊದಲ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದರ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು.
Published by: Anitha E
First published: November 26, 2020, 12:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading