HOME » NEWS » Entertainment » RADHIKA PANDIT CLARIFIES ABOUT HER THIRD PREGNANCY AE

Radhika Pandit: ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ದಂಪತಿ: ಏನಂತಾರೆ ರಾಧಿಕಾ..?

ರಾಧಿಕಾ ಪಂಡಿತ್​ ಲಾಕ್​ಡೌನ್​ನಲ್ಲಿ ಮನೆಯಲ್ಲಿ ಗಂಡ ಹಾಗೂ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಇಬ್ಬರೂ ಮಕ್ಕಳು ಇನ್ನೂ ಚಿಕ್ಕವರಾಗಿದ್ದು, ಅವರ ಆರೈಕೆಯಲ್ಲೇ ಸಮಯ ಕಳೆಯುವಂತಾಗಿದೆ. ಹೀಗಿರುವಾಗಲೇ ರಾಧಿಕಾ ಪಂಡಿತ್​ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

Anitha E | news18-kannada
Updated:June 30, 2020, 10:42 AM IST
Radhika Pandit: ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ದಂಪತಿ: ಏನಂತಾರೆ ರಾಧಿಕಾ..?
ರಾಧಿಕಾ ಪಂಡಿತ್​
  • Share this:
ಮೊದಲ ಮಗುವಾಗಿ ವರ್ಷ ತುಂಬುವ ಮೊದಲೇ ರಾದಿಕಾ ಪಂಡಿತ್​ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದ ಸುದ್ದಿ ನೀಡಿದ್ದರು. ಅಭಿಮಾನಿಗಳಿಗೆ ಈ ವಿಷಯ ಸಿಹಿ ಸುದ್ದಿಯಾಗಿತ್ತಾದರೂ ಸಾಕಷ್ಟು ಮಂದಿ ಟೀಕಿಸಿದ್ದರು. 

ರಾಧಿಕಾ ಪಂಡಿತ್​ ಲಾಕ್​ಡೌನ್​ನಲ್ಲಿ ಮನೆಯಲ್ಲಿ ಗಂಡ ಹಾಗೂ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಇಬ್ಬರೂ ಮಕ್ಕಳು ಇನ್ನೂ ಚಿಕ್ಕವರಾಗಿದ್ದು, ಅವರ ಆರೈಕೆಯಲ್ಲೇ ಸಮಯ ಕಳೆಯುವಂತಾಗಿದೆ. ಹೀಗಿರುವಾಗಲೇ ರಾಧಿಕಾ ಪಂಡಿತ್​ ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

Rocking star yash and radhika pandit speaking about ayra and son
ಮಕ್ಕಳೊಂದಿಗೆ ಯಶ್ ರಾಧಿಕಾ


ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ ಅನ್ನೋ ಸುದ್ದಿ ಹರಿದಾಡಲು ಕಾರಣ ಯಶ್​ ಇತ್ತೀಚೆಗಷ್ಟೆ ಮಾಡಿರುವ ಟ್ವೀಟ್​. ಸರ್ಕಾರ ಕೊರೋನ ನಿಯಂತ್ರಣಕ್ಕಾಗಿ ಮಾಡಿರುವ ಲಾಕ್​ಡೌನ್​ನ ನಿಯಮ ನನ್ನ ಪತ್ನಿಗೆ ತುಂಬಾ ಇಷ್ಟವಾಗಿದೆ. ರಾತ್ರಿ 8ಕ್ಕೆ ಮನೆಗೆ ಬರುವುದು ಹಾಗೂ ಭಾನುವಾರ ಇಡೀ ದಿನ ಜೊತೆಗಿರುವುದು ನನ್ನ ಹೆಂಡತಿಗೂ ಬೇಕಿತ್ತು. ಎಂದು ಟ್ವೀಟ್​ ಮಾಡಿದ್ದು, ಹಣೆಯ ಮೇಲೆ ಮೂರು ಬೆರಳು ಇಟ್ಟುಕೊಂಡು ತೆಗೆದಿರುವ ಫೋಟೋ ಹಂಚಿಕೊಂಡಿದ್ದಾರೆ ಯಶ್​.


ಯಶ್​ ಈ ರೀತಿ ಮೂರು ಬೆರಳು ಇಟ್ಟುಕೊಂಡು ತೆಗೆದಿರುವ ಫೋಟೋ ನೋಡಿದ ನೆಟ್ಟಿಗರು ಮೂರನೇ ಮಗುವಿಗೆ ಸಿದ್ಧರಾಗಿರಬಹುದಾ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಮಿಸಸ್​ ರಾಮಾಚಾರಿ ಈಗ ಸ್ಪಷ್ಟನೆ ಕೊಟ್ಟಿದ್ದಾರೆ.

Radhika Pandit clarifies about her third pregnancy
ಯಶ್​ ಮಾಡಿದ ಟ್ವೀಟ್​ಗೆ ರಾಧಿಕಾ ಕೊಟ್ಟ ಸ್ಪಷ್ಟನೆ


ಈಗಲಾದರೂ ನೀವು ಜವಾಬ್ದಾರಿಯುತ ನಾಗರಿಕನಂತೆ ನನ್ನ ಮಾತುಗಳನ್ನು ಪಾಲಿಸುತ್ತಿದ್ದೀರಾ..! ಇನ್ನು ಯಾರು ನಮ್ಮ ಮಾತುಗಳಿಗೆ ಎರಡು ರೀತಿಯ ಅರ್ಥಗಳನ್ನು ತೆಗೆದಿದ್ದರೋ ಅವರಿಗಾಗಿ ಈ ಮಾತು. ನಾನು ಗರ್ಭಿಣಿಯಲ್ಲ ಎಂದು ರಾಧಿಕಾ ಪಂಡಿತ್​ ಸ್ಪಷ್ಟಪಡಿಸಿದ್ದಾರೆ.


Nikhil-Revathi: ಹೊಸ ಫೋಟೋ ಜೊತೆ ಒಂದೊಳ್ಳೆ ಸಂದೇಶ ಕೊಟ್ಟ ನಿಖಿಲ್​-ರೇವತಿ..!


 

ಇದನ್ನೂ ಓದಿ: ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆಗಲಿವೆ ಬಿಗ್​ ಬುಲ್​, ಭುಜ್​ ಸೇರಿದಂತೆ 7 ಬಾಲಿವುಡ್​ ಸಿನಿಮಾಗಳು
Published by: Anitha E
First published: June 30, 2020, 10:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading