KGF 2: ಗೋವಾದಲ್ಲಿ ಕೆಜಿಎಫ್​ 2 ನೋಡಿದ ರಾಧಿಕಾ ಪಂಡಿತ್​ & ಫ್ಯಾಮಿಲಿ! ಅಪ್ಪನ ಸಿನಿಮಾ ನೋಡಿ ಮಕ್ಕಳು ಹೀಗಂದ್ರು

ರಾಕಿಂಗ್​ ಸ್ಟಾರ್​ ಯಶ್​ ಕುಟುಂಬ ಸದ್ಯ ಗೋವಾದಲ್ಲಿ ಬಿಡು ಬಿಟ್ಟಿದೆ. ರಾಧಿಕಾ ಪಂಡಿತ್ ಅವರ ಫ್ಯಾಮಿಲಿ ಕೂಡ ಗೋವಾದಲ್ಲಿ. ಹೀಗೆ ಎಲ್ಲರೂ ಒಟ್ಟಾಗಿ ಕೆಜಿಎಫ್​ 2 ಸಿನಿಮಾ ನೋಡಿದ್ದಾರೆ.

ಕೆಜಿಎಫ್​ 2 ನೋಡಿದ ರಾಧಿಕಾ & ಪಂಡಿತ್​

ಕೆಜಿಎಫ್​ 2 ನೋಡಿದ ರಾಧಿಕಾ & ಪಂಡಿತ್​

  • Share this:
ರಾಕಿಂಗ್ ಸ್ಟಾರ್ ಯಶ್ (Rcoking Star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್ - 2‘ (KGF 2) ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ. ಅದರೊಂದಿಗೆ ಬಾಕ್ಸ್ ಆಫೀಸ್​ ನಲ್ಲಿ ಭರ್ಜರಿ ಕಲೇಕ್ಷನ್ ಮಾಡುತ್ತಿದ್ದು, ರಾಕಿ ಬಾಯ್ ಅಬ್ಬರವನ್ನು ತಡಯಲು ಯಾರಿಂದಲೂ ಆಗುತ್ತಿಲ್ಲ.  ಕನ್ನಡ (Kannada) ಚಲನಚಿತ್ರೋದ್ಯಮದ ಒಂದು ಚಿತ್ರ ದೇಶಾದ್ಯಂತ ಬಾಕ್ಸ್ ಆಫೀಸ್ (Box Office) ಗಲ್ಲಾ ಪೆಟ್ಟಿಗೆಯಲ್ಲಿ ಇಷ್ಟೊಂದು ಹಣ ಗಳಿಸಿ ಮತ್ತು ಬೇರೆ ಬೇರೆ ರಾಜ್ಯ(Other State) ದ ಚಲನಚಿತ್ರೋದ್ಯಮದಲ್ಲಿ ಈ ರೀತಿ ದೊಡ್ಡ ಸುದ್ದಿ ಮಾಡಿದ ಚಿತ್ರ ಮತ್ತೊಂದಿರಲಿಲ್ಲ ಎಂದು ಹೇಳಬಹುದು. ಇತ್ತೀಚೆಗೆ  ಚಿತ್ರತಂಡ ಗೋವಾ (Goa) ದಲ್ಲಿ ಯಶಸ್ಸನ್ನು ಸಂಭ್ರಮಿಸಿತ್ತು. ಫ್ಯಾಮಿಲಿ (Family) ಸಮೇತ ರಾಕಿಂಗ್​ ಸ್ಟಾರ್​ ಯಶ್​ ಕೂಡ ಗೋವಾಗೆ ತೆರಳಿದ್ದರು.

ಗೋವಾದಲ್ಲಿ ಕೆಜಿಎಫ್ 2 ನೋಡಿದ ರಾಧಿಕಾ & ಫ್ಯಾಮಿಲಿ!

ಹೌದು, ರಾಕಿಂಗ್​ ಸ್ಟಾರ್​ ಯಶ್​ ಕುಟುಂಬ ಸದ್ಯ ಗೋವಾದಲ್ಲಿ ಬಿಡು ಬಿಟ್ಟಿದೆ. ರಾಧಿಕಾ ಪಂಡಿತ್ ಅವರ ಫ್ಯಾಮಿಲಿ ಕೂಡ ಗೋವಾದಲ್ಲಿ. ಹೀಗೆ ಎಲ್ಲರೂ ಒಟ್ಟಾಗಿ ಕೆಜಿಎಫ್​ 2 ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ರಾಧಿಕಾ ಪಂಡಿತ್​ ಅಪ್​ಡೇಟ್​ ನೀಡಿದ್ದಾರೆ. ಕಸಿನ್ಸ್​ ಹಾಗೂ ಅಮ್ಮನ ಜೊತೆ ಕೆಜಿಎಫ್​ 2 ಸಿನಿಮಾ ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅವರ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೆಜಿಎಫ್​ 2 ಸಿನಿಮಾ ನೋಡಿದ್ರಾ ಯಶ್​ ಮಕ್ಕಳು?

ರಾಧಿಕಾ ಪಂಡಿತ್​ ಕೆಜಿಎಫ್​ 2 ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಸಂಗತಿ ಚರ್ಚೆಯಾಗುತ್ತಿದೆ. ರಾಕಿ ಭಾಯ್​ ಅವರ ಸಿನಿಮಾವನ್ನು ಅವರ ಮಕ್ಕಳು ನೋಡಿದ್ದಾರಾ? ಎಂಬ ಪ್ರಶ್ನೆ ಬಂದಿದೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ರಾಕಿ ಭಾಯ್​ ಉತ್ತರಿಸಿದ್ದರು. ಮಕ್ಕಳಿಗೆ ನನ್ನ ಸಿನಿಮಾದ ಹಾಡುಗಳು ಎಂದರೆ ಇಷ್ಟ ಎಂದು ಹೇಳಿದ್ದರು. ಚಿತ್ರಮಂದಿರಗಳಲ್ಲಿ ಹೆಚ್ಚು ಸೌಂಡ್​ ಇರುವುದರಿಂದ ಮಕ್ಕಳಿಗೆ ಸಿನಿಮಾ ತೋರಿಸಿರಲ್ಲ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ.

ಇದನ್ನೂ ಓದಿ: KGF 2 ಅಬ್ಬರಕ್ಕೆ ಬಾಲಿವುಡ್ ಶೇಕ್, ಬಾಕ್ಸ್ ಆಫೀಸ್ ಸುಲ್ತಾನನಾದ ರಾಕಿ ಬಾಯ್!​

ರಿಲ್ಯಾಕ್ಸ್​ ಮೂಡ್​ನಲ್ಲಿ ಕೆಜಿಎಫ್​ ಟೀಂ!

'ರಾಕಿಂಗ್ ಸ್ಟಾರ್' ಯಶ್, ಸಂಜಯ್ ದತ್, ರವೀನಾ ಟಂಡನ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಇಂಡಿಯನ್ ಬಾಕ್ಸ್ ಆಫೀಸ್ ನಡುಗುವಂತೆ ಮಾಡಿದೆ.  ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವು ಈವರೆಗೂ ಮಾಡಿರುವ ದಾಖಲೆಗಳು ಒಂದೆರಡಲ್ಲ. 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿದೆ. ಚಿತ್ರದ ನಾಯಕ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಅನೇಕರು ಫ್ಯಾಮಿಲಿ ಸಮೇತ ಹೋಗಿದ್ದಾರೆ.

ಇದನ್ನೂ ಓದಿ: Bollywood ಗೆ ಬೆವರಿಳಿಸೋದ್ರಲ್ಲಿ ಸೌತ್ ಸ್ಟಾರ್​​ಗಳು ಮುಂದು! ಯಶ್​, ಚಿರಂಜೀವಿ ಹಿಂದಿ ಚಿತ್ರರಂಗದ ಬಗ್ಗೆ ಹೀಗಂದಿದ್ರು

ಯಶ್​ ಕೆನ್ನೆಗೆ ಮುತ್ತಿಟ್ಟ ಪ್ರಶಾಂತ್ ನೀಲ್​ - ವಿಜಯ್​ ಕಿರಗಂದೂರ್​!

ಕೆಜಿಎಫ್​ ಚಾಪ್ಟರ್​​ 1 ಸಿನಿಮಾ ಸೂಪರ್​ ಡೂಪರ್​ ಹಿಟ್​ ಆಗಿತ್ತು. ಆಗಲು ಕೆಜಿಎಫ್​ ಟೀಂ ರಿಲ್ಯಾಕ್ಸ್​ಗಾಗಿ ಟ್ರಿಪ್​ ಹೋಗಿತ್ತು. ಈಗಲೂ ಕೆಜಿಎಫ್​ ಟೀಂ ಗೋವಾಗೆ ತೆರಳಿದೆ. ಕಳೆದ ಬಾರಿಯಂತೆ ಸೆಲೆಬ್ರೇಷನ್​ ಮಾಡಿದ್ದಾರೆ. ಕೆಜಿಎಫ್​ 1 ಹಿಟ್​ ಆದಾಗ, ಯಶ್​ ಕೆನ್ನೆಗೆ ನಿರ್ದೇಶಕ  ಪ್ರಶಾಂತ್​ ನೀಲ್​ ಹಾಗೂ ನಿರ್ಮಾಪಕ ವಿಜಯ್​ ಕಿರಗಂದೂರ್​ ಕಿಸ್​ ಕೊಟ್ಟಿದ್ದರು. ಈಗಲೂ ಅಷ್ಟೇ ಪ್ರಶಾಂತ್​ ಹಾಗೂ ವಿಜಯ್​ ರಾಕಿ ಭಾಯ್​ ಕೆನ್ನೆಗೆ ಮುತ್ತು ಕೊಟ್ಟು ಕೇಕ್​ ಕತ್ತರಿಸಿ ಸೆಲೆಬ್ರೇಷನ್​ ಮಾಡಿದ್ದಾರೆ. ಕೇಕ್​ನಲ್ಲಿ ಇದು ಕೇವಲ ಆರಂಭ ಎಂದು ಬರೆಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Published by:Vasudeva M
First published: