Radhika Kumaraswamy: ನೀವು ಟಿಕ್​ಟಾಕ್ ಮಾಡ್ತೀರಾ? ಹಾಗಿದ್ರೆ ರಾಧಿಕಾ ಕುಮಾರಸ್ವಾಮಿ ಆಫರ್​ ಮಿಸ್​ ಮಾಡ್ಕೋಬೇಡಿ!

Damayanthi Movie: ದಮಯಂತಿ ಸಿನಿಮಾ ಮುಂದಿನ ತಿಂಗಳ ಅಂತ್ಯಕ್ಕೆ ದೀಪಾವಳಿ ವೇಳೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲೇ ರಿಲೀಸ್ ಆಗುವ ಸಾಧ್ಯತೆಗಳಿವೆ.

Sushma Chakre | news18-kannada
Updated:September 25, 2019, 9:43 AM IST
Radhika Kumaraswamy: ನೀವು ಟಿಕ್​ಟಾಕ್ ಮಾಡ್ತೀರಾ? ಹಾಗಿದ್ರೆ ರಾಧಿಕಾ ಕುಮಾರಸ್ವಾಮಿ ಆಫರ್​ ಮಿಸ್​ ಮಾಡ್ಕೋಬೇಡಿ!
ರಾಧಿಕಾ ಕುಮಾರಸ್ವಾಮಿ
  • Share this:
ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಕರಾವಳಿ ಸುಂದರಿ ರಾಧಿಕಾ ಕುಮಾರಸ್ವಾಮಿ ಮುಖ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಡ್ಯಾನ್ಸ್​ ಶೋವೊಂದಕ್ಕೆ ತೀರ್ಪುಗಾರರಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ರಾಧಿಕಾ ಕುಮಾರಸ್ವಾಮಿ ದೊಡ್ಡ ಬ್ರೇಕ್ ನಂತರ ಭರ್ಜರಿಯಾಗಿ ಮತ್ತೆ ಸ್ಯಾಂಡಲ್​ವುಡ್​ನಲ್ಲಿ ನೆಲೆಯೂರಲು ಸಿದ್ಧರಾಗಿದ್ದಾರೆ.

ಇದುವರೆಗಿನ ಸಿನಿಮಾಗಳಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದ ರಾಧಿಕಾ ಕುಮಾರಸ್ವಾಮಿ ಈಗ ರೌದ್ರಾವತಾರ ತಾಳಿದ್ದಾರೆ. 'ದಮಯಂತಿ' ಎಂಬ ಹಾರರ್ ಸಿನಿಮಾದಲ್ಲಿ ನಟಿಸಿರುವ ರಾಧಿಕಾ ಲುಕ್ ನೋಡಿದವರು ತೆಲುಗಿನ 'ಅರುಂಧತಿ' ಸಿನಿಮಾದ ಅನುಷ್ಕಾ ಶೆಟ್ಟಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 'ದಮಯಂತಿ' ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಇದೀಗ ಚಿತ್ರತಂಡ ರಾಧಿಕಾರ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.

ಶ್ರೀಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್​ನಡಿ ತೆರೆಗೆ ಬರಲಿರುವ 'ದಮಯಂತಿ' ಸಿನಿಮಾವನ್ನು ನವರಸನ್ ನಿರ್ದೇಶಿಸಿದ್ದಾರೆ. ಈ ಸಿನಿಮಾದ ಟೀಸರ್​ನಲ್ಲಿರುವ ಡೈಲಾಗ್​ಗಳನ್ನು ಅಭಿಮಾನಿಗಳು ಟಿಕ್​ಟಾಕ್ ಮಾಡಿ ಕಳುಹಿಸಬಹುದು. ಅವುಗಳಲ್ಲಿ ಅತಿಹೆಚ್ಚು ಲೈಕ್ ಪಡೆಯುವ ಟಿಕ್​ಟಾಕ್ ವಿಡಿಯೋ ಮಾಡಿರುವ 10 ಜನರಿಗೆ 'ದಮಯಂತಿ' ಸಿನಿಮಾದ ನಾಯಕಿ ರಾಧಿಕಾ ಕುಮಾರಸ್ವಾಮಿ ಜೊತೆ ಕುಳಿತು ಪ್ರೀಮಿಯರ್ ಶೋ ನೋಡುವ ಅವಕಾಶ ಸಿಗಲಿದೆ.ಈ ಬಗ್ಗೆ ಖುದ್ದು ರಾಧಿಕಾ ಕುಮಾರಸ್ವಾಮಿ ವಿಡಿಯೋ ಮೂಲಕ ಆಫರ್ ನೀಡಿದ್ದಾರೆ. 'ನಮ್ಮ ದಮಯಂತಿ ಟೀಸರ್​ನಲ್ಲಿರುವ ಡೈಲಾಗ್​ಗಳನ್ನು ಸರಿಯಾಗಿ ಕೇಳಿಸಿಕೊಂಡು ಟಿಕ್​ಟಾಕ್ ಮಾಡಿ ಕಳುಹಿಸಿ. ಯಾರ ಟಿಕ್​ಟಾಕ್​ಗೆ ಹೆಚ್ಚು ಲೈಕ್​ಗಳು ಸಿಗುತ್ತವೆಯೋ ಅವರಲ್ಲಿ ಹತ್ತು ಮಂದಿ ನನ್ನೊಂದಿಗೆ ಕೂತು 'ದಮಯಂತಿ' ಚಿತ್ರದ ಪ್ರೀಮಿಯರ್ ಶೋ ನೋಡಬಹುದು' ಎಂದು ವಿಡಿಯೋ ಮೂಲಕ ರಾಧಿಕಾ ತಿಳಿಸಿದ್ದಾರೆ.

'ದಮಯಂತಿ' ಸಿನಿಮಾ ಮುಂದಿನ ತಿಂಗಳ ಅಂತ್ಯಕ್ಕೆ ದೀಪಾವಳಿ ವೇಳೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲೇ ರಿಲೀಸ್ ಆಗುವ ಸಾಧ್ಯತೆಗಳಿವೆ. ಇದಕ್ಕಾಗಿ ಈಗಾಗಲೇ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

First published: September 25, 2019, 9:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading