Puneeth Rajkumar: ಅಪ್ಪು ಜೊತೆ ರಾಧಿಕಾ ಕುಮಾರಸ್ವಾಮಿ ಕೊನೆಯ ಡ್ಯಾನ್ಸ್! ಸಾಂಗ್ ಯಾವುದು ಗೊತ್ತೇ?

Puneeth Rajkumar: ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಜೊತೆ ರಾಧಿಕಾ ಕುಮಾರಸ್ವಾಮಿ ಕೊನೆಯಬಾರಿ ಡ್ಯಾನ್ಸ್ ಮಾಡಿದ್ದು ಯಾವಾಗ ಗೊತ್ತೇ? ಅವರ ಕೊನೆಯ ಡ್ಯಾನ್ಸ್ ವಿಡಿಯೋ ಈಗ ವೈರಲ್ ಆಗಿದೆ.

ಪುನೀತ್ ರಾಜ್​ಕುಮಾರ್ - ರಾಧಿಕಾ ಕುಮಾರಸ್ವಾಮಿ

ಪುನೀತ್ ರಾಜ್​ಕುಮಾರ್ - ರಾಧಿಕಾ ಕುಮಾರಸ್ವಾಮಿ

  • Share this:
ಸ್ಯಾಂಡಲ್​ವುಡ್​ನಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ವ್ಯಕ್ತಿತ್ವದ ಜೊತೆಗೆ ಅವರ ಡ್ಯಾನ್ಸ್​ಗೆ (Dance) ವಿಪರೀತ ಕ್ರೇಜ್ ಇದೆ. ಸೌತ್​ ಇಂಡಸ್ಟ್ರಿಯಲ್ಲಿ (South Industry), ವಿಶೇಷವಾಗಿ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಪುನೀತ್ ಅವರ ಸಿನಿಮಾ, ಅದರ ಸಾಂಗ್, ಅವರ ಸ್ಟೆಪ್ಸ್ ವಿಚಾರದಲ್ಲಿ ಅವರನ್ನು ಯಾರೂ ಮೀರಿಸಲಾರರು. ಬಹಳಷ್ಟು ವೇದಿಕೆಗಳಲ್ಲಿ ಅಪ್ಪು ತಮ್ಮ ಸಹ ಕಲಾವಿದರ ಜೊತೆ ತಟ್ಟನೆ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅವರ ಹಲವಾರು ಡ್ಯಾನ್ಸ್ ಮೂವ್ಸ್​ ಮಕ್ಕಳಿಗೆ ಅತ್ಯಂತ ಫೇವರೇಟ್ ಕೂಡಾ ಹೌದು. ಇನ್ನು ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಅವರೂ ಅಷ್ಟೆ ಡ್ಯಾನ್ಸ್ ವಿಚಾರಕ್ಕೆ ಬಂದರೆ ಸೂಪರ್. ಖಾಸಗಿ ಕಾರ್ಯಕ್ರಮ, ಅವರ ಫ್ಯಾಮಿಲಿ ಫಂಕ್ಷನ್​​ಗಳಲ್ಲಿ ನಟಿ ಡ್ಯಾನ್ಸ್ ಮಾಡುವ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಧಿಕಾ ಹಾಗೂ ಪುನೀತ್ ರಾಜ್​ಕುಮಾರ್ ಜೊತೆಯಾಗಿ ಕೊನೆಯಬಾರಿ ಯಾವಾಗ ಡ್ಯಾನ್ಸ್ ಮಾಡಿದ್ದರು ಗೊತ್ತೇ? ಅವರು ಜೊತೆಯಾಗಿ ಖುಷಿಯಾಗಿ ಕೊನೆಯಬಾರಿ ಒಟ್ಟಿಗೆ ಹೆಜ್ಜೆ ಹಾಕಿದ ವಿಡಿಯೋ ಒಂದು ಈಗ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.

ರಾಧಿಕಾ ಒಂದು ಕಾಲದಲ್ಲಿ ಟಾಪ್ ನಟಿಯಾಗಿದ್ದರು. ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಸ್ಯಾಂಡಲ್​ವುಡ್​ನಲ್ಲಿ ಕ್ಯೂಟೆಸ್ಟ್ ತಂಗಿಯಾಗಿದ್ದರು. ಯಾವುದೇ ಸಿನಿಮಾ ಆದರೂ ಕೂಡ ರಾಧಿಕಾ ಕುಮಾರಸ್ವಾಮಿ ನಟಿಸಿದ್ದರೆ ಸಿನಿಮಾ ಹಿಟ್ ಎನ್ನುವ ಲೆಕ್ಕಾಚಾರವಿತ್ತು. ವಿಶೇಷವಾಗಿ ನಟಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದರು.

ಹೀರೋಯಿನ್ ಮಾತ್ರವಲ್ಲ ತಂಗಿಯಾಗಿ ಮನ್ನಣೆ ಗಳಿಸಿದ ನಟಿ

ಹೀರೋಯಿನ್ ಆಗಿ ಹೆಚ್ಚು ಫೇಮಸ್ ಆಗುವುದಕ್ಕಿಂತಲೂ ಅವರು ತಂಗಿಯಾಗಿ ಸಪೋರ್ಟಿಂಗ್ ಪಾತ್ರಗಳಲ್ಲಿ ಹೆಚ್ಚಾಗಿ ಗಮನ ಸೆಳೆದವರು. ತವರಿಗೆ ಬಾ ತಂಗಿ, ಅಣ್ಣ ತಂಗಿ, ತವರಿನ ತೊಟ್ಟಿಲು, ಕರುಳಿನ ಕೂಗು, ಸ್ವೀಟಿ, ಹೂ, ಧಮಯಂತಿ, ರುದ್ರತಾಂಡವ, ರವಿ ಬೋಪಣ್ಣ, ರಿಷಿ, ಅನಾಥರು ಹೀಗೆ ಸಾಲು ಸಾಲು ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ನಟಿಸಿದ್ದಾರೆ. ಇದನ್ನು ಹೊರತುಪಡಿಸಿ ದರ್ಶನ್, ಆದಿತ್ಯ, ಸುನಿಲ್ ರಾವ್, ರವಿಚಂದ್ರನ್, ವಿಜಯ ರಾಘವೇಂದ್ರ, ಹೀಗೆ ಕನ್ನಡದ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.

ಸಿನಿಮಾದಿಂದ ದೂರ ಇದ್ದಾರೆ ನಟಿ

ರಾಧಿಕಾ ಅವರು ಈಗ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಇದರ ಬದಲಾಗಿ ಇವರು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಮಗಳ ಹೆಸರಿನಲ್ಲಿ ಶಮಿಕಾ ಎಂಟರ್ಪ್ರೈಸಸ್ ಎಂಬ ಸಂಸ್ಥೆಯೊಂದನ್ನು ತೆರೆದು ಹಲವಾರು ಸಿನಿಮಾಗಳಿಗೆ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ.

ಡ್ಯಾನ್ಸ್ ಎಂದರೆ ಕ್ರೇಜ್

ರಾಧಿಕಾ ಕುಮಾರಸ್ವಾಮಿ ಅವರು ನಿರ್ಮಾಪಕಿಯಾಗಿ ಮಿಂಚಿದರೂ ಡ್ಯಾನ್ಸ್ ಮಾಡುವುದರಲ್ಲಿ ಎಕ್ಸ್​ಪರ್ಟ್. ಡ್ಯಾನ್ಸ್ ಬಗೆಗಿನ ಅವರ ಒಲವು ಒಂಚೂರೂ ಕಡಿಮೆಯಾಗಿಲ್ಲ. ಅವರ ಫ್ಯಾಮಿಲಿ ಫಂಕ್ಷನ್ ಡ್ಯಾನ್ಸ್ ವಿಡಿಯೋ ಕ್ಲಿಪ್ ಅಂತೂ ಸಖತ್ ವೈರಲ್ ಆಗಿತ್ತು.

ಇದನ್ನೂ ಓದಿ: ಮಿಲ್ಕಿ​ ಬ್ಯೂಟಿ ಕಂಡು ದಿಗ್ಭ್ರಮೆಯಾದ ಫ್ಯಾನ್ಸ್​! ಕ್ರಿಕೆಟ್​ ಸ್ಟೇಡಿಯಂನಲ್ಲಿ ತಮನ್ನಾ ಸಖತ್​ ಫೋಟೋಶೂಟ್

ನಟಿ ಸಿನಿಮಾರಂಗದಿಂದ ದೂರ ಉಳಿದಿದ್ದರೂ ಡ್ಯಾನ್ಸ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳನ್ನು ತಲುಪುತ್ತಾರೆ. ವಿಡಿಯೋವನ್ನು ಹಂಚಿಕೊಳ್ಳುತ್ತಾರೆ. ಎರಡು ವರ್ಷದ ಹಿಂದೆ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲಿಯೂ ರಾಧಿಕಾ ಕುಮಾರಸ್ವಾಮಿ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಆಗಮಿಸಿದ್ದರು.






ರಾಜ್ ಸಿನಿಮಾದ ಹಾಡಿಗೆ ಡ್ಯಾನ್ಸ್

ಅಪ್ಪು ಅವರ ಜೊತೆಗೆ ರಾಧಿಲಾ ರಾಜ್ ಸಿನಿಮಾದ ಪಾರು ಎಂಬ ಹಾಡಿಗೆ ಹೆಜ್ಜೆಯನ್ನು ಹಾಕಿದ್ದರು. ಈಗ ಅಪ್ಪು ಮತ್ತು ರಾಧಿಕಾ ಕುಮಾರಸ್ವಾಮಿ ಅವರ ಹಳೆಯ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಕನ್ನಡ ಟ್ರೆಂಡ್ ನ್ಯೂಸ್ ಎನ್ನುವ ಇನ್​ಸ್ಟಾಗ್ರಾಮ್ ಪೇಜ್ ಈ ವಿಡಿಯೋವನ್ನು ಶೇರ್ ಮಾಡಿದೆ. ವಿಡಿಯೋ ನೋಡಿ ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ.

ಇದನ್ನೂ ಓದಿ: Bollywood: ಬಾಲಿವುಡ್‌ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸೋಲಲು ಕಾರಣ ಏನು ಗೊತ್ತಾ?

ಬ್ಲಾಕ್ ಬಾಡಿಕಾನ್ ಡ್ರೆಸ್​ನಲ್ಲಿ ರಾಧಿಕಾ

ರಾಧಿಕಾ ಬ್ಲಾಕ್ ಕಲರ್ ಬಾಡಿಕಾನ್ ಡ್ರೆಸ್ ಧರಿಸಿದ್ದರೆ ಪುನೀತ್ ಅವರು ಗ್ರೇ ಕಲರ್ ಪ್ಯಾಂಟ್ ಹಾಗೂ ಕ್ಯಾಶುವಲ್ ಟೀಶರ್ಟ್ ಧರಿಸಿದ್ದರು. ನಗು ನಗುತ್ತಾ ಪ್ರೀತಿಯಿಂದ ಜೊತೆಯಾಗಿ ಡ್ಯಾನ್ಸ್ ಮಾಡಿದ ಹಳೆಯ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
Published by:Divya D
First published: