ಪ್ರೇಕ್ಷಕರ ಒತ್ತಾಯದ ಮೇರೆಗೆ ದಸರಾಗೆ ಮತ್ತೆ ಬರುತ್ತಿದ್ದಾಳೆ ದಮಯಂತಿ!

ರಾಧಿಕಾ ಕುಮಾರಸ್ವಾಮಿ ಅಭಿನಯದ  'ದಮಯಂತಿ' ಚಿತ್ರ ಕಳೆದ ವರ್ಷ  ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ನಾಡಹಬ್ಬ ದಸರಾ ಸಮಯವಾಗಿರುವುದರಿಂದ  ಅಭಿಮಾನಿಗಳು ‘ದಮಯಂತಿ’ ಚಿತ್ರವನ್ನು ಮರು ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ.

ದಮಯಂತಿ

ದಮಯಂತಿ

  • Share this:
ರಾಧಿಕಾ ಕುಮಾರಸ್ವಾಮಿ ಅಭಿನಯದ  'ದಮಯಂತಿ' ಚಿತ್ರ ಕಳೆದ ವರ್ಷ  ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ನಾಡಹಬ್ಬ ದಸರಾ ಸಮಯವಾಗಿರುವುದರಿಂದ  ಅಭಿಮಾನಿಗಳು ‘ದಮಯಂತಿ’ ಚಿತ್ರವನ್ನು ಮರು ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ.ಲಾಕ್​ಡೌನ್ ನಂತರ ಮತ್ತೆ ಚಿತ್ರಮಂದಿರಗಳು ಓಪನ್ ಆಗಿವೆ. ಏಳು ತಿಂಗಳ ಬಂದ್ ನಂತರ ಥಿಯೇಟರ್ ರಿ-ಓಪನ್ ಆಗಿದ್ದು, ಚಿತ್ರರಸಿಕರಿಗೆ ಮತ್ತೆ ಬೆಳ್ಳಿ ತೆರೆಯಲ್ಲಿ‌ ಸಿನಿಮಾ ನೋಡುವ ಅವಕಾಶ ಸಿಗುತ್ತಿದೆ. ಆದರೆ ಈಗ ರಿಲೀಸ್ ಆಗುತ್ತಿರೋ ಸಿನಿಮಾಗಳೆಲ್ಲಾ ಆಲ್ ರೆಡಿ ಥಿಯೇಟರ್ ಗೆ ಬಂದು, ಕೊರೋನಾ ಲಾಕ್ ಡೌನ್ ನಿಂದ ಎತ್ತಂಗಡಿ ಆದ ಸಿನಿಮಾಗಳು ಅನ್ನೋದು ಹೈಲೈಟ್.

ಈಗ ಅದರ ಮುಂದುವರೆದ ಭಾಗವಾಗಿ ಮತ್ತೊಂದು ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಅದುವೆ ‘ದಮಯಂತಿ’ ಸಿನಿಮಾ. ಅಂದಹಾಗೆ, ರಾಧಿಕಾ ಕುಮಾರಸ್ವಾಮಿ ಅಭಿನಯದ  'ದಮಯಂತಿ' ಚಿತ್ರ ಕಳೆದ ವರ್ಷ  ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ನಾಡಹಬ್ಬ ದಸರಾ ಸಮಯವಾಗಿರುವುದರಿಂದ  ಅಭಿಮಾನಿಗಳು ‘ದಮಯಂತಿ’ ಚಿತ್ರವನ್ನು ಮರು ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ.

ಪ್ರೇಕ್ಷಕರ ಒತ್ತಾಯದ ಮೇರೆಗೆ ಅಕ್ಟೋಬರ್ 23ರಂದು ‘ದಮಯಂತಿ’ ಚಿತ್ರ ಮರು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಶ್ರೀ ಲಕ್ಷ್ಮೀ ವೃಷಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ, ಸಾಧುಕೋಕಿಲ, ಭಜರಂಗಿ ಲೋಕಿ, ತಬಲ ನಾಣಿ, ಮಜಾಟಾಕೀಸ್ ಪವನ್ ಮುಂತಾದವರು ನಟಿಸಿದ್ದಾರೆ.ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಗಣೇಶ್ ನಾರಾಯಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಹೇಶ್ ಅವರ ಸಂಕಲನವಿದೆ.

ಹೊಸ ಸಿನಿಮಾಗೆ ನಾಯಕನಾಗಿ ವಸಿಷ್ಠ ಸಿಂಹ; ಚಿತ್ರದ ಟೈಟಲ್ ಏನು ಗೊತ್ತಾ?
Published by:Harshith AS
First published: