ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಬಿಡುಗಡೆಗೆ ಸಿದ್ಧವಾಗಿದೆ. ಮೇ 13ರಂದು ಮಲ್ಟಿಪಲ್ ಫ್ಲಾಟ್ಫಾರ್ಮ್ನಲ್ಲಿ ತೆರೆಕಾಣುತ್ತಿರುವ ಸಿನಿಮಾಕ್ಕೆ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಈ ಮೂಲಕ ಪ್ರತಿ ಈದ್ ಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವ ಸಲ್ಮಾನ್ ಅವರ ಯೋಜನೆ ಈ ಸಿನಿಮಾದ ಮೂಲಕವೂ ಮುಂದುವರೆದಿದೆ ಎಂಬುದು ವಿಶೇಷ. ಮತ್ತೊಂದು ವಿಶೇಷ ಎಂದರೆ ಹೊರದೇಶ, ಒಟಿಟಿ ವೇದಿಕೆ, ಡಿಟಿಎಚ್ನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ಮಾತ್ರ ಇಡೀ ಭಾರತೀಯ ಚಿತ್ರರಂಗದ ಕುತೂಹಲಕ್ಕೆ ಕಾರಣವಾಗಿದೆ. ಈಗ ಮತ್ತೆ ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಮತ್ತೆ ಚಿತ್ರಮಂದಿರಗಳು ಯಾವಾಗ ತೆರೆಯಲಿವೆ ಅನ್ನೋದು ಯಾರಿಗೂ ಗೊತ್ತಿಲ್ಲ. ಅದಕ್ಕೆ ಹಲವಾರು ಚಿತ್ರತಂಡಗಳು ಒಟಿಟಿ ಮೊರೆ ಹೋಗುತ್ತಿವೆ.
ಕೊರೋನಾ ತಡೆಗಟ್ಟುವ ಕಾರಣ ದೇಶಾದ್ಯಂತ ಇಡೀ ಚಿತ್ರಮಂದಿರಗಳನ್ನು ಮುಚ್ಚಲಾಯಿತು. ನಟ-ನಟಿಯರ, ಕಲಾವಿದರ, ಸಿನಿ ತಾಂತ್ರಿಕರ ಬದುಕನ್ನು ದುಸ್ತರ ಮಾಡಬೇಡಿ ಎಂದು ವಿನಂತಿಸಿಕೊಂಡ ಬೆನ್ನಲೇ ಶೇ 50 ರಷ್ಟು ಮಂದಿಗೆ ಅವಕಾಶ ನೀಡಲಾಯಿತು. ಪುನಃ ಬಹುಒತ್ತಾಯದ ಮೇರೆ 100ರಷ್ಟು ಅವಕಾಶವೂ ದೊರೆಯಿತು. ಆದರೆ ಪುನಃ ಚಿತ್ರಮಂದಿರಗಳು ಮುಚ್ಚಿವೆ. ಹಾಗಾಗಿ ಬಹುಪಾಲು ನಿರ್ದೇಶಕರು, ನಿರ್ಮಾಪಕರು ಮಲ್ಟಿಪಲ್ ಫ್ಲಾಟ್ಫಾರ್ಮ್ ಮೊರೆ ಹೋಗುತ್ತಿದ್ದಾರೆ. ಜೊತೆಗೆ ಈ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾವನ್ನು ಒಟಿಟಿ ವೇದಿಕೆಯಲ್ಲಿ ಕಾಣಬಹುದಿತ್ತು. ಕೊರೋನಾ ಸಂದರ್ಭದಲ್ಲಿ ನೇರವಾಗಿ ಒಟಿಟಿ ವೇದಿಕೆಯಲ್ಲೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದೀಗ ಸಲ್ಮಾನ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಡಿಟಿಎಚ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.
These are not the times for zoom zoom so watch n listen to #ZoomZoom at home. Plz be safe.https://t.co/e5hntzIWZw@bindasbhidu @DishPatani @RandeepHooda @PDdancing @SajidMusicKhan @wajidkhan7 @IuliaVantur @iamashking @kunaalvermaa77 @csgonsalves
— Salman Khan (@BeingSalmanKhan) May 10, 2021
ಇದನ್ನೂ ಓದಿ: ಕೋವಿಡ್ನಿಂದ ಗುಣಮುಖರಾದ ಅಲ್ಲು ಅರ್ಜುನ್: 15 ದಿನಗಳ ನಂತರ ಮಕ್ಕಳನ್ನು ಮುದ್ದಾಡಿದ ಸ್ಟೈಲಿಶ್ ಸ್ಟಾರ್
ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾ ಡೊಡ್ಡ ಪ್ರಮಾಣದ ಹೂಡಿಕೆ ಸಿನಿಮಾವಾಗಿದ್ದು, ವಿವಿಧೆಡೆ ಬಿಡುಗಡೆ ಮಾಡಲು ಯೋಚಿಸುತ್ತಿದ್ದೇವೆ. ಆದರೆ ಕೋವಿಡ್ ಕಾರಣ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶವಿಲ್ಲ. ಏಕೆಂದರೆ ಸಿನಿಮಾ ನೋಡಲು ಬಂದವರಿಗೆ ಕೊರೋನಾ ಹರಡುವ ಸಾಧ್ಯತೆ ಭಯ ಇರುವುದರಿಂದ ಚಿತ್ರ ಮಂದಿರಗಳಲ್ಲಿ ಸಿನಿಮಾ ತೆರೆಕಾಣುತ್ತಿಲ್ಲ. ಅಲ್ಲದೇ ಚಿತ್ರಮಂದಿರಗಳು ಸಹ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗದೆ ಇರುವುದರಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ ಎಂದು ಒಂದು ವೇದಿಕೆಯ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಈ ವಿಷಯವಾಗಿಯೇ ಸಲ್ಮಾನ್ ಖಾನ್ ಸಿನಿಮಾ ಮಂದಿರಗಳ ಮಾಲೀಕರ ಬಳಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ರಾಧೆ ಸಿನಿಮಾವನ್ನು ಪ್ರೇಕ್ಷಕರ ಮನರಂಜನೆಗೆಂದೇ ಒಟಿಟಿ ಮೂಲಕ ರಿಲೀಸ್ ಮಾಡಲಾಗುತ್ತಿದೆ ಎಂದಿದ್ದಾರೆ ಬ್ಯಾಡ್ ಬಾಯ್.
#Radhe ka agla gaana kal… #ZoomZoomhttps://t.co/e5hntzIWZw@bindasbhidu @DishPatani @RandeepHooda @PDdancing @SajidMusicKhan @wajidkhan7 @IuliaVantur @iamashking @kunaalvermaa77 @csgonsalves
— Salman Khan (@BeingSalmanKhan) May 9, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ