ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್ಪೆಕ್ಟೆಡ್(Most Expected) ಸಿನಿಮಾ ಅಂದರೆ ಅದು ರಾಧೆ ಶ್ಯಾಮ್(Radhe Shyam). ಪ್ರಭಾಸ್(Prabhas) ಹಾಗೂ ಪೂಜಾ ಹೆಗ್ಡೆ(Pooja Hegde) ಈ ಸಿನಿಮಾದಲ್ಲಿ ರಾಧೆ ಶ್ಯಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೈಟಲ್ ಹೇಳುವಂತೆ ಇದೊಂದು ಪಕ್ಕಾ ಲವ್(Love) ಜೋನರ್ ಇರುವ ಸಿನಿಮಾ. ಅದರಲ್ಲೂ ಪ್ರಭಾಸ್ ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಇದೀಗ ಬಹುನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್(Radhe Shyam)ನಿಂದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದೆ. ಪೂಜಾ ಹಾಗೂ ಪ್ರಭಾಸ್ ಜೋಡಿ ಪರ್ಫೆಕ್ಟ್ ಕಪಲ್ ಆಗಿ ಕಾಣಿಸಿಕೊಂಡಿದ್ದು, ಸಖತ್ ಕಿಕ್ ಕೊಡುತ್ತಿದೆ. ಅದರಲ್ಲೂ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಹಾಗಿದೆ. ಸಿನಿಪ್ರಿಯರು ಕೂಡ ಈ ಹಾಡನ್ನು ರಿಪೀಟ್ ಮೋಡ್ನಲ್ಲಿ ಕೇಳುತ್ತಿದ್ದಾರೆ. 'ಆಶಿಕಿ ಆ ಗಯಿ'(Ashiqui aa gayi) ಎಂಬ ಹಾಡಿನ ಮ್ಯೂಸಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಪ್ರಭಾಸ್ ಪೂಜಾ ಅವರೊಂದಿಗಿನ ಸಂಬಂಧದ ಚಂದದ ಕಥೆ ಹೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಾನು ಪ್ರೀತಿಗಾಗಿ ಸಾಯುವವನಲ್ಲ, ನಾನು ಫ್ಲರ್ಟ್(Flirt) ಮಾಡಲು ಬಯಸುತ್ತೇನೆ ಎಂಬ ಡೈಲಾಗ್(Dailough) ಕೂಡ ಇದೆ. ಈ ಸಾಂಗ್ ಪ್ರೇಮಿಗಳ Anthem ಆಗುವುದರಲ್ಲಿ ಅನುಮಾನ ಇಲ್ಲ. ಟೀಸರ್(Teaser)ನಿಂದಲೇ ಸಖತ್ ಸೌಂಡ್ ಮಾಡಿದ್ದ ರಾಧೆ ಶ್ಯಾಮ್ ಜೋಡಿ, ಈಗ ಸಾಂಗ್ ಮೂಲಕ ಎಲ್ಲರ ಮನಗೆಲ್ಲುತ್ತಿದೆ.
ಪ್ರಭಾಸ್- ಪೂಜಾ ಹೆಗ್ಡೆ ಕೆಮಿಸ್ಟ್ರಿ ಸೂಪರ್!
ಯಾರ ಜೊತೆ ಪ್ರಭಾಸ್ ನಟಿಸಿದರು ಅದು ಸೂಪರ್ ಡೂಪರ್ ಹಿಟ್. ಇದೇ ಮೊದಲ ಬಾರಿಗೆ ಪ್ರಭಾಸ್ ಪೂಜಾ-ಹೆಗ್ಡೆ ಅವರೊಂದಿಗೆ ನಟಿಸಿದ್ದಾರೆ. ಇಬ್ಬರೂ ಒಳ್ಳೆಯ ಎತ್ತರ ಇರುವ ಕಾರಣ ಇಬ್ಬರ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿದೆ. ಇಬ್ಬರೂ ಹಾಡಿನಲ್ಲಿ ಮುದ್ದಾಗಿ ಕಾಣುತ್ತಾರೆ. ಈ ಹಾಡಿನಲ್ಲಿರುವ ಲೊಕೇಷನ್ ಹಾಗೂ ಕಾಸ್ಟೂಮ್ ಕೂಡ ಹೈಲೆಟ್ಸ್. ಕ್ಯಾಮರಾ ವರ್ಕ್ ಕೂಡ ಅದ್ಭುತವಾಗಿ ಮಾಡಲಾಗಿದೆ.
1970ರ ಯೂರೋಪ್ ಹಿನ್ನಲೆಯ ಕಥೆ ರಾಧೆ ಶ್ಯಾಮ್
ಬೈಕಿನಲ್ಲಿ ಸುಂದರವಾದ ಯುರೋಪಿಯನ್ ರಸ್ತೆಗಳ ಮೂಲಕ ಪ್ರಯಾಣಿಸುವಾಗ ಕಪಲ್ ಮಧ್ಯೆ ಶುರುವಾಗುವ ಪ್ರಣಯವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಆಶಿಕಿ ಆ ಗಯಿ ಹಾಡಿನ ಸಂಯೋಜನೆಯ ಜೊತೆಗೆ, ಮಿಥೂನ್ ಹಾಡಿನ ಸಾಹಿತ್ಯವನ್ನೂ ಬರೆದಿದ್ದಾರೆ. . ರಾಧೆ ಶ್ಯಾಮ್ ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವು 1970 ರ ಯುರೋಪ್ ಹಿನ್ನಲೆಯಲ್ಲಿದೆ ಎಂದು ಹೇಳಲಾಗುತ್ತದೆ, ಪ್ರಭಾಸ್ ವಿಕ್ರಮಾದಿತ್ಯ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇದನ್ನು ಓದಿ: ಇನ್ಮುಂದೆ `ತಲ’ ಅಜಿತ್ ಅಂತ ಕರೆಯುವಂತಿಲ್ಲ.. ಅಜಿತ್ ಕುಮಾರ್ ಎಂದರೆ ಸಾಕಂತೆ!
ಮುಂದಿನ ಸಂಕ್ರಾಂತಿಗೆ ಸಿನಿಮಾ ರಿಲೀಸ್!
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೊತೆಗೆ, ಚಿತ್ರದಲ್ಲಿ ಸಚಿನ್ ಖೇಡೇಕರ್, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರಳಿ ಶರ್ಮಾ, ಕುನಾಲ್ ರಾಯ್ ಕಪೂರ್, ರಿದ್ಧಿ ಕುಮಾರ್, ಸಾಶಾ ಚೆಟ್ರಿ ಮತ್ತು ಸತ್ಯನ್ ಕೂಡ ನಟಿಸಿದ್ದಾರೆ. ರಾಧೆ ಶ್ಯಾಮ್ ಜನವರಿ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ SS ರಾಜಮೌಳಿಯ RRR ಮತ್ತು ಪವನ್ ಕಲ್ಯಾಣ್ ಅವರ ಭೀಮ್ಲಾ ನಾಯಕ್ ಡೇಟ್ ಜೊತೆ ಕ್ಲಾಶ್ ಆಗಲಿದೆ.
ಇದನ್ನು ಓದಿ: ‘ಪುಷ್ಪ’ದಲ್ಲಿನ ಸಮಂತಾ ಲುಕ್ಗೆ ಅಭಿಮಾನಿಗಳು ಫಿದಾ!
ಜನವರಿ 14ರಂದು ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. ಇದೀಗ ಚಿತ್ರತಂಡ ಬಿಡುಗಡೆ ಮಾಡಿರುವ ರೊಮ್ಯಾಂಟಿಕ್ ಸಾಂಗ್ ಮೂಲಕ ಈ ಜೋಡಿಯ ಕೆಮೆಸ್ಟ್ರಿ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಅಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ