Radhe Shyam Review: ಆಕಳಿಕೆ ಹುಟ್ಟಿಸುವ ರಾಧೆ ಶ್ಯಾಮ್, ಬಹುನಿರೀಕ್ಷಿತ ಸಿನಿಮಾ ಎಡವಿದ್ದೆಲ್ಲಿ?

ರಾಧೆ ಶ್ಯಾಮ್ ಸಿನಿಮಾ ಅದ್ಭುತ ದೃಶ್ಯಗಳಿಂದ ಕೂಡಿದೆ ಎಂಬ ಮಾತ್ರಕ್ಕೆ ಬಹುಶ: ನೀವು ಇದೊಂದು ಅದ್ಭುತ ಸಿನಿಮಾ ಎಂದು ಆಲೋಚಿಸಿದರೆ ಮೂರ್ಖರಾಗುವುದು ಖಂಡಿತ. ಏಕೆಂದರೆ ಇದು ಅದ್ಭುತ ಸಿನಿಮಾವಲ್ಲ ಆಕಳಿಕೆ ಬರಿಸುವ ಸಿನಿಮಾ.

ರಾಧೆ ಶ್ಯಾಮ್

ರಾಧೆ ಶ್ಯಾಮ್

  • Share this:
ಡಾರ್ಲಿಂಗ್ ಪ್ರಭಾಸ್ (Prabhas) ಮತ್ತು ಪೂಜಾ ಹೆಗಡೆ (Pooja Hegde) ಅಭಿನಯಿಸಿರುವ ’ರಾಧೆ ಶ್ಯಾಮ್’ (Radhe Shyam) ಒಂದು ರೊಮ್ಯಾಂಟಿಕ್ ಸಿನಿಮಾ. ಈ ಸಿನಿಮಾದ ಮೊದಲ ದೃಶ್ಯದಲ್ಲಿ ಇಂದಿರಾ ಗಾಂಧಿ ಅವರನ್ನು ಆಧರಿಸಿದ ಪಾತ್ರವೊಂದು ಹಸ್ತ ಮುದ್ರಿಕಾ ತಜ್ಞ ವಿಕ್ರಮಾದಿತ್ಯ (ಪ್ರಭಾಸ್)ಗೆ ಹಸ್ತವನ್ನು ತೋರಿಸುವುದು ಮತ್ತು ಆಕೆ ಮುಂದಿನ ದಿನಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಿದ್ದಾರೆ ಎಂದು ಆತ ಭವಿಷ್ಯ ನುಡಿಯುವುದನ್ನು ಕಾಣಬಹುದು. ಗಾಯಕ ಜಾನ್ ಲೆನೆನ್ , ಹಸ್ತ ಮುದ್ರಿಕಾ ತಜ್ಞ ವಿಕ್ರಮಾದಿತ್ಯನ ಆಟೋಗ್ರಾಫ್ ಅನ್ನು ಪಡೆಯುವ ದೃಶ್ಯವು ಕೂಡ ಚಿತ್ರದಲ್ಲಿದೆ. ಸಿನಿಮಾದಲ್ಲಿ ಇಂತಹ ದೃಶ್ಯಗಳೆಲ್ಲಾ ಇದೆ ಎಂದ ಮಾತ್ರಕ್ಕೆ ಬಹುಶ: ನೀವು ಇದೊಂದು ಅದ್ಭುತ ಸಿನಿಮಾ (Movie) ಎಂದು ಆಲೋಚಿಸಿದರೆ, ಮೂರ್ಖರಾಗುವುದು ಖಂಡಿತಾ. ಏಕೆಂದರೆ ಇದು ಅದ್ಭುತ ಸಿನಿಮಾವಲ್ಲ, ಆಕಳಿಕೆ ಬರಿಸುವ ಸಿನಿಮಾ. ಪ್ರಭಾಸ್ ಅಭಿನಯ, ಭವ್ಯತೆ ಮತ್ತು ಕೆಲವೊಂದು ಅದ್ಭುತ ದೃಶ್ಯಗಳು ಇಲ್ಲದೇ ಹೋಗಿದ್ದಲ್ಲಿ, ಇದೊಂದು ದೊಡ್ಡ ಬಜೆಟ್‍ನ ಅತ್ಯಂತ ಸಾಧಾರಣ ಮಟ್ಟದ ಚಿತ್ರ ಎನಿಸಿಕೊಳ್ಳುತ್ತಿತ್ತು.

ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಮತ್ತು ನಿರ್ಮಾಪಕರು, ಟ್ರೈಲರ್‌ಗಳಲ್ಲಿ ಇದೊಂದು ಒಂದಿಷ್ಟು ಟ್ರ್ಯಾಜಿಡಿ ಹೊಂದಿರುವ ರೋಮ್ಯಾಂಟಿಕ್ –ಕಾಮಿಡಿ ಸಿನಿಮಾ ಎಂಬಂತೆ ತೋರಿಸಿದ್ದರು. ಆದರೆ ಟ್ರೈಲರ್ ಹುಟ್ಟಿಸಿದ್ದ ದೊಡ್ಡ ಮಟ್ಟದ ನಿರೀಕ್ಷೆಗಳೆಲ್ಲವೂ ಸುಳ್ಳೆಂದು ಚಿತ್ರ ಆರಂಭವಾದ 15 ನಿಮಿಷದಲ್ಲಿ ತಿಳಿಯುತ್ತದೆ.

1976ರ ಕಾಲಘಟ್ಟದ ಸಿನಿಮಾ:

1976ರ ಕಾಲಘಟ್ಟದಲ್ಲಿ ನಡೆಯುವ ಕಥಾ ಹಂದರವುಳ್ಳ ಸಿನಿಮಾವಿದು. ನಾಯಕ ಹಸ್ತಮುದ್ರಿಕಾ ತಜ್ಞ ವಿಕ್ರಮಾದಿತ್ಯ , ಜ್ಯೋತಿಷ್ಯವು ಶೇಕಡಾ 100 ರಷ್ಟು ಸರಿಯಾಗಿರುವ ವಿಜ್ಞಾನವಾಗಿದೆ ಎಂದು ನಂಬುವ ವ್ಯಕ್ತಿ. ಇನ್ನೊಂದೆಡೆ ಅವನ ಗುರು ಪರಮಹಂಸ ( ಸತ್ಯರಾಜ್ ) ಜ್ಯೋತಿಷ್ಯದಲ್ಲಿ ಶೇಕಡಾ 100 ರಷ್ಟು ಅಲ್ಲ, 99 ರಷ್ಟು ಮಾತ್ರ ಊಹೆ ಮಾಡಬಹುದು ಎಂದು ನಂಬುವವರು. ಉಳಿದ ಶೇಕಡಾ 1 ರಷ್ಟನ್ನು ಜನರೇ ಬರೆಯುತ್ತಾರೆ ಮತ್ತು ಇತಿಹಾಸವನ್ನು ಸೃಷ್ಟಿಸುತ್ತಾರೆ ಎಂಬುವುದು ಪರಮಹಂಸ ನಂಬಿರುವ ಸಿದ್ಧಾಂತವಾಗಿರುತ್ತದೆ. ವಿಕ್ರಮಾದಿತ್ಯನ ನಂಬಿಕೆ ಅದಕ್ಕಿಂತ ಭಿನ್ನವಾಗಿರುತ್ತದೆ.

ಇದನ್ನೂ ಓದಿ: Radhe Shyam: ಪ್ರಭಾಸ್ ಚಿತ್ರದಲ್ಲಿ ಶಿವರಾಜ್ ಕುಮಾರ್! ಥ್ಯಾಂಕ್ಯೂ ಎಂದ ಬಾಹುಬಲಿ

ಪ್ರೇಮಿಗಳ ಪಯಣದ ಸುತ್ತ ನಡೆಯುವ ಕಥೆ:

ವಿಕ್ರಮಾದಿತ್ಯ ಪ್ರೀತಿಯ ರೇಖೆಯನ್ನು ಹೊಂದಿರುವುದಿಲ್ಲ ಮತ್ತು ಆತನಿಗೆ ಸಂಬಂಧಗಳಲ್ಲಿ ನಂಬಿಕೆ ಇರುವುದಿಲ್ಲ. ಆತ ಕೇವಲ ಫ್ಲರ್ಟೇಶನ್‍ಶಿಪ್ ಅನ್ನು ನಂಬುವವನು. ಆದರೆ ಅವನು ಪ್ರೇರಣಾ ( ಪೂಜಾ ಹೆಗ್ಡೆ) ಭೇಟಿಯಾದ ತಕ್ಷಣವೇ ಅವಳನ್ನು ಇಷ್ಟ ಪಡಲು ಆರಂಭಿಸುತ್ತಾನೆ. ರೋಮ್‍ನ ಜನರಲ್ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿರುವ ಆಕೆ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುತ್ತಾಳೆ. ವಿಕ್ರಮಾದಿತ್ಯ ಆಕೆಯ ಕೈಯನ್ನು ನೋಡಿ 100 ವರ್ಷ ಬದುಕುತ್ತಾಳೆ ಎಂದು ಭವಿಷ್ಯ ನುಡಿಯುತ್ತಾನೆ. ಆದರೆ ಆತ ಆಕೆಯನ್ನು ತೊರೆದು, ದೂರ ಹೋಗಲು ನಿರ್ಧರಿಸುತ್ತಾನೆ. ಉಳಿದ ಕಥೆ ಈ ಪ್ರೇಮಿಗಳ ಪಯಣ ಮತ್ತು ಹಣೆಬರಹ ಹಾಗೂ ಕರ್ಮ, ಅದರಲ್ಲಿ ಯಾವ ರೀತಿಯ ಪಾತ್ರ ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ.

ಬೇಡದ ದೃಶ್ಯಗಳೇ ಹೆಚ್ಚು:

ಈ ಸಿನಿಮಾದಲ್ಲಿ ಎರಡು ಪ್ರಮುಖ ಅಂಶಗಳ ಕೊರತೆ ಇದೆ. ಮೊದಲನೆಯದ್ದು ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಡುವೆ ಯಾವುದೇ ಕೆಮಿಸ್ಟ್ರಿ ಕಾಣ ಸಿಗುವುದಿಲ್ಲ. ಅವರು ಪ್ರೇಮದಲ್ಲಿ ಬೀಳುವ ದೃಶ್ಯಗಳ ನಡುವೆ, ಕೆಲವು ಹಾಸ್ಯ ದೃಶ್ಯಗಳನ್ನು ತೂರಿಸಬೇಕೆಂಬ ಕಾರಣಕ್ಕೆ ಚಿತ್ರದಲ್ಲಿ ತೋರಿಸಲಾಗಿದೆ. ಆದರೆ ಹಾಸ್ಯ ದೃಶ್ಯಗಳು ಯಾವುದೇ ರೀತಿಯಲ್ಲೂ ನಗು ತರಿಸಲು ಯೋಗ್ಯವಾಗಿಲ್ಲ. ಹಾಗೂ, ಪ್ರೇಮ ಕಥೆಯು ಅಷ್ಟೊಂದು ಹೃದಯಸ್ಪರ್ಶಿ ಅನಿಸುವುದಿಲ್ಲ. ಚಿತ್ರದಲ್ಲಿ ಅರ್ಥಹೀನ ದೃಶ್ಯಗಳು ಮತ್ತು ಪಾತ್ರಗಳು ಸಾಕಷ್ಟಿವೆ.

ಇದನ್ನೂ ಓದಿ: Prabhas: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ಪ್ರಭಾಸ್​ ಸಿನಿಮಾ​.. ಮೆಟಾವರ್ಸ್​ನಲ್ಲಿ ರಾಧೆ-ಶ್ಯಾಮ್​ ಟ್ರೈಲರ್​ ಲಾಂಚ್​!

ಸಿನಿಮಾದ ಫ್ಲಸ್ ಪಾಯಿಂಟ್:

ಆದರೂ ಸಿನಿಮಾದಲ್ಲಿ ಕೆಲವೇ ಕೆಲವು ಸಕಾರಾತ್ಮಕ ಅಂಶಗಳು ಕೂಡ ಇವೆ. ಉದಾಹರಣೆಗೆ, ಇದನ್ನು ಯುರೋಪಿನ ಕೆಲವು ಅದ್ಭುತ ಸ್ಥಳಗಳಲ್ಲಿ ಸುಂದರವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಚಿತ್ರೀಕರಿಸಲಾಗಿದೆ. ಹಡಗಿನಲ್ಲಿ ಕಂಡು ಬರುವ ಕ್ಲೈಮ್ಯಾಕ್ಸ್ ದೃಶ್ಯ ಅದ್ಭುತವಾಗಿ ಮೂಡಿ ಬಂದಿದ್ದು, ಅದರ ಶ್ರೇಯಸ್ಸು ಚಿತ್ರದ ವಿಎಫ್‍ಎಕ್ಸ್ ತಂಡಕ್ಕೆ ಸಲ್ಲಬೇಕು. ಆದರೆ ಈ ಸಕರಾತ್ಮಕ ಅಂಶಗಳು ಕೂಡ ಸಿನಿಮಾ ಮುಳುಗುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಬಹುಶ: ನಿರ್ದೇಶಕರು ಸಿನಿಮಾ ಮಾಡುವ ಮುನ್ನ ಹಸ್ತ ಮುದ್ರಿಕಾ ತಜ್ಞರಿಗೆ ತಮ್ಮ ಕೈಯನ್ನು ತೋರಿಸಿದ್ದರೆ, ಅವರು ಈ ಆಕಳಿಕೆ ಹುಟ್ಟಿಸುವ ಸಿನಿಮಾಗೆ 300 ಕೋಟಿ ರೂ. ಹೂಡಿಕೆ ಮಾಡದಂತೆ ನಿರ್ಮಾಪಕರಿಗೆ ಸಲಹೆ ನೀಡುತ್ತಿದ್ದರು ಎನಿಸುತ್ತದೆ.
Published by:shrikrishna bhat
First published: