Radhe Shyam: ಇಷ್ಟ್​ ಬೇಗ ಒಟಿಟಿಗೆ ಬಂದ ಪ್ರಭಾಸ್ ಸಿನಿಮಾ! ರಾಧೆ ಶ್ಯಾಮ್​ ಸ್ಟ್ರೀಮಿಂಗ್​ ಯಾವಾಗ? ಎಲ್ಲಿ? ಇಲ್ಲಿದೆ ಡೀಟೆಲ್ಸ್​​

‘ಬಾಹುಬಲಿ’ (Bahubhali) ಸಿನಿಮಾದ ನಂತರ ನಟ ಪ್ರಭಾಸ್ ಅವರ ಜನಪ್ರಿಯತೆ ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿದೆ. ಅವರ ಸಿನಿಮಾಗಳು ಕೂಡ ಆ ರೇಂಜ್‌ನಲ್ಲೇ ಸಿದ್ಧವಾಗಬೇಕಿದೆ. ಹಿಂದಿನ ‘ಸಾಹೋ’ (Sahoo)ಬಿಗ್ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾವೇ ಆಗಿತ್ತು.

ರಾಧೆ-ಶ್ಯಾಮ್​ ಪೋಸ್ಟರ್​

ರಾಧೆ-ಶ್ಯಾಮ್​ ಪೋಸ್ಟರ್​

  • Share this:
ಪ್ರಭಾಸ್ ​(Prabhas) ಈಗ ನ್ಯಾಷನಲ್​ ಸ್ಟಾರ್ (National Star)​.. ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಪ್ರತಿಯೊಂದು ಸಿನಿಮಾಗೆ ಕಾಯುತ್ತಿರುತ್ತಾರೆ. ಹೀಗೆ ಮಾರ್ಚ್ 11ರಂದು ಇಡೀ ವಿಶ್ವದಾದ್ಯಂತ ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ (Pooja Hegde) ನಟನೆಯ ರಾಧೆ -ಶ್ಯಾಮ್ ​(Radhe Shyam) ಸಿನಿಮಾ ರಿಲೀಸ್ ಆಗಿತ್ತು. ಆದರೆ, ಸಿನಿಮಾ ಹೇಳಿಕೊಳ್ಳುವಷ್ಟು ಹೆಸರು ಮಾಡಲಿಲ್ಲ. ರಾಧೆ-ಶ್ಯಾಮ್​ ಸಿನಿಮಾ ಮಕಾಡೆ ಮಲಗಿಗೊಂಡಿತ್ತು. ‘ಬಾಹುಬಲಿ’ (Bahubhali) ಸಿನಿಮಾದ ನಂತರ ನಟ ಪ್ರಭಾಸ್ ಅವರ ಜನಪ್ರಿಯತೆ ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿದೆ. ಅವರ ಸಿನಿಮಾಗಳು ಕೂಡ ಆ ರೇಂಜ್‌ನಲ್ಲೇ ಸಿದ್ಧವಾಗಬೇಕಿದೆ. ಹಿಂದಿನ ‘ಸಾಹೋ’ (Sahoo) ಬಿಗ್ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾವೇ ಆಗಿತ್ತು. ಆದರೆ, ‘ಸಾಹೋ’ ಅಷ್ಟೇನೂ ಮೋಡಿ ಮಾಡಿರಲಿಲ್ಲ. ಮಾರ್ಚ್ 11ರಂದು ರಾಧೆ ಶ್ಯಾಮ್​ ಸಿನಿಮಾ ಕೂಡ ತೆರೆಗೆ ಬಂದಿತ್ತು. ಇದು ರಾಧ ಕೃಷ್ಣ ಕುಮಾರ್ ನಿರ್ದೇಶನದ ಸಿನಿಮಾ. ‘ರಾಧೆ ಶ್ಯಾಮ್‌’ನಿಂದ ಪ್ರಭಾಸ್‌ಗೆ ಬ್ರೇಕ್​ ಸಿಗುತ್ತೆ ಅಂದುಕೊಂಡಿದ್ದವರಿಗೆ ಶಾಕ್​ ಎದುರಾಗಿತ್ತು.

100 ಕೋಟಿಗೂ ಹೆಚ್ಚು ಲಾಸ್​ ಮಾಡಿದ ರಾಧೆ ಶ್ಯಾಮ್​!

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ ಚಿತ್ರವು ತನ್ನ ಆರಂಭಿಕ ದಿನದಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಗಳಿಕೆ ಮಾಡಿದೆ ಎಂದು ಹೇಳಲಾಗಿತ್ತು. ನಂತರದ ದಿನಗಳಲ್ಲಿ ಈ ಸಿನಿಮಾ 100 ಕೋಟಿಗೂ ಅಧಿಕ ಲಾಸ್ ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಮತ್ತು ನಿರ್ಮಾಪಕರು, ಟ್ರೈಲರ್‌ಗಳಲ್ಲಿ ಇದೊಂದು ಒಂದಿಷ್ಟು ಟ್ರ್ಯಾಜಿಡಿ ಹೊಂದಿರುವ ರೋಮ್ಯಾಂಟಿಕ್ –ಕಾಮಿಡಿ ಸಿನಿಮಾ ಎಂಬಂತೆ ತೋರಿಸಿದ್ದರು. ಆದರೆ ಟ್ರೈಲರ್ ಹುಟ್ಟಿಸಿದ್ದ ದೊಡ್ಡ ಮಟ್ಟದ ನಿರೀಕ್ಷೆಗಳೆಲ್ಲವೂ ಸುಳ್ಳೆಂದು ಚಿತ್ರ ಆರಂಭವಾದ 15 ನಿಮಿಷದಲ್ಲಿ ತಿಳಿದಿತ್ತು.

ಏಪ್ರಿಲ್​ 1ಕ್ಕೆ ಅಮೆಜಾನ್​ ಪ್ರೈಮ್​​ನಲ್ಲಿ ರಾಧೆ-ಶ್ಯಾಮ್​!

ಚಿತ್ರಮಂದಿರಗಳಲ್ಲಿ ಫ್ಲಾಪ್​ ಎನಿಸಿಕೊಂಡಿದ್ದ ರಾಧೆ ಶ್ಯಾಮ್​ ಸಿನಿಮಾ ಏಪ್ರಿಲ್​ 1ರಂದು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಲಿದೆ. 1976ರ ಕಾಲಘಟ್ಟದಲ್ಲಿ ನಡೆಯುವ ಕಥಾ ಹಂದರವುಳ್ಳ ಸಿನಿಮಾವಿದು. ನಾಯಕ ಹಸ್ತಮುದ್ರಿಕಾ ತಜ್ಞ ವಿಕ್ರಮಾದಿತ್ಯ , ಜ್ಯೋತಿಷ್ಯವು ಶೇಕಡಾ 100 ರಷ್ಟು ಸರಿಯಾಗಿರುವ ವಿಜ್ಞಾನವಾಗಿದೆ ಎಂದು ನಂಬುವ ವ್ಯಕ್ತಿ. ಇನ್ನೊಂದೆಡೆ ಅವನ ಗುರು ಪರಮಹಂಸ ( ಸತ್ಯರಾಜ್ ) ಜ್ಯೋತಿಷ್ಯದಲ್ಲಿ ಶೇಕಡಾ 100 ರಷ್ಟು ಅಲ್ಲ, 99 ರಷ್ಟು ಮಾತ್ರ ಊಹೆ ಮಾಡಬಹುದು ಎಂದು ನಂಬುವವರು. ಈ ರೀತಿಯ ಡಿಫ್ರೆಂಟ್​ ಕಥೆ ಹೊಂದಿರುವ ರಾಧೆ-ಶ್ಯಾಮ್​ ಮಕಾಡೆ ಮಲಗಿಗೊಂಡಿತ್ತು.

ಇದನ್ನೂ ಓದಿ: `ರಣ ಬೇಟೆಗಾರ’ನ ರೌದ್ರಾವತಾರ.. ಕೆಜಿಎಫ್​ 2 ಟ್ರೈಲರ್​ ರಿಲೀಸ್​, ರಾಕಿ ಭಾಯ್​ ಅಬ್ಬರಕ್ಕೆ ಯೂಟ್ಯೂಬ್​ ಕ್ರ್ಯಾಶ್​!

300 ಕೋಟಿ ಬಜೆಟ್​​ನ ಸಿನಿಮಾ ರಾಧೆ ಶ್ಯಾಮ್!


ಸಿನಿಮಾದಲ್ಲಿ ಕೆಲವೇ ಕೆಲವು ಸಕಾರಾತ್ಮಕ ಅಂಶಗಳು ಕೂಡ ಇವೆ. ಉದಾಹರಣೆಗೆ, ಇದನ್ನು ಯುರೋಪಿನ ಕೆಲವು ಅದ್ಭುತ ಸ್ಥಳಗಳಲ್ಲಿ ಸುಂದರವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಚಿತ್ರೀಕರಿಸಲಾಗಿದೆ. ಹಡಗಿನಲ್ಲಿ ಕಂಡು ಬರುವ ಕ್ಲೈಮ್ಯಾಕ್ಸ್ ದೃಶ್ಯ ಅದ್ಭುತವಾಗಿ ಮೂಡಿ ಬಂದಿದ್ದು, ಅದರ ಶ್ರೇಯಸ್ಸು ಚಿತ್ರದ ವಿಎಫ್‍ಎಕ್ಸ್ ತಂಡಕ್ಕೆ ಸಲ್ಲಬೇಕು. ಆದರೆ ಈ ಸಕರಾತ್ಮಕ ಅಂಶಗಳು ಕೂಡ ಸಿನಿಮಾ ಮುಳುಗುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಬಹುಶ: ನಿರ್ದೇಶಕರು ಸಿನಿಮಾ ಮಾಡುವ ಮುನ್ನ ಹಸ್ತ ಮುದ್ರಿಕಾ ತಜ್ಞರಿಗೆ ತಮ್ಮ ಕೈಯನ್ನು ತೋರಿಸಿದ್ದರೆ, ಅವರು ಈ ಆಕಳಿಕೆ ಹುಟ್ಟಿಸುವ ಸಿನಿಮಾಗೆ 300 ಕೋಟಿ ರೂ. ಹೂಡಿಕೆ ಮಾಡದಂತೆ ನಿರ್ಮಾಪಕರಿಗೆ ಸಲಹೆ ನೀಡುತ್ತಿದ್ದರು ಎನಿಸುತ್ತದೆ.

ಇದನ್ನೂ ಓದಿ: 8 ಪ್ಯಾಕ್ಸ್​ನಲ್ಲಿ ಪೋಸ್​ ಕೊಟ್ಟ ಶಾರುಖ್​ ಖಾನ್​! ಈ ವಯಸ್ಸಲ್ಲೂ ಬಾದ್​ಶಾ ಸಖತ್​ ಫಿಟ್​

ಪ್ರಭಾಸ್​ರ ಅಪ್ಪಟ ಅಭಿಮಾನಿ ರವಿ ತೇಜ ಸೂಸೈಡ್​

ಕರ್ನೂಲಿನ ತಿಲಕ್‌ ನಗರ ನಿವಾಸಿಯಾಗಿದ್ದ 24 ವರ್ಷ ವಯಸ್ಸಿನ ರವಿ ತೇಜ, ಪ್ರಭಾಸ್‌ರ ಅಪ್ಪಟ ಅಭಿಮಾನಿ. ‘ರಾಧೆ-ಶ್ಯಾಮ್ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ.  ಅವರ ಫ್ರೆಂಡ್ಸ್​ ಹಾಗೂ ಕೆಲ ಕುಟುಂಬಸ್ಥರು ಕೂಡ ಈ ಸಿನಿಮಾ ಚೆನ್ನಾಗಿಲ್ಲ ಎಂದು ಮಾತನಾಡಿದ್ದನ್ನು ಈತ ಕೇಳಿಸಿಕೊಂಡಿದ್ದಾನೆ. ಸಿನಿಮಾ ಚೆನ್ನಾಗಿಲ್ಲದೇ ಇರುವುದು ರವಿ ತೇಜ ಅನ್ನು ಖಿನ್ನತೆಗೆ ಗುರಿ ಮಾಡಿತ್ತು. ಹೀಗಾಗಿ ತನ್ನ ಮನೆಯಲ್ಲಿಯೇ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

Published by:Vasudeva M
First published: