ಅರಣ್ಯ ದತ್ತು ಪಡೆದ ಅಮರೇಂದ್ರ ಬಾಹುಬಲಿ!

ಹೈದರಾಬಾದ್ ಸಮೀಪದ ಕಾಜಿಪಲ್ಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಪ್ರಭಾಸ್ ದತ್ತು ಪಡೆದಿದ್ದಾರೆ. ಬರೋಬ್ಬರಿ 1650 ಎಕರೆ ವಿಸ್ತೀರ್ಣವಿರುವ ಈ ರಿಸರ್ವ್ ಫಾರೆಸ್ಟ್​​ ಅನ್ನು ದತ್ತು ಪಡೆದಿರುವ ಬಾಹುಬಲಿ ಅದನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಿದ್ದಾರೆ. ಬಾಲ್ಯದಿಂದಲೂ ಪರಿಸರಪ್ರೇಮಿಯಾದ ಪ್ರಭಾಸ್, ತಮ್ಮ ಕಾಳಜಿಯನ್ನು ಈ ರೀತಿ ತೋರಿದ್ದಾರೆ.

 ಪ್ರಭಾಸ್

ಪ್ರಭಾಸ್

  • Share this:
ಟಾಲಿವುಡ್​ನ ಡಾರ್ಲಿಂಗ್, ನ್ಯಾಷನಲ್ ಸ್ಟಾರ್ ಬಾಹುಬಲಿ ಪ್ರಭಾಸ್ ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲ ಹಲವು ಸಮಾಜಮುಖಿ ಕೆಲಸಗಳಿಂದಲೂ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಯಂಗ್ ರೆಬೆಲ್ ಸ್ಟಾರ್ ತಮ್ಮ ಜಿಮ್ ಕೋಚ್​​ಗೆ ಇತ್ತೀಚೆಗಷ್ಟೇ ದುಬಾರಿ ಐಶಾರಾಮಿ ಕಾರು ಉಡುಗೊರೆಯಾಗಿ ನೀಡಿದ್ದರು. ಅದರ ಬೆನ್ನಲ್ಲೇ ಇದೀಗ ಇಡೀ ಕಾಡನ್ನೇ ದತ್ತು ತೆಗೆದುಕೊಂಡಿದ್ದಾರೆ ಅಮರೇಂದ್ರ ಬಾಹುಬಲಿ.

ಹೌದು, ಹೈದರಾಬಾದ್ ಸಮೀಪದ ಕಾಜಿಪಲ್ಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಪ್ರಭಾಸ್ ದತ್ತು ಪಡೆದಿದ್ದಾರೆ. ಬರೋಬ್ಬರಿ 1650 ಎಕರೆ ವಿಸ್ತೀರ್ಣವಿರುವ ಈ ರಿಸರ್ವ್ ಫಾರೆಸ್ಟ್​​ ಅನ್ನು ದತ್ತು ಪಡೆದಿರುವ ಬಾಹುಬಲಿ ಅದನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಿದ್ದಾರೆ. ಬಾಲ್ಯದಿಂದಲೂ ಪರಿಸರಪ್ರೇಮಿಯಾದ ಪ್ರಭಾಸ್, ತಮ್ಮ ಕಾಳಜಿಯನ್ನು ಈ ರೀತಿ ತೋರಿದ್ದಾರೆ.

ಹೈದರಾಬಾದ್​ಗೆ ಹೊಂದಿಕೊಂಡಂತಿರುವ ಈ ಅರಣ್ಯ ಪ್ರದೇಶದಲ್ಲಿ ಹೆಚ್ಚೆಚ್ಚು ಥರಹೇವಾರಿ ಸಸಿಗಳನ್ನು ನೆಟ್ಟು, ಅಲ್ಲಲ್ಲಿ ಕೊಳಗಳನ್ನು ನಿರ್ಮಿಸಿ, ವನ್ಯಪ್ರಾಣಿಗಳು ಸರಾಗವಾಗಿ ಓಡಾಡುವಂತೆ ವ್ಯವಸ್ಥೆ ಕಲ್ಪಿಸುವ ಐಡಿಯಾವನ್ನು ಹಾಕಿಕೊಂಡಿದ್ದಾರೆ ಪ್ರಭಾಸ್. ಆ ಮೂಲಕ ಹೈದರಾಬಾದ್​​​ಗೆ ಹೊಂದಿಕೊಂಡಂತಿರುವ ಈ ಅರಣ್ಯದಿಂದ ನಗರದ ಪರಿಸರವೂ ಉತ್ತಮವಾಗಲಿದೆ ಎಂಬ ನಂಬಿಕೆ ಅವರದು.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಭಾಸ್ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಜೋಗಿನಪಲ್ಲಿ, ತೆಲಂಗಾಣ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಗ್ರೀನ್ ಇಂಡಿಯಾ ಚಾಲೆಂಜ್ ಎಂಬ ಹ್ಯಾಷ್​​​ಟ್ಯಾಗ್ ಮೂಲಕ ಜನರಿಗೂ ಸಸಿ ನೆಡುವ, ಹಸಿರು ಸಂರಕ್ಷಿಸುವ ಸವಾಲು ಹಾಕಿದ್ದಾರೆ ಯಂಗ್ ರೆಬೆಲ್ ಸ್ಟಾರ್.ಹಾಗಂತ ಪ್ರಭಾಸ್ ಸಹಾಯಹಸ್ತ ಚಾಚಿರುವುದು ಇದೇ ಮೊದಲೇನಲ್ಲ. ಕೆಲ ತಿಂಗಳ ಹಿಂದಷ್ಟೇ ಕೊರೋನಾ ಸಮಯದಲ್ಲೂ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಪ್ರಭಾಸ್ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಪ್ರಧಾನಮಂತ್ರಿ ನ್ಯಾಷನಲ್ ರಿಲೀಫ್ ಫಂಡ್​​ಗೆ 3 ಕೋಟಿ ರೂಪಾಯಿ ಹಾಗೂ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯ ಸರ್ಕಾರಗಳಿಗೆ ತಲಾ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ಪ್ರಭಾಸ್ ನಟಿಸಿರುವ ‘ರಾಧೇ ಶ್ಯಾಮ್’ ಲಾಕ್​ಡೌನ್​  ಮುಗಿದ ಕೆಲ ದಿನಗಳಲ್ಲೇ ತೆರೆಗೆ ಬರಲಿದೆ. ಆ ಬಳಿಕ ಅವರ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್ ಸೆಟ್ಟೇರಲಿದೆ.
Published by:Harshith AS
First published: