Radhe: ನನ್ನನ್ನು ತಡೆಯುವ ಬದಲು ಒಳ್ಳೆಯ ಸಿನಿಮಾ ಮಾಡಿ ಎಂದು ಸಲ್ಮಾನ್​ಗೆ ಬುದ್ಧಿ ಹೇಳಿದ ಕಮಾಲ್ ಆರ್​ ಖಾನ್​

Salman Khan: ಯಾವ ನಟ ಹಾಗೂ ನಿರ್ಮಾಪಕರು ಸಿನಿಮಾ ವಿಮರ್ಶೆ ಮಾಡಬೇಡಿ ಎಂದು ಹೇಳುತ್ತಾರೋ ಅವರ ಸಿನಿಮಾಗಳ ರಿವ್ಯೂ ಮಾಡುವುದಿಲ್ಲ. ಇನ್ನು ಮುಂದೆ ಸಲ್ಮಾನ್​ ಖಾನ್​ ಅವರ ಚಿತ್ರಗಳ ವಿಮರ್ಶೆ ಮಾಡುವುದಿಲ್ಲ ಎಂದಿದ್ದಾರೆ ಕೆಆರ್​ಕೆ.

ಸಲ್ಮಾನ್​ ಖಾನ್​ ಹಾಗೂ ಕಮಾಲ್​ ಆರ್​ ಖಾನ್​

ಸಲ್ಮಾನ್​ ಖಾನ್​ ಹಾಗೂ ಕಮಾಲ್​ ಆರ್​ ಖಾನ್​

  • Share this:
ಕಮಾಲ್​ ಆರ್​ ಖಾನ್​ ಬಹಳ ಹಿಂದಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್​ ಖಾನ್ ಅವರ ನಡೆ ಹಾಗೂ ಸಿನಿಮಾಗಳ ಬಗ್ಗೆ ವಿಡಿಯೋ ಮಾಡಿ ಹರಿ ಬಿಡುತ್ತಿರುತ್ತಾರೆ. ಈಗಲೂ ಸಹ ಇತ್ತೀಚೆಗಷ್ಟೆ ಒಟಿಟಿ ಮೂಲಕ ರಿಲೀಸ್ ಆಗಿರುವ ರಾಧೆ ಸಿನಿಮಾ ಕುರಿತಾಗಿಯೂ ಕಮಾಲ್​ ಆರ್​ ಖಾನ್​ (ಕೆಆರ್​ಕೆ) ಒಂದು ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ. ಆ ವಿಡಿಯೋದಲ್ಲಿ ಕಮಾಲ್​ ಖಾನ್​ ಅವರು ರಾಧೆ ಸಿನಿಮಾ ನೋಡಲು ಯೋಗ್ಯವಾದ ಚಿತ್ರವಲ್ಲ ಎಂದೆಲ್ಲ ಹೇಳಿದ್ದಾರೆ. ಈ ವಿಡಿಯೋದಲ್ಲಿ ರಾಧೆ ಸಿನಿಮಾದ ವಿಮರ್ಶೆ ಮಾಡಿರುವ ಕಮಾಲ್​ ಖಾನ್​ ವಿರುದ್ಧ ಸಲ್ಮಾನ್​ ಖಾನ್​ ಈಗ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕಮಾಲ್​ ಆರ್​ ಖಾನ್​ ಅವರು ರಾಧೆ ಚಿತ್ರದ ಕುರಿತಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಲ್ಮಾನ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್​ಕೆಗೆ  ಸಲ್ಲು ಪರ ವಕೀಲರು ಈಗಾಗಲೇ ನೋಟಿಸ್ ಸಹ ಕಳುಹಿಸಿದ್ದಾರಂತೆ.

ಸಲ್ಮಾನ್​ ಖಾನ್​ ಅವರ ವಕೀಲರು ನೋಟಿಸ್​ ಕಳುಹಿಸುತ್ತಿದ್ದಂತೆಯೇ ಕಮಾಲ್​ ಆರ್​ ಖಾನ್​ ಅವರು ಒಂದು ಟ್ವೀಟ್​ ಮಾಡಿದ್ದು, ಅದೂ ಈಗ ವೈರಲ್​ ಆಗಿದೆ. ಸಲ್ಮಾನ್​ ಖಾನ್​ ಕಳುಹಿಸಿರುವ ನೋಟಿಸ್​ನ ಪ್ರತಿಯನ್ನೂ ಟ್ವೀಟ್​ನಲ್ಲಿ ಹಂಚಿಕೊಂಡಿದ್ದಾರೆ ಕೆಆರ್​ಕೆ.

ಕಮಾಲ್​ ಖಾನ್​ ಮಾಡಿರುವ ಲೆಟೆಸ್ಟ್​ ಟ್ವೀಟ್​ ಇಲ್ಲಿದೆ...

Dear #Salmankhan Ye defamation case Aapki Hataasha Aur Niraasha Ka Saboot Hai. I am giving review for my followers and doing my job. You should make better films instead of stopping me from reviewing your films. Main Sacchi Ke Liye Ladta Rahunga! Thank you for the case. 🙏🌹 pic.twitter.com/iwYis64rLdಸಲ್ಮಾನ್​ ಖಾನ್​ ಈ ನೋಟಿಸ್ ನಿಮಗಾಗಿರುವ ಹತಾಶೆ ಹಾಗೂ ನಿರಾಶೆಗೆ ಸಾಕ್ಷಿಯಾಗಿದೆ. ನಾನು ನನ್ನ ಹಿಂಬಾಲಕರಿಗಾಗಿ ಸಿನಿಮಾ ವಿಮರ್ಶೆ ಮಾಡುತ್ತೇನೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಸಿನಿಮಾ ವಿಮರ್ಶೆ ಮಾಡುವುದರಿಂದ ತಡೆಯುವ ಬದಲು ಒಳ್ಳೆಯ ಸಿನಿಮಾಗಳನ್ನು ಮಾಡಿ ಎಂದು ಸಲ್ಮಾನ್​ ಖಾನ್​ಗೆ ಸಲಹೆ ನೀಡಿದ್ದಾರೆ ಕಮಾಲ್​ ಖಾನ್​.

ರಾಧೆ ಸಿನಿಮಾದ ವಿಮರ್ಶೆ ಮಾಡಿರುವ ಕೆಆರ್​ಕೆ ಅವರ ಯೂಟ್ಯೂಬ್​ ವಿಡಿಯೋಇನ್ನು ಮತ್ತೊಂದು ಟ್ವೀಟ್​ ಮಾಡಿರುವ ಕೆಆರ್​ಕೆ, ಯಾವ ನಟ ಹಾಗೂ ನಿರ್ಮಾಪಕರು ಸಿನಿಮಾ ವಿಮರ್ಶೆ ಮಾಡಬೇಡಿ ಎಂದು ಹೇಳುತ್ತಾರೋ ಅವರ ಸಿನಿಮಾಗಳ ರಿವ್ಯೂ ಮಾಡುವುದಿಲ್ಲ. ಇನ್ನು ಮುಂದೆ ಸಲ್ಮಾನ್​ ಖಾನ್​ ಅವರ ಚಿತ್ರಗಳ ವಿಮರ್ಶೆ ಮಾಡುವುದಿಲ್ಲ ಎಂದಿದ್ದಾರೆ.

ಕಮಾಲ್​ ಖಾನ್​ ಅವರ ಟ್ವೀಟ್​ ಲಿಂಕ್​ ಇಲ್ಲಿದೆಆಲಿಯಾ ಭಟ್​ ಅಭಿನಯದ ಸಡಕ್ 2.... ಅಕ್ಷಯ್​ ಕುಮಾರ್ ನಟನೆಯ ಲಕ್ಷ್ಮೀ.... ಸಿನಿಮಾಗಳ ನಂತರ ಹಾಗೂ ಈಗ ಸಲ್ಮಾನ್‌ ಖಾನ್‌ ಅವರ ರಾಧೆ: ಯುವರ್ ಮೋಸ್ಟ್‌ ವಾಂಟೆಡ್‌ ಭಾಯ್ ಚಿತ್ರದ ವಿರುದ್ಧ ಸಿನಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಐಎಂಡಿಬಿಯಲ್ಲಿ 1-ಸ್ಟಾರ್ ರೇಟಿಂಗ್ ಸಿಕ್ಕಿದೆ.

ಇದನ್ನೂ ಓದಿ: ತೋಟದಲ್ಲಿ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿರುವ ಮದಗಜ ನಟಿ ಆಶಿಕಾ ರಂಗನಾಥ್​

IMDb ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳ ರೇಟಿಂಗ್‌ಗಳನ್ನು ಸಂಯೋಜಿಸುವ ವೆಬ್‌ಸೈಟ್. ಸಲ್ಮಾನ್‌ ಖಾನ್‌ ಅವರ ಬಹು ನಿರೀಕ್ಷಿತ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರಕ್ಕೆ ಬಾಲಿವುಡ್‌ ಚಿತ್ರಗಳ ಪ್ರೀತಿಯ 77 ಸಾವಿರಕ್ಕೂ ಅಧಿಕ ಜನತೆ 1-ಸ್ಟಾರ್ ರೇಟಿಂಗ್ ನೀಡಿದ್ದಾರೆ. 10 ಪೈಕಿ ಸರಾಸರಿ ರೇಟಿಂಗ್ 1.7 ಅನ್ನು ಪಡೆದುಕೊಂಡಿದೆ ಸಲ್ಮಾನ್‌ ಖಾನ್‌ರ ಈ ಚಿತ್ರ. ಈ ಹಿನ್ನೆಲೆ ರಾಧೆ ಈಗ ಸಲ್ಮಾನ್‌ ಖಾನ್‌ನ ಕೆಟ್ಟ-ಶ್ರೇಯಾಂಕಿತ ಐಎಂ‌ಡಿಬಿ ಫ್ಲಿಕ್ ಆಗಿ ಮಾರ್ಪಟ್ಟಿದೆ. ಸಾವನ್‌... ದಿ ಲವ್ ಸೀಸನ್ (2006) ಮತ್ತು ರೇಸ್ 3 (2019) ಕ್ರಮವಾಗಿ 2.2 ಮತ್ತು 1.9 ಐಎಂಡಿಬಿ ರೇಟಿಂಗ್‌ಗಳನ್ನು ಪಡೆದುಕೊಂಡಿತ್ತು. ಈ ಎರಡು ಚಿತ್ರಗಳಿಗಿಂತ ಅತಿ ಕಡಿಮೆ ರೇಟಿಂಗ್‌ ಅನ್ನು ರಾಧೆ ಗಳಿಸಿದೆ.

ರಾಧೆ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಅದರ ಪೈರಸಿ ಲಿಂಕ್​ ಹೊರ ಬಿದ್ದಿತ್ತು. ಈ ಪೈರೆಸಿಯಲ್ಲಿ ತೊಡಗಿರುವ ನೆಟ್ಟಿಗರಿಗೆ ಸಲ್ಮಾನ್‌ ಖಾನ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಈ ಬಗ್ಗೆ ಸೈಬರ್ ಸೆಲ್ ತನಿಖೆ ನಡೆಸುತ್ತಿದ್ದು, ಅಪರಾಧ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಲ್ಮಾನ್‌ ಖಾನ್‌ ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ: Aishwarya Rai Bachchan: ಅಮ್ಮನ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ನಟಿ ಐಶ್ವರ್ಯಾ

ನಿನ್ನೆಯಷ್ಟೆ ದೆಹಲಿ ಹೈಕೋರ್ಟ್​ ಸಹ ಪೈರಸಿ ಪ್ರಕರಣದಲ್ಲಿ ಆದೇಶ ನೀಡಿದ್ದು, ವಾಟ್ಸ್​ ಆ್ಯಪ್​​ನಲ್ಲಿ ಯಾರೆಲ್ಲ ಪೈರಸಿ ಲಿಂಕ್​ ಅನ್ನು ಶೇರ್​ ಮಾಡುತ್ತಾರೋ ಅವರ ಖಾತೆಯನ್ನು ಸಸ್ಪೆಂಡ್​ ಮಾಡಿ. ಈ ತಪ್ಪನ್ನು ಮರುಕಳಿಸಿದರೆ ಅವರ ಖಾತೆಯನ್ನು ಶಾಸ್ವತವಾಗಿ ಡಿಲೀಸ್​ ಮಾಡಲು ನ್ಯಾಯಾಲಯ ಸೂಚಿಸಿದೆ.
Published by:Anitha E
First published: