Kannada New Serial: ಮತ್ತೆ ಒಂದಾದ ರಾಧಾ-ರಮಣ ಜೋಡಿ: ಯಾವ ಸೀರಿಯಲ್​ ಗೊತ್ತಾ? ಇಲ್ಲಿ ನೋಡಿ..

Radha-Ramana: ಇಬ್ಬರೂ ಒಟ್ಟಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆ ಶ್ಯಾಮದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ಇದೇ ಮೊದಲ ಬಾರಿ ಶ್ವೇತಾ ಆನ್‌ಸ್ಕ್ರೀನ್‌ನಲ್ಲಿ ತುಂಬಾನೇ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು. ಸ್ಕಂದ ಹಾಗೆಯೇ ತಮ್ಮ ಒರಿಜಿನಲ್ ಚಾರ್ಮ್ ಉಳಿಸಿಕೊಂಡಿದ್ದಾರೆ.

ಸ್ಕಂದ- ಶ್ವೇತಾ ಪ್ರಸಾದ್​

ಸ್ಕಂದ- ಶ್ವೇತಾ ಪ್ರಸಾದ್​

  • Share this:
ಕನ್ನಡ ಕಿರುತೆರೆ ಜನಪ್ರಿಯ ಜೋಡಿಯಾಗಿ ಗುರುತಿಸಿಕೊಂಡಿರುವ ಸ್ಕಂದ ಅಶೋಕ್ (Skanda Ashok) ಮತ್ತು ಶ್ವೇತಾ ಪ್ರಸಾದ್ (Shwetha Prasad) ಮತ್ತೆ ಜೋಡಿಯಾಗಿ ಮತ್ತೊಂದು ಕನ್ನಡ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಷ್ಟು ದಿನ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ (Social media) ಹೊಸ ಪ್ರಾಜೆಕ್ಟ್‌ ಬಗ್ಗೆ ಅಪ್ಡೇಟ್ ನೀಡುತ್ತಿದ್ದರು. ಆದರೆ ಯಾವುದು, ಏನು ಎಂಬುದಾಗಿ ರಿವೀಲ್ ಮಾಡಿರಲಿಲ್ಲ. ಈಗ ಅವರಿಬ್ಬರೇ  ಅನೌನ್ಸ್ (Announce) ಮಾಡಿದ್ದಾರೆ. ಅಲ್ಲದೇ ಈ ಧಾರಾವಾಹಿ ಪ್ರೋಮೋ ಸಹ ಪ್ರಸಾರವಾಗುತ್ತಿದ್ದು, ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಇದರ ಪ್ರೋಮೋ(Promo) ವಿಡಿಯೋವನ್ನು ಶ್ವೇತಾ ಪ್ರಸಾದ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಈ ಪ್ರೋಮೋ ಸಾಮಾಜಿಕ ಜಾಲತಾಣದಲ್ಲೂ ಸಖತ್​ ವೈರಲ್​ ಆಗುತ್ತಿದೆ. ಮತ್ತೆ ತಮ್ಮ ನೆಚ್ಚಿನ ಜೋಡಿಯನ್ನು ತೆರೆ ಮೇಲೆ ನೋಡಲು ಕಾತುರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. 

ಕೇವಲ 6 ಎಪಿಸೋಡ್​ನಲ್ಲಿ ಮಾತ್ರ ರಾಧ-ರಮಣ !

'ಜನರು ಅವರಿಬ್ಬರನ್ನು ತುಂಬಾನೇ ಇಷ್ಟ ಪಟ್ಟಿರುವ ಕಾರಣ ನಾನು ಮತ್ತೆ ಶ್ವೇತಾ ಮತ್ತು ಸ್ಕಂದ ಅವರನ್ನು ಆಯ್ಕೆ ಮಾಡಿಕೊಂಡಿರುವುದು. ರಾಧ ರಮಣ ಧಾರಾವಹಿಯಲ್ಲಿ ಅವರಿಬ್ಬರಿಗೆ ಡೈರೆಕ್ಷನ್ ಮಾಡಿದ್ದೆ, ಅವರ ಜೋಡಿ ದೊಡ್ಡ ಪಾಪ್ಯುಲಾರಿಟಿ ಪಡೆದಿತ್ತು. ಹೊಸ ಧಾರಾವಾಹಿ ರಾಧೆ ಶ್ಯಾಮ ಪ್ಲ್ಯಾನ್ ಶುರು ಮಾಡಿದಾಗ ಅವರಿಬ್ಬರಿನ್ನೂ ಮತ್ತೆ ಒಂದಾಗಿ ತರಬೇಕು ಅನಿಸಿತ್ತು. ಇವರು ಒಟ್ಟಿಗೆ 6 ಎಪಿಸೋಡ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದು. ಆದರೆ ಮತ್ತೆ ದೊಡ್ಡ ಇಂಪ್ಯಾಕ್ಟ್‌ ಮಾಡಲಿದ್ದಾರೆ,' ಎಂದು ನಿರ್ದೇಶಕರಾದ ಶಿವ ಪೂಜೇನ ಅಗ್ರಹಾರ ಮಾತನಾಡಿದ್ದಾರೆ.

ರಾಧೆ-ಶ್ಯಾಮ್​ ಸೀರಿಯಲ್​​​​ನಲ್ಲಿ ಸ್ಕಂದ-ಶ್ವೇತಾ ನಟನೆ!

ಸ್ಕಂದ ಜೊತೆ ಚಿತ್ರೀಕರಣ ಮಾಡುತ್ತಿರುವ ಫೋಟೋ ಹಂಚಿಕೊಂಡು 'ಏನಾಗುತ್ತಿದೆ ಎಂದು ಹೇಳಿ. ನಾನು ಮತ್ತು ರಮಣ. ಸ್ಕಂದ ಕನ್ನಡದ ಕಂದಾ,' ಎಂದು ಶ್ವೇತಾ ಬರೆದುಕೊಂಡಿದ್ದರು. ಅಭಿಮಾನಿಗಳು ಕಂಡು ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದರು. ಕೆಲವು ದಿನಗಳ ನಂತರ ಇಬ್ಬರೂ ಒಟ್ಟಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆ ಶ್ಯಾಮದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ಇದೇ ಮೊದಲ ಬಾರಿ ಶ್ವೇತಾ ಆನ್‌ಸ್ಕ್ರೀನ್‌ನಲ್ಲಿ ತುಂಬಾನೇ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು. ಸ್ಕಂದ ಹಾಗೆಯೇ ತಮ್ಮ ಒರಿಜಿನಲ್ ಚಾರ್ಮ್ ಉಳಿಸಿಕೊಂಡಿದ್ದಾರೆ.

ಇದನ್ನು ಓದಿ : ಈ 6 ಟಾಪ್​ ತಮಿಳು ನಟರ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್​ ಆಗ್ತೀರಾ..!

ರಾಧಾ-ರಮಣ ಸೀರಿಯಲ್ ಸಖತ್​ ಹಿಟ್​!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿ ಮುಕ್ತಾಯವಾಗಿ ಹಲವು ತಿಂಗಳುಗಳು ಕಳೆದಿವಿ, ಆದರೂ  ಈ ಧಾರಾವಾಹಿಯನ್ನಾಗಲೀ, ಇದರ ಕಲಾವಿದರನ್ನಾಗಲೀ ಜನರು ಮರೆತಿಲ್ಲ. ಈ ಸೀರಿಯಲ್‌ ಅಂತ್ಯದಲ್ಲಿ ಪ್ರೇಕ್ಷಕರ ಮನದಲ್ಲಿ ಪ್ರಶ್ನೆಯನ್ನಿಟ್ಟು ಮುಗಿಸಲಾಗಿತ್ತು. ಇದೀಗ ಮತ್ತೆ ರಾಧಾ-ರಮಣ ಖ್ಯಾತಿಯ ಶ್ವೇತಾ ಪ್ರಸಾದ್​​ ಹಾಗೂ ಸ್ಕಂದ ಜೊತೆಯಾಗುತ್ತಿದ್ದಾರೆ. ಮತ್ತೆ ರಾಧಾ-ರಮಣ 2 ಸೀರಿಯಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.  ಈ ಧಾರಾವಾಹಿಯನ್ನಾಗಲೀ, ಇದರ ಕಲಾವಿದರನ್ನಾಗಲೀ ಜನರು ಮರೆತಿಲ್ಲ. ಈ ಸೀರಿಯಲ್‌ ಅಂತ್ಯದಲ್ಲಿ ಪ್ರೇಕ್ಷಕರ ಮನದಲ್ಲಿ ಪ್ರಶ್ನೆಯನ್ನಿಟ್ಟು ಮುಗಿಸಲಾಗಿತ್ತು.
ಇದನ್ನು ಓದಿ : ವಿಜಯ್​ ಸೂರ್ಯ - ವೈಷ್ಣವಿ ಹಿಟ್​ ಜೋಡಿಯಾಗಿದ್ದು ಹೇಗೆ? ಇಲ್ಲಿದೆ ನೋಡಿ ಸೀಕ್ರೆಟ್​!

ರಾಧಾ ಮಿಸ್​ ಪಾತ್ರದಲ್ಲಿ ಶ್ವೇತ ಪ್ರಸಾದ್​ ಎಲ್ಲರ ಮನ ಗೆದ್ದಿದ್ದರು. ಗಂಡನಿದ್ದರೆ ಸ್ಕಂದನಂತೆ ಇರಬೇಕು ಎಂದು ಸೀರಿಯಲ್​ ನೋಡಿದ ಮಹಿಳೆಯರು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಈ ಜೋಡಿ ತುಂಬ ಸಮಯದ ಬಳಿಕ ಕಿರುತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.
Published by:Vasudeva M
First published: