ಕೃತಿಕಾ (Kruttika Ravindra) ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. `ಮನೆಮಗಳು' ಧಾರಾವಾಹಿ ಮೂಲಕ ಮನೆಮಾತಾಗಿರುವ ಇವರು ಮಲೆನಾಡಿನವರು. 2011ರ ಸಮಯದಲ್ಲಿ ಜೀ ಕನ್ನಡ (Zee Kannada) ವಾಹಿನಿಯಲ್ಲಿ 'ರಾಧಾ ಕಲ್ಯಾಣ' (Radha Kalyana) ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿನ ರಾಧಿಕಾ, ವಿಶು ಪಾತ್ರಗಳು ಸಾಕಷ್ಟು ಪ್ರಖ್ಯಾತಿ ಪಡೆದಿದ್ದರು. ರಾಧಿಕಾ ಪಾತ್ರದಲ್ಲಿ ನಟಿ ಕೃತಿಕಾ ರವೀಂದ್ರ, ವಿಶು ಪಾತ್ರದಲ್ಲಿ ನಟ ಚಂದನ್ ಕುಮಾರ್ ಅಭಿನಯಿಸಿದ್ದರು. ಬಾಲನಟಿಯಾಗಿ `ಜಿಂಬಾ' ಧಾರಾವಾಹಿಯಲ್ಲಿ ನಟಿಸಿದ್ದ ಇವರು ಮುಂದೆ `ಮನೆ ಮಗಳು' (Mane Magalu) ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡರು. ನಂತರ `ರಾಧಾ ಕಲ್ಯಾಣ'ದ ರಾಧಿಕಾ (Radhika) ಪಾತ್ರ ಇವರಿಗೆ ಇನ್ನಷ್ಟು ಹೆಸರು ತಂದು ಕೊಟ್ಟಿತು.
'ಬಿಗ್ ಬಾಸ್ 5' ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು
ಇವರು "ರಾಧಾ ಕಲ್ಯಾಣ" ಎಂಬ ಧಾರವಾಹಿಯ ಮೂಲಕ ಜನಪ್ರಿಯರಾದವರು. 2015ರಲ್ಲಿ ನಡೆದ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್ 5' ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣಗಳು ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಕಾಲದಲ್ಲಿಯೇ ಧಾರಾವಾಹಿಗೆ ಅಭಿಮಾನಿ ಗ್ರೂಪ್ ಗಳು ಸಹ ಹುಟ್ಟಿಕೊಂಡಿದ್ದವು. 'ರಾಧಾ ಕಲ್ಯಾಣ' ಧಾರಾವಾಹಿ ಮುಗಿದ ಬಳಿಕ ಕೃತಿಕಾ ಬಿಗ್ ಬಾಸ್ ಸೀಸನ್ 5 ರಲ್ಲಿ ಪಾಲ್ಗೊಂಡು ಬಹಳಷ್ಟು ವಾರಗಳು ಉಳಿದು ಬಿಗ್ ಬಾಸ್ ಕೃತಿಕಾ ಎಂದು ಫೇಮಸ್ ಆದರು.
14ನೇ ವಯಸ್ಸಿನಲ್ಲಿ 'ಪಟ್ರೆ ಲವ್ಸ್ ಪದ್ಮ' ಚಿತ್ರದ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭ
ಕೃತಿಕಾ 2008ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ 'ಪಟ್ರೆ ಲವ್ಸ್ ಪದ್ಮ', ಎಂಬ ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಬಳಿಕ 'ಮನೆ ಮಗಳು' ಎಂಬ ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶಿಸಿದರು. ಇವರು ನಟಿಸಿದ 'ರಾಧಾ ಕಲ್ಯಾಣ' ರಾಧಿಕಾ ಪಾತ್ರ ಪ್ರಸಿದ್ದಿ ಪಡೆಯಿತು. ಈ ಧಾರಾವಾಹಿಯು ಸುಮಾರು ಮೂರುವರೆ ವರ್ಷಗಳ ಕಾಲ ಪ್ರಸಾರವಾಯಿತು.
ಆನಂದಪುರದಲ್ಲಿ ಅಮ್ಮನ ಮುದ್ದಿನ ಮಗಳಾಗಿ ಆನಂದದಿಂದ ಆಡಿ ಬೆಳೆದ ಹುಡುಗಿ ಕಿರುತೆರೆಯಲ್ಲಿ ರಾಧಿಕಾ ಆಗಿ ಮನೆ ಮಗಳು ಎನಿಸಿಕೊಳ್ಳುತ್ತಾ ಬಿಗ್ ಬಾಸ್ನಿಂದ ಕೃತಿಕಾ ಆಗಿ ಪರಿಚಯವಾಗುತ್ತಾ ಹಿರಿತೆರೆಯಲ್ಲೂ ಮುದ್ದು ಕೆಂಗುಲಾಬಿಯಾಗಿ ಮಿಂಚಿದ್ದಾರೆ. ಸ್ಯಾಂಡಲ್ವುಡ್ಗೂ ಸಹ ಪಾದಾರ್ಪಣೆ ಮಾಡಿದ ನಟಿ 'ಕೆಂಗುಲಾಬಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಸದ್ಯ 'ರಾಜ ನಿವಾಸ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ನಡುವೆ ಒಲವೇ ಎಂಬ ಆಲ್ಬಂ ಸಾಂಗ್ನಲ್ಲಿಯೂ ಅಭಿನಯಿಸಿದ್ದು, ಕಿರುತೆರೆಗೆ ಮರಳುವ ಬಗ್ಗೆ ಮಾತನಾಡಿದ್ದರು.
'ರಾಧಾ ಕಲ್ಯಾಣ' ಧಾರಾವಾಹಿಯ ರಾಧಿಕಾ ಪಾತ್ರ. ಈ ಧಾರಾವಾಹಿಯ ಯಶಸ್ಸು ಯಾವ ಮಟ್ಟದಲ್ಲಿತ್ತು ಎಂದರೆ ಕೃತಿಕಾರನ್ನು ರಾಧಿಕಾ ಎಂದೇ ಗುರುತಿಸುವ ಮಟ್ಟಕ್ಕೆ ಮನೆಮಾತಾದರು. ಈ ಧಾರಾವಾಹಿಯಲ್ಲಿನ ರಾಧಿಕಾ, ವಿಶು ಪಾತ್ರಗಳು ಸಾಕಷ್ಟು ಪ್ರಖ್ಯಾತಿ ಪಡೆದಿದ್ದರು. ಮೂರು ವರ್ಷಗಳಲ್ಲಿ 1,000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಸಾಗರ ತಾಲೂಕಿನ ಆನಂದಪುರದ ಕೃತಿಕಾ
ಕೃತಿಕಾ ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಆನಂದಪುರದ ರವೀಂದ್ರ ಹಾಗೂ ಮೀನಾರವರ ಪುತ್ರಿ. ಇವರು ಬಾಲ್ಯದಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು. ತಾಯಿ ಮೀನಾರವರು ವೃತ್ತಿಯಲ್ಲಿ ಶಿಕ್ಷಕಿ. ಕೃತಿಕಾ ತಮ್ಮ ಶಿಕ್ಷಣವನ್ನು ಆನಂದಪುರದ ಸಾಧನಾ ವಿದ್ಯಾ ಕೇಂದ್ರದಲ್ಲಿ ಪಡೆದಿದ್ದಾರೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ