'ಅಯೋಗ್ಯ'ನ ಜತೆಯಾದರೂ ಕಮಾಲ್​ ಮಾಡಿದ ಗುಳಿ ಕೆನ್ನೆ ಹುಡುಗಿ ರಚಿತಾ ರಾಮ್​..!

news18
Updated:August 23, 2018, 6:30 PM IST
'ಅಯೋಗ್ಯ'ನ ಜತೆಯಾದರೂ ಕಮಾಲ್​ ಮಾಡಿದ ಗುಳಿ ಕೆನ್ನೆ ಹುಡುಗಿ ರಚಿತಾ ರಾಮ್​..!
news18
Updated: August 23, 2018, 6:30 PM IST
ನ್ಯೂಸ್​ 18 ಕನ್ನಡ

ರಚಿತಾ ರಾಮ್, ನಿಜಕ್ಕೂ ಲಕ್ಕಿ ತಾರೆಯೇ ಸರಿ. ಬೆಳ್ಳಿತೆರೆಗೆ ಎಂಟ್ರಿಕೊಡುತ್ತಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಡ್ಯುಯೇಟ್ ಹಾಡಿದ ಇವರ ಮೊದಲ ನೋಟದಲ್ಲೇ ಗೆಲುವಿನ ಸಿಹಿ ಸವಿಯೋ ಭಾಗ್ಯವತಿಯಾದರು.

'ಬುಲ್ ಬುಲ್' ನಂತರ ರಚಿತಾ ಹಿಂದಿರುಗೇ ನೋಡಲೇ ಇಲ್ಲ. ಒಂದರ ಹಿಂದೆ ಒಂದರಂತೆ  ಸಿನಿಮಾಗಳು ಅವರ ಕೈ ಸೇರಿದವು. ಅದು ಕೂಡ ಸಿಕ್ಕಿದ್ದೆಲ್ಲ ಸ್ಟಾರ್ ನಟರ ಚಿತ್ರಗಳೇ ಅನ್ನೋದು ರಚಿತಾ ಅವರ ಸಿನಿ ಜರ್ನಿಯ ವಿಶೇಷತೆ. ಸುದೀಪ್, ಪುನೀತ್, ಗಣಿ, ಶ್ರೀ ಮುರಳಿ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿ, ಲಕ್ಕಿ ತಾರೆ ಎಂದೇ ಕರೆಸಿಕೊಂಡಿರೋ ರಚಿತಾ ಸದ್ಯ ಮಂಡ್ಯ ಹುಡುಗಿಯಾಗಿ `ಅಯೋಗ್ಯ'ನಿಗೆ ಜೊತೆಯಾಗಿದ್ದಾರೆ..

'ಅಯೋಗ್ಯ' ಚಿತ್ರದಲ್ಲಿ ರಚಿತಾ ನಂದಿನಿ ಎಂಬ ಪಾತ್ರ ಮಾಡಿದ್ದು, ಮಂಡ್ಯ ಮಣ್ಣಿನ ಹುಡುಗಿಯಾಗಿ ಕಮಾಲ್ ಮಾಡುತ್ತಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರ ನೋಡಿದೋರು ಏನಮ್ಮಿ ಏನಮ್ಮಿ ಅಂತ ಹಗಲಲ್ಲೂ ಕನವರಿಸುತ್ತಿದ್ದಾರೆ.

ರಚಿತಾ ಯಾರ ಜೊತೆಗೆ ನಟಿಸಲಿ, ಆ ಚಿತ್ರ ರಿಲೀಸ್ ಆದಮೇಲೆ ಅದು ಹಿಟ್ ಪೇರ್ ಅಂತ ಕರೆಸಿಕೊಳ್ಳುತ್ತೆ. ಅದೇ ರೀತಿ ಇದೇ ಮೊದಲ ಬಾರಿಗೆ ಸತೀಸ್ ನೀನಾಸಂಗೆ ಜೊತೆಯಾಗಿರುವ ರಚಿತಾ ಈ ಬಾರಿ ಸಹ ಗೆಲುವಿನ ನಗೆ ಬೀರಿದ್ದಾರೆ. ತನ್ಮೂಲಕ ತಾವು ಮತ್ತೊಮ್ಮೆ ಲಕ್ಕಿಸ್ಟಾರ್ ಅನ್ನೋದನ್ನ ಸಾಬೀತು ಮಾಡಿದ್ದಾರೆ.

ಪಕ್ಕಾ ಹಳ್ಳಿ ಸೊಗಡಿನ `ಅಯೋಗ್ಯ' ಚಿತ್ರ ಬಾಕ್ಸಾಫಿಸ್‍ನಲ್ಲಿ ಬೊಂಬಾಟ್ ಪ್ರದರ್ಶನ ಕಾಣುತ್ತಿದ್ದು, ಮೊದಲ 5 ದಿನಗಳಲ್ಲೇ 5 ಕೋಟಿಯನ್ನ ಗಳಿಸಿದೆಯಂತೆ. 'ಅಯೋಗ್ಯ' ಈ ವರ್ಷದ ಮತ್ತೊಂದು ಬಿಗ್ ಹಿಟ್ ಚಿತ್ರದ ಸಾಲಿಗೆ ಸೇರುವ ಹಾದಿಯಲ್ಲಿದ್ದು, ರಚಿತಾ ರಾಮ್ ಅವರನ್ನ ಹೊಸ ಪದ್ಮಾವತಿ ಅನ್ನೋ ಮಾತಿಗೆ ಇನ್ನಷ್ಟು ಪುಷ್ಠಿ ನೀಡಿದೆ.

 
Loading...

 
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ