ಅಯೋಗ್ಯನ ಸಹವಾಸದಿಂದ ಫುಲ್​ ಕನ್ನಡತಿಯಾದ ರಚಿತಾ ರಾಮ್​!

news18
Updated:July 26, 2018, 4:31 PM IST
ಅಯೋಗ್ಯನ ಸಹವಾಸದಿಂದ ಫುಲ್​ ಕನ್ನಡತಿಯಾದ ರಚಿತಾ ರಾಮ್​!
news18
Updated: July 26, 2018, 4:31 PM IST
ಆನಂದ್ ಸಾಲುಂಡಿ, ರಕ್ಷಾ ಜಾಸ್ಮೀನ್, ನ್ಯೂಸ್ 18 ಕನ್ನಡ

'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಲ್ಲಿ ಅಲ್ಟ್ರಾ ಮಾರ್ಡನ್​ ಹುಡುಗಿಯಾಗಿ ಕಂಗ್ಲಿಷ್ ಮಾತಾಡಿದ್ದ ಡಿಂಪಲ್ ಕ್ವೀನ್ ರಚಿತಾ 'ಅಯೋಗ್ಯ'ನ ಸಹವಾಸ ಮಾಡಿದ ಮೇಲೆ ಪಕ್ಕಾ ಕನ್ನಡತಿಯಾಗಿದ್ದಾರೆ. ಮಂಡ್ಯ ಶೈಲಿಯಲ್ಲಿ ಹೋಗ್ಲಾ ಬಾರ್ಲಾ ಅಂತ ಡೈಲಾಗ್ ಹೊಡೆದಿದ್ದಾರೆ.

ರಚಿತಾ ರಾಮ್ ನೋಡಲಷ್ಟೇ ಮುದ್ದು ಮುದ್ದಲ್ಲ. ಅವರ ಮಾತು ಕೂಡ ಅಷ್ಟೇ ಕ್ಯೂಟು-ಸ್ವೀಟು. ಹೀಗಾಗಿ ಅವರ ಪಾತ್ರಕ್ಕೆ ಅವರೇ ಡಬ್ ಮಾಡೋದು 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಿಂದ ಶುರುವಾಯಿತು. `ಅಯೋಗ್ಯ' ಸಿನಿಮಾದಿಂದ ಅದು ಮುಂದುವರಿಯುತ್ತಿದೆ.

`ಅಯೋಗ್ಯ' ಚಿತ್ರದಲ್ಲಿ ಪಕ್ಕಾ ಮಂಡ್ಯಾ ಮಣ್ಣಿನ ಹುಡುಗಿಯಾಗಿ ಈ ಡಿಂಪಲ್ ಕ್ವೀನ್ ಕಾಣಿಸಿಕೊಂಡಿದ್ದಾರೆ. ಇಲ್ಲಿ ರಚಿತಾ ಮಾತಲ್ಲಿ ಝೀರೋ ಪರ್ಸೆಂಟ್ ಇಂಗ್ಲಿಷು, 100% ಪರ್ಸೆಂಟ್ ಕನ್ನಡ ಕೇಳಬಹುದು. ಅದು ಕೂಡ ಮಂಡ್ಯದ ಶೈಲಿಯ ಭಾಷೆಯಲ್ಲಿ ಕೇಳುವ ಅವಕಾಶ ಸಿನಿರಸಿಕದ್ದು ಅನ್ನೋದು ಇದರ ವಿಶೇಷತೆ.

ಮಂಡ್ಯ ಹುಡುಗಿ ಅಂದ ಮೇಲೆ ಹೇಳಲೇಬೇಕಿಲ್ಲ. ರೆಬೆಲ್‍ಸ್ಟಾರ್ ಅಂಬಿ ಊರಿನವರು ಅಂದರೆ? ಹುಡುಗರಷ್ಟೇ ಅಲ್ಲ, ಹುಡುಗಿಯರು ಕೂಡ ರೆಬೆಲ್ಲೇ. ರಚಿತಾ ಕೂಡ ಅಂತಹದ್ದೇ ಪಾತ್ರದಲ್ಲಿ 'ಅಯೋಗ್ಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅದು ಡಬ್ಬಿಂಗ್ ಸಮಯದ ಕೆಲವು ಡೈಲಾಗ್‍ಗಳಲ್ಲೇ ಕಾಣಿಸ್ತಿತ್ತು.

ನೀನಾಸಂ ಸತೀಶ್​ ನಾಯಕನಾಗಿ ನಟಿಸಿರೋ `ಅಯೋಗ್ಯ' ಚಿತ್ರದಲ್ಲಿ ರಚಿತಾ ಪಾತ್ರಕ್ಕೂ ನಾಯಕನ ಪಾತ್ರದಷ್ಟೇ ಮಹತ್ವವಿದೆ. ಅವರಿಗೆ ಎಂದೇ ಕೆಲವು ಪಂಚಿಂಗ್ ಡೈಲಾಗ್ ಇರಲಿದೆಯಂತೆ.

ಒಟ್ಟಾರೆ ಈಗಾಗಲೇ ಬೇರೆ ಬೇರೆ ಪಾತ್ರಗಳ ಮೂಲಕ ತನ್ನದೇ ಆದ ಅಭಿಮಾನಿ ವರ್ಗವನ್ನ ಸೃಷ್ಟಿಸಿಕೊಂಡಿರೋ ರಚಿತಾ ಮಂಡ್ಯ ಮಣ್ಣಿನ ಹುಡುಗಿಯಾಗಿ ತೆರೆಮೇಲೆ ಬರೋಕೆ ಸಜ್ಜಾಗುತ್ತಿದ್ದು, ಯಾವ ರೀತಿ ಕಮಾಲ್ ಮಾಡುತ್ತಾರೆ ಕಾದು ನೋಡಬೇಕು.
Loading...

 
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...