• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಹೊಸ ಅವತಾರದಲ್ಲಿ ಡಿಂಪಲ್​ ಕ್ವೀನ್​ ರಚ್ಚು: 'ಲಕ ಲಕ ಲ್ಯಾಂಬೋರ್ಗಿನಿ’ಯಲ್ಲಿ ಮಸ್ತ್​ ಡ್ಯಾನ್ಸ್​​!

ಹೊಸ ಅವತಾರದಲ್ಲಿ ಡಿಂಪಲ್​ ಕ್ವೀನ್​ ರಚ್ಚು: 'ಲಕ ಲಕ ಲ್ಯಾಂಬೋರ್ಗಿನಿ’ಯಲ್ಲಿ ಮಸ್ತ್​ ಡ್ಯಾನ್ಸ್​​!

ನಟಿ ರಚಿತಾ ರಾಮ್​

ನಟಿ ರಚಿತಾ ರಾಮ್​

Rachitha Ram: ಹೊಸ ಪಾರ್ಟಿ ಸಾಂಗ್​ನಲ್ಲಿ ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವೀನ್​ ರಚಿತಾ ರಾಮ್​(Dimple Queen Rachitha  Ram)ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಪಾರ್ಟಿ ಸಾಂಗ್​ನಲ್ಲಿ ಸಖತ್​ ಆಗಿ ಡ್ಯಾನ್ಸ್ ಮಾಡಿದ್ದರಂತೆ. ಈ ಹಾಡಿನ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ಮ್ಯೂಸಿಕ್ ಆಲ್ಬಂ ಕ್ಷೇತ್ರಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಮುಂದೆ ಓದಿ ...
  • Share this:

ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಅಂದಿದೆ.. ನನ್ನ ಕಣ್ಣುಗಳು ಬ್ಲೈಂಡ್​ ಆಗಿದೆ.. ನನ್ನ ಬಾಡಿ ಬ್ಯಾಲೆನ್ಸ್​​ ತಪ್ಪಿದೆ.. ಈ ಹಾಡು ಕೇಳದವರೇ ಇಲ್ಲ. ಈ ಸಾಂಗ್​(Song) ಎಷ್ಟು ಫೇಮಸ್​ ಆಯ್ತು ಅಂದರೆ, ಬರೀ ಇಂಗ್ಲಿಷ್​(English)​ ಹಾಡುಗಳನ್ನೇ ಹಾಕುತ್ತಿದ್ದ ಪಬ್​ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವಂತೆ ಮಾಡಿದ್ದು, ಚಂದನ್​ ಶೆಟ್ಟಿ(Chandan Shetty). ಹೌದು, ಚಂದನ್​ ಶೆಟ್ಟಿ ಕನ್ನಡದ ಆಲ್ಬಂ ಸಾಂಗ್(Album Song)​ಗೆ ಮುನ್ನುಡಿ ಬರೆದವರು. ಅವರ ಹಾಡುಗಳೆಲ್ಲ ಸಖತ್​ ಫೇಮ್​ ಆಗಿದ್ದವು . ನ್ನಡ ಚಿತ್ರರಂಗದ ಬೆಸ್ಟ್‌ Rapper ಚಂದನ್ ಶೆಟ್ಟಿ (Chandan Shetty) ಪ್ರತಿ ವರ್ಷವೂ ಹೊಸ ವರ್ಷಕ್ಕೆಂದು ವಿಭಿನ್ನ ಶೈಲಿಯ ಪಾರ್ಟಿ ಫ್ರೀಕ್ ಹಾಡನ್ನು (Party Song) ರೆಡಿ ಮಾಡುತ್ತಾರೆ. ಇದೀಗ ಹೊಸ ವಿಚಾರ ಏನಪ್ಪ ಅಂದ್ರೆ ಚಂದನ್​ ಶೆಟ್ಟಿ ಅವರ ಹೊಸ ಪಾರ್ಟಿ ಸಾಂಗ್​ನಲ್ಲಿ ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವೀನ್​ ರಚಿತಾ ರಾಮ್​(Dimple Queen Rachitha  Ram)ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಪಾರ್ಟಿ ಸಾಂಗ್​ನಲ್ಲಿ ಸಖತ್​ ಆಗಿ ಡ್ಯಾನ್ಸ್ ಮಾಡಿದ್ದರಂತೆ. ಈ ಹಾಡಿನ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ಮ್ಯೂಸಿಕ್ ಆಲ್ಬಂ ಕ್ಷೇತ್ರಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ.


‘ಲಕ ಲಕ ಲ್ಯಾಂಬೋರ್ಗಿನಿ’ಯಲ್ಲಿ ರಚಿತಾ ರಾಮ್​!


ಲಕ ಲಕ ಲ್ಯಾಂಬೋರ್ಗಿನಿ ಎಂಬ ಹಾಡನ್ನು ಚಂದನ್​ ಶೆಟ್ಟಿ ಬರೆದು, ಹಾಡಿದ್ದಾರೆ. ಈ ಪಾರ್ಟಿ ಸಾಂಗ್​ನಲ್ಲಿ ಡಿಂಪಲ್​ ಕ್ವೀನ್​ ಸೊಂಟ ಬಳುಕಿಸಿದ್ದಾರೆ, ಇದೀಗ ಈ ಪಾರ್ಟಿ ಸಾಂಗ್​ನ ಶೂಟಿಂಗ್ ಕಂಪ್ಲೀಟ್​ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಾಕಿ ಇರುವ ಕೆಲಸಗಳನ್ನು ಮುಗಿಸಿ, ಹೊಸ ವರ್ಷಕ್ಕೆ ಈ ಹಾಡು ಬಿಡುಗಡೆ ಮಾಡುವ ಪ್ಲಾನ್​ ಹೊಂದಿದ್ದಾರೆ ಚಂದನ್​ ಶೆಟ್ಟಿ. ಅದು ಅಲ್ಲದೇ ಈ ಹಾಡಿಗೆ ಹೆಚ್ಚಿನ ಹಣ ಕೂಡ ಖರ್ಚು ಮಾಡಲಾಗಿದೆ. ಚಂದನ್​ ಶೆಟ್ಟಿ ಮಾಡಿರುವ ಸಾಂಗ್​ಗಳಲ್ಲಿ ಇದೇ ಅತ್ಯಂತ ದುಬಾರಿ ಎಂದು ಸ್ವತಃ ಅವರೇ ಹೇಳಿದ್ದಾರೆ. ಮೊದಲ  ಬಾರಿಗೆ ಆಲ್ಬಂ ಸಾಂಗ್​ನಲ್ಲಿ ರಚಿತಾ ರಾಮ್​ ಕಾಣಿಸಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದೆ.


ಇದನ್ನು ಓದಿ : ಎಂದೂ ಕಾಣಿಸದಷ್ಟು ಹಾಟ್​ ಲುಕ್​ನಲ್ಲಿ ಇಲಿಯಾನ: ಆಹಾ... ಫೋಟೋ ಕಂಡು ನೆಟ್ಟಿಗರು​ ಸ್ಟನ್​..!


ನಂದ ಕಿಶೋರ್​ ನಿರ್ದೇಶನ ಹೈಲೆಟ್ಸ್​!


ಈ ಮ್ಯೂಸಿಕ್ ಆಲ್ಬಂ ಹಾಡನ್ನು ಚಿತ್ರ ನಿರ್ದೇಶಕ ನಂದ ಕಿಶೋರ್ ಅವರು ನಿರ್ದೇಶಿಸಿದ್ದಾರೆ ಎನ್ನುವುದು ವಿಶೇಷ. ಕೇಶವ್ ಅವರು ಈ ಮ್ಯೂಸಿಕ್ ಆಲ್ಬಂ ಸೋಲೊ ಹಾಡಿಗೆ ಹಣ ಹೂಡಿದ್ದಾರೆ. ಚಂದನ್​ ಶೆಟ್ಟಿ ಸ್ವತಃ ಸಾಹಿತ್ಯ ಬರೆದಿದ್ದಾರೆ. ಪ್ರತಿ ಹಾಡಿನಲ್ಲೂ ಕ್ಯಾಚಿ ಸಾಹಿತ್ಯ ಬರೆಯುವ ಚಂದನ್​ ಶೆಟ್ಟಿ, ಈ ಹಾಡಿನಲ್ಲೂ ಅದನ್ನೇ ಟ್ರೈ ಮಾಡಿದ್ದಾರೆ. ಈ ಹಾಡಿನ ಚಿತ್ರೀಕರಣದ ದೃಶ್ಯವೊಂದು ಸಖತ್​ ವೈರಲ್​ ಆಗಿದೆ. ಬ್ಲ್ಯಾಕ್​ ಡ್ರೆಸ್​ನಲ್ಲಿ ರಚಿತಾ ರಾಮ್​ ಸಖತ್​​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಕ್ಲಿಪ್​ ಕಂಡು ಅವ ಫ್ಯಾನ್ಸ್​ ಸ್ಟನ್​ ಆಗಿದ್ದಾರೆ.


ಇದನ್ನು ಓದಿ : ಕಿಚ್ಚನ ಬಳಿಕ ರಾಜಮೌಳಿ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡ ನಟ​: RRR​ ಚಿತ್ರದಲ್ಲಿ ಅರುಣ್​ ಸಾಗರ್​!ಎಣ್ಣೆಗೂ ಹೆಣ್ಣಿಗೂ ಸಾಂಗ್ ಫುಲ್ ಹಿಟ್‌


ಡಿಂಪಲ್ ಕ್ವೀನ್ ರಚಿತಾ ರಾಮ ಎಣ್ಣೆ ಬಾಟಲಿ ಜೊತೆ ಮೈ ಬಳುಕಿಸಿದ ಹೆಣ್ಣಿಗೂ ಎಣ್ಣೆಗೂ ಎಲ್ಲಿಂದ ಲಿಂಕ್ ಇಟ್ಟೇ ಭಗವಂತ ಸಾಂಗ್ ಸಖತ್ ಹಿಟ್ ಆಗಿದ್ದು ಹೊಸ ದಾಖಲೆ ಬರೆದಿದೆ. ಏಕ್ ಲವ್ ಯಾ ಸಿನಿಮಾದ ಹೆಣ್ಣಿಗೂ ಎಣ್ಣೆಗೂ ಸಾಂಗ್ ನಲ್ಲಿ ಇದೇ ಮೊದಲ ಬಾರಿಗೆ ನಟಿ ರಚಿತಾ ರಾಮ್ ಎಣ್ಣೆ ಬಾಟಲಿ ಹಿಡಿದು ಶರಾಬಿನ ಗುಂಗಲ್ಲಿ ಕುಣಿದಿದ್ದಾರೆ. ಇದಾದ ಬಳಿಕ ಮತ್ತೊಂದು ಪಾರ್ಟಿ ಸಾಂಗ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

Published by:Vasudeva M
First published: