Rachita Ram: ಅಪ್ಪು,ಕಿಚ್ಚನ ಸ್ಟೈಲ್​ನಲ್ಲಿ `ಮೀಟ್​ ಮಾಡೋಣ’ ಅಂತಿದ್ದಾರೆ ಡಿಂಪಲ್​ ಕ್ವೀನ್​ ರಚಿತಾ!

ವಿಶೇಷವಾಗಿ ರಚಿತಾ ಸ್ಟೆಪ್ಸ್ ಮಾತ್ರವಲ್ಲದೆ, ಕೆಲ ಹೀರೋಗಳ ಸಿನಿಮಾದ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.ವಿಶೇಷ ಅಂದರೆ, ಅಪ್ಪು ಅವರ ರಾಜ್​ ಸಿನಿಮಾದ ಗೆಟಪ್​ ಹಾಗೂ ಕಿಚ್ಚ ಅವರ ವಿಲನ್​ ಸಿನಿಮಾದ ಲುಕ್​ನಲ್ಲಿ ರಚಿತಾ ರಾಮ್​ ಕಾಣಿಸಿಕೊಂಡಿದ್ದಾರೆ.

ನಟಿ ರಚಿತಾ ರಾಮ್

ನಟಿ ರಚಿತಾ ರಾಮ್

  • Share this:
‘ಏಕ್​ ಲವ್​ ಯಾ’( Ek Love Ya ) ಜೋಗಿ ಪ್ರೇಮ್​(Prem) ನಿರ್ದೇಶನದ ಸಿನಿಮಾ.. ರಕ್ಷಿತಾ ಪ್ರೇಮ್​ ಬಂಡವಾಳ ಹಾಕಿರುವ ಸಿನಿಮಾ. ರಕ್ಷಿತಾ ಪ್ರೇಮ್(Raksitha Prem)​ ಅವರ ತಮ್ಮ ರಾಣಾ(Raana)  ಅಭಿನಯದ ಸಿನಿಮಾ. ಜೊತೆಗೆ ಈ ಸಿನಿಮಾಗೆ ಇಬ್ಬರು ನಾಯಕಿಯರು. ಅದರಲ್ಲಿ ಒಬ್ಬರು ನಮ್ಮ ಡಿಂಪಲ್​ ಕ್ವೀನ್​ ರಚಿತಾ ರಾಮ್(Dimple Queen Rachitha Ram)​.ಸ್ಯಾಂಡಲ್‌ವುಡ್ ನಲ್ಲಿ ಅತ್ಯಂತ ಬ್ಯುಸಿಯಾಗಿರೋ ನಟಿಮಣಿ ಅಂದ್ರೇ ರಚಿತಾ ರಾಮ್. ಅಜಯ್ ರಾವ್ ರಿಂದ ಆರಂಭಿಸಿ ಅಪ್ಪು ತನಕ ಎಲ್ಲ ಸ್ಟಾರ್ ಗಳ ಜೊತೆ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚ್ತಿರೋ ಗುಳಿಕೆನ್ನೆಯ ಬೆಡಗಿ, ಈ ವರ್ಷ ಸಖತ್ ಹಾಟ್ ಹಾಡುಗಳಲ್ಲೂ ಕಾಣಿಸಿಕೊಳ್ಳೋ ಮೂಲಕ ಮತ್ತಷ್ಟು ಬೇಡಿಕೆ ಹೆಚ್ಚಿಸಿ ಕೊಂಡಿದ್ದಾರೆ.  ಏಕ್​ ಲವ್​ ಯಾ ಸಿನಿಮಾದ ಟೀಸರ್​​ನಲ್ಲಿ ರಚಿತಾ ರಾಮ್​ ಅವರ ಪಾತ್ರ ಸಖತ್​ ಕ್ಯೂರಿಯಾಸಿಟಿ ಹುಟ್ಟಿಸಿತ್ತು.  ಇದಾದ ಬಳಿಕ ಏಕ್​ ಲವ್​ ಯಾ ಸಿನಿಮಾದ ಹಾಡುಗಳ ಮೂಲಕ ಈಗಾಗಲೇ ಎಲ್ಲರಲ್ಲೂ ಭಾರೀ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾ ಎಣ್ಣೆ ಸಾಂಗ್​ ಸಖತ್​ ಫೇಮಸ್​ ಆಗಿದೆ. ಜೊತೆಗೆ ಈ ಸಾಂಗ್​ ವೇಳೆ ಪುನೀತ್​ ರಾಜ್​ಕುಮಾರ್​(Puneeth Rajkumar) ಫೋಟೋ ಮುಂದೆ ಅಗೌರವ ತೋರಿದ ಘಟನೆಯೂ ನಡೆದಿತ್ತು. ಇದೀಗ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. 

ಮೀಟ್​ ಮಾಡೋಣ.. ಇಲ್ಲ ಡೇಟ್​ ಮಾಡೋಣ ಎಂದ ರಚಿತಾ!

ಏಕ್​ ಲವ್​ ಯಾ ಸಿನಿಮಾದ ಮತ್ತೊಂದು ಹಾಡು ರಿಲೀಸ್​ ಆಗಿದೆ. ಮೀಟ್ ಮಾಡೋಣ ಇಲ್ಲಾ ಡೇಟ್ ಮಾಡೋಣ ಅನ್ನುತ್ತಿದ್ದಾರೆ ರಚಿತಾ ರಾಮ್.ಏಕ್ ಲವ್ ಯಾ ಸಿನಿಮಾದ ಐದನೇ ಹಾಡು “ಮೀಟ್ ಮಾಡೋಣ ಇಲ್ಲಾ ಡೇಟ್ ಮಾಡೋಣ” ರಿಲೀಸ್ ಆಗಿದ್ದು, ವಾವ್ ರಚ್ಚೂ ಅಂತಿದ್ದಾರೆ ಅಭಿಮಾನಿಗಳು. ಈ ಹಾಡಿಗೆ ವಿಜಯ್​ ಈಶ್ವರ್​​ ಸಾಹಿತ್ಯ ಬರೆದಿದ್ದಾರೆ. ಮ್ಯಾಜಿಕಲ್ ಕಂಪೋಸರ್​​ ಅರ್ಜುನ್​ ಜನ್ಯ ಸಂಗೀತ ನೀಡಿದ್ದಾರೆ. ಐಶ್ವರ್ಯ ರಂಗರಾಜನ್​ ಅವರ ಅದ್ಭೂತ ಧ್ವನಿ ಕೇಳುಗರನ್ನು ಮತ್ತೆ ಹಾಡು ಕೇಳುವಂತೆ ಮಾಡುತ್ತದೆ.

ಇದನ್ನು ಓದಿ : `ಕರುನಾಡ ರತ್ನ’ನಿಗೆ ಇದೆಂಥಾ ಅವಮಾನ: ಕಿಡಿಗೇಡಿಗಳು ಸಿಕ್ರೆ ಸುಮ್ಮನೆ ಬಿಡಲ್ಲ ಎಂದ ಕನ್ನಡಿಗರು!

ಅಪ್ಪು, ಕಿಚ್ಚನ ಸ್ಟೈಲ್​ನಲ್ಲಿ ಕಾಣಿಸಿಕೊಂಡ ರಚಿತಾ!

ಇನ್ನೂ ಈ ಹಾಡಿನ ಕೆಲ ದೃಶ್ಯಗಳು ಕೂಡ ರಿಲೀಸ್​ ಆಗಿದೆ. ಈ ಹಾಡಿನಲ್ಲಿ ತುಂಬಾ ಗೆಟಪ್​ನಲ್ಲಿ ರಚಿತಾ ರಾಮ್​ ಕಾಣಿಸಿಕೊಂಡಿದ್ದಾರೆ. ರಚಿತಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡನ್ನು ಮೋಹನ್ ಕೊರಿಯೋಗ್ರಫಿ ಮಾಡಿದ್ದಾರೆ. ವಿಶೇಷವಾಗಿ ರಚಿತಾ ಸ್ಟೆಪ್ಸ್ ಮಾತ್ರವಲ್ಲದೆ, ಕೆಲ ಹೀರೋಗಳ ಸಿನಿಮಾದ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.ವಿಶೇಷ ಅಂದರೆ, ಅಪ್ಪು ಅವರ ರಾಜ್​ ಸಿನಿಮಾದ ಗೆಟಪ್​ ಹಾಗೂ ಕಿಚ್ಚ ಅವರ ವಿಲನ್​ ಸಿನಿಮಾದ ಲುಕ್​ನಲ್ಲಿ ರಚಿತಾ ರಾಮ್​ ಕಾಣಿಸಿಕೊಂಡಿದ್ದಾರೆ. ಅವರ ಗೆಟಪ್​ನಲ್ಲಿ ‘ಮೀಟ್ ಮಾಡೋಣ.. ಇಲ್ಲ ಡೇಟ್​ ಮಾಡೋಣ‘ ಅಂತ ರಚಿತಾ ಹಾಡಿದ್ದಾರೆ. ಡಿಫ್ರೆಂಟ್​ ಗೆಟಪ್​ನಲ್ಲಿ ರಚಿತಾ ಅವರನ್ನು ಕಂಡ ಫ್ಯಾನ್ಸ್​ ಸಖತ್​ ಥ್ರಿಲ್​ ಆಗಿದ್ದಾರೆ.

ಇದನ್ನು ಓದಿ : ಸ್ಯಾಂಡಲ್​ವುಡ್​ ಸ್ಟಾರ್ ಡೈರೆಕ್ಟರ್​​ಗೆ 50 ಲಕ್ಷ ದೋಖಾ: ಮಹಿಳೆ ವಿರುದ್ಧ ಠಾಣೆ ಮೆಟ್ಟಿಲೇರಿದ ನಾಗಶೇಖರ್​!

ಸ್ಯಾಂಡಲ್​​ವುಡ್​ನಲ್ಲಿ  ಮಿಂಚುತ್ತಿರುವ ಡಿಂಪಲ್​ ಕ್ವೀನ್​!

ರಚಿತಾ ರಾಮ್ ತಮ್ಮ ನಟನೆಯಿಂದ ಮನೆ ಮಾತಾಗಿದ್ದಾರೆ. ಸದ್ಯ ರಚಿತಾ ಉತ್ತಮ ಮತ್ತು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಎಣ್ಣೆ ಸಾಂಗ್ ನಿಂದಾ ಪಡ್ಡೆ ಹುಡುಗರು ಮತ್ತು ಕ್ರೇಜಿ ಹುಡುಗಿಯರ ಮೆಚ್ಚುಗೆಯ ನಟಿಯಾಗಿ ಬಿಟ್ಟಿದ್ದಾರೆ. ಈ ಚಿತ್ರದ ಎಲ್ಲಾ ಹಾಡುಗಳೂ ಮಿಲಿಯನ್ ಗಟ್ಟಲೆ ವ್ಯೂವ್ ಪಡೆದು ಸ್ಯಾಂಡಲ್ವುಡ್ ನಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಇದೇ ಡಿಸೆಂಬರ್​ 31 ಕ್ಕೆ ರಚಿತಾ ರಾಮ್​ ನಟನೆಯ ಲವ್​ಯೂ ಸಿನಿಮಾ ರಿಲೀಸ್​ ಆಗುತ್ತಿದೆ.
Published by:Vasudeva M
First published: