ಸದ್ಯ ಸ್ಯಾಂಡಲ್ವುಡ್(Sandalwood)ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್(Dimple Queen Rachita Ram) ಅವರದ್ದೇ ಸುದ್ದಿ. ಸದ್ಯಕ್ಕೆ ರಚ್ಚು ಟಾಕ್ ಆಫ್ ದಿ ಟೌನ್(Talk of The Town) ಆಗಿದ್ದಾರೆ. ಸಂಕ್ರಾಂತಿಗೆ ರಚಿತಾ ಅವರ ತೆಲುಗು(Telugu) ಸಿನಿಮಾ ರಿಲೀಸ್ ಆಗಿದೆ, ‘ಸೂಪರ್ ಮಚ್ಚಿ’ (Super Machi) ಹೆಸರಿನ ಸಿನಿಮಾ ಜನವರಿ 14 ರಂದು ಬಿಡುಗಡೆಯಾಗಿದೆ. ಆದರೆ, ರಚಿತಾ ರಾಮ್ ಅವರ ತೆಲುಗಿನ ಮೊದಲ ಸಿನಿಮಾ ನೆಲಕಚ್ಚಿದೆ. ಈ ಹಿಂದೆ ಟಾಲಿವುಡ್(Tollywood) ಎಂಟ್ರಿಯಾಗಿರುವ ಖುಷಿಯನ್ನು ರಚಿತಾ ರಾಮ್ ಹಂಚಿಕೊಂಡಿದ್ದರು. ರಚ್ಚು ಅಭಿಮಾನಿಗಳಲ್ಲೂ ಕೂಡ ಈ ವಿಚಾರ ಸಂತಸ ತಂದಿತ್ತು. ಕನ್ನಡದ ಬಹುತೇಕ ನಟಿಯರು ತೆಲುಗಿನಲ್ಲಿ ಸಕ್ಸಸ್ ಕಂಡಿದ್ದಾರೆ. ರಚಿತಾ ರಾಮ್ ಸಿನಿಮಾ ಮೇಲಿದ್ದ ನಿರೀಕ್ಷೆಗಳು ಇದೀಗ ಮಣ್ಣು ಪಾಲಾಗಿದೆ. ಈ ಚಿತ್ರ ಬಾಕ್ಸಾಫೀಸ್(Box-Office)ನಲ್ಲಿ ಮಾಡಿರುವ ಹಣ ಕೇಳಿದರೆ ನೀವು ಶಾಕ್(Shock) ಆಗುತ್ತಿರ. ದೊಡ್ಡ ಮನೆಯ ಮಗನ ಸಿನಿಮಾಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ರಚಿತಾ ರಾಮ್ ನಟನೆಯ ತೆಲುಗಿನ ಮೊದಲ ಸಿನಿಮಾ ಹಿಂದೆಂದೂ ಯಾವ ಸಿನಿಮಾವೂ ಮಾಡಿರದ ದಾಖಲೆ(Record)ಯೊಂದನ್ನು ಮಾಡಿದೆ. ಶಾಕ್ ಆಗಬೇಡಿ. ನೀವು ಅಂದುಕೊಂಡ ದಾಖಲೆಗಳು ಅಲ್ಲ. ಈ ದಾಖಲೆಗಳನ್ನು ಕಂಡರೆ ನೀವು ನಗುತ್ತೀರಾ.. ನಿಜಕ್ಕೂ ಇದು ಸಾಧ್ಯನಾ ಅಂತೀರಾ..ಅದೇನು ಅಂತ ಮುಂದೆ ನೋಡಿ.
ಬಾಕ್ಸಾಫೀಸ್ನಲ್ಲಿ ಸೊನ್ನೆ ಸುತ್ತಿದ ‘ಸೂಪರ್ ಮಚ್ಚಿ’!
ಸೂಪರ್ ಮಚ್ಚಿ ಸಿನಿಮಾ ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅವರು ನಾಯಕ ನಟನಾಗಿ, ಕನ್ನಡದ ನಟಿ ರಚಿತಾ ರಾಮ್ ಅವರು ನಾಯಕ ನಟಿ ಆಗಿ ಅಭಿನಯಿಸಿರುವ ಸಿನಿಮಾ. ಈ ಚಿತ್ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬಂದಿದೆ. ಜನವರಿ 14ರಂದು ರಿಲೀಸ್ ಆಗಿದೆ. ಆದರೆ ಈ ಸಿನಿಮಾ ಯಾವುದೇ ಕಲೆಕ್ಷನ್ ಮಾಡಿಲ್ಲವಂತೆ. ಜೀರೋ ಕಲೆಕ್ಷನ್ನೊಂದಿಗೆ ಮೊದಲ ದಿನ ಕಳೆದಿದೆಯಂತೆ ಈ ಚಿತ್ರ. ಈ ವಿಚಾರ ಇದೀಗ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅಚ್ಚರಿ ಅಂದರೆ ಈ ಚಿತ್ರ ರಿಲೀಸ್ ಆಗಿದ್ದು ಯಾರಿಗೂ ಗೊತ್ತೆ ಇಲ್ಲ. ಯಾಕೆಂದರೆ ಚಿತ್ರದ ರಿಲೀಸ್ ಬಗ್ಗೆ ಯಾವುದೇ ಸುಳಿವು ನೀಡದೆ ಚಿತ್ರ ರಿಲೀಸ್ ಆಗಿದೆ. ಇದು ನಾಯಕ ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅವರ 2ನೇ ಚಿತ್ರ.
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಸಿನಿಮಾ ಠುಸ್ ಆಗಿದ್ದು ಹೇಗೆ?
‘ಸೂಪರ್ ಮಚ್ಚಿ’ ಸಿನಿಮಾ ಸೆಟ್ಟೇರಿದಾಗ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಸೂಪರ್ ಹಿಟ್ ಪ್ರೇಮ್ ಕಹಾನಿ ಆಗುತ್ತದೆ ಎನ್ನುವ ಸೂಚನೆಯನ್ನು ಈ ಸಿನಿಮಾ ನೀಡಿತ್ತು. ಜೊತೆಗೆ ಚಿತ್ರದ ಹಾಡುಗಳು ಕೂಡ ಪ್ರೇಕ್ಷರಿಗೆ ಇಷ್ಟ ಆಗಿದ್ದವು. ಆದರೆ ಸಿನಿಮಾ ರಿಲೀಸ್ ವೇಳೆ ಚಿತ್ರ ತಂಡ ಬೇಜಾವಾಬ್ದಾರಿ ತನದಿಂದ ನಡೆದುಕೊಂಡಿದೆ. ಚಿತ್ರಕ್ಕಾಗಿ ಯಾವುದೇ ರೀತಿಯ ಪ್ರಚಾರ ಮಾಡಿಲ್ಲ. ಅಷ್ಟೇ ಯಾಕೆ ಸಿನಿಮಾ ಇಂಥಹ ದಿನ ರಿಲೀಸ್ ಎನ್ನುವುದನ್ನು ಕೂಡ ಹೇಳಿಕೊಂಡಿಲ್ಲ.
ಈ ಚಿತ್ರದ ಮೇಲೆ ನಟಿ ರಚಿತಾ ರಾಮ್ ಅವರು ಸಾಕಷ್ಟು ನಿರೀಕ್ಷೆಯನ್ನು ಇಟ್ಟು ಕೊಂಡಿದ್ದರಂತೆ. ಇದೇ ಮೊದಲ ಬಾರಿಗೆ ಬೇರೆ ಭಾಷೆಯ ಚಿತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ರಚ್ಚು ಅಭಿಮಾನಿಗಳಲ್ಲೂ ಕೂಡ ಈ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಈಗ ಅದೆಲ್ಲದಕ್ಕೂ ಚಿತ್ರ ತಂಡ ತಣ್ಣೀರು ಎರಚಿದೆ.
Published by:Vasudeva M
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ