Ramya ಸ್ಯಾಂಡಲ್​ವುಡ್​ಗೆ ಕಮ್​ಬ್ಯಾಕ್​ ಮಾಡುವಂತೆ ರಚ್ಚು ರಿಕ್ವೆಸ್ಟ್​: ಡಿಂಪಲ್​ ಕ್ವೀನ್​ ಮನವಿಗೆ ಏನಂದ್ರು ನೋಡಿ ಮೋಹಕ ತಾರೆ!

ರಚಿತಾ ರಾಮ್ "ದೀವಾ ಅವರಿಗೆ ನಾನು ಮತ್ತೆ ಯಾವಾಗ ಆಕ್ಟ್ ಮಾಡುತ್ತೀರಿ ಎಂದು ಕೇಳಿದ್ದೀನಿ. ಅದಕ್ಕೆ ಅವರು ನಕ್ಕು ಸುಮ್ಮನಾಗುತ್ತಾರೆ ಅಷ್ಟೆ. ದೀವಾ ಮತ್ತೆ ಆಕ್ಟ್ ಮಾಡಬೇಕು ಅನ್ನೋದು ನನ್ನ ಆಸೆ ಕೂಡ ಹೌದು. ದೀವಾ ಪ್ಲೀಸ್ ಮತ್ತೆ ಸಿನಿಮಾದ ಅಭಿನಯಿಸಿ, ಐ ಲವ್‌ ಯೂ" ಎಂದು ರಚಿತಾ ಹೇಳಿದ್ದಾರೆ.

ರಚಿತಾ ರಾಮ್​, ರಮ್ಯಾ

ರಚಿತಾ ರಾಮ್​, ರಮ್ಯಾ

  • Share this:
ರಮ್ಯಾ(Ramya)... ಸ್ಯಾಂಡಲ್​ವುಡ್​(Sandalwood)ನಲ್ಲಿ ಅದೆಷ್ಟೇ ಹೀರೋಯಿನ್​ಗಳು ಬಂದರು. ಇವರ ರೇಂಜಿಗೆ ಯಾರಿಲ್ಲ.. ಹೌದು, ಮೋಹಕ ತಾರೆ ರಮ್ಯಾ ಸ್ಯಾಂಡಲ್​ವುಡ್​ನಲ್ಲಿ ಟಾಪ್​ ನಟಿ(Top Actress)ಯಾಗಿದ್ದವರು. ಚಿತ್ರರಂಗದಿಂದ ಈಗ ರಮ್ಯ ದೂರ ಇದ್ದಾರೆ. ಆದರೂ, ಅವರ ಹವಾ ಮಾತ್ರ ಹಾಗೇ ಇದೆ. ಸ್ಯಾಂಡಲ್​ವುಡ್​​ ‘ಪದ್ಮಾವತಿ’ ಮತ್ತೆ ಸಿನಿರಂಗಕ್ಕೆ ಕಮ್​ಬ್ಯಾಕ್(Comeback)​ ಮಾಡುತ್ತಾರೆ ಅಂತ ಅದೆಷ್ಟೋ ಮಂದಿ ಕಾದು ಕುಳಿತಿದ್ದಾರೆ. ರಮ್ಯಾ ಅವರ ಕ್ಯೂಟ್​​ನೆಸ್​​ಗೆ ಮರುಳಾಗದವರೇ ಇಲ್ಲ. ಅಂದಿಗೂ, ಇಂದಿಗೂ, ಎಂದಿಂದೆಗೂ ನಂಬರ್​ 1 ಹೀರೋಯಿನ್​(Number One Heroin) ಅಂದರೆ ಅದು ರಮ್ಯಾ ಮಾತ್ರ. ಕೇವಲ ಕನ್ನಡ ಸಿನಿಮಾಗಳಲ್ಲಿ ಅಷ್ಟೇ ಅಲ್ಲದೆ, ತಮಿಳು(Tamil), ತೆಲುಗು(Telugu) ಚಿತ್ರಗಳಲ್ಲಿಯೂ ರಮ್ಯಾ ನಟಿಸಿದ್ದಾರೆ. ಇದೀಗ ರಮ್ಯಾ ಅವರು ಕಮ್​ಬ್ಯಾಕ್​ಮಾಡುವಂತೆ ಸ್ಯಾಂಡಲ್​ವುಡ್​ ಮತ್ತೊಬ್ಬ ಸ್ಟಾರ್​ ನಟಿ ರಿಕ್ವೆಸ್ಟ್ ಮಾಡಿದ್ದಾರೆ. ಹೌದು, ರಮ್ಯಾ ಅವರು ಸಿನಿಮಾ ರಂಗದಿಂದ ಬ್ರೇಕ್​(Break) ತೆಗದುಕೊಂಡ ಬಳಿಕ, ಅವರ ಸ್ಥಾನ ಹಾಗೇ ಖಾಲಿ ಇದೆ. ಆ ಜಾಗಕ್ಕೆ ಯಾರೂ ಬಂದಿಲ್ಲ. ರಮ್ಯಾ ಬಳಿಕ ರಚಿತಾ ರಾಮ್​ ಕೂಡ ಸಖತ್​ ಹೆಸರು ಮಾಡಿದರು. ಈಗಲೂ ಮಾಡುತ್ತಿದ್ದಾರೆ. ಸದ್ಯಕ್ಕೆ ಸ್ಯಾಂಡಲ್​ವುಡ್​ನಲ್ಲಿ ನಂಬರ್​ 1 ನಟಿ ಯಾರು ಎಂದು ಕೇಳಿದರೆ, ರಚಿತಾ ರಾಮ್​​ ಎನ್ನಬಹುದು. ಇದೀಗ ರಚಿತಾ ರಾಮ್(Rachita Ram)​, ರಮ್ಯಾ ಅವರಿಗೆ ಮತ್ತೆ ಸಿನಿಮಾಗಳಲ್ಲಿ ನಟಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅರೇ.. ಇದು ನಿಜನಾ? ಎಂದು ಶಾಕ್​ ಆಗುತ್ತಿದೆಯಾ. ಆದರೂ ಇದು ನಿಜಾನೇ. ಮುಂದೆ ನೋಡಿ.

ರಮ್ಯಾ ಸ್ಯಾಂಡಲ್​ವುಡ್​​ಗೆ ಮರಳುವಂತೆ ರಚ್ಚು ಮನವಿ!

ರಚಿತಾ ರಾಮ್ ಅಭಿನಯದ ಲವ್‌ ಯೂ ರಚ್ಚು ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಚಿತ್ರದ ಪ್ರಮೋಷನ್ ಸಂದರ್ಭ ಖಾಸಗೀ ಸಂದರ್ಶನದಲ್ಲಿ ಮಾತನಾಡಿರುವ ರಚಿತಾ ರಮ್ಯಾ ಅವರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಲವ್‌ ಯೂ ರಚ್ಚು’ ಸಿನಿಮಾಗೆ ಈ ಹಿಂದೆ ‘ಲವ್‌ ಯೂ ರಮ್ಯಾ’ ಎಂದು ಹೆಸರಿಡಲು ಚಿತ್ರತಂಡ ನಿರ್ಧರಿಸಿತ್ತು. ಇದರ ಬಗ್ಗೆ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ನಟಿ ರಚಿತಾ ರಾಮ್ "ಅಯ್ಯೋ ರಮ್ಯಾ ಅವರ ಹೆಸರು ಇಟ್ಟಿದ್ದರೇ ಇನ್ನು ಖುಷಿಯಿಂದ ಆಕ್ಟ್ ಮಾಡ್ತಾ ಇದ್ದೆ. ನಾನು ರಮ್ಯಾ ಅವರ ಅಭಿಮಾನಿಯಾಗಿ ತುಂಬ ಖುಷಿಯಿಂದ ಹಾಗೂ ಹೆಮ್ಮೆಯಿಂದ ಆ ಟೈಟಲ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ರಚಿತಾ ಹೇಳಿದ್ದಾರೆ.

ಇದನ್ನು ಓದಿ : ಸಂಕ್ರಾಂತಿಗೆ ಟಾಲಿವುಡ್​ನಲ್ಲಿ ರಚ್ಚು ಮಿಂಚು: ಜ.14ಕ್ಕೆ `ಸೂಪರ್​​ ಮಚ್ಚಿ’ ಸಿನಿಮಾ ರಿಲೀಸ್​​!

ರಮ್ಯಾ ಅವರಿಗೆ ದಿವಾ ಅಂತ ಕರೆಯುತ್ತಾರಂತೆ ರಚ್ಚು!

ರಚಿತಾ ರಾಮ್ ಮತ್ತು ರಮ್ಯಾ ಮೊದಲಿನಿಂದಲು ಕ್ಲೋಸ್​ ಫ್ರೆಂಡ್ಸ್​​. . ರಮ್ಯಾ ಅವರ ನಟನೆ ಮತ್ತು ಚಾರ್ಮ್‌ಗೆ ಫಿದಾ ಆಗಿರುವ ರಚಿತಾ ರಮ್ಯಾ ಅವರೊಂದಿಗೆ ಒಂದು ಉತ್ತಮ ಸ್ನೇಹವನ್ನು ಇಟ್ಟುಕೊಂಡಿದ್ದಾರೆ. ಇದೇ ಪ್ರೀತಿಯಲ್ಲಿ ನಟಿ ರಚಿತಾ ರಾಮ್ ರಮ್ಯಾ ಅವರನ್ನು ದೀವಾ ಎಂದು ಕರೆಯುತ್ತಾರೆ ಅಂತೆ. ಮೊದಲಿನಿಂದಲೂ ನಾನು ರಮ್ಯಾ ಅವರನ್ನು ದೀವಾ ಎಂದೇ ಕರೆಯೋದು. ಹೀಗೆ ಕರೆಯೋದರಲ್ಲಿ ಖುಷಿ ಇದೆ ಎಂದು ರಚಿತಾ ಇದೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ : ವಿಕ್ರಾಂತ್​ ರೋಣ ಬಳಿಕ `ನಮಸ್ತೆ ಗೋಷ್ಟ್​’​ ಅಂತಿದ್ದಾರೆ ಕಿಚ್ಚ: ಏನಿದು ಹಾರರ್​ ಪೋಸ್ಟರ್​ ಮರ್ಮ?

ಆದಷ್ಟು ಬೇಗ ಸಿನಿಮಾ ಮಾಡುವಂತೆ ರಚ್ಚು ರಿಕ್ವೆಸ್ಟ್​!

ನಟಿ ರಮ್ಯಾ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ವರ್ಷಗಳೇ ಕಳೆದಿದೆ. ಈಗಲೂ ಕೂಡ ಕನ್ನಡ ಪ್ರೇಕ್ಷಕರು ರಮ್ಯ ಅವರನ್ನು ಸಿನಿಮಾದಲ್ಲಿ ನೋಡಲು ಕಾಯುತ್ತಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ರಚಿತಾ ರಾಮ್ "ದೀವಾ ಅವರಿಗೆ ನಾನು ಮತ್ತೆ ಯಾವಾಗ ಆಕ್ಟ್ ಮಾಡುತ್ತೀರಿ ಎಂದು ಕೇಳಿದ್ದೀನಿ. ಅದಕ್ಕೆ ಅವರು ನಕ್ಕು ಸುಮ್ಮನಾಗುತ್ತಾರೆ ಅಷ್ಟೆ. ದೀವಾ ಮತ್ತೆ ಆಕ್ಟ್ ಮಾಡಬೇಕು ಅನ್ನೋದು ನನ್ನ ಆಸೆ ಕೂಡ ಹೌದು. ದೀವಾ ಪ್ಲೀಸ್ ಮತ್ತೆ ಸಿನಿಮಾದ ಅಭಿನಯಿಸಿ, ಐ ಲವ್‌ ಯೂ" ಎಂದು ರಚಿತಾ ಹೇಳಿದ್ದಾರೆ.
Published by:Vasudeva M
First published: