• Home
  • »
  • News
  • »
  • entertainment
  • »
  • Bottle Cap challenge: ಬಾಟಲ್ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಡಿಂಪಲ್​ ಕ್ವೀನ್​ ರಚಿತಾ ರಾಮ್ - ಸುಶ್ಮಿತಾ ಸೇನ್​​..!

Bottle Cap challenge: ಬಾಟಲ್ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಡಿಂಪಲ್​ ಕ್ವೀನ್​ ರಚಿತಾ ರಾಮ್ - ಸುಶ್ಮಿತಾ ಸೇನ್​​..!

ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ರಚಿತಾ ರಾಮ್​ ಹಾಗೂ ಸುಶ್ಮಿತಾ ಸೇನ್​

ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ರಚಿತಾ ರಾಮ್​ ಹಾಗೂ ಸುಶ್ಮಿತಾ ಸೇನ್​

Bottle Cap challenge: ಹೊಸ ಹೊಸ ಚಾಲೆಂಜ್‍ಗಳನ್ನು ಸಿನಿಮಾ ಸ್ಟಾರ್ಸ್ ತೆಗೆದುಕೊಳ್ತಾನೇ ಇರ್ತಾರೆ. ಆದರೆ ಈಗ ಒಂದು ಹೊಸ ಚಾಲೆಂಜ್ ವೈರಲ್ ಆಗ್ತಿದೆ. ಇದು ಸ್ಟಾರ್​ಗಳಿಗೆ ಥ್ರಿಲ್ ಕೊಡುವುದರ ಜೊತೆಗೆ ಸಿಕ್ಕಾಪಟ್ಟೆ ಚಾಲೆಂಜಿಂಗ್ ಆಗಿ ಕೂಡ ಆಗಿದೆ. ಇಂತಹ ಸವಾಲನ್ನು ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವೀನ್ ರಚಿತಾ ರಾಮ್ ಹಾಗೂ ಬಾಲಿವುಡ್​ ಫಿಟ್​ನೆಸ್​ ಕ್ವೀನ್​ ಸುಶ್ಮಿತಾ ಸೇನ್​​​ ಸ್ವೀಕರಿಸಿದ್ದಾರೆ.  

ಮುಂದೆ ಓದಿ ...
  • News18
  • Last Updated :
  • Share this:

ಮಾರ್ಷಲ್​ ಆರ್ಟ್ಸ್​ನ ಗುರು ಫರಬಿ ದ್ಯಾವ್ಲೆಚಿನ್ ಅವರು ಹುಟ್ಟುಹಾಕಿದ ಬಾಟಲ್​ ಕ್ಯಾಪ್​ ಚಾಲೆಂಜ್​ ಈಗ ಸಖತ್​ ವೈರಲ್​ ಆಗುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳು ಇದನ್ನು ಸ್ವಯಂ ಪ್ರೇರಿತರಾಗಿಯೇ ಸ್ವೀಕರಿಸುತ್ತಿದ್ದಾರೆ.

ಮೊನ್ನೆಯಷ್ಟೆ ಅಕ್ಷಯ್​ ಕುಮಾರ್​, ಅರ್ಜುನ್​ ಸರ್ಜಾ ಹಾಗೂ ಗಣೇಶ್​ #BottleCapChallenge ಸ್ವೀಕರಿಸಿದ್ದರು. ಈಗ ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಹಾಗೂ ಬಾಲಿವುಡ್​ನ ಚಿರಯೌವ್ವನೆ ಸುಶ್ಮಿತಾ ಸೇನ್​ ಕುಟುಂಬ ಸಮೇತರಾಗಿ ಈ ಸವಾಲನ್ನು ಸ್ವೀಕರಿಸಿದ್ದಾರೆ.

Rachita ram Bottle cap challenge
ಕಾಲಿನಿಂದ ಬಾಟಲ್​ ಕ್ಯಾಪ್​ ತೆಗೆಯುತ್ತಿರುವ ರಚಿತಾ


ರಚಿತಾ ರಾಮ್​ ಹೇಗೆ ಕಾಲಿನಿಂದ ಬಾಟಲಿಯ ಮುಚ್ಚಳ ತೆಗೆದಿದ್ದಾರೆ ನೋಡಿ. ಎರಡು ಗಂಟೆಗಳ ಹಿಂದೆ ಈ ವಿಡಿಯೋವನ್ನು ರವಿತಾ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

Wanted to do a #bottlecapchallenge Yaaasssss I did it..!!!😎✌🏻 pic.twitter.com/45mPHSDu4D


ಇನ್ನೂ ಫಿಟ್​ನೆಸ್​ ಕ್ವೀನ್​ ಸುಶ್ಮಿತಾ ಸೇನ್​ ತಮ್ಮ ಮಗಳು ಹಾಗೂ ಗೆಳೆಯನ ಜತೆಯಲ್ಲಿ ಈ ಚಾಲೆಂಜ್​ ಸ್ವೀಕರಿಸಿದ್ದು, ಮೂರು ಮಂದಿ ಯಶಸ್ವಿಯಾಗಿ ಚಾಲೆಂಜ್​ ಪೂರ್ತಿ ಮಾಡಿದ್ದಾರೆ.ಇಂತಹ ಚಾಲೆಂಜ್ ಮಾಡೋದು ಅಷ್ಟು ಸುಲಭ ಅಲ್ಲ. ಫಿಟ್ನೆಸ್, ಡೈಲಿ ಜಿಮ್, ಫ್ಲೆಕ್ಸಿಬಿಲಿಟಿ ಇದ್ದು, ನಿತ್ಯ ವ್ಯಾಯಾಮ ಮಾಡೋರಿಗೆ ಮಾತ್ರ ಸಾಧ್ಯವಾಗೋ ಸ್ಟಂಟ್ ಇದು. ಅಕ್ಷಯ್ ಕುಮಾರ್ ಮಾರ್ಷಲ್ ಆಟ್ರ್ಸ್ ಎಕ್ಸ್‍ಪರ್ಟ್ ಆಗಿರೋದ್ರಿಂದ ಈ ಚಾಲೆಂಜ್ ಈಸಿಯಾಗಿ ಮಾಡಿದ್ದಾರೆ. ಇನ್ನು ಸೌತ್ ಇಂಡಿಯನ್ ಸ್ಟಾರ್​ಗಳೂ ಈ ಚಾಲೆಂಜ್ ವಿಚಾರದಲ್ಲಿ ಹಿಂದೆಬಿದ್ದಿಲ್ಲ.

Sunny Leone: ಪಡ್ಡೆಗಳಿಗೆ ಸಮೂಹ ಸನ್ನಿ ಹಿಡಿಸಿದ್ದ ಮಾಜಿ ನೀಲಿ ತಾರೆ ಸನ್ನಿಗೂ ಇತ್ತಂತೆ ಆ ಕಾಯಿಲೆ..!

First published: