• Home
  • »
  • News
  • »
  • entertainment
  • »
  • ಟಾಲಿವುಡ್​​ ಅಂಗಳದಲ್ಲಿ ಗುಳಿಕೆನ್ನೆ ಸುಂದರಿ; ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ ಚಿತ್ರಿಕರಣಕ್ಕೆ ಹಾಜರಿ

ಟಾಲಿವುಡ್​​ ಅಂಗಳದಲ್ಲಿ ಗುಳಿಕೆನ್ನೆ ಸುಂದರಿ; ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ ಚಿತ್ರಿಕರಣಕ್ಕೆ ಹಾಜರಿ

ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ

ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ

ಕಲ್ಯಾಣ್ ದೇವ್ ಗೆ ರಚಿತಾ ರಾಮ್​ ಜೋಡಿಯಾಗಿ ನಟಿಸುತ್ತಿದ್ದಾರೆ. ರಿಜ್ವಾನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಿಜ್ವಾನ್ ಹಾಗೂ ಖುಷಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  • Share this:

ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅಭಿನಯದ 'ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ' ಚಿತ್ರದ ಚಿತ್ರೀಕರಣ ಮತ್ತೆ ಶುರುವಾಗಿದೆ. ಲಾಕ್ ಡೌನ್ ನಂತರ ಕೊನೆಯ ಹಂತದ ಚಿತ್ರೀಕರಣ ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿದೆ.


ಅಂದಹಾಗೆ, ಕೊರೋನಾ ದಿನೇ ದಿನೇ ಹೆಚ್ಚುತ್ತಿರೋ‌ ಹಿನ್ನೆಲೆ ತೆಲಂಗಾಣ ರಾಜ್ಯ ಸರ್ಕಾರ ಕೊರೋನಾ‌ ಮಾರ್ಗಸೂಚಿಯನ್ನ‌ ವಿಧಿಸಿದೆ. ಅದನ್ನ‌ ಅನುಸರಿಸಿಯೇ ಕಟ್ಟುನಿಟ್ಟಿನ ಕ್ರಮದ ಮೂಲಕ ಚಿತ್ರೀಕರಣ ನಡೆಸಲಾಗುತ್ತಿದೆಯಂತೆ.


ಇ‌ನ್ನು ಚಿತ್ರೀಕರಣದ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಸಹ ನಡೆಸುತ್ತಿರೋದು ಈ ಚಿತ್ರದ ಸ್ಪೆಷಾಲಿಟಿ. ಅಂದಹಾಗೆ, ಕಲ್ಯಾಣ್ ದೇವ್ ಗೆ ರಚಿತಾ ರಾಮ್​ ಜೋಡಿಯಾಗಿ ನಟಿಸುತ್ತಿದ್ದಾರೆ. ರಿಜ್ವಾನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಿಜ್ವಾನ್ ಹಾಗೂ ಖುಷಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀನಿವಾಸ್ ಜಿ ಈ ಚಿತ್ರದ ಸಹ ನಿರ್ಮಾಪಕರು. ಪುಲಿ ವಾಸು ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಎಸ್ ಎಸ್ ತಮನ್ ಸಂಗೀತ ನೀಡುತ್ತಿದ್ದಾರೆ.


ಕಲ್ಯಾಣ್ ದೇವ್-ರಚಿತಾ ರಾಮ್​


ಶ್ಯಾಮ್ ಕೆ ನಾಯ್ಡು ಛಾಯಾಗ್ರಹಣ, ಸ್ವಾಮಿ, ಡ್ರ್ಯಾಗನ್ ಸಾಹಸ ನಿರ್ದೇಶನ, ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನ, ಆಟ ನಂದೀಶ್ ನೃತ್ಯ ನಿರ್ದೇಶನ ಹಾಗೂ ಬ್ರಹ್ಮ ಕಡಲಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಕಲ್ಯಾಣ್ ದೇವ್, ರಚಿತಾ ರಾಮ್​​, ನರೇಶ್ ವಿ.ಕೆ, ಪೊಸಾನಿ ಕೃಷ್ಣ ಮುರಳಿ, ಸಾಧುಕೋಕಿಲ, ಶಿವರಾಜ್ ಕೆ ಆರ್ ಪೇಟೆ, ಪ್ರಗತಿ, ಅಜಯ್, ಮಹೇಶ್, ಶರೀಫ್, ಸತ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.


ಕನ್ನಡದಲ್ಲೂ ಬರಲಿದೆ ವಿಶಾಲ್ ‘ಚಕ್ರ’ ಸಿನಿಮಾ; ನಾಯಕಿ ಯಾರು ಗೊತ್ತಾ?


ಪುರುಷರಿಗಿಂತ ಮಹಿಳೆಯರೇ ಈ ಕೆಲಸವನ್ನು ಹೆಚ್ಚು ಮಾಡೋದಂತೆ!

Published by:Harshith AS
First published: