Chandan Shetty New Song: `ಲಕ ಲಕ ಲ್ಯಾಂಬೋರ್ಗಿನಿ’ಯಲ್ಲಿ ಬೋಲ್ಡ್​ ಲುಕ್​ನಲ್ಲಿ ಬಂದ ರಚ್ಚು: 10 ರೂಪಾಯಿಗೆ ಸ್ವರ್ಗ ತೋರಿಸಿದ ಚಂದನ್​ ಶೆಟ್ಟಿ!

ಚಂದನ್​ ಶೆಟ್ಟಿ 10 ರೂಪಾಯಿಗೆ ಸ್ವರ್ಗ ತೋರಿಸಿದ್ದಾರೆ. ಅರೇ, ಏನ್​ ಹೇಳುತ್ತಾ ಇದ್ದೀವಿ ಅಂತ ಶಾಕ್​ ಆಯ್ತಾ? ಇಲ್ಲ ಅದೇನು ಅಂದರೆ, ಚಂದನ್ ಶೆಟ್ಟಿ ಪ್ರತಿವರ್ಷ ಹೊಸ ವರ್ಷಕ್ಕೆ ಹೊಸ ಆಲ್ಬಮ್​ ಸಾಂಗ್​ ರಿಲೀಸ್​ ಮಾಡುತ್ತಾರೆ. ಹಾಗೇ ಈ ವರ್ಷವೂ,  ಅವರ ‘ಲಕ ಲಕ ಲ್ಯಾಂಬೋರ್ಗಿನಿ’(Laka Laka Lamborghini)ಎಂಬ ಆಲ್ಬಂ ಸಾಂಗ್​ ರಿಲೀಸ್ ಮಾಡಿದ್ದಾರೆ

ಚಂದನ್ ಶೆಟ್ಟಿ, ರಚಿತಾ ರಾಮ್​

ಚಂದನ್ ಶೆಟ್ಟಿ, ರಚಿತಾ ರಾಮ್​

  • Share this:
ಕನ್ನಡ ಹಾಡುಗಳಿಗೆ ಪಬ್(Pub)​, ಪಾರ್ಟಿ(Party)ಗಳಲ್ಲಿ ಸ್ಥಾನ ಇರಲಿಲ್ಲ. ಕೇವಲ ಹಿಂದಿ, ಇಂಗ್ಲಿಷ್​ ಹಾಡುಗಳನ್ನು ಪಬ್​, ಪಾರ್ಟಿಗಳಲ್ಲಿ ಪ್ರಸಾರ ಮಾಡುತ್ತಿದ್ದರು. ಆದರೆ, ಇದಕ್ಕೆ ಫುಲ್​ಸ್ಟಾಪ್​ ಇಟ್ಟಿದ್ದು ಚಂದನ್​ ಶೆಟ್ಟಿ(Chandan Shetty) ಎಂದರೇ ತಪ್ಪಾಗಲ್ಲ. ಯಾಕೆಂದರೆ ಇವರು ಮಾಡಿದ ‘ಮೂರೇ ಮೂರು ಪೆಗ್ಗಿ’ಗೆ ಹಾಡು ಇದೆಯಲ್ಲಾ ಅಬ್ಬಬ್ಬಾ..! ಯಾರು ಯೋಚನೆ ಮಾಡಿರದ ರೀತಿಯಲ್ಲಿ ಸಖತ್​ ಹಿಟ್​(Hit) ಆಗಿತ್ತು. ಕನ್ನಡ ಕೇಳಿಸದ ಪಬ್​, ಪಾರ್ಟಿಗಳಲ್ಲಿ ಈ ಹಾಡು ಕೇಳಿಸಿತ್ತು. ಯಾವುದೇ ಪಾರ್ಟಿ ಇರಲಿ, ಅಲ್ಲಿ ಈ ಸಾಂಗ್​ ಇರಲೇ ಬೇಕಿತ್ತು. ಇದಾದ ಬಳಿಕ ಪಕ್ಕಾ ಚಾಕೋಲೆಟ್ ಗರ್ಲ್(Chocolate Girl) ಜೊತೆ ಬಂದಿದ್ದ ಚಂದನ್​ ಶೆಟ್ಟಿ ಪಡ್ಡೆ ಹೈಕ್ಳ ಮನಗೆದ್ದಿದ್ದರು. ಇತ್ತೀಚೆಗೆ ಪಾರ್ಟಿ ಫ್ರಿಕ್(Party Freak)​ ಆಗಿದ್ದ ಚಂದನ್​ ಶೆಟ್ಟಿ ನಿವೇದಿತಾ ಗೌಡ(Nivedita Gowda) ಅವರನ್ನು ಮದುವೆಯಾದ ಬಳಿಕ ಫ್ಯಾಮಿಲ್ ಮ್ಯಾನ್​ ಆಗಿದ್ದಾರೆ. ಆದರೆ ಈಗ ಅವರು 10 ರೂಪಾಯಿಗೆ ಸ್ವರ್ಗ ತೋರಿಸಿದ್ದಾರೆ. ಅರೇ, ಏನ್​ ಹೇಳುತ್ತಾ ಇದ್ದೀವಿ ಅಂತ ಶಾಕ್​ ಆಯ್ತಾ? ಇಲ್ಲ ಅದೇನು ಅಂದರೆ, ಚಂದನ್ ಶೆಟ್ಟಿ ಪ್ರತಿವರ್ಷ ಹೊಸ ವರ್ಷಕ್ಕೆ ಹೊಸ ಆಲ್ಬಮ್​ ಸಾಂಗ್​ ರಿಲೀಸ್​ ಮಾಡುತ್ತಾರೆ. ಹಾಗೇ ಈ ವರ್ಷವೂ,  ಅವರ ‘ಲಕ ಲಕ ಲ್ಯಾಂಬೋರ್ಗಿನಿ’(Laka Laka Lamborghini)ಎಂಬ ಆಲ್ಬಂ ಸಾಂಗ್​ ರಿಲೀಸ್ ಮಾಡಿದ್ದಾರೆ. ರಿಲೀಸ್​ ಆದ ಒಂದೇ ದಿನದಲ್ಲಿ ಎಲ್ಲರ ಬಾಯಲ್ಲೂ ‘ಲಕ ಲಕ’ದ್ದೇ ಮಾತು..!

`ಲಕ ಲಕ ಲ್ಯಾಂಬೋರ್ಗಿನಿ’ಯಲ್ಲಿ ಬೋಲ್ಡ್​ ಲುಕ್​ನಲ್ಲಿ ಬಂದ ರಚ್ಚು!

ಹೌದು, ರಚಿತಾ ರಾಮ್​ ಜೊತೆ ಚಂದನ್ ಶೆಟ್ಟಿ ಹಾಡು ಮಾಡುತ್ತಿದ್ದಾರೆ ಎಂಬ ವಿಚಾರ ಗೊತ್ತಾದಾಗಲೇ ಈ ಬಾರಿ ಚರ್ಚೆಯಾಗಿತ್ತು. ಇದೀಗ ಹಾಡು ಬಿಡುಗಡೆಯಾಗಿದೆ. ಲಕ ಲಕ ಲ್ಯಾಂಬೋರ್ಗಿನಿ ಎಂಬ ಬೊಂಬಾಟ್ ಹಾಡನ್ನು ಖಾಸಗಿ ಹೋಟೆಲ್​ವೊಂದರಲ್ಲಿ ಲಾಂಚ್ ಮಾಡಿದ್ದಾರೆ. 3 ಪೆಗ್​, ಚಾಕೊಲೇಟ್​ ಗರ್ಲ್​, ಪಾರ್ಟಿ ಫ್ರೀಕ್​ ಹೀಗೆ ಹಲವು ಆಲ್ಬಂ ಹಾಡುಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ರ‍್ಯಾಪರ್ ಹಾಗೂ ಸಂಗೀತ ನಿರ್ದೇಶಕ ಅಂದರೆ ಅದು ಚಂದನ್ ಶೆಟ್ಟಿ. ಸಾಂಗ್​ ರೀಲಿಸ್ ಆದಾಗಿನಿಂದಲೂ ಈ ಹಾಡು ಟ್ರೆಂಡಿಂಗ್​ನಲ್ಲಿದೆ.

ಇದನ್ನು ಓದಿ :Youtubeನಲ್ಲಿ ದಾಖಲೆ ಬರೆದ Samanthaರ ಊ ಅಂಟಾವ.. ಊ ಊ ಅಂಟಾವ.. ಹಾಡು!

ಸಖತ್​ ಬೋಲ್ಡ್​ ಲುಕ್​ನಲ್ಲಿ ಡಿಂಪಲ್ ​ಕ್ವೀನ್​!


ಹೊಸ ಪಾರ್ಟಿ ಸಾಂಗ್​ನಲ್ಲಿ ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವೀನ್​ ರಚಿತಾ ರಾಮ್​(Dimple Queen Rachitha  Ram)ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಪಾರ್ಟಿ ಸಾಂಗ್​ನಲ್ಲಿ ಸಖತ್​ ಆಗಿ ಡ್ಯಾನ್ಸ್ ಮಾಡಿದ್ದರಂತೆ. ಈ ಹಾಡಿನ ಮೂಲಕ ಡಿಂಪಲ್ ಕ್ವೀನ್ ರಚಿತಾ ರಾಮ್ ಮ್ಯೂಸಿಕ್ ಆಲ್ಬಂ ಕ್ಷೇತ್ರಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ್ದಾರೆ.

ಹಾಡಿನಲ್ಲಿ ರಚಿತಾ ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. ಇನ್ನು ಸಂಗೀತ, ಸಾಹಿತ್ಯ, ಗಾಯನ ಜೊತೆಗೆ ರಚ್ಚು ಜೊತೆ ಚಂದನ್ ಶೆಟ್ಟಿ ಸಖತ್ ಸ್ಟೆಪ್ ಹಾಕಿದ್ದಾರೆ. ‘ಲಕ ಲಕ ಲ್ಯಾಂಬೋರ್ಗಿನಿ’ ಆಲ್ಬಂ ಹಾಡನ್ನ ಪ್ರಖ್ಯಾತ ನಿರ್ದೇಶಕ ನಂದ ಕಿಶೋರ್ ನಿರ್ದೇಶಿಸಿದ್ದಾರೆ. ಸಿನಿಮಾ ನಿರ್ದೇಶನ ಜೊತೆಗೆ ಮೊದಲ ಬಾರಿಗೆ ಆಲ್ಬಂ ಹಾಡನ್ನ ನಿರ್ದೇಶನ ಮಾಡಿರೊದು ಹೊಸ ಅನುಭವ ಎಂದು ನಂದ ಕಿಶೋರ್​ ಹೇಳಿದರು.


ಇದನ್ನು ಓದಿ : ಆಸ್ಪತ್ರೆಗೆ ದಾಖಲಾದ ರಚಿತಾ ರಾಮ್​ ಡಿಸ್ಚಾರ್ಜ್: ಪ್ರಚಾರದ ಭರಾಟೆಯಲ್ಲಿ ತಿನ್ನುವುದನ್ನೇ ಮರೆತ್ರಾ ಡಿಂಪಲ್ ಕ್ವೀನ್​?

ಹೊಸವರ್ಷಕ್ಕೆ ಚಂದನ್​ ಶೆಟ್ಟಿ ಸಾಂಗ್​ ಗಿಫ್ಟ್​!

ಚಂದನ್​ ಶೆಟ್ಟಿ ಹಾಡುಗಳು ಎಂದರೆ ಪಕ್ಕಾ ಡ್ಯಾನ್ಸ್​ಗೆ ಹೇಳಿ ಮಾಡಿಸಿದಂತಿರುತ್ತವೆ. ಈ ಹಾಡಿಗೆ ಮುರಳಿ ಮಾಸ್ಟರ್​ ನೃತ್ಯ ನಿರ್ದೇಶನ ಮಾಡಿದ್ದಾರೆ. ಇನ್ನು ಶೇಖರ್​ ಚಂದ್ರ ಹಾಡನ್ನ ಬಹಳ ಚೆನ್ನಾಗಿ ಛಾಯಾಗ್ರಹಣ ಮಾಡಿದ್ದಾರೆ.   Published by:Vasudeva M
First published: