Rachita Ram: ಅಂದು ಕಣ್ಣೀರು.. ಇಂದು ಮತ್ತೆ ಕೈಯಲ್ಲಿ ಎಣ್ಣೆ ಬಾಟ್ಲು, ಲಿಪ್​ ಲಾಕ್​ ಸೀನ್​! ಎಲ್ಲ ಡವ್ವು ಎಂದ ಫ್ಯಾನ್ಸ್​

‘ಐ ಲವ್ ಯೂ’ ಚಿತ್ರದ ‘ಮಾತನಾಡಿ ಮಾಯವಾದೆ’ ಸಾಂಗ್​ನಲ್ಲಿ ಹಸಿ ಬಿಸಿ ದೃಶ್ಯಗಳಲ್ಲಿ ಮೈ ಚಳಿ ಬಿಟ್ಟು ರಚಿತಾ ಉಪ್ಪಿ ಜೊತೆ ಕಾಣಿಸಿಕೊಂಡಿದ್ದರು. ಆದರೆ, ಅದ್ಯಾಕೋ ಗೊತ್ತಿಲ್ಲ ‘ಐ ಲವ್ ಯೂ’ ಸಿನಿಮಾ ರಿಲೀಸ್ ಆದಮೇಲೆ  ಹಾಟ್ (Hot) ಆಗಿ ಕಾಣಿಸಿದಕ್ಕೆ ಕಣ್ಣೀರಿಟ್ಟಿದ್ದರು.

ನಟಿ ರಚಿತಾ ರಾಮ್​

ನಟಿ ರಚಿತಾ ರಾಮ್​

 • Share this:
  ‘ಐ ಲವ್ ಯೂ’ (I Love You) ರಿಯಲ್ ಸ್ಟಾರ್ ಉಪೇಂದ್ರ (Real Star Upendra), ರಚಿತಾ ರಾಮ್ (Rachita Ram) ಅಭಿನಯದ ಆರ್. ಚಂದ್ರು (R.Chandru) ನಿರ್ದೇಶನದ ಸಿನಿಮಾ. ಬಾಕ್ಸಾಫೀಸ್(Box Office)​ನ ಹಿಟ್ ಸಿನಿಮಾ. ಈ ಸಿನಿಮಾದ ಹಾಡುಗಳು ಎಷ್ಟು ಸದ್ದು ಮಾಡಿದ್ವೋ ಅದಕ್ಕಿಂತ ಮೂರು ಪಟ್ಟು ಚರ್ಚೆ ಆಗಿದ್ದು, ರಚಿತಾ ಹಾಟ್ ಅವತಾರ. ‘ನಾನು ಇನ್ಮುಂದೆ  ಇಂತ ದೃಶ್ಯಗಳಲ್ಲಿ ಕಾಣಿಸಲ್ಲ’ ಅಂತ ಹೇ ‘ಐ ಲವ್ ಯೂ’ ಚಿತ್ರದ ‘ಮಾತನಾಡಿ ಮಾಯವಾದೆ’ ಸಾಂಗ್​ನಲ್ಲಿ ಹಸಿ ಬಿಸಿ ದೃಶ್ಯಗಳಲ್ಲಿ ಮೈ ಚಳಿ ಬಿಟ್ಟು ರಚಿತಾ ಉಪ್ಪಿ ಜೊತೆ ಕಾಣಿಸಿಕೊಂಡಿದ್ದರು. ಆದರೆ, ಅದ್ಯಾಕೋ ಗೊತ್ತಿಲ್ಲ ‘ಐ ಲವ್ ಯೂ’ ಸಿನಿಮಾ ರಿಲೀಸ್ ಆದಮೇಲೆ  ಹಾಟ್ (Hot) ಆಗಿ ಕಾಣಿಸಿದಕ್ಕೆ ಕಣ್ಣೀರಿಟ್ಟಿದ್ದರು. ರಚಿತಾರ ಈ ಕಣ್ಣೀರು ನೋಡಿ ನೆಟ್ಟಿಗರು ಇದು ಪ್ರಚಾರದ ಗಿಮಿಕ್ (Gimmick) ಚಿತ್ರದ ಕತೆ ಕೇಳಿಯೇ ಸಿನಿಮಾ ಒಪ್ಪಿರುತ್ತಾರೆ ಅಂತ ಮಾತನಾಡಿಕೊಂಡಿದ್ದರು. ಇದೆಲ್ಲ ಸಿನಿಮಾ ಪ್ರಚಾರಕ್ಕೆ ಮಾಡ್ತಿರುವ ಗಿಮಿಕ್ ಅಂತ ನೆಟ್ಟಿಗರು ರಚಿತಾ ರಾಮ್ ಕಾಲೆಳೆದಿದ್ದರು.

  ಏಕ್​ ಲವ್​ ಯಾದಲ್ಲಿ ಮತ್ತಷ್ಟು ಹಾಟ್​ ಆಗಿ ಕಾಣಿಸಿಕೊಂಡ ರಚ್ಚು!

  ರಚಿತಾ ಪ್ರಚಾರಕ್ಕಾಗಿ ನಾನು ಕಣ್ಣಿರು ಹಾಕುತ್ತಿಲ್ಲ. ನಾನು ಇಂತ ಪಾತ್ರದಲ್ಲಿ ನಟಿಸಿರೋದು ನನ್ನ ತಂದೆಗೆ ತುಂಬಾ ನೋವಾಗಿದೆ ಎಂದು ಕ್ಲಾರಿಟಿ ಕೊಟ್ಟಿದ್ದರು. ಆದರೆ ಈಗ ಏಕ್ ಲವ್ ಯಾ ಚಿತ್ರ ನೋಡಿದವರು  ಅಂದು ರಚಿತಾ ರಾಮ್  ನಿಜವಾಗಲೂ ‘ಐ ಲವ್ ಯೂ’ ಸಿನಿಮಾದ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಕಣ್ಣೀರಿಟ್ಟಿದ್ದರು ಅಂತ ಅನ್ನಿಸುತ್ತೆ ಅಂತಿದ್ದಾರೆ.. ಯಾಕಂದ್ರೆ ರಚಿತಾ ನಾನು ಇನ್ನುಮುಂದೆ ಹಸಿಬಿಸಿ ದೃಶ್ಯ ಗಳಲ್ಲಿ ನಟಿಸಲ್ಲಅಂತ ಹೇಳಿದ್ದರು. ಈ ಮಾತು ಜನರ ಮನಸ್ಸಿಂದ ಮರೆಯುವ ಮುನ್ನವೇ ಮತ್ತೆ ರಚಿತಾ ಮೈ ಚಳಿ ಬಿಟ್ಟು ಎಣ್ಣೆ ಬಾಟ್ಲು ಹಿಡಿದು, ಸಿಗರೇಟ್ ಸೇದಿ ಲಿಪ್ ಲಾಕ್ ದೃಶ್ಯಗಳಲ್ಲಿ ಸಿನಿರಸಿಕರಿಗೆ ದರ್ಶನ ಕೊಟ್ಟಿದ್ದಾರೆ.

  ಬೋಲ್ಡ್​ ಅವತಾರದಲ್ಲಿ ನಟಿ ರಚಿತಾ ರಾಮ್​!

  ಹೌದು ಪ್ರಚಾರ ಪ್ರಿಯ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದಲ್ಲಿ ರಚಿತಾ ಯಾವ ದೃಶ್ಯಗಳಲ್ಲಿ ನಟಿಸಲ್ಲ ಅಂತ ಹೇಳಿದ್ದರೋ,  ಅಥಂದ್ದೇ ದೃಶ್ಯಗಳಲ್ಲಿ ರಚಿತಾ ಕಾಣಿಸಿದ್ದಾರೆ. ಅಷ್ಟಕ್ಕೂ ರಚಿತಾ ‘ಏಕ್ ಲವ್ ಯಾ’ ಚಿತ್ರದಲ್ಲಿ ಅಷ್ಟೂ ಬೋಲ್ಡ್ ಆಗಿ ನಟಿಸುವ ಅವಶ್ಯಕತೆ ಇರಲಿಲ್ಲ ಅಂತಿದ್ದಾರೆ. ‘ಏಕ್ ಲವ್ ಯಾ’ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವುದಕ್ಕೆ ಚಿತ್ರದ ಕತೆ ಕಾರಣ ಚಿತ್ರದ ಕತೆ ಡಿಮ್ಯಾಂಡ್ ಮಾಡಿತ್ತು, ಅದಕ್ಕೆ ನಾನು ಮತ್ತೆ ಬೋಲ್ಡ್ ಆಗಿ ನಟಿಸಿದ್ದೀನಿ ಅಂತ ಸಾಕಷ್ಟು ಸಲ ರಚಿತಾ ಹೇಳಿದ್ದರು.

  ಇದನ್ನೂ ಓದಿ: Puneeth Rajkumar ಅಲ್ಲ ಇವರು ಜ್ಯೂ.'ಅಪ್ಪು'! 'ಮಾರಕಾಸ್ತ್ರ' ಹಿಡಿದು ಬರ್ತಿದ್ದಾರೆ ಆನಂದ್

  ಸಿನಿಮಾ ನೋಡಿದವರು ರಚ್ಚು ಬಗ್ಗೆ ಹೇಳಿದ್ದೇನು!

  ಸಿನಿಮಾ ನೋಡಿದವರು ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಹೇಳ್ತಿದ್ದಾರೆ. ‘ಏಕ್ ಲವ್ ಯಾ’ ರಚಿತಾ ಪಾತ್ರಕ್ಕೆ ನಾರ್ಮಲ್ ಆಗಿದ್ದರು ಆಗುತ್ತಿತ್ತು. ಆದರೆ, ಕಮರ್ಷಿಯಲ್ ದೃಷ್ಟಿಯಿಂದ ರಚಿತಾ ಪಾತ್ರವನ್ನು ಬೋಲ್ಡ್ ಆಗಿ ತೋರಿಸಿದ್ದಾರೆ ಪ್ರೇಮ್. ಅಲ್ಲದೆ ಅಂದು ‘ಐ ಲವ್ ಯೂ’ ಚಿತ್ರದಲ್ಲಿ ನಾನು ಬೋಲ್ಡ್ ಆಗಿ ನಟಿಸ ಬಾರದಿತ್ತು ಅಂತ  ರಚಿತಾ ಕಣ್ಣೀರಿಟ್ಟಿದ್ದು ಪ್ರಚಾರದ ಗಿಮಿಕ್ ಅಷ್ಟೇ ಅಂತಿದ್ದಾರೆ ಏಕ್ ಲವ್ ಯಾ ಸಿನಿಮಾ ನೋಡಿದ ಪ್ರೇಕ್ಷಕರು.

  ಇದನ್ನೂ ಓದಿ: ಮದ್ವೆ ಟ್ರೋಲ್ಸ್​ಗೆಲ್ಲ ಟಕ್ಕರ್​ ಕೊಟ್ರಾ ರಶ್ಮಿಕಾ? ಇದನ್ನು ಕುಡಿದು ಆರಾಮಾಗಿರಿ ಅಂದಿದ್ಯಾಕೆ ಕಿರಿಕ್​ ಬ್ಯೂಟಿ?

  ಇದಲ್ಲದೆ ಏಕ್ ಲವ್ ಯಾ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಕೆಲವು ಪ್ರೇಕ್ಷಕರಿಗೆ ಸಿನಿಮಾ ಒಕೆ ಅನಿಸಿದ್ದರೆ, ಇನ್ನು ಕೆಲವು ಪ್ರೇಕ್ಷಕರಿಗೆ ಸಿನಿಮಾ ಇಷ್ಟವೇ ಆಗಿಲ್ಲ. ಅಷ್ಟೇ ಅಲ್ಲ ಇಂತ ಸಿನಿಮಾಗಳು ಈ ಹಿಂದೆ ಸಾಕಷ್ಟು ಬಂದಿವೆ. ಪ್ರೇಮ್ ಕತೆಯಲ್ಲಿ ಹೊಸತನವೇನು ಇಲ್ಲ. ಆದರೆ,  ಸಿನಿಮಾದಲ್ಲಿ ಸಂಗೀತ ಎಲ್ಲಾ ವರ್ಗದ ಆಡಿಯನ್ಸ್ ಇಷ್ಟ ಆಗುತ್ತೆ. ಅದೇನೆ ಇರಲಿ ದಿ ವಿಲನ್ ಚಿತ್ರದ ಸೋಲಿನ ಬಳಿಕ ಗೆಲುವಿನ ಕುದುರೆ ಏರಲು ಬಾಮೈದನ ಜೊತೆ  ಹೊರಟಿದ್ದ ಪ್ರೇಮ್​ಗೆ ‘ಏಕ್ ಲವ್ ಯಾ’ ಚಿತ್ರವೂ ಕೈ ಹಿಡಿಯೋ ಸಾಧ್ಯತೆ ಕಡಿಮೆ ಇದ್ದು, ಧ್ರುವ ಜೊತೆಗಿನ‌ ಚಿತ್ರದಲ್ಲಾದರೂ ಪ್ರೇಮ್ ಗೆಲುವಿನ ಟ್ರಾಕ್ ಗೆ ವಾಪಸ್ ಬರುತ್ತಾರೆ ಕಾದು ನೋಡಬೇಕು ಅಂತಿದ್ದಾರೆ ಗಾಂಧಿನಗರ ಸಿನಿಮಾ ಪಂಡಿತರು.

  (ವರದಿ- ಸತೀಶ್​ ಎಂ.ಬಿ)
  Published by:Vasudeva M
  First published: