Raayan Raj Sarja: ಹಿಂದೂ-ಕ್ರೈಸ್ತ್ರ ಸಂಪ್ರದಾಯದಂತೆ ನಡೆಯಿತು ಚಿರು ಸರ್ಜಾ ಮಗನ ನಾಮಕರಣ: ಅರ್ಜುನ್ ಸರ್ಜಾ ಕುಟುಂಬ ಗೈರು

Junior Chiru Naming Ceremony: ದಿನ ಜೂನಿಯರ್​ ಚಿರು ಆಗಿದ್ದ ಸರ್ಜಾ ಕುಟುಂಬದ ಕುಡಿಗೆ ಇಂದು ಅಧಿಕೃತ ಹೆಸರು ಸಿಕ್ಕಿದೆ. ಜೂನಿಯರ್ ಚಿರುಗೆ ರಾಯನ್ ರಾಜ್​ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಹಿಂದೂ ಹಾಗೂ ಕ್ರಿಶ್ಚಿಯನ್​ ಎರಡೂ ಧರ್ಮಗಳ ರೀತಿಯಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದೆ.

ಮಗ ರಾಯನ್ ಜತೆ ಮೇಘನಾ ರಾಜ್​

ಮಗ ರಾಯನ್ ಜತೆ ಮೇಘನಾ ರಾಜ್​

  • Share this:
ಚಿರಂಜೀವಿ ಸರ್ಜಾ  (Chiranjeevi Sarja) ಅಗಲಿಕೆ ನಂತರ ಮೇಘನಾ ರಾಜ್ (Meghana Raj)​ ಹಾಗೂ ಚಿರು ಸರ್ಜಾ ಕುಟುಂಬದಲ್ಲಿ ()Chiru Sarja Family ನಗು ಮೂಡಿದ್ದು ಜೂನಿಯರ್ ಚಿರು (Junior Chiru)ಆಗಮನದಿಂದ. ಹೌದು, ಕಳೆದ ವರ್ಷ ಜೂನ್ 7ರಂದು ಚಿರಂಜೀವಿ ಸರ್ಜಾ  (Chiranjeevi Sarja Death) ನಿಧನರಾದರು. ಹೃದಯಾಘಾತದಿಂದ ಚಿರು ಸರ್ಜಾ ಅವರು ಮೃತಪಟ್ಟಾಗ ಮೇಘನಾ ರಾಜ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ನಂತರ ಅಕ್ಟೋಬರ್ 22 ರಂದು ಗಂಡು ಮಗುವಿಗೆ ಜನ್ಮ ಕೊಟ್ಟರು. ಚಿರು ಮರಣದ ನಂತರ ಆಘಾತದಲ್ಲಿದ್ದ ಚಿರು ಹಾಗೂ ಮೇಘನಾ ಕುಟುಂಬದಲ್ಲಿ ಸಂತೋಷ ಹಾಗೂ ಸಂತಸ ತಂದಿದ್ದು ಜೂನಿಯರ್ ಚಿರು.ಜೂನಿಯರ್ ಚಿರುವಿನಲ್ಲೇ ಚಿರಂಜೀವಿ ಅವರನ್ನು ಕಾಣುತ್ತಾ ಎಲ್ಲರೂ ನೋವನ್ನು ಮರೆಯುತ್ತಿದ್ದಾರೆ ಎರಡೂ ಕುಟುಂಬದವರು. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮುದ್ದು ಮಗನಿಗೆ ಈಗ 10 ತಿಂಗಳು ತುಂಬಿದೆ. ಅಕ್ಟೋಬರ್ 22ಕ್ಕೆ ಜೂನಿಯರ್ ಚಿರುಗೆ ಒಂದು ವರ್ಷ ತುಂಬಲಿದೆ. 

10 ತಿಂಗಳ‌ ನಂತರ ಮಗನಿಗೆ ನಾಮಕರಣ ಮಾಡಲು ಮೇಘನಾ ರಾಜ್​ ಹಾಗೂ ಕುಟುಂಬದವರು ಕಳೆದ ಕೆಲವು ದಿನಗಳಿಂದ ಸಿದ್ದತೆ ಆರಂಭಿಸಿದ್ದರು. ಇಂದು ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೋಟೆಲ್​ನಲ್ಲಿ ನಾಮಕರಣ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ಅವರ ಮಗನಿಗೆ ರಾಯನ್ ಎಂದು ಹೆಸರಿಡಲಾಯಿತು. ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಮೇಘನಾ ರಾಜ್​ ಹಾಗೂ ಚಿರು ಸರ್ಜಾ ಅವರ ಕುಟುಂಬದವರು ಭಾಗಿಯಾಗಿದ್ದರು.


View this post on Instagram


A post shared by Meghana Raj Sarja (@megsraj)


ಇಷ್ಟು ದಿನ ಜೂನಿಯರ್​ ಚಿರು ಆಗಿದ್ದ ಸರ್ಜಾ ಕುಟುಂಬದ ಕುಡಿಗೆ ಇಂದು ಅಧಿಕೃತ ಹೆಸರು ಸಿಕ್ಕಿದೆ. ಜೂನಿಯರ್ ಚಿರುಗೆ ರಾಯನ್ ರಾಜ್​ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಇನ್ನು ರಾಯನ್ ಎಂದರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥವಂತೆ.

ಇದನ್ನೂ ಓದಿ: Raayan Raj Sarja: ಚಿರು ಸರ್ಜಾ-ಮೇಘನಾ ರಾಜ್​ ಮಗನ ಹೆಸರು ರಾಯನ್ ರಾಜ್ ಸರ್ಜಾ: ಹೆಸರಿನ ಅರ್ಥ ಹೀಗಿದೆ..!

ಮುದ್ದು ಮಗನ ನಾಮಕರಣದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದು, ಅದರಲ್ಲಿ ಮೇಘನಾ ರಾಜ್ ಸರ್ಜಾ, ಧ್ರುವ ಸರ್ಜಾ, ಪ್ರಮೀಳಾ ಜೋಷಾಯಿ, ಸುಂದರ್ ರಾಜ್, ಪ್ರೇರಣಾ ಶಂಕರ್, ತೇಜ್, ಸೂರಜ್ ಸರ್ಜಾ ಭಾಗಿಯಾಗಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಂದರ್ ರಾಜ್ ಅವರು, ಚಿರು ಮರುಜನ್ಮ‌ಪಡೆದು ನಮ್ಮ‌ಬಳಿಗೆ ಬಂದಿದ್ದಾನೆ. ಅವಿಗೆ ಇಂದು ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದೇವೆ. ಸರ್ಜಾ ಕುಟುಂಬ ಹಾಗೂ ನಮ್ಮ ಕುಟುಂಬಕ್ಕೆ ಕೊಂಡಿಯಾಗಿ ನಮ್ಮ ಮೊಮ್ಮಗ ಇದ್ದಾನೆ. ನೀವೆ ನೋಡಿದ ಹಾಗೆ ನಮ್ಮ ಮೊಮ್ಮಗ ಚಿರು ಪ್ರತಿರೂಪ ಹೊತ್ತು ಬಂದಿದ್ದಾನೆ. ಚಿರು ಯಾವಾಗಲೂ ನನ್ನ ಬಳಿ ಫಿನೀಕ್ಸ್ ತರ ಎದ್ದು ಬರ್ತೀನಿ ಅಂತಿದ್ದ. ಆದರೆ, ಅವನು ಯಾಕೇ ಅ ರೀತಿ ಹೇಳ್ತಿದ್ದಾನೆ ಅಂತ ನನಗೆ ಈಗ ಅರ್ಥವಾಗಿದೆ. ಆ ಫಿನಿಕ್ಸ್ ಹಕ್ಕಿ ಇಂದು ಮೊಮ್ಮಗನಾಗಿ ಬಂದಿದ್ದಾನೆ. ನಾನೊಬ್ಬ ತಾತನಾಗಿ ಒಬ್ಬ ಸ್ನೇಹಿತನಾಗಿ ಅವನ ಜೊತೆ ಇರ್ತೀನಿ. ನಾವು ಎರಡು ಧರ್ಮಗಳ ರೀತಿ ನಾಮಕರಣ ಮಾಡಿದ್ದೀವಿ. ಮೊದಲು ಚರ್ಚ್​ನಲ್ಲಿ ನಂತರ ಹೋಟೆಲ್​ನಲ್ಲಿ ನಾಮಕರಣ ಕಾರ್ಯಕ್ರಮ ನೆರವೇರಿತು. ಆದರೆ, ನಾನು ಮನೋಧರ್ಮವನ್ನು ನಂಬುವ ವ್ಯಕ್ತಿ. ಕೊರೋನಾದಿಂದ ನಾವು ಯಾರನ್ನೂ ಕರೆಯಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಗೈರಾದ ಅರ್ಜುನ್ ಸರ್ಜಾ ಕುಟುಂಬ

ರಾಯನ್ ರಾಜ್ ಸರ್ಜಾ ಹುಟ್ಟಿದಾಗಲೂ ಸಿನಿಮಾ ಚಿತ್ರೀಕರಣದಲ್ಲಿದ್ದ ಅರ್ಜುನ್ ಸರ್ಜಾ ಅವರು ಎಲ್ಲವನ್ನೂ ಬಿಟ್ಟು ಮಗು ನೋಡಲು ಬಂದಿದ್ದರು. ಆದರೆ ಈಗ ನಾಮಕರಣಕ್ಕೆ ಗೈರಾಗಿದ್ದಾರೆ. ಕಾರಣ,  ಅರ್ಜುನ್ ಸರ್ಜಾ ಅವರು ಕುಟುಂಬ ಸಮೇತ ದಕ್ಷಿಣ ಆಫ್ರಿಕಾದಲ್ಲಿ ಇದ್ದಾರಂತೆ.

ನಂತರ ಮಾತನಾಡಿದ ಮೇಘನಾ ರಾಜ್​ ಸರ್ಜಾ, ನನ್ನ ಮಗ ಹುಟ್ಟಿದಾಗಿನಿಂದ ಎಲ್ಲರೂ ಕೇಳುತ್ತಿದ್ದ ಪ್ರಶ್ನೆ ಒಂದೆ. ನಾಮಕರಣ ಯಾವಗ ಅಂತ? ನನಗೆ ಅವನಿಗೆ ಯಾವ ಹೆಸರಿಡಬೇಕು ಅಂತ ಗೊತ್ತಿರಲಿಲ್ಲ. ಆದರೆ, ನನ್ನ ಮನಸ್ಸಿನಲ್ಲಿ ರಾಯನ್ ಎಂಬದು ಇತ್ತು. ಅಲ್ಲದೆ ಚಿರು ಯಾವಾಗಲೂ ನಮಗೆ ರಾಜನಾಗಿದ್ರು. ಅ ರಾಜನ ಮಗ ಯುವರಾಜ ಅದಕ್ಕಾಗಿ ಅವನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ವಿದ್ದೇವೆ. ನಮ್ಮ ಕುಟುಂಬಕ್ಕೆ ಸ್ವರ್ಗದ ಬಾಗಿಲು ತೆಗದಿದ್ದು ನನ್ನ ಮಗ ಬಂದ ನಂತರ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ಮಗಳು ನಮ್ಮ ಜವಾಬ್ದಾರಿ: ಪ್ರಮೀಳಾ ಜೋಷಾಯಿ

ಚಿರು ಹೋದ ನಂತರ ನಮ್ಮ ಕುಟುಂಬದ ಜೊತೆ ಚಿರು ಸ್ನೇಹಿತರು ಸದಾ ಜೊತೆದಿದ್ದಾರೆ. ಅವಳಿಗೆ ಯಾರು ಏನು ಕೊಟ್ಟಿಲ್ಲ. ಏನು ಕೊಡೋದು ಬೇಕಿಲ್ಲ. ನನ್ನ ಮಗಳು ಹುಟ್ಟಿದ ದಿನದಿಂದ ಈ ಕ್ಷಣದವರೆಗೂ ಅವಳ ಜವಾಬ್ದಾರಿ ನಮ್ಮದು. ಮುಂದಿನ ದಿನಗಳಲ್ಲಿಯೂ ನಾವೇ ನಮ್ಮ ಮಗಳ ಜವಾಬ್ದಾರಿ ಹೊರುತ್ತೇವೆ. ಯಾರು ಅವಳ ಜವಬ್ದಾರಿ ಹೊರಬೇಕಿಲ್ಲ. ಪ್ರಚಾರರಕ್ಕೆ ಯಾರ್ಯರೋ ಏನೇನೋ ಹೇಳ್ತಾರೆ ಎಂದು ಹೇಳಿದ್ದಾರೆ ಪ್ರಮೀಳಾ ಜೋಷಾಯ್​.

ಇದನ್ನೂ ಓದಿ:Sidharth Shukla Funeral: ಇಂದು ನಡೆಯಲಿದೆ ನಟ ಸಿದ್ಧಾರ್ಥ್​ ಶುಕ್ಲಾ ಅಂತ್ಯ ಸಂಸ್ಕಾರ

ನಮ್ಮ ಅಣ್ಣನ ಮಗ ಅವನ ಹೆಸರು ರಾಯನ್ ರಾಜ್ ಸರ್ಜಾ. ಅವನ ಹೆಸರಲ್ಲೇ ಇರೋ ತರ ರಾಜ್ ಮತ್ತು ಸರ್ಜಾ ಕುಟುಂಬ ಸದಾ ಒಂದಾಗಿರುತ್ತೇವೆ. ಯಾರು ಏನೇ ಮಾಡಿದ್ರು ನಮ್ಮ ಕುಟುಂಬವನ್ನು ಬೇರೆ ಮಾಡೊಕೆ ಆಗಲ್ಲ. ಈ ಸಮಯದಲ್ಲಿ ನಾನು ನಮ್ಮ ಅಂಕಲ್ ಮತ್ತು ಅಣ್ಣನ ನೆನಪಿಸಿಕೊಳ್ಳೋಕೆ ಇಷಟಪಡುತ್ತೇನೆ. ಅವನಿಗೆ ರಾಯನ್ ರಾಜ್ ಸರ್ಜಾ ಅಂತ ಹೆಸರು ಇಟ್ಟಿದ್ದೇವೆ. ಅವನು ರಾಜನಂತೆಯೆ ಇರ್ತಾನೆ ಎಂದಿದ್ದಾರೆ ಧ್ರುವ ಸರ್ಜಾ.
Published by:Anitha E
First published: