News18 India World Cup 2019

ಸಿನಿಮಾ ಆಗಲಿದೆ 'ಇಸ್ರೋ ಬೇಹುಗಾರಿಕಾ ಪ್ರಕರಣ' !

news18
Updated:July 21, 2018, 7:25 PM IST
ಸಿನಿಮಾ ಆಗಲಿದೆ 'ಇಸ್ರೋ ಬೇಹುಗಾರಿಕಾ ಪ್ರಕರಣ' !
news18
Updated: July 21, 2018, 7:25 PM IST
-ನ್ಯೂಸ್ 18 ಕನ್ನಡ

ನಾಲ್ಕು ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಕಾಲಿವುಡ್​​ಗೆ ಕಂಬ್ಯಾಕ್ ಮಾಡಿದ್ದ ನಟ ಮಾಧವನ್ ಎಲ್ಲರೂ ಅಚ್ಚರಿ ಪಡುವಂತೆ 'ಇರುದಿ ಸುಟ್ರು' ಎಂಬ ಭರ್ಜರಿ ಚಿತ್ರವನ್ನು ಕೊಟ್ಟಿದ್ದರು. ಇದರ ಬಳಿಕ 'ವಿಕ್ರಮ್ ವೇದಾ' ಮೂವಿಯಲ್ಲಿ ಸೂಪರ್ ಕಾಪ್​ ಆಗಿ ಕಾಣಿಸಿಕೊಂಡ ಮಾಧವನ್ ಮತ್ತೊಮ್ಮೆ ಹಿಟ್​ ಸಿನಿಮಾಗಳ ಸರ್ದಾರ ಎನಿಸಿಕೊಂಡಿದ್ದರು. ಇದೀಗ ಮ್ಯಾಡಿ ತ್ರಿಭಾಷಾ ಚಿತ್ರವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ಅದು ಅಂತಿಂಥ ಕಥೆಯ ಚಿತ್ರವಲ್ಲ ಎಂಬುದೇ ವಿಶೇಷ. ಭಾರತದ ಪ್ರಸಿದ್ಧ ವಿಜ್ಞಾನಿ ನಂಬಿ ನಾರಾಯಣ್ ಜೀವನಾಗಾಥೆ ಸಿನಿಮಾವಾಗುತ್ತಿದೆ. ಈ ಸಿನಿಮಾದಲ್ಲಿ ಇಸ್ರೋ ವಿಜ್ಞಾನಿ ನಂಬಿ ಅವರ ಪಾತ್ರದಲ್ಲಿ ಮಾಧವನ್ ಅಭಿನಯಿಸಲಿದ್ದಾರೆ. ದೇಶದ ಕ್ರಯೋಜೆನಿಕ್ ತಂತ್ರಜ್ಞಾನಕ್ಕೆ ಮುನ್ನುಡಿ ಬರೆದ ನಂಬಿ ನಾರಾಯಣ್ ಕಥೆಯನ್ನು ಚಿತ್ರ ಮಾಡುತ್ತಿರುವುದು ನಿರ್ದೇಶಕ ಅನಂತ್ ಮಾಧವನ್.

ದೇಶದ ಗಮನ ಸೆಳೆದಿದ್ದ 'ಇಸ್ರೋ ಬೇಹುಗಾರಿಕಾ ಪ್ರಕರಣ'ದ ಮುಖ್ಯ ಆರೋಪಿ ಎಂದು ವಿಜ್ಞಾನಿ ನಂಬಿ ನಾರಾಯಣ್ ಅವರನ್ನು ಬಿಂಬಿಸಲಾಗಿತ್ತು. 70ರ ದಶಕದಲ್ಲೇ ಭಾರತದ ರಾಕೆಟ್ ತಂತ್ರಜ್ಞಾನದಲ್ಲಿ ವಿಕಾಸ್​ ಎಂಜಿನ್​ ಅನ್ನು ವಿನ್ಯಾಸಗೊಳಿಸಿದ ಕೀರ್ತಿ ನಂಬಿ ಅವರಿಗೆ ಸಲ್ಲುತ್ತದೆ.

ಅಮೆರಿಕವನ್ನು ಎದುರಾಕಿಕೊಂಡು ಭಾರತ ಬಾಹ್ಯಕಾಶ ತಂತ್ರಜ್ಞಾನದಲ್ಲಿ ಸೂಪರ್ ಪವರ್​ ಆಗಬೇಕೆಂದು ಅವರು ಹಂಬಲಿಸಿದ್ದರು. ಆದರೆ 1994ರಲ್ಲಿ ಇಸ್ರೋ ತಂತ್ರಜ್ಞಾನವನ್ನು ಶತ್ರು ರಾಷ್ಟ್ರಗಳಿಗೆ ಮಾರಲು ಹೊರಟಿದ್ದಾರೆ ಎಂದು ಆರೋಪ ಹೊರಿಸಿ ಅವರ ವೃತ್ತಿಜೀವನವನ್ನು ಮೊಟಕುಗೊಳಿಸಲಾಗಿತ್ತು.

1998ರಲ್ಲಿ ಈ ಪ್ರಕರಣದಿಂದ ವಿಜ್ಞಾನಿ ನಂಬಿ ನಾರಾಯಣ್ ದೋಷಮುಕ್ತರಾಗಿದ್ದರು. ಈ ಒಂದು ಪ್ರಕರಣದ ಹಿಂದೆ ಅಮೆರಿಕ ಬೇಹಗಾರಿಕಾ ಸಂಸ್ಥೆಯ ಕೈವಾಡವಿತ್ತು ಎಂಬುದು ಈಗಲೂ ನಂಬಲಾಗುತ್ತಿದೆ. ತೆರೆ ಮರೆಯಲ್ಲೇ ಉಳಿದಿರುವ ಈ ಕಥೆಯನ್ನು ಮೂರು ಭಾಷೆಗಳಲ್ಲಿ ಸಿನಿಮಾವಾಗಿಸಲು ಅನಂತ್ ಮತ್ತು ತಂಡ ಸಿದ್ಧವಾಗಿದೆ.
Loading...

ನಂಬಿ ನಾರಾಯಣ್ ಅವರ ಜೀವನಚರಿತ್ರೆಯನ್ನು ಬೆಳ್ಳಿ ಪರದೆಯಲ್ಲಿ ಮೂಡಿಸುವ ಮೂಲಕ ಅಸಲಿ ಸತ್ಯವನ್ನು ಜಗತ್ತಿಗೆ ತಿಳಿಸುವ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ ಬಾಲಿವುಡ್ ನಿರ್ದೇಶಕ ಅನಂತ್ ಮಾಧವನ್. ಈ ಚಿತ್ರದಲ್ಲಿ ನಟ ಮಾಧವನ್ ಮೂರು ಶೇಡ್​ಗಳ ಪಾತ್ರದಲ್ಲಿ ಕಾಣಿಸಲಿದ್ದು, ನಂಬಿ ನಾರಾಯಣ್ ಅವರ 70ನೇ ವಯಸ್ಸಿನ ಲುಕ್ ಮ್ಯಾಡಿಗೆ ಹೊಸ ಸವಾಲಾಗಲಿದೆ.

ಈ ಚಿತ್ರವನ್ನು ಅಧ್ಭುತವಾಗಿ ಚಿತ್ರೀಕರಿಸುವ ಯೋಜನೆಯನ್ನು ಚಿತ್ರತಂಡ ರೂಪಿಸಿದ್ದು, ಇದನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಇರಾದೆಯನ್ನು ನಿರ್ದೇಶಕ ಅನಂತ್ ಅವರು ಹೊಂದಿದ್ದಾರೆ.
First published:July 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...