ನಟ ಮಾಧವನ್ (Actor Madhavan) ತಮ್ಮ ವೃತ್ತಿ ಜೀವನವನ್ನು ಬಹಳ ಪ್ರಬುದ್ಧತೆಯಿಂದ ನಿರ್ವಹಿಸುತ್ತಿದ್ದಾರೆ. ಅವರು ಆಯ್ಕೆ ಮಾಡಿಕೊಳ್ಳುತ್ತಿರುವ ಸಿನಿಮಾಗಳು, ನಿರ್ದೇಶನ (Direction) ಎಲ್ಲವೂ ಮಾಧವನ್ ಅವರ ಬಗೆಗೆ ಹೊಸ ನೋಟ ನೀಡುತ್ತಿದೆ. ಸಾಥಿಯಾದ ಲವರ್ ಬಾಯ್ನಿಂದ ಹಿಡಿದು ಮೊನ್ನೆ ತನಕ ಭಾರೀ ಸದ್ದು ಮಾಡಿದ ರಾಕೆಟ್ರಿ (Rocketry: The Nambi) ಸಿನಿಮಾ ಇರಬಹುದು, ಎಲ್ಲವೂ ಮಾಧವನ್ ಅವರ ಸಿನಿಮಾ ವ್ಯಾಖ್ಯಾನವನ್ನು ವಿಶೇಷವಾಗಿ ತೋರಿಸುತ್ತಿವೆ. ವಯಸ್ಸಿಗೆ ತಕ್ಕ ಹಾಗೇ ಪಾತ್ರಗಳನ್ನು ಸೆಲೆಕ್ಟ್ ಮಾಡೋದು, ಸಿಕ್ಸ್ ಪ್ಯಾಕ್ ಟ್ರೆಂಡ್ ಬ್ರೇಕ್ ಮಾಡುವುದು, ಯುವ ಪೀಳಿಗೆಯನ್ನು ತನ್ನತ್ತ ಸೆಳೆಯುವ ಸಿನಿಮಾಗಳಿಗೆ ಆದ್ಯತೆ ಕೊಡುವುದು ಇವೆಲ್ಲವೂ ಮಾಧವನ್ ಅವರು ಸಿನಿ ವೃತ್ತಿಯನ್ನು ಅದ್ಭುತವಾಗಿ ನಿರ್ವಹಿಸುತ್ತಿರುವುದಕ್ಕೆ ಉತ್ತಮ ನಿದರ್ಶನಗಳಾಗಿವೆ.
ಮಾಧವನ್ ಮುಂದಿನ ಚಿತ್ರದಲ್ಲಿ ಎಡಿಸನ್ ಆಫ್ ಇಂಡಿಯಾ ಜಿ ಡಿ
ರಾಕೆಟ್ರಿ: ದಿ ನಂಬಿ ಎಫೆಕ್ಟ್
ರಾಕೆಟ್ರಿ: ದಿ ನಂಬಿ ಎಫೆಕ್ಟ್ ಸಿನಿಮಾ ಸಕ್ಸಸ್ ಮತ್ತು ಅತ್ಯುತ್ತಮ ರಿವೀವ್ ಪಡೆದ ಬಳಿಕ ಮಾಧವನ್ ಅವರ ನಿರ್ಧಾರ ಮತ್ತಷ್ಟು ಗಟ್ಟಿಯಾಗಿದೆ ಎನ್ನುವುದಕ್ಕೆ ಅವರ ಹೊಸ ಸಿನಿಮಾ ಪೋಸ್ಟರ್ ಅತ್ಯುತ್ತಮ ಉದಾಹರಣೆ. ಹೌದು! ನಟ, ನಿರ್ದೇಶಕ ಮಾಧವನ್ ಮತ್ತೊಂದು ನೈಜ ಪಾತ್ರದೊಂದಿಗೆ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ.
ಮತ್ತೊಂದು ಬಯೋಪಿಕ್ನಲ್ಲಿ ಮಾಧವನ್
ಮಾಧವನ್ ಅವರು ಪ್ರಸ್ತುತ ಬಯೋಪಿಕ್ಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವುದು ಅವರ ಆಯ್ಕೆಗಳಿಂದ ಸ್ಪಷ್ಟವಾಗುತ್ತಿದೆ. ಆ ಮೂಲಕ ತೆರೆ ಮರೆಯಲ್ಲೇ ಉಳಿದಿರುವ ಭಾರತದ ಸಾಧಕರನ್ನು ಶಾಶ್ವತವಾಗಿ ಜನರ ಮನಸಲ್ಲಿ ಉಳಿಸಲು ಮಾಧವನ್ ಪಣ ತೊಟ್ಟಂತಿದೆ. ಇದನ್ನು ಬೆಳೆಸಲು ಮತ್ತೊಂದು ಬಯೋಪಿಕ್ ನಲ್ಲಿ ಮಾಧವನ್ ಚಿತ್ರರಸಿಕರನ್ನು ಗೆಲ್ಲಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಒಂದು ಶೋಗಾಗಿ ತೂಕ ಇಳಿಸಿಕೊಂಡ್ರಂತೆ ಚಾರು ಅಸೋಪಾ, ಇಲ್ಲಿದೆ ನೋಡಿ ಅವರ ರಹಸ್ಯ
ಎಡಿಸನ್ ಆಫ್ ಇಂಡಿಯಾ: ಜಿ.ಡಿ ನಾಯ್ಡು
ಭಾರತೀಯ ಸಂಶೋಧಕರು ಮತ್ತು ಎಂಜಿನಿಯರ್ ಗೋಪಾಲಸ್ವಾಮಿ ದೊರೆಸ್ವಾಮಿ ನಾಯ್ಡು(ಜಿಡಿ ನಾಯ್ಡು) ಅವರ ಜೀವನಾಧಾರಿತ ಬಯೋಪಿಕ್ನಲ್ಲಿ ಮಾಧವನ್ ಕಾಣಿಸಿಕೊಳ್ಳಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಎಡಿಸನ್ ಆಫ್ ಇಂಡಿಯಾ: ಜಿಡಿ ನಾಯ್ಡು, ಸಿನಿಮಾ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ಶುಕ್ರವಾರ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಮೀಡಿಯಾಒನ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಲಿಮಿಟೆಡ್ ಟ್ವಿಟ್ಟರ್ನಲ್ಲಿ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದೆ. ಜಿ. ಡಿ ನಾಯ್ಡು ದತ್ತಿಯೊಂದಿಗೆ ಸಿನಿಮಾ ಮಾಡುವ ಬಗ್ಗೆ ಸಹಿ ಹಾಕಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಪೋಸ್ಟರ್ ಡಿಕೋಡ್ನಲ್ಲಿ ಅಭಿಮಾನಿಗಳು ಬ್ಯುಸಿ
ಎಡಿಸನ್ ಆಫ್ ಇಂಡಿಯಾ: ಜಿ ಡಿ ನಾಯ್ಡು ಸಿನಿಮಾದ ಪೋಸ್ಟರ್ ಆಸಕ್ತಿಕರವಾಗಿದೆ. ಜಿ ಡಿ ನಾಯ್ಡು ಅವರ ಬಗ್ಗೆ ತಿಳಿಯದವರು ಪೋಸ್ಟರ್ ಡಿಕೋಡ್ ಮಾಡುವುದಕ್ಕೆ ಆರಂಭಿಸಿದ್ದಾರೆ.
ಪ್ರಸ್ತುತ ಪೋಸ್ಟರ್ನಲ್ಲಿ ನಾಯ್ಡು ಅವರನ್ನು ಹೋಲುವಂತಹ ವ್ಯಕ್ತಿ ಮತ್ತು ಮೋಟಾರ್ ಕಾರ್ ಅನ್ನು ಪೋಸ್ಟರ್ನಲ್ಲಿ ವಿನ್ಯಾಸ ಮಾಡಲಾಗಿದೆ. ಆದರೆ ಮಾಧವನ್ ಅವರ ಸಂಪೂರ್ಣ ಲುಕ್ ರಿವಿಲ್ ಆಗಿಲ್ಲ.
ಭಾರತದ ಮೊದಲ ಎಲೆಕ್ಟ್ರಿಕ್ ಮೋಟಾರ್ನ ತಯಾರಕರು
ಜಿ.ಡಿ ನಾಯ್ಡುರವರು ನಮ್ಮ ಪೀಳಿಗೆಗೆ ಅಷ್ಟಾಗಿ ಪರಿಚಯವಿಲ್ಲ. ಭಾರತದ ತಂತ್ರಜ್ಞಾನದಲ್ಲಿ ಬಹಳಷ್ಟು ಪ್ರಯೋಗಗಳನ್ನು ಮಾಡಿ ಯಶಸ್ವಿಯಾದವರು. ಅವರ ತಂದೆ ಜೊತೆಗೆ ಸೇರಿಕೊಂಡೆ ಮೋಟಾರ್ ಬಗ್ಗೆ ಅಧ್ಯಯನ ನಡೆಸಿದವರು. ವಿದ್ಯಾಭ್ಯಾಸದ ಬಗ್ಗೆ ಅವರಿಗೆ ಎಂದಿಗೂ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆದರೆ ಭಾರತದ ಮೊದಲ ಎಲೆಕ್ಟ್ರಿಕಲ್ ಮೋಟಾರ್ ತಯಾರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
Mediaone Global Entertainment Limited signed with GD Naidu charities to make a Biopic on the life and achievements of Miracle man #GDNaidu with@ActorMadhavan as the lead.@ActorMadhavan@Mediaone_M1@ActressGheetha@vijaymoolan@ProSrivenkatesh pic.twitter.com/hkbUYVrgcs
— Mediaone Global Entertainment Limited (@Mediaone_M1) April 6, 2023
ವಿಜ್ಞಾನ ಮತ್ತು ತಂತ್ರಜ್ಞಾನದ ಆಸಕ್ತಿ ಹೆಚ್ಚಿಸುವ ಸಿನಿಮಾ.
ಇನ್ನೂ ಇಂದಿನ ಯುವ ಪೀಳಿಗೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಕಡೆಗೆ ಸೆಳೆಯುವಲ್ಲಿ ಈ ಸಿನಿಮಾ ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಜಿಡಿ ನಾಯ್ಡು ಕುಟುಂಬದವರ ಅನಿಸಿಕೆಯಾಗಿದೆ.
ಅಲ್ಲದೇ ಹಲವಾರು ಅತ್ಯುನ್ನತ ಆವಿಷ್ಕಾರಗಳ ಬಗ್ಗೆ ಸಿನಿಮಾ ಬೆಳಕು ಚೆಲ್ಲಲಿದೆ. ಒಟ್ಟಾರೆ ಜಿಡಿ ಸಿನಿಮಾ ಭಾರತದ ಸಿನಿಮಾದಲ್ಲೇ ಅತ್ಯುನ್ನತ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಿನಿಮಾದಲ್ಲಿ ಮೈಲಿಗಲ್ಲು ಸ್ಥಾಪಿಸುವುದಂತೂ ನಿಜ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ