R Madhavan: ಕಳೆದ ನಾಲ್ಕು ವರ್ಷಗಳಿಂದ ಒಂದು ರೂಪಾಯಿ ಸಂಪಾದನೆ ಮಾಡಿಲ್ಲವಂತೆ ನಟ ಮಾಧವನ್

ಸಂದರ್ಶನವೊಂದರಲ್ಲಿ ಮಾತನಾಡಿದ ಮಾಧವನ್ ಅವರು ಚಿತ್ರದ ಬಗ್ಗೆ ಹೇಗೆ ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ. ಜೊತೆಗೆ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಹಣ ಸಂಪಾದಿಸಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಆರ್. ಮಾಧವನ್

ಆರ್. ಮಾಧವನ್

  • Share this:
ಖ್ಯಾತ ವಿಜ್ಞಾನಿ ನಂಬಿ ನಾರಾಯಣನ್ (Nambi Narayanan) ಅವರ ಜೀವನವನ್ನು ಆಧರಿಸಿದ ನಟ ಆರ್. ಮಾಧವನ್ (R Madhavan) ಅವರ ಮುಂಬರುವ ಬಹು ನೀರಿಕ್ಷಿತ ಚಿತ್ರ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' (Rocketry: The Nambi Effect) ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮೊದಲು ಗುರುವಾರ 75ನೇ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಈ ವೇಳೆ ಸಂದರ್ಶನವೊಂದರಲ್ಲಿ (Interview) ಮಾತನಾಡಿದ ಮಾಧವನ್ ಅವರು ಚಿತ್ರದ ಬಗ್ಗೆ ಹೇಗೆ ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ. ಜೊತೆಗೆ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಹಣ ಸಂಪಾದಿಸಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಎರಡು ವರ್ಷಗಳ ಅವಧಿಯಲ್ಲಿ ತಾನು ಯಾವುದೇ ಹಣವನ್ನು ಗಳಿಸಿಲ್ಲ
ಮೇ 19ರಂದು 75ನೇ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ 'ರಾಕೆಟ್ರಿ' ಚಲನಚಿತ್ರವನ್ನು ಪ್ರದರ್ಶಿಸಿದ ನಟ, ಸುದ್ದಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಕೋವಿಡ್ ನ ಎರಡು ವರ್ಷಗಳ ಅವಧಿಯಲ್ಲಿ ತಾನು ಯಾವುದೇ ಹಣವನ್ನು ಗಳಿಸಿಲ್ಲ ಮತ್ತು ಅದಕ್ಕೂ ಮೊದಲು ರಾಕೆಟ್ರಿ ಸಿನಿಮಾ ತಯಾರಿಕೆಯಲ್ಲಿ ಬ್ಯುಸಿಯಾಗಿದ್ದೆ. ಹೀಗಾಗಿ ಕಳೆದ ನಾಲ್ಕು ವರ್ಷದಿಂದ ಯಾವುದೇ ಹಣ ಗಳಿಸಿಲ್ಲ ಎಂದು ಬಹಿರಂಗಪಡಿಸಿದರು.

ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆದ ಡೀಕಪಲ್ಡ್ ವೆಬ್ ಸರಣಿ ನನ್ನನ್ನು ಬದುಕಿಸಿತು. ಅದರ ಹೊರತಾಗಿ, ನಾನು ಯಾವುದೇ ಚಲನಚಿತ್ರಗಳನ್ನು ಮಾಡಿಲ್ಲ. ನನ್ನ ಕೊನೆಯ ಚಿತ್ರ ವಿಕ್ರಮ್ ವೇದಾ. ಆದ್ದರಿಂದ ಭಯವಿದೆ, ನಿರಂತರ ಭಯವಿದೆ ಎಂದು ಅವರು ಹೇಳಿದರು. “ಈ ಕಠಿಣ ಸಮಯದಲ್ಲಿ ನನ್ನ ಹೆಂಡತಿ ನನಗೆ ಬೆಂಬಲ ನೀಡಿದರು" ಎಂದು ಪತ್ನಿ ಸರಿತಾ ಅವರಿಗೆ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: Rashmika Mandanna: ರಶ್ಮಿಕಾ ಅಲ್ವಂತೆ 'ರಶ್'​ ಅಂತೆ! 'ಕಿರಿಕ್ ಬೆಡಗಿ' ಹೀಗೆಂದಿದ್ದೇಕೆ? 

ಮಾಧವನ್, ಠಾಕೂರ್ ಮತ್ತು ನಂಬಿ ಅವರಲ್ಲದೆ, ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಮತ್ತು ಭಾರತೀಯ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಸಹ ಚಲನಚಿತ್ರದ ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.

'ರಾಕೆಟ್ರಿ: ದಿ ನಂಬಿ ಎಫೆಕ್ಟ್'
'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಗೂಢಚಾರಿಕೆ ಹಗರಣದ ಸುಳಿಯಲ್ಲಿ ಸಿಕ್ಕಿಬಿದ್ದ ಮತ್ತು ಬೇಹುಗಾರಿಕೆಯ ಸುಳ್ಳು ಆರೋಪಕ್ಕೆ ಗುರಿಯಾದ ಮಾಜಿ ಇಸ್ರೋ ವಿಜ್ಞಾನಿ ಮತ್ತು ಏರೋಸ್ಪೇಸ್ ಇಂಜಿನಿಯರ್ ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದೆ. ಚಿತ್ರವು ಜುಲೈ 1, 2022 ರಂದು ಚಿತ್ರಮಂದಿರಗಳಿಗೆ ಬರಲಿದೆ. ನೈಜ್ಯ ಕಥೆಯಾಧಾರಿತ 'ರಾಕೆಟ್ರಿ: ದಿ ನಂಬಿ ಎಫೆಕ್ಟ್'ನಲ್ಲಿ ಫಿಲ್ಲಿಸ್ ಲೋಗನ್, ವಿನ್ಸೆಂಟ್ ರಿಯೊಟ್ಟಾ, ರಾನ್ ಡೊನೈಚೆ, ಸಿಮ್ರಾನ್, ರಜತ್ ಕಪೂರ್, ರವಿ ರಾಘವೇಂದ್ರ, ಮಿಶಾ ಘೋಷಾಲ್, ಗುಲ್ಶನ್ ಗ್ರೋವರ್, ಕಾರ್ತಿಕ್ ಕುಮಾರ್ ಮತ್ತು ದಿನೇಶ್ ಪ್ರಭಾಕರ್ ಸಹ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿ ಮತ್ತು ಬರೆದಿರುವ ಮಾಧವನ್ ಅವರ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಸೂರ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಅನ್ನು ಹಿಂದಿ, ತಮಿಳು ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿಯೂ ಬಿಡುಗಡೆಯಾಗಲಿದೆ.

ಇದನ್ನೂ ಓದಿ:  Manasa Manohar: ಎಂಬಿಎ ಮಾಡಿ ನಟನಾ ಕ್ಷೇತ್ರಕ್ಕೆ ಬಂದ ಮೀರಾ - ಮಾನಸ ಮನೋಹರ ಲೈಫ್​ ಸ್ಟೋರಿ

ಕಾನ್ಸ್ ಫಿಲ್ಮ್ ಮಾರ್ಕೆಟ್‌ನಲ್ಲಿ ಪ್ರಥಮ ಪ್ರದರ್ಶನದ ನಂತರ ಚಲನಚಿತ್ರವು ಜುಲೈನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲ ನಿರ್ದೇಶಕ ಅನಂತ್ ಮಹದೇವನ್ ಅವರು ಚಿತ್ರೀಕರಣದ ಕೆಲವು ದಿನಗಳಲ್ಲೇ ಪ್ರಾಜೆಕ್ಟ್ ಅನ್ನು ಕೈಬಿಟ್ಟಾಗ ಸ್ವತಃ ಮಾಧವನ್ ಅವರೇ ಚಿತ್ರ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡು ಚಿತ್ರ ತಯಾರಿಸಿದರು.

ಕಾನ್ಸ್ ಚಲನಚಿತ್ರೋತ್ಸವ 2022
ಫ್ರಾನ್ಸಿನಲ್ಲಿ ನಡೆಯುತ್ತಿರುವ ಕಾನ್ಸ್ 2022 ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತೀರ್ಪುಗಾರರಲ್ಲಿ ಒಬ್ಬರಾಗಿದ್ದರೆ, ಪೂಜಾ ಹೆಗ್ಡೆ, ಐಶ್ವರ್ಯ ರೈ, ತಮನ್ನಾ ಭಾಟಿಯಾ ಮುಂತಾದವರು ರೆಡ್ ಕಾರ್ಪೆಟ್ಟಿನಲ್ಲಿ ಹೆಜ್ಜೆ ಹಾಕಿದ್ದಾರೆ. ಇನ್ನು ಆರ್. ಮಾಧವನ್, ನವಾಜುದ್ದೀನ್ ಸಿದ್ಧಿಕಿ ಸೇರಿ ಅನೇಕ ನಟರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾರತ, ಭಾರತೀಯ ಚಿತ್ರರಂಗದ ಕುರಿತು ಮಾತನಾಡಿದ್ದಾರೆ.
Published by:Ashwini Prabhu
First published: