Puneeth Rajkumar: ವಿದ್ಯಾರ್ಥಿಗಳೇ 'ಅಪ್ಪು' ಕುರಿತ ಪ್ರಶ್ನೆಗೆ ಉತ್ತರಿಸಿ, ಪರೀಕ್ಷೆ ಪಾಸ್ ಆಗಿ!

ಮೈಸೂರು ವಿಶ್ವ ವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್‌ ಕೊಟ್ಟು, ಅವರನ್ನು ಸ್ಮರಿಸಿಕೊಂಡಿದೆ. ರಾಜ್ಯ ಸರ್ಕಾರವೂ ಪಠ್ಯ ಪುಸ್ತಕದಲ್ಲಿ ಪುನೀತ್ ರಾಜ್‌ಕುಮಾರ್ ಕುರಿತು ಪಾಠ ಅಳವಡಿಸೋ ಬಗ್ಗೆ ಚಿಂತನೆ ಮಾಡುತ್ತಿದೆ. ಇಷ್ಟೆಲ್ಲಾ ಗುಡ್‌ ನ್ಯೂಸ್‌ಗಳ ನಡುವೆ ಅವರ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.

ಡಾ. ಪುನೀತ್ ರಾಜ್‌ಕುಮಾರ್

ಡಾ. ಪುನೀತ್ ರಾಜ್‌ಕುಮಾರ್

  • Share this:
ಪುನೀತ್ ರಾಜ್‌ಕುಮಾರ್ (Puneeth Rajkumar).. ಈ ಹೆಸರು ಕೇಳಿದರೆ ಕನ್ನಡಿಗರಿಗೆ ರೋಮಾಂಚನವಾಗುತ್ತದೆ. ಅಭಿಮಾನಿಗಳಂತೂ (Fans) ಈ ಹೆಸರು ಕೇಳಿದ್ರೆ ಹೆಮ್ಮೆ ಪಡುತ್ತಾರೆ, ಭಾವುಕಾರಗುತ್ತಾರೆ. ಅಭಿನಯ (Acting), ಸಮಾಜಸೇವೆ (Social Service) ಮೂಲಕ ಚಿರಪರಿಚಿತರಾಗಿದ್ದ ಪವರ್ ಸ್ಟಾರ್ (Power Star), ತಮ್ಮ ಸರಳ ನಡೆನುಡಿ, ಸೌಜನ್ಯದ ನಡವಳಿಕೆಯಿಂದಲೂ ‘ಅಪ್ಪು’ (Appu) ಅಂತಾನೇ ಕರೆಸಿಕೊಂಡವರು. ಒಂದೆಡೆ ಅವರು ಅಭಿನಯಿಸಿರುವ ಕೊನೆಯ ಸಿನಿಮಾ ‘ಜೇಮ್ಸ್’ (James) ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪರಭಾಷೆ ಸಿನಿಮಾಗಳ ಹಾವಳಿ ಮಧ್ಯೆಯೂ ಮುನ್ನುಗ್ಗುತ್ತಿದೆ. ಮತ್ತೊಂದೆಡೆ ಮೈಸೂರು ವಿಶ್ವ ವಿದ್ಯಾನಿಲಯ (Mysore University) ಅವರಿಗೆ ಗೌರವ ಡಾಕ್ಟರೇಟ್‌ (Honorary Doctorate) ಕೊಟ್ಟು, ಅವರನ್ನು ಸ್ಮರಿಸಿಕೊಂಡಿದೆ. ರಾಜ್ಯ ಸರ್ಕಾರವೂ ಪಠ್ಯ ಪುಸ್ತಕದಲ್ಲಿ (Text Books) ಪುನೀತ್ ರಾಜ್‌ಕುಮಾರ್ ಕುರಿತು ಪಾಠ (Lesson) ಅಳವಡಿಸೋ ಬಗ್ಗೆ ಚಿಂತನೆ ಮಾಡುತ್ತಿದೆ. ಇಷ್ಟೆಲ್ಲಾ ಗುಡ್‌ ನ್ಯೂಸ್‌ಗಳ (Good News) ನಡುವೆ ಅವರ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.

ಪರೀಕ್ಷೆಯಲ್ಲಿ ಪುನೀತ್ ರಾಜ್‌ಕುಮಾರ್ ಕುರಿತು ಪ್ರಶ್ನೆ

ಹೌದು, ಇದು ಆಶ್ಚರ್ಯವಾದರೂ ನಿಜ. ಜೊತೆಗೆ ಇದು ಅಭಿಮಾನಿಗಳಿಗೆ ಖುಷಿ ಕೊಡುವಂತಾ ಸುದ್ದಿ. ಬೆಂಗಳೂರಿನ ದಿ ನ್ಯೂ ಕ್ಯಾಂಬ್ರಿಜ್ ಇಂಗ್ಲೀಷ್‌ ಸ್ಕೂಲ್ ಎಂಬ ಖಾಸಗಿ ಶಾಲೆಯಲ್ಲಿ ಪುನೀತ್ ರಾಜ್‌ಕುಮಾರ್ ಕುರಿತ ಪ್ರಶ್ನೆ ಕೇಳಲಾಗಿದೆ. 4ನೇ ತರಗತಿಯ ಕನ್ನಡ ಪರೀಕ್ಷೆಯಲ್ಲಿ ಪುನೀತ್ ಕುರಿತಂತೆ 80 ಅಂಕಗಳ ಪ್ರಶ್ನೆ ಕೇಳಲಾಗಿದೆ.

ಅಪ್ಪು ಬಗ್ಗೆ ಮಕ್ಕಳಿಗೆ ಕೇಳಿದ ಪ್ರಶ್ನೆಗಳೇನು?

ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಪುನೀತ್ ರಾಜ್‌ಕುಮಾರ್ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಏನೆಂದು ಕರೆಯುತ್ತಿದ್ದರು? ಪುನೀತ್ ರಾಜ್‌ಕುಮಾರ್ ಯಾವಾಗ ಜನಿಸಿದರು? ಪುನೀತ್ ರಾಜ್‌ಕುಮಾರ್ ಅವರ ತಂದೆಯ ಹೆಸರೇನು? ಪುನೀತ್ ರಾಜ್‌ಕುಮಾರ್ ಅವರ ತಾಯಿಯ ಹೆಸರೇನು? ಎಂಬಿತ್ಯಾದಿ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ.

ಇದನ್ನೂ ಓದಿ: James: ಶಿವಣ್ಣ ಎಂಟ್ರಿಯಾಗುತ್ತಿದ್ದಂತೆ ಎಲ್ಲವೂ ಗಪ್​ಚುಪ್​! ಸುಖಾಂತ್ಯ ಕಂಡ ಜೇಮ್ಸ್​ ಥಿಯೇಟರ್​ ವಿವಾದ

ವೈರಲ್ ಆಯ್ತು ಪುನೀತ್ ಪ್ರಶ್ನೆ ಪತ್ರಿಕೆ

ಪುನೀತ್ ರಾಜ್‌ಕುಮಾರ್ ಕುರಿತಾದ ಪ್ರಶ್ನೆ ಪತ್ರಿಕೆ ಪರೀಕ್ಷೆಯಲ್ಲಿ ವಿತರಣೆಯಾಗುತ್ತಿದ್ದಂತೆ ಭಾರೀ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಅದಕ್ಕೆ ಭಾರೀ ಲೈಕ್ಸ್, ಕಾಮೆಂಟ್ಸ್ ಬರುತ್ತಿವೆ.

ಪುನೀತ್ ರಾಜ್‌ಕುಮಾರ್ ಕುರಿತಾದ ಪ್ರಶ್ನೆ ಪತ್ರಿಕೆ


ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಮೈಸೂರು ವಿಶ್ವವಿದ್ಯಾಲಯ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಇದನ್ನು ಸ್ವೀಕರಿಸಲು ತೆರಳಿದ್ದ ಅವರ ಪತ್ನಿ ಅಶ್ವಿನಿ ಅವರು, ಇನ್ನು ಮುಂದೆ ಪುನೀತ್ ರಾಜ್‌ಕುಮಾರ್ ಹಾಗೂ ಪಾರ್ವತಮ್ಮನವರ ಹೆಸರಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಎರಡು ಚಿನ್ನದ ಪದಕ ನೀಡುವುದಾಗಿ ಘೋಷಿಸಿದ್ದಾರೆ.

ಪುನೀತ್‌ಗೆ ಶೀಘ್ರವೇ ಶೀಘ್ರದಲ್ಲೇ 'ಕರ್ನಾಟಕ ರತ್ನ' ಪ್ರದಾನ

ತಮ್ಮ ಆದರ್ಶ ಪ್ರಾಯ ಜೀವನದ ಮೂಲಕವೇ ಎಲ್ಲರಿಗೂ ಮಾದರಿಯಾಗಿರುವ ಪುನೀತ್​ ರಾಜ್​ ಕುಮಾರ್​​ಗೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರ ಈಗಾಗಲೇ ಪುನೀತ್​ ರಾಜ್​ಕುಮಾರ್​ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭ ಕುರಿತು ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ.

ಇದನ್ನೂ ಓದಿ: Puneeth Rajkumar: ಪುನೀತ್​ ಹೆಸರಲ್ಲಿ ಪ್ರತಿನಿತ್ಯ ನಡೀತಿದೆ ಅನ್ನದಾಸೋಹ! ಅಪ್ಪು ಎಂದಿಗೂ ನೀ ನಗುವಿನ ಶ್ರೀಮಂತ

ಈ ಸಂಬಂಧ ಇಂದು ಮಾತನಾಡಿದ ಸಿಎಂ, ಪುನೀತ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಲು ಆದಷ್ಟು ತೀರ್ಮಾನ ಮಾಡಲಾಗುವುದು. ಶೀಘ್ರವಾಗಿ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ದಿನಾಂಕ ನಿಗದಿ ಮಾಡಲಾಗುವುದು. ಪುನೀತ್ ಹಾಗೂ ಡಾ. ರಾಜ್ ಕುಮಾರ್ ಅವರಿಗೆ ಗೌರವ ಬರುವ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
Published by:Annappa Achari
First published: