‘ಪುಟ್ಟರಾಜು ಲವರ್​ ಆಫ್​ ಶಶಿಕಲಾ’ ಚಿತ್ರ: ಇದೇ ತಿಂಗಳ ಅಂತಿಮ ವಾರದಲ್ಲಿ ನಿಮ್ಮ ಮುಂದೆ..!


Updated:July 4, 2018, 10:02 PM IST
‘ಪುಟ್ಟರಾಜು ಲವರ್​ ಆಫ್​ ಶಶಿಕಲಾ’ ಚಿತ್ರ: ಇದೇ ತಿಂಗಳ ಅಂತಿಮ ವಾರದಲ್ಲಿ ನಿಮ್ಮ ಮುಂದೆ..!
Puttaraju lover of Shashikala Directed by Sahadev releasing in this month end.

Updated: July 4, 2018, 10:02 PM IST
ಗಣೇಶ್​ ನಚಿಕೇತು, ನ್ಯೂಸ್​-18 ಕನ್ನಡ

ಬೆಂಗಳೂರು(ಜುಲೈ.04): ಬಹು ದಿನಗಳ ನಂತರ ಕನ್ನಡ ಚಿತ್ರರಂಗದಲ್ಲಿ ಮುಗ್ಧ ಮನಸ್ಸುಗಳ ಪ್ರೇಮವನ್ನು ನೆನಪಿಸುವಂತ ನೈಜ ಕಥೆ ಆಧರಿತ ಚಿತ್ರವೊಂದು ತೆರೆ ಕಾಣಲು ಸಿದ್ದವಾಗಿದೆ. ಹೊಸ ಪ್ರತಿಭೆ ಸಹದೇವ್ ಎಂಬವರ​ ನಿರ್ದೇಶನದಲ್ಲಿ "ಪುಟ್ಟರಾಜು ಲವರ್​ ಆಫ್​ ಶಶಿಕಲಾ' ಎಂಬ ನೈಜ ಕಥೆ ಆಧಾರಿತ ಚಿತ್ರ ತೆರೆ ಕಾಣಲು ಸಿದ್ಧವಾಗಿದ್ದು, ಇದೇ ತಿಂಗಳ ಅಂತಿಮ ವಾರದಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಪ್ರಮುಖ ನಾಯಕನ ಪಾತ್ರದಲ್ಲಿ ಅಮಿತ್​ ಗೌಡ ಮತ್ತು ನಾಯಕಿಯ ಪಾತ್ರದಲ್ಲಿ ಮಾರಿಮುತ್ತು ಮೊಮ್ಮಗಳು ಜಯಶ್ರೀ ಅವರು ಕಾಣಿಸಿಕೊಂಡಿದ್ದಾರೆ.ನಾಗರಾಜು ಮತ್ತು ಬಾಲಕೃಷ್ಣ ಎಂಬವರ ನಿರ್ಮಾಣದಲ್ಲಿ ತೆರೆಗೆ ಸಿದ್ದವಾಗಿರುವ ಪುಟ್ಟರಾಜು ಲವರ್​ ಆಫ್​ ಶಶಿಕಲಾ ಚಿತ್ರದ ಮುಖ್ಯ ಪಾತ್ರದಲ್ಲಿ ನೀನಾಸ ಖ್ಯಾತಿಯ ಮತ್ತು ಕೇರ್​ ಆಫ್​ ಫುಟ್​ಪಾತ್​-2 ನಲ್ಲಿ ನಟಿಸಿರುವ ಡಿಂಗ್ರಿ ನರೇಶ್​, ಸುಶ್ಮಿತಾ ಮೈಸೂರು, ವಿಕ್ರಾಂತ್​, ಕಾಮೇಡಿ ಕಿಲಾಡಿಗಳ ಸೀಸನ್​ 2 ಖ್ಯಾತಿಯ ಸೂರ್ಯ ಕುಂದಾಪುರ ಕೂಡ ನಟಿಸಿದ್ದಾರೆ.ಸ್ಯಾಂಡಲ್​ವುಡ್​ನಲ್ಲಿಯೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರೀಡೆ ಆಧಾರಿತ ಮುಗ್ದ ಮನಸ್ಸುಗಳ ಪ್ರೇಮ ಕಥೆ ಚಿತ್ರ ಇದಾಗಿದೆ. ಸುಮಾರು ಚಿತ್ರಗಳಂತೆಯೇ ಅಲ್ಲದೇ ಇದೊಂದು ವಿಭಿನ್ನ ಕಥೆ ಹೊಂದಿದೆ. ಪ್ರತಿಯೊಬ್ಬರ ಜೀವನದಲ್ಲೂ ನಡೆದಿದರುವ ಕಥೆಯನ್ನು ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ. ಪ್ರೀತಿಯ ಸುಖ ದುಃಖಗಳ ನಡುವೆ ಜೀವನ ಹೇಗೆ ನಡೆಯುತ್ತದೆ ಎಂಬುದನ್ನು ಕಥೆ ಒಳಗೊಂಡಿದೆ.

Loading...

ಚಿತ್ರ ನೋಡುವ ಪ್ರೇಕ್ಷಕರ ಕಣ್ಣಲ್ಲಿ ಕನಿಷ್ಠ ನಾಲ್ಕು ಹನಿ ಕಣ್ಣೀರು, ಮನಸ್ಸಿಗೆ ಸಂತೋಷ ನೀಡುವ ಚಿತ್ರವನ್ನು ಮಾಡಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. ಈಗಾಗಲೇ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು ಭಾರೀ ಸದ್ದು ಮಾಡಿದೆ. ಇನ್ನು ‘ತೂತಗಿರೋ ರಾಗಿಮುದ್ದೆ’ ಎನ್ನುವ ಹಾಡು ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಡೀ ಸಿನಿಮಾದ ಹಾಡುಗಳನ್ನು ಸಂಗೀತ ನಿರ್ದೇಶಕ ಶ್ರೀರಾಮ್​ ಗಂಧರ್ವ ಅವರ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಹಿನ್ನಲೆ ಸಂಗೀತ ಕರಣ್​ ಮಹದೇವ್​, ಸಂಕಲನಕಾರರಾಗಿ ವೆಂಕಿ ಯು.ಡಿ ವಿ ಅವರು ಕೆಲಸ ಮಾಡಿದ್ದಾರೆ.

First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...