ಕಾಲೇಜು ಕಥಾಹಂದರದ ಜೊತೆ ಲವ್ ಮಸಾಲ: ಗಾಂಧೀನಗರಕ್ಕೆ ಎಂಟ್ರಿ ಕೊಟ್ಟ ಪುಟ್ಟರಾಜು...!

news18
Updated:July 27, 2018, 5:28 PM IST
ಕಾಲೇಜು ಕಥಾಹಂದರದ ಜೊತೆ ಲವ್ ಮಸಾಲ: ಗಾಂಧೀನಗರಕ್ಕೆ ಎಂಟ್ರಿ ಕೊಟ್ಟ ಪುಟ್ಟರಾಜು...!
news18
Updated: July 27, 2018, 5:28 PM IST
ರಕ್ಷಾ ಜಾಸ್ಮೀನ್​, ನ್ಯೂಸ್​ 18 ಕನ್ನಡ

ಇತ್ತೀಚೆಗೆ ಚಿತ್ರರಂಗದಲ್ಲಿ ಹೊಸಬರದ್ದೇ ಹವಾ. ಹೊಸ ಹೊಸ ಪರಿಕಲ್ಪನೆಗಳು, ವಿಭಿನ್ನ ಚಿಂತನೆಗಳು ಹಾಗೂ ತಾಜಾ ವಿಷಯ ಇಟ್ಟುಕೊಂಡು ಸಿನಿಮಾ ಮಾಡುವ ಇವರು ಪ್ರೇಕ್ಷಕರ ಮನಸ್ಸನ್ನು ಅಷ್ಟೆ ಸುಲಭವಾಗಿ ಗೆಲ್ಲುತ್ತಿದ್ದಾರೆ. ಹಾಗೇ ಬಾಕ್ಸ್ ಆಫಿಸ್‍ನಲ್ಲೂ ಕಮಾಲ್ ಮಾಡುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಸೇರುತ್ತಿರೋ ಮತ್ತೊಂದು ಸಿನಿಮಾವೇ ಪುಟ್ಟರಾಜು. ಏನು ಈ ಸಿನಿಮಾದ ವಿಶೇಷ ಅಂದ್ರಾ? ಈ ವರದಿ ಓದಿ...

ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್ ಅನ್ನೋ ಮಾತಿದೆ. ಹೀಗಾಗಿನೆ ಚಿತ್ರರಂಗದಲ್ಲಿ ಕಾಲೇಜು ಕಥೆ ಹೊತ್ತ ಅನೇಕ ಸಿನಿಮಾಗಳು ಬಂದಿವೆ. ಕೆಲವೊಂದಷ್ಟು ಸಿನಿಮಾಗಳು ಜನರ ಮನಸ್ಸು ಗೆದ್ದಿದ್ದರೆ ಮತ್ತೆ ಕೆಲವು ಹಾಗೇ ಚಿತ್ರಮಂದಿರದಿಂದ ಜಾರಿಕೊಂಡಿತ್ತು. ಸದ್ಯ ಕಾಲೇಜು ಜೀವನ ಹಾಗೆ ಯುವಕರನ್ನ ಗಮನದಲ್ಲಿಟ್ಟುಕೊಂಡು 'ಪುಟ್ಟರಾಜು' ಅನ್ನೊ ಸಿನಿಮಾ ತಯಾರಾಗಿ ನಿಂತಿದೆ.

ಈಗಾಗಲೇ ಬಿಡುಗಡೆಯಾಗಿರೋ ಸಿನಿಮಾದ ಸಾಂಗ್ ಟ್ರೇಲರ್​ ಸಿಗುತ್ತಿರೋ ಪ್ರತಿಕ್ರಿಯೆ ನೋಡುತ್ತಿದ್ದರೆ ಚಿತ್ರಮಂದಿರದಲ್ಲಿ ಸದ್ದು ಮಾಡುತ್ತೆ ಅಂತ ಮೇಲ್ನೋಟಕ್ಕೆ ಅನ್ನಿಸುತ್ತಾ ಇದೆ. ಹೊಸಬರೇ ಸೇರಿಕೊಂಡು ಮಾಡಿರೋ ಸಿನಿಮಾ ಇದಾಗಿರುವುದರಿಂದ ಮತ್ತು ಕೂತೂಹಲ ಹೆಚ್ಚಿದೆ. ನವ ನಿರ್ದೇಶಕ ಸಹದೇವ್ ಕಥೆಗೊಂದು ಒಳ್ಳೆಯ ರೂಪ ನೀಡಿ ತೆರೆಮೇಲೆ ತೋರಿಸಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ಸಂಪೂರ್ಣ ಆಗಿದೆ. ಹಾಗೇ ಚಿತ್ರ ಸೆನ್ಸಾರ್ ಹಂತ ಕೂಡ ಮುಗಿಸಿದ್ದು, ಯು/ಎ ಸರ್ಟಿಫಕೆಟ್ ಪಡೆದುಕೊಂಡಿದೆ.

'ಪುಟ್ಟರಾಜು' ಸಿನಿಮಾ ಹೇಳಿಕೇಳಿ ಕಾಲೇಜು ಓರಿಯಂಟೆಡ್ ಸಿನಿಮಾ. ಇದಕ್ಕೆ ಹೊಂದುವಂತ ನಟ ನಟಿಯರ ಆಯ್ಕೆಯಲ್ಲಿದ್ದ ಚಿತ್ರತಂಡ ಕೊನೆಗೆ ಫೈನಲ್ ಮಾಡಿದ್ದು ಜಯಶ್ರೀ ಅನ್ನೋ ಪ್ರತಿಭೆಯನ್ನ. ಅಷ್ಟಕ್ಕೂ ಜಯಶ್ರೀ ಕನ್ನಡದ ಖ್ಯಾತ ಕಲಾವಿದೆ ದಿವಂಗತ ಮಾರಿ ಮುತ್ತು ಅವರ ಖಾಸ ಮೊಮ್ಮಗಳು. ಮಾರಿಮುತ್ತು ಅವರ ಅಗಲಿಕೆ ನಂತರ ಮೊಮ್ಮಗಳು ಚಿತ್ರರಂಗಕ್ಕೆ ಬಂದಿರೋದಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

ಹಾಗೆ ನಾಗರಾಜು ಮತ್ತು ರಾಜು ಬಾಲಕೃಷ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶ್ರೀರಾಮ್​ ಗಂಧರ್ವ, ಕರಣ್ ಮಹದೇವ್ ಬ್ಯೂಟಿಫುಲ್ ಹಾಡುಗಳನ್ನ ನೀಡಿದ್ದಾರೆ...
ಹೀಗೆ ಸಾಕಷ್ಟು ವಿಶೇಷತೆಗಳನ್ನು ಹೊತ್ತು ಬರುತ್ತಿರೋ 'ಪುಟ್ಟರಾಜು' ಸಿನಿಮಾ ಆಗಸ್ಟ್​​ ಮೊದಲ ವಾರದಲ್ಲಿ ಬಿಡುಗಡೆಗೆ ಚಿಂತನೆ ನಡೆಸಿದ್ದು, ಪ್ರಚಾರದ ಕೆಲಸದಲ್ಲಿ ಸದ್ಯಕ್ಕೆ ಬ್ಯುಸಿಯಾಗಿದೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...