ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವೇ ಪುಷ್ಪ. ಈ ಸಿನಿಮಾದ ಸಣ್ಣ ಸಣ್ಣ ಅಪ್‍ಡೇಟ್‍ಗಳಿಗೆ ಮಿಲಿಯನ್‍ಗಟ್ಟಲೇ ಪ್ರತಿಕ್ರಿಯೆಗಳು ದೊರೆತಿದೆ. ಇದೀಗ ಸಿನಿಮಾ ತಂಡ ಮತ್ತೊಂದು ಅಪ್‍ಡೇಟ್ ನೀಡಿದ್ದು, ಇದು ಅಭಿಮಾನಿಗಳಿಗೆ ಹಬ್ಬವೇ ಸರಿ.ಹೌದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಪುಷ್ಪ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅಂದರೆ ಕ್ರಿಸ್‍ಮಸ್ ಹಬ್ಬದ ಸಂದರ್ಭದಲ್ಲಿ ಸಿನಿಮಾ ತೆರೆಕಾಣಲಿದೆ. ಪಂಚ ಭಾಷೆಗಳಾದ ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಯ ಜೊತೆಗೆ ಇದೇ ಸಿನಿಮಾದ ಇನ್ನೊಂದು ಪೋಸ್ಟರ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ್ದಾರೆ.
ಅಲ್ಲು ಅರ್ಜುನ್ ಸಿನಿಮಾದಲ್ಲಿ ಪುಷ್ಪ ರಾಜ್ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಈಗ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಕೆಂಪು ಫಿಲ್ಟರ್‌ನ ಡಿಸ್ಕ್‌ನಲ್ಲಿ ಒರಟಾಗಿ ಕಾಣುತ್ತಾರೆ. ಗಮನಿಸಬೇಕಾದ ಸಂಗತಿಯೆಂದರೆ, ಚಲನಚಿತ್ರವು ಎರಡು ಭಾಗಗಳನ್ನು ಒಳಗೊಂಡಿರುವುದರಿಂದ, ಪುಷ್ಪದ ಮೊದಲ ಭಾಗವು ಕ್ರಿಸ್ಮಸ್ 2021ಕ್ಕೆ ಪ್ರೇಕ್ಷಕರನ್ನು ರಂಜಿಸುತ್ತದೆ. ಎರಡನೇ ಭಾಗ ಬಿಡುಗಡೆ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಈ ಪೋಸ್ಟರ್‌ನ ಸಿನಿಮಾದ ಅಧಿಕೃತ ಟ್ವಿಟ್ಟರ್‌ನಲ್ಲಿ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಬಿಡುಗಡೆಯಾದ ಒಂದು ಗಂಟೆಯೊಳಗೆ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಅಲಾ ವೈಕುಂಠಪುರ ಮುಲೋ (2020)ರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಐಕಾನ್ ಸ್ಟಾರ್ ಈ ವರ್ಷ ಉದ್ಯಮವನ್ನು ಅಲುಗಾಡಿಸಲು ಸಜ್ಜಾಗಿದ್ದು, ಒರಟಾದ ಬೃಹತ್ ಅವತಾರದಲ್ಲಿ ಕಮಾಲ್ ಮಾಡಲು ಸಿದ್ಧರಾಗಿದ್ದಾರೆ. ಪುಷ್ಪ ಚಿತ್ರ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರ ಮೂರನೇ ಸಹಯೋಗದ ಮೂರನೇ ಸಿನಿಮಾ. ಈ ಹಿಂದೆ ಬ್ಲಾಕ್ ಬಸ್ಟರ್ ಚಲನಚಿತ್ರಗಳಾದ ಆರ್ಯ (2004) ಮತ್ತು ಆರ್ಯ 2 (2009) ಈ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿ ಇಡೀ ಟಾಲಿವುಡ್ ಅನ್ನೇ ಧೂಳು ಎಬ್ಬಿಸಿತ್ತು.
ನಾಯಕ ನಟಿಯಾಗಿ ನ್ಯಾಷನಲ್ ಕ್ರಷ್ ಎಂದು ಕರೆಸಿಕೊಳ್ಳುವ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ವೆನ್ನೆಲಾ ಕಿಶೋರ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫಹದ್ ಫಾಸಿಲ್ ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಮ್ಸೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿವೆ.
ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದಾರೆ ಮತ್ತು ಮೊದಲ ಹಾಡು ಆಗಸ್ಟ್ 13, 2021 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಛಾಯಾಗ್ರಹಣದ ಹೊಣೆಯನ್ನು ಮಿರೋಸ್ಲಾ ಕುಬಾ ಬ್ರೋಜಕ್ ಮಾಡಿದ್ದಾರೆ. ಕಾರ್ತಿಕಾ ಶ್ರೀನಿವಾಸ್ ಚಿತ್ರದ ಸಂಕಲನದ ರೂವಾರಿಯಾಗಿ ಚಿತ್ರವನ್ನು ಚಂದಗಾಣಿಸಿದ್ದಾರೆ.
ಚಿತ್ರದ ಕಥಾವಸ್ತುವು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಶೇಷಚಲಂ ಬೆಟ್ಟಗಳಲ್ಲಿ ಮರಳು ಕಳ್ಳಸಾಗಣೆಯ ಕಥೆಯನ್ನು ಆಧರಿಸಿದೆ. ಈ ಚಿತ್ರವು ಆಗಸ್ಟ್ 13 ರಂದು ಬಿಡುಗಡೆಯಾಗಬಹುದು ಎಂದು ಮೊದಲು ವರದಿಯಾಗಿತ್ತು. ಆದರೆ ಕೋವಿಡ್ ಹಿನ್ನೆಲೆ ಸಿನಿಮಾವನ್ನು ಡಿಸೆಂಬರ್‌ಗೆ ಮುಂದೂಡಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‍ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ