ಮೋಸ್ಟ್ ಎಕ್ಸ್ಪೆಕ್ಟೆಡ್(Most Expected) ಪುಷ್ಪ ಸಿನಿಮಾ(Pushpa) ಟ್ರೈಲರ್ ರಿಲೀಸ್ ಆಗಿ ಯೂಟ್ಯೂಬ್ನಲ್ಲಿ ಧೂಳೆಬಿಸುತ್ತಿದೆ. ಡಿಸೆಂಬರ್ 17ಕ್ಕೆ ಚಿತ್ರಮಂದರಿಕ್ಕೆ ಕಾಲಿಡಲು `ಪುಷ್ಪ’ ರೆಡಿಯಾಗಿದ್ದಾನೆ. ಟ್ರೈಲರ್ ನೋಡಿಯೇ ಫ್ಯಾನ್ಸ್ ಥ್ರಿಲ್(Thrill) ಆಗಿದ್ದಾರೆ. ಸಾಂಗ್ಸ್ಗಳು ಅಷ್ಟೇ ಒಂದಕ್ಕಿಂತ ಒಂದು ಸೂಪರ್ ಆಗಿವೆ. ಈಗಾಗಲೇ ಬಿಡುಗಡೆಯಾಗಿರುವ ಸಾಂಗ್ಗಳು ಸಖತ್ ಸೌಂಡ್ ಮಾಡುತ್ತಿದೆ. ಮತ್ತೊಂದು ವಿಶೇಷ ಅಂದರೆ, ಈ ಸಿನಿಮಾದಲ್ಲಿ ಮೊದಲ ಬಾರಿಗೆ ಸಮಂತಾ(Samantha) ಐಟಂ ಸಾಂಗ್(Item Song) ಮಾಡಿದಿದ್ದಾರೆ. ಅಲ್ಲು ಅರ್ಜುನ್ ಅವರ ರಾ ಲುಕ್ ಎಲ್ಲರಿಗೂ ಇಷ್ಟವಾಗಿದೆ. ಈಗ ಈ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕುತ್ತಿರುವ ಸಮಂತಾ ಅವರ ಲುಕ್ ವೈರಲ್ ಆಗಿದೆ. ಅವರ ಹಾಟ್(Hot) ಅವತಾರ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಐಟಂ ಸಾಂಗ್ ನಾಳೆ ರಿಲೀಸ್ ಆಗಲಿದೆ. ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ನಾಗ ಚೈತನ್ಯ(Naga Chaitanya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿರುವ ಅವರು ಸಿನಿಮಾಗಳ ಆಯ್ಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ‘ಪುಷ್ಪ’ ಸಿನಿಮಾದ ಐಟಂ ಸಾಂಗ್ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಸಮಂತಾ ಫಸ್ಟ್ ಲುಕ್ ರಿಲೀಸ್
ಸಮಂತಾ ನೀಲಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಈ ಫೋಟೋದಲ್ಲಿ ಅವರ ಲುಕ್ ಮಾದಕವಾಗಿದೆ. ಈ ವಿಶೇಷ ಹಾಡನ್ನು ನಾಳೆ ಅಂದರೆ ಡಿಸೆಂಬರ್ 10ರಂದು ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಈ ಮಾತನ್ನು ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಫೋಟೋದಲ್ಲಿ ಅವರು ಇಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ ಅವರು ಹೆಜ್ಜೆ ಹಾಕಿರುವ ಹಾಡು ಇನ್ನು ಹೇಗೆ ಇರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ. ಪಡ್ಡೆ ಹೈಕ್ಳಂತೂ ಜೊಲ್ಲು ಸುರಿಸುತ್ತಾ ಈಕೆಯ ಫೋಟೋವನ್ನೇ ನೋಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟೊಂದು ಹಾಟ್ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ.
Babe 🔥 Samantha#SamanthaRuthPrabhu #PushpaTheRiseTrailer #Pushpa
File : https://t.co/ybff6u9oPF pic.twitter.com/qqt3gdiL7L
— Dark Rum (@DarkRumPintrest) December 8, 2021
ಇದನ್ನು ಓದಿ : `ಪುಷ್ಪ’ ಚಿತ್ರಕ್ಕೆ ಕಾಡುಗಳ್ಳ ವೀರಪ್ಪನ್ ಪ್ರೇರಣೆ? ಅಲ್ಲು ಗೆಟಪ್ ಕಂಡು ಯೆಸ್ ಅಂತಿದ್ದಾರೆ ನೆಟ್ಟಿಗರು!
ಒಂದೇ ಸಿನಿಮಾದಲ್ಲಿ ಇಬ್ಬರು ನಟರಾಕ್ಷಸರು!
ಪುಷ್ಪ ಸಿನಿಮಾದಲ್ಲಿ ಇಬ್ಬರು ನಟರಾಕ್ಷಸರ ಕಾಳಗ ನಡೆಯಲಿದೆ. ಹಿಂದೆಂದೂ ಕಾಣಿಸಿದ ಪಾತ್ರದಲ್ಲಿ ಅಲ್ಲು ಅರ್ಜುನ್ ಕಮಾಲ್ ಮಾಡಲಿದ್ದಾರೆ. ರಕ್ತಚಂದನ ಕಳ್ಳನ ಪಾತ್ರದಲ್ಲಿ ಅಲ್ಲು ಅರ್ಜುನ್ ಸಖತ್ ಲೋಕಲ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಇವರ ಎದುರು ಮಲಯಾಳಂನ ಅದ್ಭುತ ನಟ ಫಹಾದ್ ಫಾಜಿಲ್ ನಟಿಸಿದ್ದಾರೆ. ಇವರ ಪಾತ್ರದ ಬಗ್ಗೆ ಚಿತ್ರತಂಡ ಇಲ್ಲಿಯವರೆಗೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಇವರ ಪಾತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇದೆ. ಟ್ರೈಲರ್ನಲ್ಲೀ ಫಹಾದ್ ಫಾಜಿಲ್ ಕೇವಲ ಮೂರು ಸೆಕೆಂಡ್ಗಳ ಕಾಲ ಮಾತ್ರ ಕಾಣಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ