Pushpa Release Date: ಮುಂಚೆಯೇ ತೆರೆಗಪ್ಪಳಿಸಲಿದೆ "ಪುಷ್ಪ" ! ಡಿ. 17ಕ್ಕೆ ಅಲ್ಲು ಅರ್ಜುನ್ ಸಿನಿಮಾ ರಿಲೀಸ್!

Stylist Star Allu Arjun: ಪುಷ್ಪ ಸಿನಿಮಾಗೆ ಇಷ್ಟೊಂದು ಹೈಪ್ ಕ್ರಿಯೇಟ್ ಆಗಲು ಸಾಕಷ್ಟು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು ಅಲ್ಲು ಅರ್ಜುನ್ ಅವರ ಪಾತ್ರ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲುಕ್

ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲುಕ್

  • Share this:
    ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್(Stylist Star Allu Arjun) ಹಾಗೂ ಕರುನಾಡ ಕ್ರಷ್ ರಶ್ಮಿಕ ಮಂದಣ್ಣ(Rashmika Mandanna) ನಟಿಸಿರುವ, ಟಾಲಿವುಡ್(Tollywood) ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಪುಷ್ಪ ಡಿಸೆಂಬರ್ 17ಕ್ಕೆ ತೆರೆಕಾಣುತ್ತಿದೆ. ಈ ಹಿಂದೆ ಚಿತ್ರತಂಡ ಕ್ರಿಸ್ ಮಸ್(ಡಿಸೆಂಬರ್ 25) ಗೆ ಸಿನಿಮಾ ಬಿಡುಗಡೆಗೊಳಿಸುವ ಪ್ಲಾನ್ ಹೊಂದಿದ್ದರು. ಕ್ರಿಸ್ ಮಸ್ ದಿನದಂದು ರಣವೀರ್ ಸಿಂಗ್ ಅಭಿನಯದ 83 ಸಿನಿಮಾ ಬಿಡಗಡೆಯಾಗಲಿದೆ. ಹೀಗಾಗಿ ಒಂದೇ ದಿನ ಇಬ್ಬರು ದಿಗ್ಗಜರ ಸಿನಿಮಾ ಕ್ಲಾಶ್ ತಪ್ಪಿಸಲು ಒಂದು ವಾರ ಮುಂಚೆಯೇ ಪುಷ್ಪ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಈ ಬಗ್ಗೆ ಟ್ರೇಡ್ ಅನಲಿಸ್ಟ್ ತರನ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಟೀಸರ್ ಮೂಲಕವೇ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾ ಧೂಳೆಬ್ಬಿಸಿದೆ. ಸಿನಿಮಾ ಯಾವಾಗ ತೆರೆಕಾಣುತ್ತೆ ಅಂತ ಅವರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಡಿ.17ರಂದು ವಿಶ್ವಾದ್ಯಂತ ‘ಪುಷ್ಪ’ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಅನೌನ್ಸ್​ ಮಾಡಿದೆ.

    ಕಬೀರ್ ಖಾನ್ ನಿರ್ದೇಶನದ '83' ಸಿನಿಮಾ ಕ್ರಿಸ್ ಮಸ್ ಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ ಪುಷ್ಪ ಸಿನಿಮಾ ನಿರ್ದಿಷ್ಟವಾದ ದಿನಾಂಕವನ್ನು ಘೋಷಣೆ ಮಾಡಿರಲಿಲ್ಲ. ಒಂದೇ ದಿನ 2 ಬಿಗ್ ಸಿನಿಮಾಗಳು ಬಿಡುಗಡೆಯಾದರೆ ಹೇಗೆ ಎಂಬ ಪ್ರಶ್ನೆಯನ್ನು ನೆಟ್ಟಿಗರು ಮುಂದಿಟ್ಟಿದ್ದರು. ಕ್ರಿಕೆಟ್ ನ ದಂತಕಥೆ ಕಪಿಲ್ ದೇವ್ ಅವರ ಜೀವನಾಧಾರಿತ ಸಿನಿಮಾ '83 '. ಕಪಿಲ್ ದೇವ್ ಅವರ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈಗಾಗಲೇ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದು, ಸಿನಿಮಾ ಬಿಡುಗಡೆಗೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಎರಡು ಸಿನಿಮಾಗಳನ್ನು ಒಂದೇ ದಿನ ರಿಲೀಸ್ ಮಾಡದಿರಲು 2 ಚಿತ್ರತಂಡ ನಿರ್ಧಾರ ಮಾಡಿಕೊಂಡಿದೆ.

    ಇದನ್ನೂ ಓದಿ:ಗೋವಾದಲ್ಲಿ ಖರೀದಿಸಿದ ಹೊಸ ಮನೆಯ ಫೋಟೋ ಶೇರ್​ ಮಾಡಿದ Rashmika Mandanna

    ಪುಷ್ಪ ಸಿನಿಮಾಗೆ ಇಷ್ಟೊಂದು ಹೈಪ್ ಕ್ರಿಯೇಟ್ ಆಗಲು ಸಾಕಷ್ಟು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು ಅಲ್ಲು ಅರ್ಜುನ್ ಅವರ ಪಾತ್ರ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಲಾರಿ ಡ್ರೈವರ್ ಪಾತ್ರ ಮಾಡಿದ್ದು, ಅವರ ರಗಡ್ ಲುಕ್ ಸಖತ್ ಕಿಕ್ ಕೊಟ್ಟಿದೆ. ರಕ್ತಚಂದನ ಕಳ್ಳಸಾಗಾಣಿಕೆಯ ಹಿನ್ನೆಲೆಯಲ್ಲಿ ಈ ಚಿತ್ರದ ಕಥೆಯನ್ನ ನಿರ್ದೇಶಕ ಸುಕುಮಾರ್ ಹೆಣೆದಿದ್ದಾರೆ. ಎರಡು ಪಾರ್ಟ್ ನಲ್ಲಿ ಪುಷ್ಪ ಸಿನಿಮಾ ಮೂಡಿ ಬರುತ್ತಿದ್ದು, ಸಿನಿಪ್ರಿಯರಲ್ಲಿ ನಿರೀಕ್ಷೆ ಹುಟ್ಟುಹಾಕಿದೆ..

    ಇನ್ನು ಈ ಸಿನಿಮಾದಲ್ಲಿ ಅಲ್ಲುಅರ್ಜುನ್ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡಿಗ ದಾಲಿ ಧನಂಜಯ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
    ಜೊತೆಗೆ ಪ್ರಕಾಶ್ ರೈ, ಜಗಪತಿ ಬಾಬು ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಪುಷ್ಪ ಸಿನಿಮಾ ಭಾಷೆಗಳಲ್ಲಿ ತೆರೆಕಾಣುತ್ತಿದೆ. ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಗೂ ಡಬ್ ಆಗಿ ಸಿನಿಮಾ ಬಿಡುಗಡೆಗೊಳ್ಳಲಿದೆ. ಇತ್ತೀಚಿಗೆ ರಶ್ಮಿಕಾ ಅವರ ಪಾತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿತ್ತು. ಸಿನಿಮಾದಲ್ಲಿ ರಶ್ಮಿಕಾ ಶ್ರೀವಲ್ಲಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.



    • ವರದಿ - ವಾಸುದೇವ್.ಎಂ

    Published by:Latha CG
    First published: