ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್‌ ಬರ್ತ್‌ಡೇಗೆ ʻಪುಷ್ಪʼ ಟೀಸರ್‌ ಗಿಫ್ಟ್

ಅಲ್ಲು ಅರ್ಜುನ್ - ರಶ್ಮಿಕಾ ಮಂದಣ್ಣ.

ಅಲ್ಲು ಅರ್ಜುನ್ - ರಶ್ಮಿಕಾ ಮಂದಣ್ಣ.

ಈ ಚಿತ್ರದಲ್ಲಿ ದಕ್ಷಿಣದ ಪ್ರತಿಭಾವಂತ ನಟರಾದ ಫಹದ್‌ ಫಸಲ್‌, ಧನಂಜಯ ಸಹ ಅಭಿನಯಿಸಿದ್ದಾರೆ. ಅಲ್ಲು ಅರ್ಜುನ್‌ ಮತ್ತು ಸುಕುಮಾರ್‌ ಕಾಂಬಿನೇಶನ್‌ನಲ್ಲಿ ಬಂದಿದ್ದ ಆರ್ಯ, ಆರ್ಯ-2 ಚಿತ್ರಗಳು ಸೂಪರ್‌ ಹಿಟ್‌ ಆಗಿದ್ದವು.

 • Share this:

  ಸ್ಟೈಲಿಶ್‌ ಸ್ಟಾರ್‌ ಅಭಿಮಾನಿಗಳಿಗೆ ಇಂದು ಡಬಲ್‌ ಧಮಾಕಾ.. ಏಪ್ರಿಲ್‌ 8ರಂದು ಅಲ್ಲು ಅರ್ಜುನ್‌ ಬರ್ತ್‌ಡೇ. ಇದೆ ವೇಳೆ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌ ಸೇರಿದಂತೆ ಸಿನಿ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಪ್ಯಾನ್‌ ಇಂಡಿಯಾ ಮೂವಿ ʻಪುಷ್ಪʼ ಟೀಸರ್‌ ರಿಲೀಸ್‌ ಆಗಿದೆ. ಮೈತ್ರಿ ಮೂವೀಸ್‌ ಬ್ಯಾನರ್‌ನಲ್ಲಿ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು ಸುಕುಮಾರ್‌ ನಿರ್ದೇಶನದ ʻಪುಷ್ಪʼ ಸಿನಿಮಾ 2021 ರ ಆಗಸ್ಟ್‌ 13 ರಂದು ಕನ್ನಡ, ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ.


  ಈ ಚಿತ್ರದಲ್ಲಿ ದಕ್ಷಿಣದ ಪ್ರತಿಭಾವಂತ ನಟರಾದ ಫಹದ್‌ ಫಸಲ್‌, ಧನಂಜಯ ಸಹ ಅಭಿನಯಿಸಿದ್ದಾರೆ. ಅಲ್ಲು ಅರ್ಜುನ್‌ ಮತ್ತು ಸುಕುಮಾರ್‌ ಕಾಂಬಿನೇಶನ್‌ನಲ್ಲಿ ಬಂದಿದ್ದ ಆರ್ಯ, ಆರ್ಯ-2 ಚಿತ್ರಗಳು ಸೂಪರ್‌ ಹಿಟ್‌ ಆಗಿದ್ದವು. ಇದೀಗ ಇದೇ ಕಾಂಬಿನೇಶನ್‌ನಲ್ಲಿ ವಿಭಿನ್ನ ಕಥಾಹಂದರದ ಜೊತೆ ಬರ್ತಿರೋ ʻಪುಷ್ಪʼ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.


  ಇದನ್ನೂ ಓದಿ: Harshika Poonacha: ಉತ್ತರ ಕರ್ನಾಟಕ ಶೈಲಿಯಲ್ಲಿ ಕಾಣಿಸಿದ ಹರ್ಷಿಕಾ ಪೂಣಚ್ಚ..!


  ಆಂಧ್ರಪ್ರದೇಶ ಹಾಗೂ ತೆಲಂಗಾಣ ಅಲ್ಲದೆ ಈ ಚಿತ್ರ ಇಡೀ ದಕ್ಷಿಣ ಭಾರತದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಭಾರತದ ಕ್ರಶ್ ಕನ್ನಡತಿ ರಶ್ಮಿಕಾ ಮಂದಣ್ಣ ಸಹ ಅಭಿನಯಿಸಿರುವುದು ವಿಶೇಷ. ಇದೇ ಕಾರಣಕ್ಕೆ ಕನ್ನಡಿಗರೂ ಸಹ ಈ ಚಿತ್ರದ ಬಿಡುಗಡೆಗೆ ಕಾದು ಕುಳಿತಿದ್ದಾರೆ. ಅಲ್ಲದೆ, ಈ ಚಿತ್ರ ಟಾಲಿವುಡ್ ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ನಿರ್ಮಿಸಲಿದೆ ಎಂದೂ ಹೇಳಲಾಗುತ್ತಿದೆ.

  Published by:MAshok Kumar
  First published: