‘ಪುಷ್ಪ’ ಸಿನಿಮಾ ಸೂಪರ್ ಹಿಟ್ (Super Hit) ಆಗಿದೆ. ಕೇವಲ 20 ದಿನಗಳಲ್ಲಿ 300 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆ ಆದ ಕೇವಲ 20 ದಿನಕ್ಕೆ ಒಟಿಟಿ (OTT)ಯಲ್ಲಿ ಬಿಡುಗಡೆ ಆಗಿದೆ. ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಪುಷ್ಪ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಬಾಕ್ಸಾಫಿಸ್ (Box Office)ನಲ್ಲಿ ಪುಷ್ಪ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಗಳಿಕೆಯಲ್ಲಿ ಒಂದೊಂದೇ ದಾಖಲೆಗಳನ್ನು ಬ್ರೇಕ್ ಮಾಡಿಕೊಂಡು ಬಂದಿತ್ತು. ಇದೀಗ ಒಟಿಟಿ (OTT)ಯಲ್ಲೂ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ. ‘ಪುಷ್ಪ’ ಚಿತ್ರದಲ್ಲಿರುವ ಹಾಡುಗಳು ಕೂಡ ಸಖತ್ ಸೌಂಡ್ ಮಾಡಿತ್ತು. ಊ ಅಂಟಾವಾ ಮಾವ.. ಸಾಂಗ್ ಅಂತು ಯೂಟ್ಯೂಬ್ನಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಇನ್ನೂ ‘ಸಾಮಿ ಸಾಮಿ’ ಹಾಡು ಕೂಡ ಫುಲ್ ಫೇಮಸ್ ಆಗಿತ್ತು.ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಮೂಡಿಬಂದ ಈಗ ಹಾಡು ಸೂಪರ್ ಹಿಟ್ ಆಗಿದೆ. ಎಲ್ಲೇ ಹೋದರು ಈ ಸಾಂಗ್ ಅಂತೂ ಇದ್ದೆ ಇರುತ್ತೆ. ಎಲ್ಲರ ಬಾಯಲ್ಲೂ ಇದೇ ಹಾಡಿನ ಸಾಲುಗಳು. ಇದೀಗ ಈ ಹಾಡಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಹಾಡನ್ನು ಮದುವೆ ಮನೆ, ಹಲವಾರು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿರುವುದನ್ನು ಎಲ್ಲರೂ ನೋಡಿದ್ದೇವೆ. ಆದರೆ, ಈಗ ವೈರಲ್ ಆಗಿರುವ ವಿಡಯೋ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ದೇವಸ್ಥಾನ (Temple)ದ ಪೂಜೆ ಸಮಯದಲ್ಲಿ ‘ಸಾಮಿ ಸಾಮಿ’ ಗೀತೆ ಕೇಳಿಸುತ್ತಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವು ಈ ವಿಡಿಯೋವನ್ನು ನೋಡಿದರೆ.. ಶಾಕ್ ಆಗುತ್ತೀರ.
ದೇವಸ್ಥಾನದ ಉತ್ಸವದಲ್ಲಿ ಕೇಳಿಬಂತು ‘ಸಾಮಿ ಸಾಮಿ’ ಹಾಡು!
ದೇವಸ್ಥಾನದ ಉತ್ಸವಗಳಲ್ಲಿ ಅನೇಕ ಬಗೆಯ ವಾದ್ಯಗಳನ್ನು ನುಡಿಸುವುದು ವಾಡಿಕೆ. ಕೇರಳದ ಒಂದು ದೇವಸ್ಥಾನದಲ್ಲಿ ವಾರ್ಷಿಕ ಪೂಜೆಯ ಸಂದರ್ಭದಲ್ಲಿ ಅಲ್ಲಿನ ವಾದ್ಯದವರು ‘ಸಾಮಿ ಸಾಮಿ..’ ಹಾಡಿನ ಟ್ಯೂನ್ ನುಡಿಸಿದ್ದಾರೆ. ಆ ವಿಡಿಯೋವನ್ನು ಅನೇಕರು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಹಾಡು ಎಷ್ಟರ ಮಟ್ಟಿಗೆ ಫೇಮಸ್ ಆಗಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಅನೇಕರು ಈ ವಿಡಿಯೋಗಳನ್ನು ಶೇರ್ ಮಾಡಿಕೊಂಡು ಫನ್ನಿ ಕಮೆಂಟ್ಗಳನ್ನು ನೀಡುತ್ತಿದ್ದಾರೆ.‘ಪುಷ್ಪ’ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
#SaamiSaami song reach is beyond all expectation..!!
Ita been used in the traditional temple fest as well in Kerala..🙏🙏
A @ThisIsDSP masterpiece..!!#PushpaTheRise #Pushpa #PushpaOnPrime #AlluArjun pic.twitter.com/FgWPCxxAv5
— Arjun 🪓 (@ArjunVcOnline) January 8, 2022
ಇದನ್ನು ಓದಿ : ಅಯ್ಯೋ ಇದೇನ್ ಹಿಂಗಿದೆ.. ರಸ್ಮಿಕಾ ಮಾಡೋಣ ಅಂತೆ.. ಒಂದ್ ಹೆಸ್ರು ಬರೆಯೋಕೂ ಬರಲ್ವಾ?
ರಸ್ಮಿಕಾ ಮಾಡೋಣ ಎಂದು ಹೆಸರು ಕೊಟ್ಟ ಚಿತ್ರತಂಡ!
ಡಿಸೆಂಬರ್ 07ರಂದು 'ಪುಷ್ಪ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು ಸಿನಿಮಾ ಅಂತ್ಯವಾದ ಬಳಿಕ ಟೈಟಲ್ ಕಾರ್ಡ್ ಪ್ರದರ್ಶಿಸಲಾಗಿದೆ. ಪ್ರತಿಯೊಬ್ಬ ನಟರ ಚಿತ್ರದೊಟ್ಟಿಗೆ ಇಂಗ್ಲೀಷ್‌ನಲ್ಲಿ ಅವರ ಹೆಸರನ್ನು ಹಾಕಲಾಗಿದೆ. ಮೊದಲಿಗೆ ನಾಯಕ ಅಲ್ಲು ಅರ್ಜುನ್, ನಂತರ ನಟ ಫಹಾದ್ ಫಾಸಿಲ್ ಬಳಿಕ ರಶ್ಮಿಕಾ ಮಂದಣ್ಣ ಹೆಸರು ಹಾಕಲಾಗಿದೆ. ಆದರೆ ಇಂಗ್ಲೀಷ್‌ನಲ್ಲಿ ರಶ್ಮಿಕಾ ಮಂದಣ್ಣ ಎಂದು ಬರೆವ ಬದಲಿಗೆ 'ರಸ್ಮಿಕಾ ಮಾಡೋಣ' ಎಂದು ಬರೆಯಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಮೊದಲೇ ಸಿನಿಮಾ ಬಿಡುಗಡೆಯಾದಗ ಭಾರೀ ಟ್ರೋಲ್ ಆಗಿತ್ತು. ಇದೀಗ ಒಟಿಟಿಯಲ್ಲಿ ರಿಲೀಸ್ ಆದಾಗಲೂ ಟ್ರೋಲ್ ಆಗುತ್ತಿದೆ.
ಇದನ್ನು ಓದಿ : ಸಲ್ಮಾನ್ ಖಾನ್ ಜೊತೆ ಕೇಳಿ ಬಂತು ಸಮಂತಾ ಹೆಸರು, ಅರೇ... ಆ ಸಮಂತಾ ಅಲ್ಲ ರೀ... ಇವ್ರೇ ಬೇರೆ!
ಸೌಂಡ್ ಮಾಡುತ್ತಲೇ ಇದೆ ‘ಪುಷ್ಪ’ ಸಿನಿಮಾ!
ಸಿನಿಮಾ ಬಿಡುಗಡೆಯಾದಗಿನಿಂದಲೂ ‘ಪುಷ್ಪ’ ಸಿನಿಮಾ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಮೊದಲು ಸಿನಿಮಾ ಹಾಡಿನ ಸಾಹಿತ್ಯದ ಬಗ್ಗೆ ವಿವಾದ ಎದ್ದಿತ್ತು.ಪ್ರಮೋಷನ್ ವೇಳೆ ರಶ್ಮಿಕಾ ಕನ್ನಡದಲ್ಲಿ ಡಬ್ ಮಾಡದೇ ಇರುವುದಕ್ಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ದೇವಿ ಶ್ರೀ ಪ್ರಸಾದ ಐಟಂ ಸಾಂಗ್ ಅನ್ನು ದೇವರ ಹಾಡುಗಳಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದರು. ಹೀಗೆ ಒಂದಲ್ಲ ಒಂದು ಕಾರಣಗಳಿಗೆ ‘ಪುಷ್ಪ’ ಸಿನಿಮಾ ಸುದ್ದಿಯಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ