`ಪುಷ್ಪ’ ಚಿತ್ರದ ಹಾಟ್​ ಐಟಂ ಸಾಂಗ್​ ರಿಲೀಸ್​: ಸಮಂತಾ ಮಾದಕ ಲುಕ್​ಗೆ ಮನಸೋತ ಫ್ಯಾನ್ಸ್!

'ಹೂ ಅಂಟಾವ, ಮಾಮ ಊ ಹೂ ಅಂಟಾವ' ಎಂಬ ಮಾದಕ ಸಾಹಿತ್ಯವುಳ್ಳ ಹಾಡಿನ ಲಿರಿಕಲ್ ವಿಡಿಯೋ  ಬಿಡುಗಡೆ ಆಗಿದ್ದು ಹಾಡಿನ ವಿಡಿಯೋನಲ್ಲಿ ಸಮಂತಾರ ಮಾದಕ ಚಿತ್ರಗಳನ್ನು ಸಹ ನೀಡಲಾಗಿದೆ.

ನಟಿ ಸಮಂತಾ

ನಟಿ ಸಮಂತಾ

  • Share this:
ಸಮಂತಾ(Samantha) ಸದ್ಯಕ್ಕೆ ಟಾಕ್​ ಆಫ್​​ ದಿ ಟೌನ್(Talk Of The Town)​.. ಕೆಲ ತಿಂಗಳುಗಳಿಂದ ಸಮಂತಾ ಸುದ್ದಿಯಲ್ಲಿದ್ದಾರೆ. ಅದು ಸಿನಿಮಾ ವಿಚಾರವಿರಲಿ, ಅವರ ವಯಕ್ತಿಕ ವಿಚಾರವಿರಲಿ, ಒಟ್ಟಿನಲ್ಲಿ ಸಮಂತಾ ಕುರಿತ ಸುದ್ದಿಗಳು ಭಾರೀ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಸಮಂತಾ-ನಾಗಚೈತನ್ಯ(Naga Chaitanya) ವಿಚ್ಚೇದನ ವಿಚಾರ ಸಖತ್​ ಸುದ್ದಿಯಾಗಿತ್ತು. ಇದಾದ ಬಳಿಕ ಹಾಲಿವುಡ್(Hollywood)​ಗೆ ಸಮಂತಾ ಹಾರಿದ್ದರು. ಇನ್ನೂ ಪುಷ್ಪ ಚಿತ್ರದಲ್ಲಿ ಫಸ್ಟ್ ಟೈಂ ಐಟಂ ಸಾಂಗ್​ನಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಈ ಹಾಡಿನ ಫಸ್ಟ್​ ಲುಕ್​ ಸಖತ್​ ವೈರಲ್ ಆಗಿತ್ತು, ಇದೀಗ ‘ಪುಷ್ಪ’(Pushpa) ಚಿತ್ರದಲ್ಲಿ ನಟಿ ಸಮಂತಾ ಅಭಿನಯಿಸಿರುವ ಐಟಂ ಹಾಡಿನ ಲಿರಿಕಲ್​ ಸಾಂಗ್​(Lyrical Song) ರಿಲೀಸ್​ ಆಗಿದ್ದು, ಯೂಟ್ಯೂಬ್​ನಲ್ಲಿ ಧೂಳೆಬೀಸುತ್ತಿದೆ. ಅಲ್ಲು ಅರ್ಜುನ್​ ಅಭಿನಯದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ‘ಪುಷ್ಪ’ ಸಿನಿಮಾ ಅನೌನ್ಸ್(Announce)​ ಆದಾಗಿನಿಂದಲೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿ ಇದೆ. ಟೀಸರ್​, ಸಾಂಗ್ಸ್​​ ಮೂಲಕವೇ ಕಮಾಲ್​ ಮಾಡಿದ್ದ‘ಪುಷ್ಪ’, ಟ್ರೈಲರ್(Trailer)​ ಮೂಲಕವೇ ಬೆಂಕಿ ಹಚ್ಚಿತ್ತು. ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶಿಸಿರುವ ಹಾಡಿಗೆ ಇಂದ್ರವತಿ ಚೌಹಾಣ್ ಮಾದಕ ಕಂಠದಿಂದ ಇನ್ನಷ್ಟು ಗ್ಲಾಮರಸ್ ಲುಕ್ ತುಂಬಿದ್ದಾರೆ.ಈ ಸಿನಿಮಾದ ಪ್ರತಿಯೊಂದು ಸಾಂಗ್​ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದರು. ಇದೀಗ ಸಮಂತಾ ಅವರ ಮಾದಕ ನೃತ್ಯಕ್ಕೆ ಫ್ಯಾನ್ಸ್​ ಮನಸೋತಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಸಮಂತಾ ಅವ ಹಾಟ್ ಲುಕ್​ ಕಂಡು ಅಭಿಮಾನಿಗಳು ಕ್ಲೀನ್​ ಬೋಲ್ಡ್​ ಆಗಿದ್ದಾರೆ. 

'ಹೂ ಅಂಟಾವ, ಮಾಮ ಊ ಹೂ ಅಂಟಾವ' ಎಂದ ಸಮಂತಾ!

'ಹೂ ಅಂಟಾವ, ಮಾಮ ಊ ಹೂ ಅಂಟಾವ' ಎಂಬ ಮಾದಕ ಸಾಹಿತ್ಯವುಳ್ಳ ಹಾಡಿನ ಲಿರಿಕಲ್ ವಿಡಿಯೋ  ಬಿಡುಗಡೆ ಆಗಿದ್ದು ಹಾಡಿನ ವಿಡಿಯೋನಲ್ಲಿ ಸಮಂತಾರ ಮಾದಕ ಚಿತ್ರಗಳನ್ನು ಸಹ ನೀಡಲಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ಮುನ್ನುಗುತ್ತಿದೆ. ಈ  ಐಟಂ ಸಾಂಗ್​ಗೆ ಸಿನಿಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಟಾಲಿವುಡ್ ನಟಿ ಸಮಂತಾ ನೀಲಿ ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ವಿಶೇಷವಾಗಿ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್‌ನಲ್ಲಿ ಈ ವರ್ಷದ ರಾಕಿಂಗ್ ಹಾಡಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಸಮಂತಾ ಹೆಜ್ಜೆ ಹಾಕಿದ್ದಾರೆ. ಈ ಪೆಪ್ಪಿ ಹಾಡಿಗೆ ಬಾಲಿವುಡ್‌ನ ಹೆಸರಾಂತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ನೃತ್ಯ ಸಂಯೋಜಿಸಿದ್ದಾರೆ.

ಇದನ್ನು ಓದಿ : ಜೂ. ಎನ್​ಟಿಆರ್ ಕನ್ನಡದ ಡಬಿಂಗ್ ನೋಡಿ ಖುಷಿಪಟ್ರಂತೆ ಅವರ ಕನ್ನಡಿಗ ತಾಯಿ

ಅಬ್ಬಬ್ಬಾ...ಏನ್​ ಹಾಟ್​ ಗುರೂ ಸಮಂತಾ!
 ಮುಖ್ಯವಾಗಿ ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಹಾಡಿನ ಲಿರಿಕಲ್ ವಿಡಿಯೋದಲ್ಲಿ ಸಮಂತಾರ ಕೆಲವು ಚಿತ್ರಗಳನ್ನು ನೀಡಲಾಗಿದ್ದು ಕಪ್ಪು ಬಣ್ಣದ ರವಿಕೆ, ನೀಲಿ ಬಣ್ಣದ ತುಂಡು ಲಂಗ ತೊಟ್ಟು ಬಹಳ ಹಾಟ್ ಆಗಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸಮಂತಾರ ಈ ಲುಕ್ ನೋಡಿ ಅಭಿಮಾನಿಗಳು ಹುಬ್ಬೇರಿಸುವುದಂತೂ ಪಕ್ಕಾ. ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶಿಸಿರುವ ಹಾಡಿಗೆ ಇಂದ್ರವತಿ ಚೌಹಾಣ್ ಮಾದಕ ಕಂಠದಿಂದ ಇನ್ನಷ್ಟು ಗ್ಲಾಮರಸ್ ಲುಕ್ ತುಂಬಿದ್ದಾರೆ.
ಸತ್ತೇ ಹೋಗ್ತಿನಿ ಅಂದಿದ್ಯಾಕೇ ಸಮಂತಾ!


ಫಿಲ್ಮ್​ ಫೇರ್​ ಸಂದರ್ಶನವೊಂದರಲ್ಲಿ ಸಮಂತಾ ನಾಗಚೈತನ್ಯರೊಂದಿಗೆ ಬೇರೆಯಾಗಿದ್ದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜೀವನದಲ್ಲಿ ಕಷ್ಟದ ದಿನಗಳು ಬರುವುದು ಸಾಮಾನ್ಯ. ಅದನ್ನು ನಾವು ಧೈರ್ಯದಿಂದ ಎದುರಿಸಬೇಕು,ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮಗೆ ಇರಬೇಕು. ನಾನು ನನ್ನನ್ನು ತುಂಬಾ ದುರ್ಬಲ ವ್ಯಕ್ತಿ ಎಂದು ಭಾವಿಸಿದ್ದೆ, ವಿಚ್ಛೇದನದ ಬಳಿಕ ಕುಗ್ಗಿ ಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ ಆದರೆ ನನ್ನನ್ನು ನಾನು ಸಮರ್ಥವಾಗಿ ನಿಭಾಯಿಸಿಕೊಂಡಿದ್ದೇನೆ. ನನ್ನ ಮನಸ್ಥಿತಿ ಇಷ್ಟು ಬಲವಾಗಿದೆ ಎಂದು ಭಾವಿಸಿರಲಿಲ್ಲ. ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಇನ್ನು ಜೀವನದಲ್ಲಿ ಬಹಳ ಮುಂದೆ ಸಾಗಬೇಕಿದೆ ಎಂದು ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.

Published by:Vasudeva M
First published: