`ಪುಷ್ಪ’ ಚಿತ್ರಕ್ಕೆ ಕಾಡುಗಳ್ಳ ವೀರಪ್ಪನ್​ ಪ್ರೇರಣೆ? ಅಲ್ಲು ಗೆಟಪ್​ ಕಂಡು ಯೆಸ್​​ ಅಂತಿದ್ದಾರೆ ನೆಟ್ಟಿಗರು!

ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರ ಪಾತ್ರ ವೀರಪ್ಪನ್​ನಂತೆ ಇದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ವೀರಪ್ಪನ್​ನನ್ನು ಪ್ರೇರಣೆಯಾಗಿ ಇಟ್ಟುಕೊಂಡೇ ಕಥೆ ಸೃಷ್ಟಿಯಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. 

ವೀರಪ್ಪನ್​, ಅಲ್ಲು ಅರ್ಜುನ್​

ವೀರಪ್ಪನ್​, ಅಲ್ಲು ಅರ್ಜುನ್​

  • Share this:
ಟ್ರೈಲರ್​(Trailer)ನಲ್ಲೇ ಅಲ್ಲು ಅರ್ಜುನ್​ ಅಭಿನಯದ ಮೋಸ್ಟ್​ ಎಕ್ಸ್​ಪೆಕ್ಟೆಡ್​​ ಸಿನಿಮಾ ಪುಷ್ಪ(Pushpa) ಸಖತ್​ ಸೌಂಡ್ ಮಾಡುತ್ತಿದ್ದೆ. ಇಂದು ರಿಲೀಸ್ ಆಗಿರುವ ಟ್ರೈಲರ್​ನಲ್ಲೇ ಇಂಟರ್​ನೆಟ್​ ಅಲ್ಲಿ ಅಲ್ಲು ಅರ್ಜುನ್​ ಬೆಂಕಿ(Fir) ಹಚ್ಚಿದ್ದಾರೆ. ಏಯ್​ ಬಿಡ್ಡಾ.. ಇದು ಅಲ್ಲು ಅಡ್ಡ ಅಂತ ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ. ಟ್ರೈಲರ್​ ನೋಡಿದ ಪ್ರತಿಯೊಬ್ಬರಿಗೂ ಈ ಸಿನಿಮಾ ಮೇಲಿದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅಬ್ಬಬ್ಬಾ ಟ್ರೈಲರ್​​​ನಲ್ಲೇ ಇಷ್ಟು ಕಿಕ್​ ಇದೆ. ಇನ್ನೂ ಸಿನಿಮಾದಲ್ಲಿ ಅದೆಷ್ಟು ಥ್ರಿಲ್(Thrill)​ ಇರಬೇಡ ಅಂತ ಫ್ಯಾನ್ಸ್​(Fans ಮಾತನಾಡಿಕೊಳ್ಳುತ್ತಿದ್ದಾರೆ. ಡಿಸೆಂಬರ್​ 17ರಂದು ಪುಷ್ಪ ವಿಶ್ವದಾದ್ಯಂತ ತೆರೆಕಾಣುತ್ತಿದೆ. ಯಾವಾಗ ಡಿಸೆಂಬರ್(December)​​ 17 ಆಗುತ್ತೆ ಗುರೂ ಅಂತ ಅಲ್ಲು ಅಭಿಮಾನಿಗಳು ಜಪ ಮಾಡುತ್ತಿದ್ದಾರೆ.  ಇದರ ಮಧ್ಯೆ ಹೊಸ ವಿಚಾರ ಅಂದರೆ, ಈ ಪುಷ್ಪ ಚಿತ್ರಕ್ಕೆ ಕಾಡುಗಳ್ಳ ವೀರಪ್ಪನ್(Veerappan)​ ಪ್ರೇರಣೆನಾ ಎಂಬ ಪ್ರಶ್ನೆಯನ್ನು ನೆಟ್ಟಿಗರು ಇಟ್ಟಿದ್ದಾರೆ. ಯಾಕೆಂದರೆ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರ ಪಾತ್ರ ವೀರಪ್ಪನ್​ನಂತೆ ಇದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ವೀರಪ್ಪನ್​ನನ್ನು ಪ್ರೇರಣೆಯಾಗಿ ಇಟ್ಟುಕೊಂಡೇ ಕಥೆ ಸೃಷ್ಟಿಯಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. 

 ವೀರಪ್ಪನ್​ ಪ್ರೇರಣೆಯಾ ‘ಪುಷ್ಪ’ ಪಾತ್ರ?
 ರಕ್ತಚಂದನ ಕಳ್ಳಸಾಗಾಣಿಕೆ ಕುರಿತು ಈ ಸಿನಿಮಾವಿದೆ. ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಅಲ್ಲು ಅರ್ಜುನ್ ವಿಭಿನ್ನವಾದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಾರಿ ಡ್ರೈವರ್ ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದಾರೆ. ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್ ಮೂರು, ನಾಲ್ಕು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಒಂದು ಗೆಟಪ್ ಮಾತ್ರ ವೀರಪ್ಪನ್ ಅವರನ್ನು ಹೋಲುತ್ತದೆ. ಕಾಡುಗಳ್ಳ ವೀರಪ್ಪನ್ ಕೂಡ ಕಳ್ಳಸಾಗಾಣಿಕೆ ಮಾಡಿ ಕುಖ್ಯಾತಿ ಪಡೆದಿದ್ದರು. ಹಾಗಾಗಿ ವೀರಪ್ಪನ್ ಪ್ರಭಾವ ಪುಷ್ಪರಾಜ್ ಮೇಲಿದೆಯೇ ಎಂಬ ಅನುಮಾನ ಶುರುವಾಗಿದೆ. ವೀರಪ್ಪನ್ ಕುರಿತು ಕನ್ನಡದಲ್ಲಿ ಎರಡು ಸಿನಿಮಾಗಳು ಬಂದಿವೆ. ಕಿಲ್ಲಿಂಗ್​ ವೀರಪ್ಪನ್, ಹಾಗೂ ಅಟ್ಟಹಾಸ ಸಿನಿಮಾಗಳು ಬಂದಿವೆ.
ಡಿಸೆಂಬರ್​ 17 ಥಿಯೇಟರ್​ ಟಾಪ್​ ಕಿತ್ತೋಗೋದು ಗ್ಯಾರಂಟಿ!


ಟ್ರೈಲರ್​ ನೋಡಿ ಫ್ಯಾನ್ಸ್​ಗಳು ಫುಲ್​ ಥ್ರಿಲ್​ ಆಗಿದ್ದಾರೆ. ಇನ್ನೂ ಸಿನಿಮಾ ರಿಲೀಸ್​ ಆದ ದಿನ ಚಿತ್ರಮಂದಿರಗಳಲ್ಲಿ ‘ಜನಪ್ರಳಯ’ ಆಗೋದು ಗ್ಯಾರಂಟಿ. ಟ್ರೈಲರ್​​ ಅನ್ನೇ ಜನ ಮತ್ತೆ ಮತ್ತೆ ನೋಡುತ್ತಿದ್ದಾರೆ. ಇನ್ನೂ ಸಿನಿಮಾ ರಿಲೀಸ್​ ಆದರೆ ಕೇಳಬೇಕಾ. ಇನ್ನೂ ಟ್ರೈಲರ್​​ನಲ್ಲಿ ಅಲ್ಲು ಅವರ ಎಂಟ್ರಿನೇ ಫುಲ್ ಮಾಸ್​ ಆಗಿ ಇದೆ. ಸಿನಿಮಾದಲ್ಲಿ ಇದಕ್ಕೂ ಹೆಚ್ಚಿನದ್ದೇ ಇರಲಿದ್ಯಂತೆ. ಅದ್ಭುತ ಹಿನ್ನಲೆ ಸಂಗೀತ, ಮಾಸ್ ಫೈಟ್ಸ್​​, ಅಲ್ಲು ಧಮಾಕಾ, ಭರ್ಜರಿ ಡೈಲಾಗ್ಸ್​ ಅಬ್ಬಬ್ಬಾ..ಹೇಳುತ್ತಾ ಹೋದರೆ ಒಂದಾ.. ಎರಡಾ.. ಪುಷ್ಪ ಸಿನಿಮಾ ಬ್ಲಾಕ್​ ಬ್ಲಸ್ಟರ್​ ಹಿಟ್​ ಆಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಡಿಸೆಂಬರ್​​ 17ರವರೆಗೆ ಅಭಿಮಾನಿಗಳು ಕಾಯಬೇಕು ಅಷ್ಟೆ.
ಬರಲಿದೆ ಪುಷ್ಪ ಪಾರ್ಟ್​ 2


ಅಲ್ಲು ಅರ್ಜುನ್‌ಗೆ ಜೊತೆಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ಈ ಹಿಂದೆ ಯಾವತ್ತೂ ಈ ರೀತಿ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ರಶ್ಮಿಕಾ ಹೇಗೆ ಪಾತ್ರವನ್ನು ನಿಭಾಯಿಸಿಕೊಂಡು ಹೋಗಿದ್ದಾರೆ ಎಂದು ಅವರು ಅಭಿಮಾನಿಗಳು ಕುತೂಹಲ ಇಟ್ಟುಕೊಂಡಿದ್ದಾರೆ. ರಿಲೀಸ್‌ಗೂ ಮುಂಚೆಯೇ 'ಪುಷ್ಪ 2' ಕೂಡ ಬರಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ.ಹೀಗಾಗಿ ಈ ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿದೆ.


Published by:Vasudeva M
First published: