Rashmika Madanna: ಶಾಲಾ ಕಾರ್ಯಕ್ರಮದಲ್ಲಿ ಶ್ರೀವಲ್ಲಿ ಸಖತ್​ ಡ್ಯಾನ್ಸ್​; ಬಾಲ್ಯದ ಫೋಟೋದಲ್ಲಿ She So Cute!

ರಶ್ಮಿಕಾ ತನ್ನ ಶಾಲೆಯ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಡ್ಯಾನ್ಸ್​ ಪ್ರದರ್ಶನ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಥ್ರೋಬ್ಯಾಕ್ ಪೋಸ್ಟ್ ಅನ್ನು ಹಂಚಿಕೊಂಡ ನಟಿ, ನಾನು ಯಾವ ಹಾಡಿಗೆ ನೃತ್ಯ ಮಾಡುತ್ತಿದ್ದೇನೆ ಎಂದು ಊಹಿಸಿ ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ರಶ್ಮಿಕಾ ಬಾಲ್ಯದ ಫೋಟೋ

ರಶ್ಮಿಕಾ ಬಾಲ್ಯದ ಫೋಟೋ

  • Share this:
ಬಹುಭಾಷಾ ನಟಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Madanna) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ (Busy) ಆಗಿದ್ದಾರೆ. ಪುಪ್ಪ ಚಿತ್ರದ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್ (Pan India) ಆಗಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ಅಭಿಮಾನಿಗಳ ಮನಗೆದ್ದ ರಶ್ಮಿಕಾ, ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್​ ಆಗಿರೋ ರಶ್ಮಿಕಾ ತನ್ನ ವೈಯಕ್ತಿಕ ಹಾಗೂ ಸಿನಿಮಾ ಕುರಿತ ವಿಚಾರಗಳನ್ನು ಹಂಚಿಕೊಳ್ತಾರೆ. ಅನೇಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇದೀಗ ಬಾಲಿವುಡ್​​ನಲ್ಲೂ ರಶ್ಮಿಕಾ ಬ್ಯುಸಿ ಆಗಿದ್ದಾರೆ.

ರಶ್ಮಿಕಾ ಮಂದಣ್ಣ ದಕ್ಷಿಣದ ಪ್ರಸಿದ್ಧ ನಟಿಯಾಗಿ ಫುಲ್​ ಫೇಮಸ್​ ಆಗಿದ್ದಾರೆ. ಟಾಲಿವುಡ್​​, ಕಾಲಿವುಡ್​ಗಳಲ್ಲಿ ಬಹುಬೇಡಿಕೆ ನಟಿಯಾಗಿದ್ದಾಳೆ. ಇದೀಗ ಬಾಲಿವುಡ್​​ಗೆ ಎಂಟ್ರಿ ಕೊಟ್ಟಿರೋ ರಶ್ಮಿಕಾ, ತನ್ನ ಬಾಲ್ಯದ ಫೋಟೋಗಳನ್ನು ಸಹ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ರಶ್ಮಿಕಾ ಹಂಚಿಕೊಡಿದ್ದ ಬಾಲ್ಯದ ಫೋಟೋ ಇದೀಗ ವೈರಲ್​ ಆಗಿದೆ.

ಬಾಲ್ಯದ ಫೋಟೋದಲ್ಲಿ She So Cute!

ರಶ್ಮಿಕಾ ತನ್ನ ಶಾಲೆಯ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಡ್ಯಾನ್ಸ್​ ಪ್ರದರ್ಶನ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಥ್ರೋಬ್ಯಾಕ್ ಪೋಸ್ಟ್ ಅನ್ನು ಹಂಚಿಕೊಂಡ ನಟಿ, ನಾನು ಯಾವ ಹಾಡಿಗೆ ನೃತ್ಯ ಮಾಡುತ್ತಿದ್ದೇನೆ ಎಂದು ಊಹಿಸಿ ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದರೊಂದಿಗೆ, ಅವರು ಈ ಹಾಡಿಗೆ 2004/2005ರಲ್ಲಿ ನೃತ್ಯ ಮಾಡಿರೋದಾಗಿ ಬರೆದುಕೊಂಡಿದ್ದಾರೆ.


ರಶ್ಮಿಕಾ ಮುದ್ದಾದ ಫೋಟೋಗೆ ನೆಟ್ಟಿಗರ ಕಾಮೆಂಟ್​

ರಶ್ಮಿಕಾ ಫೋಟೋಗೆ ಅಭಿಮಾನಿಗಳು ಕಾಮೆಂಟ್​ ಮಾಡಿದ್ದಾರೆ. ಅನೇಕರು ಇದು ಬಾಲಿವುಡ್​ ಸಿನಿಮಾ ಗೀತೆ ಎಂದು ಹೇಳಿದ್ದಾರೆ. ರಂಗಿಲೋ ಮಹ್ರೋ ಧೋಲ್ನಾನಾ ಹಾಡು ಎಂದು ಹೇಳಿದ್ದಾರೆ. ಇನ್ನು ಕೆಲವರು ಬಾಲಿವುಡ್ ಹಾಡುಗಳನ್ನು ಆಯ್ಕೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ರಶ್ಮಿಕಾ ಬಾಲ್ಯದಲ್ಲೂ ಸಖತ್​ ಕ್ಯೂಟ್​ ಅಂತಿದ್ದಾರೆ.

ಇದನ್ನೂ ಓದಿ: Ramya Krishnan: ಅವರೇ ನನ್ನ ಕ್ರಶ್ ಎಂದ್ರು ನಟಿ ರಮ್ಯಾ ಕೃಷ್ಣನ್! ಯಾರು ಗೊತ್ತಾ ಆ ಸೂಪರ್ ಸ್ಟಾರ್!

ಬಾಲಿವುಡ್ ಪ್ರೇಕ್ಷಕರ ಮನಗೆಲ್ಲಲು ಬರ್ತಿದ್ದಾರೆ ಶ್ರೀವಲ್ಲಿ

ನಟಿ ರಶ್ಮಿಕಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ವೈಯಕ್ತಿಕ ಜೀವನ ಮತ್ತು ಸಿನಿಮಾ ಬಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ತನ್ನ ಹೊಸ ಚಿತ್ರದ ಬಗ್ಗೆ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ರು. ಶೀಘ್ರದಲ್ಲೇ ಅಮಿತಾಬ್ ಬಚ್ಚನ್ ಜೊತೆಗಿನ ಗುಡ್ ಬೈ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರವು 7 ಅಕ್ಟೋಬರ್ 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಗುಡ್‌ಬೈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ

ಗುಡ್‌ಬೈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಗುಡ್​ಬೈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಮತ್ತು ರಶ್ಮಿಕಾ ಮಂದಣ್ಣ ಅವರು ಅಪ್ಪ-ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿ ಚಿತ್ರರಂಗದ ದಿಗ್ಗಜ ನಟನ ಜೊತೆ ತೆರೆ ಹಂಚಿಕೊಂಡಿರುವುದು ರಶ್ಮಿಕಾ ಪಾಲಿನ ಹೆಚ್ಚುಗಾರಿಕೆ. ಈ ಚಿತ್ರಕ್ಕೆ ಜನರು ಯಾವ ರೀತಿ ರೆಸ್ಪಾನ್ಸ್​ ನೀಡುತ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗುತ್ತಿದೆ.

ಇದನ್ನೂ ಓದಿ: Samantha: ಗ್ಲಾಮರ್ ಶೋ, ಲಿಪ್ ಲಾಕ್ ಸೀನ್​ಗಳಿಂದ ಸ್ಯಾಮ್ ದೂರ! ಸಮಂತಾ ಶಾಕಿಂಗ್ ನಿರ್ಧಾರ!

ಬಾಲಿವುಡ್​ನಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳಲು ರಶ್ಮಿಕಾ ಮಂದಣ್ಣ ಸಿದ್ಧರಾಗಿದ್ದಾರೆ. ‘ಗುಡ್​ ಬೈ’ ಚಿತ್ರದ ರಿಲೀಸ್​ ದಿನಾಂಕವನ್ನು ಅವರು ಖುಷಿಖುಷಿಯಿಂದ ತಿಳಿಸಿದ್ದಾರೆ. ‘ಅಪ್ಪ ಮತ್ತು ನಾನು ನಿಮ್ಮ ಕುಟುಂಬವನ್ನು ಭೇಟಿ ಆಗಲು ಅಕ್ಟೋಬರ್​ 7ರಂದು ಬರುತ್ತಿದ್ದೇವೆ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

ಇದಲ್ಲದೆ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಮತ್ತು ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಅವರೊಂದಿಗೆ ಪ್ರಮುಖ ಪಾತ್ರವನ್ನು ಕಾಣಿಸಿಕೊಳ್ಳಲಿದ್ದಾರೆ.
Published by:Pavana HS
First published: