Allu Arjun: ಪುಷ್ಪ 2 ಸಿನಿಮಾದಲ್ಲಿ 'ಬೆಂಕಿ' ಡೈಲಾಗ್ಸ್​ಗೆ ಕಡಿಮೆ ಇಲ್ವಂತೆ! ನೆಕ್ಸ್ಟ್​ ಲೆವೆಲ್ ಅಂದಿದ್ದಕ್ಕೆ ನೆಟ್ಟಿಗರು ಹೇಳಿದ್ದೇನು?

ಪುಷ್ಪ ಚಿತ್ರದಲ್ಲಿ ಕಥೆ ಹಾಗೂ ಅಭಿನಯ ಹೊರತುಪಡಿಸಿ ಮಾಸ್ ಆಗಿ ಈ ಚಿತ್ರ ಪ್ರೇಕ್ಷಕರಿಗೆ ರೀಚ್ ಆಗಿರುವುದಕ್ಕೆ ಮತ್ತೊಂದು ಕಾರಣ ಅದರಲ್ಲಿರುವ ಅತಿ ಶಕ್ತಿಯುತವಾದ ಡೈಲಾಗ್ ಇರುವ ಸಂಭಾಷಣೆ ಎಂದು ಹೇಳಬಹುದಾಗಿದೆ.

ಅಲ್ಲು ಅರ್ಜುನ್​

ಅಲ್ಲು ಅರ್ಜುನ್​

  • Share this:
"ಪುಷ್ಪ (Pushpa) ಅಂದ್ರೆ ಫ್ಲವರ್ (Flower) ಅನ್ಕೊಂಡಿದ್ದೀರಾ.... ಫೈರ್ (Fir) " ಈ ಒಂದು ಡೈಲಾಗ್ ಪುಷ್ಪದ ಒಂದು ಹೈಲೈಟ್ (Highlight) ಅಂದರೂ ತಪ್ಪಾಗಲಾರದು. ಈ ಅದ್ಭುತ ಡೈಲಾಗ್ ಬರೆದವರು ಶ್ರೀಕಾಂತ್ ವಿಸ್ಸಾ (Srikanth Vissa) ಎಂಬ ಸಂಭಾಷಣೆಕಾರ. ಇದು ಕೇವಲ ತೆಲುಗು (Telugu) ಮಾತ್ರವಲ್ಲದೆ ಹಿಂದಿಯಲ್ಲೂ ಸಖತ್ ಜನಪ್ರೀಯವಾದ ಡೈಲಾಗ್ (Famous Dialogue) ಎಂದು ಬೇರೆ ಹೇಳಬೇಕಾಗಿಲ್ಲ. ಇದೀಗ ಪುಷ್ಪಾದ ಈ ಸಂಭಾಷಣೆಕಾರ ಪುಷ್ಪ ಎರಡರ ಭಾಗಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಪಿಂಕ್ ವಿಲ್ಲಾ ಎಂಬ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನ (Interview) ದಲ್ಲಿ ಶ್ರೀಕಾಂತ್ ಅವರು ಪುಷ್ಪ ಎರಡರ ಭಾಗ (Pushpa Part 2) ವು ಇನ್ನೊಂದು ಹಂತ ಎತ್ತರಕ್ಕಿದ್ದು ಅದರಲ್ಲಿ ಅಲ್ಲು ಅವರು ಇನ್ನೂ ಅದ್ಭುತವಾದ ಡೈಲಾಗ್ ಹೇಳುವಂತೆ ಅನುಕೂಲವಾಗಲು ತಮ್ಮೆಲ್ಲ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ. ಅದೇನಿದ್ದರೂ 'ಪುಷ್ಪ - ದಿ ರೂಲ್' (Pushpa The Rule) ಎಂಬಂತೆ ಎಂದು ಅವರು ಹೇಳುತ್ತಾರೆ.

ಪುಷ್ಪ - 2 ಸಿನಿಮಾದಲ್ಲಿದ್ಯಂತೆ ಮಾಸ್​ ಡೈಲಾಗ್ಸ್​!

ಪುಷ್ಪ ಚಿತ್ರದಲ್ಲಿ ಕಥೆ ಹಾಗೂ ಅಭಿನಯ ಹೊರತುಪಡಿಸಿ ಮಾಸ್ ಆಗಿ ಈ ಚಿತ್ರ ಪ್ರೇಕ್ಷಕರಿಗೆ ರೀಚ್ ಆಗಿರುವುದಕ್ಕೆ ಮತ್ತೊಂದು ಕಾರಣ ಅದರಲ್ಲಿರುವ ಅತಿ ಶಕ್ತಿಯುತವಾದ ಡೈಲಾಗ್ ಇರುವ ಸಂಭಾಷಣೆ ಎಂದು ಹೇಳಬಹುದಾಗಿದೆ. ಈ ಬಗ್ಗೆ ಪ್ರತಿಕ್ರಯಿಸಿರುವ ಶ್ರೀಕಾಂತ್ ಅವರು ಈ ಚಿತ್ರಕ್ಕಾಗಿ ಡೈಲಾಗ್ ಬರೆಯುತ್ತಿದ್ದಾಗ ಅವು ಈ ಮಟ್ಟಿಗೆ ಸದ್ದು ಮಾಡುತ್ತವೆ ಎಂಬ ಊಹೆಯೂ ಮಾಡಿರಲಿಲ್ಲವಂತೆ. ಆದರೆ, ಸದ್ಯ ಪುಷ್ಪದ ಡೈಲಾಗ್ ಗಳು ಶಕ್ತಿಯುತವಾಗಿದ್ದು ಮಾಸ್ ಆಗಿ ಜನರನ್ನು ತಲುಪಿದೆ. ಹಾಗಾಗಿ, ಪುಷ್ಪ 2 ದಲ್ಲೂ ಸಹ ಇದನ್ನು ಇನ್ನೊಂದು ಹಂತಕ್ಕೆ ಏರಿಸುವ ದೃಷ್ಟಿಯಿಂದ ಬಲು ಎಚ್ಚರವಹಿಸಿ ಡೈಲಾಗ್ ಬರೆಯಲಾಗುತ್ತಿದೆ ಎಂದು ಶ್ರೀಕಾಂತ್ ಹೇಳುತ್ತಾರೆ.

ಸಿಕ್ಕಾಪಟ್ಟೆ ಹಾರ್ಡ್​ವರ್ಕ್​ ಮಾಡ್ತಿದ್ಯಂತೆ ಪುಷ್ಪ  ಟೀಂ!

ಇದಕ್ಕೆ ಸಂಬಂಧಿಸಿದಂತೆ ಸುಕುಮಾರ್ ಹಾಗೂ ಶ್ರೀಕಾಂತ್ ಇಬ್ಬರೂ ಕೆಲಸ ಮಾಡುತ್ತಿದ್ದು ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಅವರು ಹೊಡೆಯಲು ಭರ್ಜರಿ ಒನ್ ಲೈನರ್ ಗಳು ಇರುವಂತೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಪುಷ್ಪ ಮೊದಲ ಭಾಗದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ನಿರೀಕ್ಷೆ ಮೀರಿ ಡೈಲಾಗ್ ಹಿಟ್ ಆಗಿವೆ, ಹಾಗಾಗಿ ಭಾಗ ಎರಡರಲ್ಲಿ ಇದನ್ನು ಮತ್ತಷ್ಟು ಒಂದು ಹಂತಕ್ಕೆ ಮೇಲಕ್ಕೆ ಎತ್ತಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳುತ್ತಾರೆ. ನಮ್ಮ ಮೇಲೆ ಅತಿ ಹೆಚ್ಚಿನ ಒತ್ತಡವಿದ್ದು ಎರಡನೇ ಭಾಗದ ಚಿತ್ರದಲ್ಲಿ ಪ್ರತಿ ಪ್ರೇಕ್ಷಕನ ನಿರೀಕ್ಷೆ ಮೀರಿ ಕೆಲಸ ಹೊರಬರಬೇಕಾಗಿದೆ ಎಂದು ವಿಸ್ಸಾ ನುಡಿಯುತ್ತಾರೆ.

ಇದನ್ನೂ ಓದಿ: ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಧ್ರುವ-ಪ್ರೇಮ್! ಮುಹೂರ್ತ ಟೈಂನಲ್ಲಿ ಆ ಒಂದು ತಪ್ಪು ಮಾಡಬಾರದಿತ್ತು

ವಿಸ್ಸಾ ಅವರು ಹೇಳುವಂತೆ, ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಅವರು ಸಾಮಾನ್ಯವಾಗಿ ಯಾವುದೇ ಸಕಾರಣವಿಲ್ಲದೆ ಪ್ರಶಂಸೆ ವ್ಯಕ್ತಪಡಿಸುವುದಿಲ್ಲ, ಆದರೆ, ಅವರು ಪುಷ್ಪಾದ ಅದ್ಭುತ ಸಂಭಾಷಣೆಗಳಿಗಾಗಿ ಶ್ರೀಕಾಂತ್ ಅವರನ್ನು ಕೊಂಡಾಡಿದ್ದು ಶ್ರೀಕಾಂತ್ ಅವರಿಗೆ ಇದು ಸಾಕಷ್ಟು ಸಂತಸ ಉಂಟು ಮಾಡಿದ್ದಲ್ಲದೆ ಮತ್ತಷ್ಟು ಉತ್ತಮ ಕೆಲಸ ಮಾಡಲು ಸ್ಫೂರ್ತಿ ಸಿಕ್ಕಂತಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಕಿ ಭಾಯ್​ ಸ್ಟೈಲ್​ ಫಾಲೋ ಮಾಡಿದ ಶಿಲ್ಪಾ ಶೆಟ್ಟಿ! ಇವ್ರಿಗೂ ವೈಲೆನ್ಸ್​​ ಅಂದ್ರೆ ಇಷ್ಟ ಇಲ್ವಂತೆ          

ಇನ್ನು, ಸಂಭಾಷಣೆಯ ಕೆಲಸ ನಡೆಯುತ್ತಿರುವ ಬಗ್ಗೆ ಕೇಳಿದರೆ, ವಿಸ್ಸಾ ಹೀಗೆ ನುಡಿಯುತ್ತಾರೆ, "ಸಂಭಾಷಣೆ ಎನ್ನುವುದು ಕಥೆಯ ಜೊತೆ ನಿರಂತರವಾಗಿ ನಡೆಯುವ ಪ್ರಕ್ರಿಯೆ, ಸುಕುಮಾರ್ ಅವರ ಸಹಭಾಗಿತ್ವ ಇಲ್ಲದೆ ಯಾವುದೂ ಅಂತಿಮವಲ್ಲ. ಚಿತ್ರೀಕರಣ ಮುಗಿಯುವವರೆಗೂ ನಾವು ಅದರ ಮೇಲೆ ಕೆಲಸ ಮಾಡುತ್ತಲೇ ಇರುತ್ತೇವೆ. ಅವಶ್ಯಕತೆ ಬಿದ್ದರೆ ಸಂಭಾಷಣೆ ಇನ್ನಷ್ಟು ಪರಿಣಾಮಕಾರಿಯಾಗಬಹುದೆಂದು ಅನಿಸಿದರೆ ಡಬ್ಬಿಂಗ್ ಸಮಯದಲ್ಲೂ ಸಹ ನಾವು ಬದಲಾವಣೆ ಮಾಡಿಕೊಳ್ಳುತ್ತೇವೆ" ಎಂದು ಅವರು ಹೇಳಿದ್ದಾರೆ.
Published by:Vasudeva M
First published: