ಟಾಪ್​ಲೆಸ್ ಆಗಿದ್ದ ನಟಿಯನ್ನು ಅಪ್ಪಿಕೊಂಡ ಸ್ಟಾರ್​ ನಿರ್ದೇಶಕನ ಮಗನ ಫೋಟೋ ವೈರಲ್​..!

Romantic: ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ ಟಾಲಿವುಡ್​ನ ಸ್ಟಾರ್ ನಿರ್ದೇಶಕರ ಮಗನ ಫೋಟೋ. ಹೌದು, ಕೇವಲ ನಿರ್ದೇಶಕನ ಹೆಸರು ಕೇಳಿ ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ಹೋಗುವಷ್ಟು ಖ್ಯಾತಿ ಪಡೆದಿರುವ ನಿರ್ದೇಶಕರ ಮಗ ಈಗ ನಟಿಯೊಬ್ಬರನ್ನು ಅಪ್ಪಿಕೊಂಡು ಸುದ್ದಿಯಾಗಿದ್ದಾರೆ.

Anitha E | news18-kannada
Updated:October 1, 2019, 12:51 PM IST
ಟಾಪ್​ಲೆಸ್ ಆಗಿದ್ದ ನಟಿಯನ್ನು ಅಪ್ಪಿಕೊಂಡ ಸ್ಟಾರ್​ ನಿರ್ದೇಶಕನ ಮಗನ ಫೋಟೋ ವೈರಲ್​..!
ನಿರ್ದೇಶಕ ಪೂರಿ ಜಗನ್ನಾಥ್​ ಅವರ ಮಗ ಆಕಾಶ್​ ಪೂರಿ
  • Share this:
ಸಿನಿ ರಂಗದ ರಂಗೀನ್​ ದುನಿಯಾದಲ್ಲಿ ಯಾರು ಏನೇ ಮಾಡಿದರೂ ಅದು ದೊಡ್ಡ ಸುದ್ದಿಯಾಗಿ ಬಿಡುತ್ತದೆ. ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಸಖತ್​ ಸದ್ದು ಮಾಡುತ್ತಿದೆ.

ಅದು ಟಾಲಿವುಡ್​ನ ಸ್ಟಾರ್ ನಿರ್ದೇಶಕರ ಮಗನ ಫೋಟೋ. ಹೌದು, ಕೇವಲ ನಿರ್ದೇಶಕನ ಹೆಸರು ಕೇಳಿ ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ಹೋಗುವಷ್ಟು ಖ್ಯಾತಿ ಪಡೆದಿರುವ ನಿರ್ದೇಶಕರ ಮಗ ಈಗ ನಟಿಯೊಬ್ಬರನ್ನು ಅಪ್ಪಿಕೊಂಡು ಸುದ್ದಿಯಾಗಿದ್ದಾರೆ.

Puri Jagannadh's Jana gana mana movie
ಪೂರಿ ಜಗನ್ನಾಥ್ ನಿರ್ದೇಶನದ 'ಜನಗಣಮನ' ಸಿನಿಮಾದಲ್ಲಿ ಮಹೇಶ್​ ಬಾಬು


ಟಾಲಿವುಡ್​ನಲ್ಲಿ ಪೂರಿ ಜಗನ್ನಾಥ್​ ಎಂದು ಪೂರ್ತಿ ಹೆಸರು ಹೇಳಬೇಕಿಲ್ಲ. ಕೇವಲ ಪೂರಿ ಎಂದರೆ ಸಾಕು ಎಲ್ಲ ನಾಲಿಗೆ ಮೇಲೆ ಜಗನ್ನಾಥ್​ ಎಂಬ ಅವರ ಹೆಸರು ನಲಿದಾಡುತ್ತದೆ. ಹೀಗಿರುವಾಗ ಇವರ ಮಗ ಟಾಪ್​ ಲೆಸ್​ ಆಗಿದ್ದ ನಟಿಯನ್ನು ಅಪ್ಪಿಕೊಂಡಿದ್ದು, ಆ ಚಿತ್ರ ಈ ಗ ವೈರಲ್​ ಆಗಿದೆ.

ಹೌದು, ಪೂರಿ ಜಗನ್ನಾಥ್​ ತಮ್ಮ ಮಗ ಆಕಾಶ್​ ಪೂರಿ ಅಭಿನಯದ 'ರೊಮ್ಯಾಂಟಿಕ್​' ಸಿನಿಮಾದ ಪೋಸ್ಟರ್​ ಅನ್ನು ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.ಈ ಹಿಂದೆ ಆಕಾಶ್​ ಅವರನ್ನು 'ಮೆಹಬೂಬ್​' ಚಿತ್ರದ ಮೂಲಕ ಟಾಲಿವುಡ್​ಗೆ ನಾಯಕನಾಗಿ ಪರಿಚಿಸಲಾಗಿತ್ತು. 'ರೊಮ್ಯಾಂಟಿಕ್​' ಆಕಾಶ್​ ಅಭಿನಯದ ಎರಡನೇ ಸಿನಿಮಾ. ಈ ಚಿತ್ರದಲ್ಲಿ ಕೆತಿಕಾ ಶರ್ಮಾ ಆಕಾಶ್​ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

ಕೆತಿಕಾ ಶರ್ಮಾ ಈಗಾಗಲೇ ಡಬ್​ ಸ್ಮ್ಯಾಶ್​ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತರಾಗಿದ್ದಾರೆ.

 


ಇದನ್ನೂ ಓದಿ: ದಾಖಲೆಗಳನ್ನು ಮುರಿಯಲಿದ್ದಾನೆ ಈ ಹಾಲಿವುಡ್​ನ 'ಜೋಕರ್'​..!

ಈ ಚಿತ್ರ ಟಾಪ್​ಲೆಸ್​ ಪೋಸ್ಟರ್​ ನೋಡಿದವರು ಬಿಟ್ಟ ಬಾಯಿಟ್ಟಂತೆಯೇ ಇದ್ದಾರೆ. ಅದರಲ್ಲೂ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಸಹ ಈ ಪೋಸ್ಟರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ನಟಿ ಹಾಗೂ ನಿರ್ಮಾಪಕಿ ಚಾರ್ಮಿ ಮತ್ತು ಪೂರಿ ಜಗನ್ನಾಥ್​ ಅವರ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಅನಿಲ್​ ಪಡುರಿ ನಿರ್ದೇಶಿಸುತ್ತಿದ್ದಾರೆ. ಇದು ಅನಿಲ್​ ಅವರ ಚೊಚ್ಚಲ ಸಿನಿಮಾವಾಗಿದೆ.

 

KGF: ಥೈಲೆಂಡ್​ ಬೀಚ್​ನಲ್ಲಿ ಬಿಕಿನಿ ತೊಟ್ಟ ಕೆ.ಜಿ.ಎಫ್​ ನೀರೆಯ ನೀರಾಟ..!


 
First published: October 1, 2019, 12:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading