ಕೊರೋನಾ ಲಾಕ್ಡೌನ್ನಿಂದಾಗಿ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ತೆರೆದಿವೆ. ಆದರೂ ಜನರು ಚಿತ್ರಮಂದಿರಗಳತ್ತ ಮುಖ ಮಾಡುತ್ತಿಲ್ಲ. ಸದ್ಯಕ್ಕೆ ಹೊಸ ಸಿನಿಮಾಗಳು ರಿಲೀಸ್ ಆಗದಿದ್ದರೂ, ಈ ಹಿಂದೆ ತೆರೆಕಂಡು ಹಿಟ್ ಆದ ಚಿತ್ರಗಳನ್ನು ಕಡಿಮೆ ಟಿಕೆಟ್ ದರದಲ್ಲಿ ನೋಡುವ ಅವಕಾಶವನ್ನು ಮತ್ತೆ ಕಲ್ಪಿಸಲಾಗುತ್ತಿದೆ. ಆದರೂ ಜನರು ಸಿನಿಮಾ ನೋಡಲು ಬರುತ್ತಿಲ್ಲ. ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳು ಖಾಲಿ ಖಾಲಿ ಇವೆ. ಇದರಿಂದಾಗಿ ಚಿತ್ರಮಂದಿರಗಳ ಮಾಲೀಕರು ಪ್ರೇಕ್ಷಕರು ಸಿನಿಮಾ ನೋಡಲು ಬಾರದ ಕಾರಣ ಚಿಂತೆಗೀಡಾಗಿದ್ದಾರೆ. ಇದರ ಜೊತೆಗೆ ಸ್ಯಾಂಡಲ್ವುಡ್ನ ಸೆಲೆಬ್ರಿಟಿಗಳು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಇತರರು ಸಹ ಕಂಗಾಲಾಗಿದ್ದಾರೆ. ಇದೇ ಕಾರಣದಿಂದಾಗಿ ಈಗ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಸ್ಯಾಂಡಲ್ವುಡ್ ಮಂದಿ. ಅದಕ್ಕಾಗಿಯೇ ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ ಎಂಬ ಅಭಿಯಾನ ಆರಂಭಿಸಲಾಗಿದೆ.
ಹೌದು, ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಅನ್ನೋ ಶೀರ್ಷಿಕೆಯಲ್ಲಿ ಒಂದು ಪುಟ್ಟ ವಿಡಿಯೋ ಮಾಡಲಾಗಿದ್ದು, ಅದರಲ್ಲಿ ಚಿತ್ರಮಂದಿರಗಳು ಮತ್ತೆ ತೆರೆದಿರುವ ಕುರಿತು ಚಿತ್ರೀಕರಿಸಲಾಗಿದೆ. ಇದರಲ್ಲಿ ಕನ್ನಡದ ಹಲವಾರು ಮಂದಿ ನಟರು ಬೆಳ್ಳಿ ಪರದೆಯ ಮೇಲೆ ಸಿನಿಮಾ ನೋಡಲು ಸೆಲೆಬ್ರಿಟಿಗಳು ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಚಿತ್ರ ಮಂದಿಗಳು ಮತ್ತೆ ಬಾಗಿಲು ತೆರೆದಾಗ ಚಿತ್ರಮಂದಿರ ಮಾಲೀಕ ಹಳೇ ದಿನಗಳನ್ನು ನೆನಯುತ್ತಾ, ಥಿಯೇಟರ್ ಹೌಸ್ಫುಲ್ ಆಗಿದ್ದನ್ನು ನೆನಪಿಸಿಕೊಂಡು, ಆ ದಿನ ಮತ್ತೆ ಬರುತ್ತಾ ಅಂತ ದೇವರ ಮೇಲೆ ಭಾರ ಹಾಕುತ್ತಾನೆ. ಅದನ್ನು ಪ್ರೇಕ್ಷಕರ ಮನಮುಟ್ಟುವಂತೆ ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ:ಮತ್ತೆ ಕೈಯಲ್ಲಿ ಸಿಗರೇಟ್ ಹಿಡಿದ ರಚಿತಾ ರಾಮ್: ನನ್ನ ಬಗ್ಗೆ ತಿಳಿದುಕೊಳ್ಳವ ಪ್ರಯತ್ನ ಬಿಡಿ ಎಂದ ನಟಿ
ಚಿತ್ರ ಮಂದಿರ... ಇಲ್ಲಿ ಕಲಾವಿದರ ಕನಸುಗಳಿವೆ, ತಂತ್ರಜ್ಞರ ಪರಿಶ್ರಮವಿದೆ, ನಿರ್ದೇಶಕರ ಹಣೆಬರಹವಿದೆ, ನಿರ್ಮಾಪಕರ ಹಣವಿದೆ, ವಿತರಕರ ಋಣವಿದೆ, ಮಾಲೀಕರ ವಿಶ್ವಾಸವಿದೆ. ಮಂದಿರಗಳಲ್ಲಿ ದೇವರಿರುವಂತೆ ಚಿತ್ರಮಂದಿರಗಳಲ್ಲಿ ಅಭಿಮಾನಿ ದೇವರುಗಳು ಸಿಂಹಾಸನಗಳ ಮೇಲೆ ಕುಳಿತಿರುತ್ತಾರೆ ಎಂದು ಶಿವಣ್ಣ, ಪುನೀತ್, ಗಣೇಶ್, ಶ್ರೀಮುರಳಿ, ಧನಂಜಯ್ ಹಾಡಿ ಹೊಗಳಿದ್ದಾರೆ.
Nothing can replace the charm and the magic of big screens.
Come Let's #CelebrateCinemaAgain
A video by @KRG_Connectshttps://t.co/vbiV6be8pS pic.twitter.com/bVpwUalJVi
— Rakshit Shetty (@rakshitshetty) November 16, 2020
I got tears after watching this 👌🏾. మళ్ళీ ఆ రోజులు రావాలి . విజిల్స్ వెయ్యాలి , పేపర్స్ ఎగరాలి . చొక్కాలు చిరగాలి .. సినిమా థియేటర్ 🔥.. మన అమ్మ 🙏🏽 pic.twitter.com/TAnemU102d
— PURIJAGAN (@purijagan) November 16, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ