Liger Release Date: ಕನ್ನಡದಲ್ಲೂ ತೆರೆ ಕಾಣಲಿದೆ ವಿಜಯ್​ ದೇವರಕೊಂಡ ಅಭಿನಯದ ಲೈಗರ್​: ಸಿನಿಮಾ ರಿಲೀಸ್​ ದಿನಾಂಕ ಪ್ರಕಟಿಸಿದ ಚಿತ್ರತಂಡ..!

Vijay Devarakonda:

ಲೈಗರ್ ಚಿತ್ರದಲ್ಲಿ​ ವಿಜಯ್​ ದೇವರಕೊಂಡ

ಲೈಗರ್ ಚಿತ್ರದಲ್ಲಿ​ ವಿಜಯ್​ ದೇವರಕೊಂಡ

  • Share this:
ಟಾಲಿವುಡ್​ ರೌಡಿ ವಿಜಯ್​ ದೇವರಕೊಂಡ (Vijay Devarakonda)ವರ್ಲ್ಡ್​ ಫೇಮಸ್​ ಲವರ್​ ನಂತಹ ಫ್ಲಾಪ್​ ಸಿನಿಮಾ ಕೊಟ್ಟ ನಂತರ ಈಗ ಪೂರಿ ಜಗನ್ನಾಥ್​ ಅವರ ನಿರ್ದೇಶನದಲ್ಲಿ ಹೊಸ ಚಿತ್ರ ಲೈಗರ್​ನಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾದಲ್ಲಿ ರೌಡಿಗೆ ನಾಯಕಿಯಾಗಿ ಬಾಲಿವುಡ್​ ನಟಿ ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ. ಪೂರಿ ಜಗನ್ನಾಥ್​ ಈ ಚಿತ್ರವನ್ನು ಪ್ರಕಟಿಸಿದಾಗ ಶೂಟಿಂಗ್​ ಸೆಟ್​ನಲ್ಲಿ ತೆಗೆದ ಕೆಲವು ಫೋಟೋಗಳು ವೈರಲ್​ ಆಗಿದ್ದವು. ಪೂರಿ ಜಗನ್ನಾಥ್​, ಚಾರ್ಮಿ ಹಾಗೂ ಧರ್ಮಾ ಪ್ರೊಡಕ್ಷನ್ಸ್​ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮೊದಲು ಫೈಟರ್​ ಎಂದು ಶೀರ್ಷಿಕೆ ಕೊಡಲು ನಿರ್ಧರಿಸಲಾಗಿತ್ತು. ಆದರೆ ಈ ಟೈಟಲ್​ ಅನ್ನು ಬೇರೆ ಅಂದರೆ ಹೃತಿಕ್​ ರೋಷನ್​ ಅಭಿನಯದ ಚಿತ್ರತಂಡ ತೆಗೆದುಕೊಂಡ ಕಾರಣದಿಂದ ಈಗ ಪೂರಿ ಜಗನ್ನಾಥ್​ ತಮ್ಮ ಸಿನಿಮಾಗೆ ಲೈಗರ್ (Liger)​ ಎಂದು ಟೈಟಲ್​ ಕೊಟ್ಟಿದ್ದಾರೆ.

ಪೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್​ ಇಂಡಿಯಾ ಚಿತ್ರವಾಗಿರುವ ಕಾರಣ ಈ ಚಿತ್ರಕ್ಕೆ ತುಂಬಾ ಹುಡುಕಿ ಹಾಗೂ ಯೋಚಿಸಿ ಲೈಗರ್ (Liger)​​ ಎಂದು ಶೀರ್ಷಿಕೆ ನೀಡಲಾಗಿದೆಯಂತೆ. ಈಗ ಚಿತ್ರತಂಡ ಈ ಸಿನಿಮಾ ರಿಲೀಸ್​ ದಿನಾಂಕ ಪ್ರಕಟಿಸಿದೆ.

Vijay Devarakonda as Liger,Liger First Look Released,Vijay devarakonda,Liger,Liger Movie,vijay devarakonda news,vijay devarakonda latest films, puri jagannadh,vijay devarakonda fighter update,vijay devarakonda new movie, puri jagannadh movies,vijay devarakonda hindi film , ವಿಜಯ್​ ದೇವರಕೊಂಡ, ಪೂರಿ ಜಗನ್ನಾತ್​, ಚಾರ್ಮಿ ಕೌರ್​, ಅನನ್ಯಾ ಪಾಂಡೆ, ಲೈಗರ್​, ಲೈಗರ್​ ಚಿತ್ರದ ಪೋಸ್ಟರ್​, Here is the title and first look poster of Vijay Deverakonda and Ananya Pandey starrer movie Liger
ಲೈಗರ್ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಲುಕ್​


ಪೂರಿ ಜಗನ್ನಾಥ್​ ಹಾಗೂ ಚಾರ್ಮಿ ಜೊತೆ ಸಹ ನಿರ್ಮಾಪಕನಾಗಿ ಕರಣ್​ ಜೋಹರ್ ಸಹ ಲೈಗರ್​ ಚಿತ್ರಕ್ಕೆ ಹಣ ಹೂಡಿದ್ದಾರೆ. ಇದೇ ವರ್ಷ ಸೆಪ್ಟೆಂಬರ್​ 9ಕ್ಕೆ ರಿಲೀಸ್​ ಆಗಲಿರುವ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆ ಕಾಣಲಿದೆ.
View this post on Instagram


A post shared by Charmmekaur (@charmmekaur)


ವಿಜಯ್​ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಇಬ್ಬರಿಗೂ ಇದು ಮೊದಲ ಪ್ಯಾನ್​ ಇಂಡಿಯಾ ಸಿನಿಮಾ ಆಗಿದೆ. ಈ ಸಿನಿಮಾದ ಟೈಟಲ್​ ಹಾಗೂ ಫಸ್ಟ್​ ಲುಕ್ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆಯೇ ವಿಜಯ್​ ದೇವರಕೊಂಡ ಅಭಿಮಾನಿಗಳು ಲೈಗರ್​ ಹಾಗೂ ವಿಜಯ್​ ದೇವರಕೊಂಡ ಹೆಸರನ್ನು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡಿದ್ದರು.

ಇದನ್ನೂ ಓದಿ: Miss India 2020: ತೆಲಂಗಾಣದ ಬೆಡಗಿ ಮಾನಸ ವಾರಣಾಸಿಗೆ ಮಿಸ್​ ಇಂಡಿಯಾ ವರ್ಲ್ಡ್​ 2020 ಕಿರೀಟ..!

ಲೈಗರ್​ ಎಂದರೆ ಹುಲಿ ಹಾಗೂ ಸಿಂಹಕ್ಕೆ ಹುಟ್ಟಿದ ಮರಿಯನ್ನು ಲೈಗರ್​ ಎಂದು ಕರೆಯಲಾಗುತ್ತದೆಯಂತೆ. ಅದರಂತೆ ಈ ಸಿನಿಮಾ ಟೈಟಲ್​ ಪೋಸ್ಟರ್​ನಲ್ಲಿ ಬಾಕ್ಸಿಂಗ್​ ಗ್ಲೌಸ್​ ತೊಟ್ಟ ವಿಜಯ್​ ದೇವರಕೊಂಡ ಲುಕ್ ಸಖತ್ತಾಗಿದೆ. ಜೊತೆಗೆ ಪೋಸ್ಟರ್​ನಲ್ಲಿ ಸಿಂಹ ಹಾಗೂ ಹುಲಿಯ ಚಿತ್ರಗಳೂ ಇವೆ. ಅಂದರೆ ಸಿನಿಮಾದ ನಾಯಕನಲ್ಲಿ ಈ ಎರಡೂ ಪ್ರಾಣಿಗಳ ಗುಣವಿರಲಿದೆಯಂತೆ.
View this post on Instagram


A post shared by Charmmekaur (@charmmekaur)


ಈ ಸಿನಿಮಾದ ಚಿತ್ರೀಕರಣ ಮುಂಬೈ ಸೇರಿದಂತೆ ವಿದೇಶಗಳಲ್ಲೂ ನಡೆಯುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಸುನೀಲ್​ ಶೆಟ್ಟಿ ಸಹ ನಟಿಸಲಿದ್ದಾರಂತೆ. ಡಾನ್​ ಪಾತ್ರದಲ್ಲಿ ಸುನೀಲ್​ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಅವರದ್ದು ಕೇವಲ 15 ನಿಮಿಷಗಳು ಬಂದು ಹೋಗುವ ಪಾತ್ರವೆಂದು ಹೇಳಲಾಗುತ್ತಿದೆ.ಲೈಗರ್​ ಸಿನಿಮಾದ ಚಿತ್ರೀಕರಣವನ್ನು ಬ್ಯಾಂಕಾಕ್​ನಲ್ಲಿ ಮಾಡವ ಪ್ಲಾನ್​ನಲ್ಲಿ ಪೂರಿ ಜಗನ್ನಾಥ್​ ಇದ್ದರೆ, ಅದಕ್ಕೂ ಮೊದಲು ಹೂದರಾಬಾದಿನಲ್ಲಿ ನಿರ್ಮಿಸಿರುವ ಸೆಟ್​ನಲ್ಲಿ ಶೂಟಿಂಗ್​ ನಡೆಯಲಿದೆಯಂತೆ.

ಇದನ್ನೂ ಓದಿ: ಮೊದಲ ಸಲ ಸಖತ್​ ಬೋಲ್ಡ್​ ಫೋಟೋ ಹಂಚಿಕೊಂಡ ನಟಿ ರಾಶಿ ಖನ್ನಾ..!

ಬಾಕ್ಸಿಂಗ್​ ದೃಶ್ಯಗಳ ಚಿತ್ರೀಕರಣಕ್ಕಾಗಿ ಪ್ರತ್ಯೇಕ ಸೆಟ್ ನಿರ್ಮಿಸಲಾಗಿದದ್ದು, ಇದರಲ್ಲಿ ಬಾಕ್ಸಿಂಗ್​ ಫೈಟ್​ ನಡೆಯಲಿದೆಯಂತೆ.ಇನ್ನು ವಿಜಯ್​ ದೇವರಕೊಂಡ ಡಾನ್​ ಮಗನಾಗಿ ನಟಿಸುತ್ತಿದ್ದು, ಅಪ್ಪ-ಮಗನ ನಡುವಿನ ಸಂಬಂಧ ಸರವತ್ತಾಗಿ ಸಾಗುತ್ತದೆಯಂತೆ. ಇನ್ನು ಈ ಹಿಂದೆಯೇ ವಿಜಯ್​ ದೇವರಕೊಂಡ ಅವರಿಗೆ ಕರಣ್​ ಜೋಹರ್​ ಸಿನಿಮಾದಲ್ಲಿ ನಟಿಸುವಂತೆ ಆಫರ್​ ಕೊಟ್ಟಿದ್ದರು. ಆದರೆ ಆಗ ಅದನ್ನು ತಿರಸ್ಕರಿಸಿದ್ದ ರೌಡಿ ವಿಜಯ್​ ದೇವರಕೊಂಡ, ಪೂರಿ ಜಗನ್ನಾಥ್​ ಅವರ ನಿರ್ದೇಶನ ಎಂದ ಕೊಡಲೇ ಒಪ್ಪಿಕೊಂಡರಂತೆ.


View this post on Instagram


A post shared by Charmmekaur (@charmmekaur)


ಇನ್ನು ಸುಕುಮಾರ್​ ನಿರ್ದೇಶನದಲ್ಲಿ ವಿಜಯ್​ ದೇವರಕೊಂಡ ಹೊಸ ಸಿನಿಮಾ ಓಕೆ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ಅಧಿಕೃತವಾಗಿ ಪ್ರಕಟಣೆ ಸಹ ಹೊರ ಬಿದ್ದಿದೆ. ಆದರೆ ಚಿತ್ರದ ಟೈಟಲ್​ ಹಾಗೂ ಇತರೆ ವಿವರಗಳು ಇನ್ನು ಮುಂದೆ ಬಹಿರವಾಗಬೇಕಿದೆ.
Published by:Anitha E
First published: