ಸಲ್ಮಾನ್ ಖಾನ್ ಮೇಲೆ ಕತ್ರಿನಾ ಕೈಫ್ ಕಣ್ಣು: ಪಂಜಾಬಿ ಮದುವೇಲಿ ಕುಣಿದು ಕುಪ್ಪಳಿಸಿದ ಜೋಡಿ !

ಮತ್ತೆ ಮೋಡಿ ಮಾಡಲು ಬರಲಿದೆ ಕ್ಯಾಟ್​-ಸಲ್ಲು ಜೋಡಿ... 'ಭಾರತ್​' ಸಿನಿಮಾದಲ್ಲಿ ಈ ಜೋಡಿಯ ಕೆಮಿಷ್ಟ್ರಿ ನೋಡಿದವರ ಮನದಲ್ಲಿ ಮದುವೆ ಆಸೆ ಮೂಡದೇ ಇರದು....

Anitha E | news18
Updated:May 17, 2019, 7:20 PM IST
ಸಲ್ಮಾನ್ ಖಾನ್ ಮೇಲೆ ಕತ್ರಿನಾ ಕೈಫ್ ಕಣ್ಣು: ಪಂಜಾಬಿ ಮದುವೇಲಿ ಕುಣಿದು ಕುಪ್ಪಳಿಸಿದ ಜೋಡಿ !
'ಭಾರತ್​' ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಹಾಗೂ ಕತ್ರಿನಾ ಕೈಫ್​
Anitha E | news18
Updated: May 17, 2019, 7:20 PM IST
ಬಾಲಿವುಡ್‍ನ ಮೋಸ್ಟ್ ಕ್ಯೂಟೆಸ್ಟ್ ಆನ್‍ಸ್ಕ್ರೀನ್ ಕಪಲ್​ನಲ್ಲಿ ಸಲ್ಲು-ಕತ್ರಿನಾ ಜೋಡಿ ಸಹ ಒಂದು.   'ಮೈನೇ ಪ್ಯಾರ್ ಕ್ಯೂ ಕಿಯಾ'ದಿಂದ ಹಿಡಿದು ಇದುವರೆಗೆ ಹಲವು ಸಿನಿಮಾಗಳಲ್ಲಿ ಈ ಜೋಡಿ ಮಿಂಚಿದೆ. ಈಗ 'ಭಾರತ್' ಸಿನಿಮಾದಲ್ಲೂ ಸಲ್ಲು ಮಿಯ್ಯಾ ಹಾಗೂ ಕ್ಯಾಟ್​ ರೊಮ್ಯಾನ್ಸ್ ಮಾಡಿದ್ದು, ಸಿನಿಪ್ರಿಯರ ಹೃದಯ ಕದ್ದಿದ್ದಾರೆ.

ಬಾಲಿವುಡ್ ಸುಲ್ತಾನ ಸಲ್ಮಾನ್ ಖಾನ್, ಮಾದಕ ಬೆಡಗಿ ಕತ್ರಿನಾ ಕೈಫ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ 'ಭಾರತ್'. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಕೊಂಚ ಮಟ್ಟಿಗೆ ನಿರೀಕ್ಷೆ ಮೂಡಿಸಿದೆ. ಅದೂ ಅಲ್ಲದೇ ನಾಲ್ಕು ವಿಭಿನ್ನ ಲುಕ್‍ಗಳಲ್ಲಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. ಇನ್ನು ಸಲ್ಲು ಮತ್ತು ಕ್ಯಾಟ್ಸ್ ಕೆಮಿಸ್ಟ್ರಿ ಬಗ್ಗೆ ಹೇಳಬೇಕಿಲ್ಲ. ಅದಕ್ಕೆ ಸಾಕ್ಷಿ ಈ ಹಾಡು ಮತ್ತು ಅದರ ಮೇಕಿಂಗ್.ಪಂಜಾಬಿ ಮದುವೆಯಲ್ಲಿ ಪಾಲ್ಗೊಳ್ಳುವ ಕತ್ರಿನಾಗೆ ಸಲ್ಮಾನ್ ಇಷ್ಟವಾಗ್ತಾರೆ. ಆಗ ಆಕೆಯೇ ನಾಯಕನನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುವ ಸೀಕ್ವೆನ್ಸ್‍ ಅನ್ನು ಈ ಹಾಡಿನಲ್ಲಿ ಚಿತ್ರಿಸಲಾಗಿದೆ. ಲಿರಿಕ್ಸ್ ಕೂಡ ಪಂಜಾಬಿ ಶೈಲಿಯಲ್ಲಿದ್ದು, ವಿಶಾಲ್, ರಾಜೀವ್ ಜೋಡಿ ಸಂಗೀತ ನೀಡಿದ್ದಾರೆ. ಇನ್ನು ಈ ಪೆಪ್ಪಿ ಹಾಡಿಗೆ ವೈಭವಿ ಮರ್ಚೆಂಟ್ ಕೊರಿಯೋಗ್ರಾಫ್ ಮಾಡಿದ್ದಾರೆ. ಶೂಟಿಂಗ್ ಸಮಯದಲ್ಲಂತೂ ಎಲ್ಲರೂ ಚೆನ್ನಾಗಿಯೇ ಎಂಜಾಯ್ ಮಾಡಿರೋದು ಮೇಕಿಂಗ್‍ನಲ್ಲಿ ಗೊತ್ತಾಗುತ್ತದೆ.

ಇದನ್ನೂ ಓದಿ: ಡಿಬಾಸ್​ರ 'ರಾಬರ್ಟ್'​ ಅಡ್ಡಾಗೆ ಕಾಲಿಡಲಿರುವ ನಾಯಕಿ ಯಾರು ಗೊತ್ತಾ..?

ಒಟ್ಟಾರೆ ಅಲಿ ಅಬ್ಬಾಸ್ ಜಫರ್ ನಿರ್ದೇಶನದ 'ಭಾರತ್​' ಇದೇ ಜೂನ್ 5ರಂದು ರಿಲೀಸ್ ಆಗಲಿದೆ. ಹಿಂದಿನ ಚಿತ್ರಗಳಂತೆ ಈ ಬಾರಿಯೂ ಕ್ಯಾಟ್, ಸಲ್ಮಾನ್ ಜೋಡಿ ಬಾಕ್ಸಾಫೀಸ್​ನಲ್ಲಿ ಮೋಡಿ ಮಾಡುತ್ತಾ ಎಂದು ನೋಡಬೇಕು.'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'

ಹೇಗಿದೆ ಗೊತ್ತಾ ಪುನೀತ್ ರಾಜ್​ಕುಮಾರ್​​ರ ಅಮೆರಿಕ ಪ್ರವಾಸದ ವಿಡಿಯೋ..!
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ