Sonu Sood: ನಟ ಸೋನು ವಿರುದ್ಧ ಎಫ್​ಐಆರ್ ದಾಖಲು, ಕಾರು ಸೀಝ್

ಎಫ್‌ಐಆರ್‌ನಲ್ಲಿ ಸೋನು ತನ್ನ ಸಹೋದರಿ ಮಾಳವಿಕಾ ಸೂದ್‌ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾಳವಿಕಾ ಅವರು ಮೊಗದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಸೋನು ಸೂದ್

ಸೋನು ಸೂದ್

  • Share this:
ಬಾಲಿವುಡ್ ನಟ (Bollywood Actor) ಸೋನು ಸೂದ್ (Sonu Sood) ಅವರ ಸಹೋದರಿ ಪಂಜಾಬ್ ಚುನಾವಣೆಯಲ್ಲಿ (Punjab election) ಸ್ಪರ್ಧಿಸಿದ್ದು ಇದರಲ್ಲಿ ತಾವು ಸಹೋದರಿ ಪರ ಪ್ರಚಾರ (Campaign) ಮಾಡುವುದಿಲ್ಲ ಎಂದು ಸೋನು ಸೂದ್ ಈ ಹಿಂದೆ ಸ್ಪಷ್ಟವಾಗಿ ಹೇಳಿದ್ದರು. ಆದರೆ ಈಗ ಪಂಜಾಬ್​ನ ಮೋಗಾದಲ್ಲಿ ನಟ ಮತರದಾರರನ್ನು(Voters) ಪ್ರಭಾವಿಸಲು ಪ್ರಯತ್ನಿಸಿರುವ ಆರೋಪ ಕೇಳಿ ಬಂದಿದೆ. ಹಾಗೆಯೇ ನಟರಿಂದ ನ್ಯಾಷನಲ್ ಹೀರೋ (National Hero) ಬಿರುದು ಪಡೆದ ನಟನ ವಿರುದ್ಧ ಎಫ್​ಐಆರ್ ದಾಖಲಾಗಿದೆ. ತಡರಾತ್ರಿಯ ಬೆಳವಣಿಗೆಯಲ್ಲಿ ಚುನಾವಣಾ ಆಯೋಗದಿಂದ (Election Commission) ಅಭಿಪ್ರಾಯ ಕೇಳಿದ ಮೊಗ ಪೊಲೀಸರು (Moga Police) ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹೊರಡಿಸಿದ ನಿಷೇಧಾಜ್ಞೆ ಉಲ್ಲಂಘನೆಗಾಗಿ ಐಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಸೋನು ತನ್ನ ಸಹೋದರಿ ಮಾಳವಿಕಾ ಸೂದ್‌ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾಳವಿಕಾ ಅವರು ಮೊಗದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಮೋಗಾ ಕ್ಷೇತ್ರದ ಮತದಾರರಲ್ಲ ಸೋನು ಸೂದ್

ಸೋನು ಮೋಗಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಲ್ಲ, ಹಾಗಾಗಿ ಮತದಾರರ ಮೇಲೆ ಪ್ರಭಾವ ಬೀರಲು ಅಥವಾ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ಅಧಿಕಾರ ಹೊಂದಿಲ್ಲ ಎಂದು ಆರೋಪಿಸಲಾಗಿದೆ.

ಚುನಾವಣಾ ಆಯೋಗದಿಂದ ಮೊದಲೇ ನಿರ್ಬಂಧ

ಸೋನು ಸೂದ್ ಅವರು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ದೂರಿನ ಮೇರೆಗೆ ಅವರು ಮೊಗಾದ ಮತಗಟ್ಟೆಗಳಿಗೆ ಭೇಟಿ ನೀಡದಂತೆ ಚುನಾವಣಾ ಆಯೋಗ ಭಾನುವಾರ ನಿರ್ಬಂಧಿಸಿತ್ತು.

ಸೋನು ಸೂದ್ ಕಾರು ಸೀಝ್

ಅವರು ಪ್ರಯಾಣಿಸುತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರ ನಿವಾಸಕ್ಕೆ ಹಿಂತಿರುಗಿ ಅಲ್ಲಿಯೇ ಇರುವಂತೆ ಕೇಳಿಕೊಳ್ಳಲಾಗಿದೆ. ಸ್ಥಳೀಯ ಅಧಿಕಾರಿಗಳು ಸೋನು ಸೂದ್ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಹೋಗುತ್ತಿದ್ದಾರೆ ಎಂದು ಹೇಳಿ ದೂರಿದ್ದಾರೆ. ಹಾಗಾಗಿ ಅವರನ್ನು ತಮ್ಮ ಮನೆಯಲ್ಲಿಯೇ ಇರುವಂತೆ ಹೇಳಲಾಗಿತ್ತು.

ಗ್ರಾಮದ ಮತಗಟ್ಟೆ ಹೊರಗೆ ಕಾರಿನಲ್ಲಿ ಕುಳಿತಿದ್ದ ನಟ

ಆದರೆ, ಎಫ್‌ಐಆರ್‌ನಲ್ಲಿ ಅವರ ವಿರುದ್ಧ ಯಾವುದೇ ದೂರಿನ ಉಲ್ಲೇಖವಿಲ್ಲ. ಚುನಾವಣಾ ಕರ್ತವ್ಯದಲ್ಲಿ ನಿಯೋಜಿತರಾಗಿರುವ ಪೊಲೀಸ್ ಅಧಿಕಾರಿ ಹರ್‌ಪ್ರೀತ್ ಸಿಂಗ್, ಸೋನು ತನ್ನ ಸಹೋದರಿ ಪರ ಪ್ರಚಾರ ಮಾಡುತ್ತಿದ್ದಾನೆ ಎಂಬ ಮಾಹಿತಿದಾರರಿಂದ ರಹಸ್ಯ ಮಾಹಿತಿ ಪಡೆದಿರುವುದಾಗಿ ಹೇಳಿದ್ದಾರೆ. ಅವರು ಪೊಲೀಸ್ ಅಧಿಕಾರಿ ಸ್ಥಳಕ್ಕೆ ತಲುಪಿದಾಗ ಸೋನು ಲಂಡೆಕೆ ಗ್ರಾಮದ ಮತಗಟ್ಟೆಯ ಹೊರಗೆ ಕಾರಿನಲ್ಲಿ ಕುಳಿತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಯಾದಗಿರಿ ತ್ರಿವಳಿ ಮಕ್ಕಳ ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ನಟ ಸೋನು ಸೂದ್

ಆರೋಪ ನಿರಾಕರಿಸಿದ ನಟ

ಮುಂಬೈಗೆ ತೆರಳುವ ಮೊದಲು ಸೋನು ಸೂದ್ ತಮ್ಮ ಮೇಲೆ ಇದ್ದ ಆರೋಪವನ್ನು ನಿರಾಕರಿಸಿದ್ದಾರೆ. ನಾನು ಮೊಗ ನಗರದ ಖಾಯಂ ನಿವಾಸಿ, ನಾನು ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ನಾನು ಮೊಗದಲ್ಲಿ ಮನೆ ಮತ್ತು ಕೆಲವು ಅಂಗಡಿಗಳನ್ನು ಹೊಂದಿದ್ದೇನೆ. ನಾನು ಹೊರಗೆ ಇದ್ದೇನೆ ಅಷ್ಟೆ. ನಾನು ಯಾರಿಗೂ ಮತ ಹಾಕಲು ಕೇಳಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Sonu Sood: ರಿಯಲ್​​​ ಹೀರೋ ಸೋನು ಸೂದ್​ಗೆ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?

ಅಕಾಲಿ ಅಭ್ಯರ್ಥಿ ಬರ್ಜಿಂದರ್ ಸಿಂಗ್ ಬ್ರಾರ್ ಅಲಿಯಾಸ್ ಮಖಾನ್ ಬ್ರಾರ್, ಚುನಾವಣಾ ಆಯೋಗದ ಅನುಮತಿಯೊಂದಿಗೆ ಸ್ಥಾಪಿಸಲಾದ ಮತಗಟ್ಟೆಯ ಹೊರಗಿನ ಪಕ್ಷದ ಬೂತ್‌ನಲ್ಲಿ ಕುಳಿತಿದ್ದ ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದರು. ನಾವು ಮಖನ್ ಬ್ರಾರ್ ವಿರುದ್ಧ ಕಾನೂನು ಕ್ರಮಕ್ಕಾಗಿ ಚುನಾವಣಾ ಆಯೋಗ ಮತ್ತು ಸ್ಥಳೀಯ ಆಡಳಿತಕ್ಕೆ ದೂರು ನೀಡಿದ್ದೇವೆ ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸೋನು ಆರೋಪಿಸಿದ್ದಾರೆ.
Published by:Divya D
First published: