ರಜೆ ಮೂಡಲ್ಲಿ ಪುನೀತ್​​: ಪ್ಯಾರಿಸ್​ನಲ್ಲಿ ಕಾಲಕಳೆಯುತ್ತಿರುವ ರಾಜಕುಮಾರ

news18
Updated:April 16, 2018, 6:42 PM IST
ರಜೆ ಮೂಡಲ್ಲಿ ಪುನೀತ್​​: ಪ್ಯಾರಿಸ್​ನಲ್ಲಿ ಕಾಲಕಳೆಯುತ್ತಿರುವ ರಾಜಕುಮಾರ
news18
Updated: April 16, 2018, 6:42 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ನೀಡಿ, ವಿದೇಶ ಪ್ರಯಾಣ ಬೆಳೆಸಿದ್ದಾರೆ. ಒಂದಷ್ಟು ದಿನಗಳ ಕಾಲ ಅಲ್ಲೆ ಸಮಯ ಕಳೆಯಲಿರೋ ಪುನೀತ್ ನಂತರದಲ್ಲಿ ಚಿತ್ರೀಕರಣ ಭಾಗಿಯಾಗಲಿದ್ದಾರೆ. ಅಷ್ಟಕ್ಕು ಪುನೀತ್ ಎಲ್ಲಿ, ಹೇಗಿದ್ದಾರೆ ಅನ್ನೋ ಸಂಪೂರ್ಣ ವರದಿ ಇಲ್ಲಿದೆ.

ಸ್ಟಾರ್ ನಟರು ಅಂದರೇನೆ ಹಾಗೆ, ಅವರು ಕೂತರೂ ನಿಂತರೂ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೂ ಸಹ, ತಮ್ಮ ಮೆಚ್ಚಿನ ಪ್ರತಿ ನಡೆಯನ್ನೂ ತಿಳಿದುಕೊಳ್ಳೋ ಕುತೂಹಲ ಇರುತ್ತೆ. ಅದರಂತೆ ಪುನೀತ್ ಬಗ್ಗೆ ಹೇಳೋದಾದರೆ ಅವರು ರಜೆಯ ಮೂಡ್‍ನಲ್ಲಿದ್ದಾರೆ. ವಿದೇಶಕಕ್ಕೆ ಹಾರಿರೋ ಪುನೀತ್ ರಾಜ್‍ಕುಮಾರ್ ಪ್ಯಾರಿಸ್‍ನಲ್ಲಿ ಪ್ರವಾಸಿ ತಾಣಗಳಿಗೆ ಸುತ್ತುತ್ತಿದ್ದಾರೆ.ಪುನೀತ್ ರಾಜ್‍ಕುಮಾರ್ ಸ್ಯಾಂಡಲ್‍ವುಡ್‍ನ ಟಾಪ್ ನಟ. ಅವರು ಯಾವಾಗಲೂ ಬ್ಯುಸಿ ಇರುತ್ತಾರೆ. ಅದರ ನಡುವೆಯೂ ಅವರು ತಮ್ಮ ವೈಯಕ್ತಿಕ ವಿಚಾರಗಳಿಗೆ ಆದ್ಯತೆ ಕೊಡುತ್ತಾರೆ. ಅದಕ್ಕಾಗಿ ಇಂತಿಷ್ಟು ಸಮಯ ಅಂತ ಮೀಸಲಿಡುತ್ತಾರೆ. ಅದರಲ್ಲೂ ಬೇಸಿಗೆ ಬಂತು ಅಂದರೆ ಅವರು ತಮ್ಮ ಕುಟುಂಬದೊಂದಿಗೆ ವಿದೇಶಕ್ಕೆ ಹಾರಿ, ಒಂದಷ್ಟು ದಿವಸ ಅಲ್ಲಿ ವಿಶ್ರಾಂತಿ ಪಡೆದು ಬರುತ್ತಾರೆ.

ಇನ್ನು ಪುನೀತ್ ಸದ್ಯ ನಟ ಸಾರ್ವಭೌಮನಾಗಿ ಕಾಣಿಸಿಕೊಳ್ಳುತ್ತಿದ್ದು, ಅದರ ಮೊದಲ ಹಂತದ ಶೂಟ್ ಮುಗಿದಿದ್ದು, ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ನೀಡಲಾಗಿದೆ. ಹಾಗಾಗಿಯೇ ಪುನೀತ್ ಪ್ಯಾರಿಸ್‍ನಲ್ಲಿದ್ದಾರೆ. ಅಲ್ಲಿಂದ ಬಂದ ನಂತರ ಮೇ 15ರಿಂದ ‘ನಟ ಸಾರ್ವಭೌಮ’ ಎರಡನೇ ಶೆಡ್ಯೂಲ್‍ಗಾಗಿ ಮತ್ತೆ ಪವರ್‍ಸ್ಟಾರ್ ಶೂಟಿಂಗ್ ಅಡ್ಡಕ್ಕೆ ಎಂಟ್ರಿಕೊಡಲಿದ್ದು, ಜಿಂದಾಲ್, ಕೊಲ್ಕತ್ತಾದಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ.
First published:April 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ