HOME » NEWS » Entertainment » PUNITH ARYA A YOUNG DIRECTOR STARTED HOTEL BUSINESS AS THERE IS NO WORKS IN CINEMA INDUSTRY DUE TO CORONAVIRUS HK

ಕೊರೋನಾ ಎಫೆಕ್ಟ್​ : ಕೆಲಸವಿಲ್ಲದೇ ಹೋಟೆಲ್​​ ಆರಂಭಿಸಿದ ಯುವ ನಿರ್ದೇಶಕ ಪುನಿತ್​ ಆರ್ಯ

ಕೊರೋನಾದಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲಕಿದ್ದ ಈ ಯುವ ನಿರ್ದೇಶಕ ಇದೀಗ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಈ ಯುವ ನಿರ್ದೇಶಕನ ಪ್ರಯತ್ನ ನಿರುದ್ಯೋಗಿಗಳಿಗೆ ಮಾದರಿಯಾಗಿದೆ

news18-kannada
Updated:September 30, 2020, 10:06 PM IST
ಕೊರೋನಾ ಎಫೆಕ್ಟ್​ : ಕೆಲಸವಿಲ್ಲದೇ ಹೋಟೆಲ್​​ ಆರಂಭಿಸಿದ ಯುವ ನಿರ್ದೇಶಕ ಪುನಿತ್​ ಆರ್ಯ
ಯುವ ನಿರ್ದೇಶಕ ಪುನೀತ್ ಆರ್ಯ
  • Share this:
ಮಂಡ್ಯ(ಸೆಪ್ಟೆಂಬರ್​. 30): ಕೊರೋನಾ ಮಹಾಮಾರಿ ಎಲ್ಲರನ್ನು ಒಂದಲ್ಲ ಒಂದು ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ಕನ್ನಡ ಚಿತ್ರ ರಂಗದಲ್ಲಿ ಯುವ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಮಂಡ್ಯದ ಯುವ ಪ್ರತಿಭಾನ್ವಿತ ನಿರ್ದೇಶಕ ಕೂಡ ಇದೀಗ ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದು, ದಾರಿ ಕಾಣದೆ ಇದೀಗ ಹುಟ್ಟೂರಿಗೆ ಬಂದು  ಮಂಡ್ಯದಲ್ಲಿ ಹೋಟೆಲ್ ಉದ್ಯಮ ಆರಂಭಿಸಿ ಮತ್ತೆ  ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಯುವಕನ ಹೆಸರು ಪುನೀತ್ ಆರ್ಯ, ಈತ ಮಂಡ್ಯ ತಾಲೂಕಿನ ದೊಡ್ಡಕೊತ್ತನಗೆರೆ ನಿವಾಸಿಯಾಗಿದ್ದು, ಈತ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಯುವ ನಿರ್ದೇಶಕನಾಗಿ ಹೆಸರು ಮಾಡುತ್ತಿದ್ದು, ಮೂರು ಚಿತ್ರಗಳು ನಿರ್ದೇಶನ ಸೇರಿ ನಾಲ್ಕೈದು ಚಿತ್ರಗಳಿಗೆ ಸಾಹಿತ್ಯ ಸಂಭಾಷಣೆ ಬರೆದಿದ್ದಾನೆ. ಲವ್ , ಸೈಕೋ ಶಂಕ್ರ ಚಿತ್ರ ನಿರ್ದೇಶನ ಮಾಡಿ ನಿರ್ದೇಶಕ ಎನಿಸಿಕೊಂಡಿದ್ದಾನೆ.

ದಿಲ್ದಾರ, ಪಡ್ಡೆ ಹುಲಿ, ರುದ್ರ ತಾಂಡವ ಚಿತ್ರಕ್ಕೆ ಸಂಭಾ ಷಣೆ ಹಾಗೂ ಸಾಹಿತ್ಯ ಬರೆದಿದ್ದಾನೆ. ರುದ್ರ ತಾಂಡವ ಚಿತ್ರದಲ್ಲಿನ 'ಒಂದೂರಲ್ಲಿ ಒಬ್ಬ ರಾಜ ಇದ್ದ' ಹಾಡು ಜನಪ್ರಿಯವಾಗಿದ್ದು, ಇದನ್ನು ಪವರ್​ ಸ್ಟಾರ್​ ಪುನೀತ್ ರಾಜ್​​ಕುಮಾರ್ ಹಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸುವ ಆಸೆಯಿಂದ ಬೆಂಗಳೂರಿಗೆ ತೆರಳಿದ್ದ. ಆದರೆ, ಕೊರೋನಾದಿಂದ ಚಿತ್ರರಂಗದಲ್ಲಿ ಇದೀಗ ಕೆಲಸವಿಲ್ಲದೆ ಈ ಯುವಕ ಕೊರೋನಾ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿ ಬೆಂಗಳೂರು ಬಿಟ್ಟು ಹುಟ್ಟೂರಿಗೆ ಬಂದಿದ್ದ. ಹೋಟೇಲ್ ಉದ್ಯಮದಲ್ಲಿ ಎಂಬಿಎ  ಓದಿದ್ದ ಈತ ಇದೀಗ ಜೀವನೋಪಾಯಕ್ಕಾಗಿ ಇದೀಗ ಮಂಡ್ಯದ ನೂರಡಿ ರಸ್ತೆಯಲ್ಲಿ ಮಳಿಗೆ ಬಾಡಿಗೆಗೆ ಪಡೆದು ಮಾಂಸಹಾರಿ ಹೋಟೆಲ್ ಆರಂಭಿಸಿ ಜೀವನ‌ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.ಇನ್ನು ತಾನೂ ಹೊಸದಾಗಿ ಆರಂಭಿಸಿರುವ ಮಾಂಸಹಾರಿ ಹೋಟೆಲ್​​ಗೆ ದೊನ್ನೆ ಬಿರಿಯಾನಿ ಹೌಸ್ ಎಂದು ಹೆಸರಿಟ್ಟಿದ್ದಾನೆ. ಅಲ್ಲದೇ ತಮ್ಮ ಹೋಟೆಲ್ ನಲ್ಲಿ ತಯಾರಿಸುವ ಬಿರಿಯಾನಿಗೆ ಚಿಕ್ಕಪೇಟೆ ದೊನ್ನೆ ಬಿರಿಯಾನಿಯ ಬ್ರಾಂಡ್ ಹೆಸರಿನಡಿ ತಯಾರು ಮಾಡುತ್ತಿದ್ದು, ಇದಲ್ಲದೆ ವಿವಿಧ ಬಗೆಯ ದಕ್ಷಿಣ ಮತ್ತು ಉತ್ತರ ಭಾರತದ ಕಡೆಯ  ವಿವಿಧ ಬಗೆಯ ರುಚಿಕರ ಮಾಂಸಹಾರಿ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ಉಣ ಬಣಿಸುತ್ತಿದ್ದಾರೆ.

ಇವರ ಹೋಟೆಲ್ ನಲ್ಲಿ ತಯಾರಿಸುವ ರುಚಿಯಾದ ಚಿಕ್ಕಪೇಟೆಯ ದೊನ್ನೆ ಬಿರಿಯಾನಿಗೆ  ಗ್ರಾಹಕರು ಮಾರುಹೋಗಿದ್ದು ದೊನ್ನೆ ಬಿರಿಯಾನಿ ಸವಿಯಲು ಬರುತ್ತಿದ್ದು, ಸಾಕಷ್ಟು ವ್ಯಾಪಾರದ ಕಾರಣದಿಂದ ಹೋಟೆಲ್ ಉದ್ಯಮ ಕೈ ಹಿಡಿದಿದ್ದು, ಸದ್ಯ 8 ಜನರಿಗೆ ತಮ್ಮ ಹೋಟೇಲ್ ನಲ್ಲಿ ಉದ್ಯೋಗ ನೀಡಿ ಜೀವನ ಸಾಗಿಸುತ್ತಿದ್ದಾರೆ.

ಇದನ್ನೂ ಓದಿ : Darshan: ಸಂಕಷ್ಟದಲ್ಲಿದ್ದ ದರ್ಶನ್​ ಸಿನಿ ಜೀವನಕ್ಕೆ ತಿರುವು ಕೊಟ್ಟ ಸಾರಥಿ ಸಿನಿಮಾಗೆ 9ರ ಸಂಭ್ರಮ​..!ಇನ್ನು ಹೋಟೆಲ್ ಒಳಾಂಗಣದಲ್ಲಿ ಅಲಂಕಾರಕ್ಕಾಗಿ ಚಿತ್ರರಂಗದ ಪ್ರಮುಖ ನಟರ ಪೋಟೋ, ಸಾಹಿತಿಗಳ ಪೋಟೋ ಜೊತೆಗೆ ಮಂಡ್ಯ ಜಿಲ್ಲೆಯ ಸಾಧಕರಾದ ವೈದ್ಯ ಶಂಕರೇಗೌಡ, ಸಾಹಿತಿ ಬೆಸಗರಹಳ್ಳಿ ರಾಮಣ್ಣ, ರಾಗಿತಳಿ ಪಿತಾಮಹಾ ಲಕ್ಷ್ಮಣರ ಭಾವಚಿತ್ರದ ಜೊತೆ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳ ಪೋಟೋ ಅಳವಡಿಸಿ ಆಕರ್ಷಣೀಯವಾಗಿ ಅಲಂಕಾರ‌ ಮಾಡಿದ್ದು ಹೋಟೆಲ್ ಗೆ ಬರುವ ಗ್ರಾಹಕರನ್ನು ಮತ್ತಷ್ಟು ಆಕರ್ಷಣೆ ಮಾಡುತ್ತಿದೆ.

ಒಟ್ಟಾರೆ ಕೊರೋನಾದಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲಕಿದ್ದ ಈ ಯುವ ನಿರ್ದೇಶಕ ಇದೀಗ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ತಾವು ಓದಿದ್ದ ಹೋಟೆಲ್ ಮ್ಯಾನೇಜ್​​ಮೆಂಟ್ ಮೂಲಕವೇ ಮಂಡ್ಯದಲ್ಲಿ ಮಾಂಸಹಾರಿ ಹೋಟೆಲ್ ಆರಂಭಿಸಿ ಯಶಸ್ಸು ಕಾಣಲು ಹೊರಟ ಈ ಯುವ ನಿರ್ದೆಶಕ ಛಲ ಬಿಡದೆ ಕೊರೋನಾಗೆ ಸೆಡ್ಡು ಹೊಡೆದು ಹೊಸ ಜೀವನ ಆರಂಭಿಸಿದ್ದು, ಈ ಯುವ ನಿರ್ದೇಶಕನ ಪ್ರಯತ್ನ ನಿರುದ್ಯೋಗಿಗಳಿಗೆ ಮಾದರಿಯಾಗಿದೆ.
Published by: G Hareeshkumar
First published: September 30, 2020, 9:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading